Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಾರದಲ್ಲಿ ದಿನಕ್ಕೊಂದು ಕಲರ್ ಕಲರ್ ದೋಸೆ

* ವೈಶಾಲಿ ಹೆಗಡೆ, ಬೋಸ್ಟನ್
ಬೆಳಗ್ಗಿನ ತಿಂಡಿಗೆ, ನಮಗೂ, ಮಕ್ಕಳಿಗೂ ಖುಷಿಯಾಗುವಂತೆ, ಆರೋಗ್ಯಕ್ಕೂ ಹಿತವಾಗುವಂತೆ, ನಾಲಿಗೆಗೂ ರುಚಿಯಾಗುವಂತೆ, ವಾರವಿಡೀ ತಿಂದರೂ ಬೋರಾಗದಂತೆ, ಎಲ್ಲಕ್ಕಿಂತ ಮುಖ್ಯವಾಗಿ ಬೆಳಗ್ಗಿನ ವೇಗದ ಜೀವನಕ್ಕೆ ಸುಲಭ ಸಾಧ್ಯವಾಗುವಂತೆ ಇರುವ ತಿಂಡಿಉಪಾಯ ಇಲ್ಲಿದೆ. ವಾರಕ್ಕಾಗುವಷ್ಟು ಬೇಸಿಕ್ ದೋಸೆ ಹಿಟ್ಟು ಬೀಸಿಟ್ಟುಕೊಂಡುಬಿಡಿ, ವಾರಾಂತ್ಯದಲ್ಲಿ.
ಮೂಲ ದೋಸೆಹಿಟ್ಟಿನ ಅಗತ್ಯದ ಪದಾರ್ಥಗಳು:
6 ಕಪ್ ದಪ್ಪ ಅಕ್ಕಿ
1 ಕಪ್ ಉದ್ದಿನಬೇಳೆ
1 ಮುಷ್ಟಿ ಅವಲಕ್ಕಿ
1 ಮುಷ್ಟಿ ಕಡಲೆಬೇಳೆ
1 ಚಮಚ ಮೆಂತೆಕಾಳು
(ಈ ಹದ ಅಲ್ಲದೆ, ನೀವು ಯಾವಗಲೂ ತಯಾರಿಸುವ ನಿಮ್ಮ ದೊಸೇಹಿಟ್ಟಿನ ಅಳತೆಯನ್ನು ಬೇಕಾದರೂ ಬಳಸಿರಿ)
ತಯಾರಿಸುವ ವಿಧಾನ:
ಎಲ್ಲ ಪದಾರ್ಥಗಳನ್ನು ಚೆನ್ನಾಗಿ ತೊಳೆದು, ರಾತ್ರಿಯಿಡೀ ನೀರಲ್ಲಿ ನೆನೆಸಿಡಿ. ಇಲ್ಲದಿದ್ದರೆ 6-8 ತಾಸುಗಳಾದರೂ ನೆನೆಸಿಡಬೇಕು. ನಂತರ ಈ ಮಿಶ್ರಣವನ್ನು ನುಣ್ಣಗೆ ರುಬ್ಬಿ ಮತ್ತೆ 6-8 ತಾಸುಗಳ ಕಾಲ ಇಲ್ಲವೇ ರಾತ್ರಿಯಿಡೀ ಬೆಚ್ಚಗಿನ ಜಾಗದಲ್ಲಿ ಮುಚ್ಚಿಡಿ. ಹಿಟ್ಟು ಹದವಾಗಿ ಹುಳಿ ಬಂದರೆ, ದೋಸೆ ರುಚಿಕರವಾಗಿರುತ್ತದೆ. ನಂತರ ಹಿಟ್ಟನ್ನು, 2-3 ಡಬ್ಬಗಳಲ್ಲಿ, ಮುಚ್ಚಿ ಫ್ರಿಜ್ನಲ್ಲಿಡಿ. ಈಗ ತಯಾರಿಸೋಣ ವಾರದ ಕಲರ್ ಕಲರ್ ದೋಸೆ.
ಎಷ್ಟು ಬೇಕೋ ಅಷ್ಟು ಹಿಟ್ಟಿಗೆ ಸ್ವಲ್ಪ ಈರುಳ್ಳಿ, ಉಪ್ಪು, ಕೊತ್ತಂಬರಿಸೊಪ್ಪು, ಬೇಕಿದ್ದಲ್ಲಿ ಹಸಿಮೆಣಸಿನಕಾಯಿಗಳನ್ನು ಸಣ್ಣದಾಗಿ ಹೆಚ್ಚಿ ಸೇರಿಸಿರಬೇಕು. ದೋಸೆಹಿಟ್ಟಿಗೆ ಸಿಪ್ಪೆಸುಲಿದ ಬೀಟ್ರೂಟನ್ನು ತುರಿದು ಸೇರಿಸಿರಿ. ಚೆನ್ನಾಗಿ ಕಲಕಿ, ದೋಸೆ ಎರೆಯಿರಿ. ಆರೋಗ್ಯಕರ ಹಾಗೂ ಅಂದವಾದ ಪಿಂಕ್ ದೋಸೆ ತಯ್ಯಾರ್. ಮಕ್ಕಳು ಬಣ್ಣಕ್ಕೆ ಮಾರುಹೋಗಿ, ರುಚಿಯಾದ ದೋಸೆ ತಕರಾರಿಲ್ಲದೆ ಒಳಗಿಳಿಸುವುದನ್ನು ನೋಡಿ.
ಮಂಗಳವಾರದ ಗ್ರೀನ್ ದೋಸೆ:
ದೋಸೆಹಿಟ್ಟಿಗೆ ಸ್ವಲ್ಪ ಸಬ್ಬಸಿಗೆ ಸೊಪ್ಪು ಸೇರಿಸಿ ರಾತ್ರಿಯೇ ರುಬ್ಬಿಟ್ಟುಕೊಂಡಿರಿ. ಬೆಳಗ್ಗೆ ಈ ಹಿಟ್ಟಿಗೆ ಬೆಲ್ಲ, ಚಿಟಿಕೆ ಉಪ್ಪು ಸೇರಿಸಿ ಸಿಹಿಯಾದ ದೋಸೆ ಎರೆಯಿರಿ. ಸೆಟ್ ದೋಸೆಯಂತೆ ಸ್ವಲ್ಪ ದಪ್ಪಗೆ ಎರೆದರೆ ಈ ದೋಸೆ, ಮೆತ್ತಗೆ ಹಗುರಾಗಿ ಇರುವುದು. ಒಂದು ಚಮಚ ತುಪ್ಪ ಬಿಟ್ಟು ತಿನ್ನಲು ಕೊಡಿ. ನಿಮಿಷದಲ್ಲಿ ಗುಳುಂ.
ಬುಧವಾರದ ಹಳದಿ ದೋಸೆ :
ಎಷ್ಟು ಬೇಕೋ ಅಷ್ಟು ಹಿಟ್ಟಿಗೆ ಸ್ವಲ್ಪ ಈರುಳ್ಳಿ, ಉಪ್ಪು, ಕೊತ್ತಂಬರಿಸೊಪ್ಪು, ಬೇಕಿದ್ದಲ್ಲಿ ಹಸಿಮೆಣಸಿನಕಾಯಿಗಳನ್ನು ಸಣ್ಣದಾಗಿ ಹೆಚ್ಚಿ ಹಾಕಿ, ಒಂದು ಚಮಚ ಅರಿಶಿನ ಸೇರಿಸಿ ಹಳದಿ ಉತ್ತಪ್ಪ ಎರೆದರೆ ಬೆಳಗ್ಗಿನ ಉಪಹಾರದ ಮಜವೇ ಬೇರೆ.
ಗುರುವಾರದ ಕೇಸರಿ ದೋಸೆ:
ಇದನ್ನು ಬೀಟ್ರೂಟ ದೊಸೆಯಂತೆಯೇ ತಯಾರಿಸಿ. ಬದಲಿಗೆ, ಕ್ಯಾರಟ್ ತುರಿದು ಹಾಕಿ.
ಶುಕ್ರವಾರದ ಬಿಳಿದೋಸೆ:
ಇದಕ್ಕೆ ಬೇರೇನನ್ನೂ ಸೇರಿಸದೆ ಹೇಗೆ ಬೇಕೋ ಹಾಗೆ ದೋಸೆ ಎರೆದು, ನಿಮ್ಮ ಮೆಚ್ಚಿನ ಚಟ್ನಿಯೊಂದಿಗೆ ಮೆಲ್ಲಿರಿ.
ಕೋರಿಕೆ : ಓದುಗರೆ, ಮೇಲೆ ತಿಳಿಸಿದ ದೋಸೆಗಳನ್ನು ತಯಾರಿಸಿ ರುಚಿ ಹೇಗಿತ್ತೆಂದು ನಮಗೆ ತಿಳಿಸಿ. ಇವೇ ದೋಸೆಗಳನ್ನು ಬೇರೆ ರೀತಿಯಲ್ಲಿ ಮಾಡುವ ಬಗೆ ತಿಳಿದಿದ್ದರೆ ಅದನ್ನೂ ನಮಗೆ ಬರೆದು ತಿಳಿಸಿ. ತಿಂಡಿ ತಿನಿಸುಗಳನ್ನು ಹಂಚಿ ತಿಂದರೆ ರುಚಿ ಹೇಗೆ ಜಾಸ್ತಿಯೋ, ಹಾಗೆಯೇ ತಯಾರಿಸುವ ಮಾಹಿತಿಯನ್ನೂ ಓದುಗರೊಂದಿಗೆ ಹಂಚಿಕೊಂಡು ತಿನ್ನೋಣ.



Click it and Unblock the Notifications

