Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಗನೆ ತಯಾರಿಸಬಹುದು ಬಿಸಿ ಬೇಳೆ ಬಾತ್
ಕನ್ನಡಿಗರಾದ ನಮಗೆ ಬಿಸಿಬೇಳೆ ಬಾತ್ ರುಚಿ ಹೊಸದೇನಲ್ಲ. ಅಮ್ಮ ಬೆಳಗ್ಗಿನ ತಿಂಡಿಗೆ ತಯಾರಿಸುವ ಈ ಅಡುಗೆಯ ರುಚಿ ಗೊತ್ತಿದ್ದರೂ ಅದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ. ಕೆಲಸ ಹುಡುಕಿ ಮನೆಯಿಂದ ದೂರ ಬಂದು ಸ್ನೇಹಿತರ ಜೊತೆ ಒಂದು ಬಾಡಿಗೆ ಮನೆ ಅಥವಾ ಫ್ಲಾಟ್‌ನಲ್ಲಿ ಇರುವಾಗ ಬಾಯಿ ರುಚಿಕರವಾದ ಆಹಾರ ಬಯಸುತ್ತದೆ, ಆದರೆ ಮಾಡಲು ಗೊತ್ತಿರುವುದಿಲ್ಲ. ಬಿಸಿ ಬೇಳೆ ಭಾತ್ ಪೌಡರ್ ಮನೆಯಲ್ಲೇ ಮಾಡಿ...
ಈ ಬಿಸಿ ಬೇಳೆ ಬಾತ್ ಅಡುಗೆ ಮಾಡಲು ಕಲಿತರೆ ಸುಲಭವಾಗಿ ತಯಾರಿಸಬಹುದು ಮತ್ತು ಬಾಯಿಗೂ ರುಚಿಯಾಗಿರುತ್ತದೆ. ಬಿಸಿ ಬೇಳೆ ಬಾತ್ ಮಾಡಲು ಕಲಿಯ ಬಯಸುವವರಿಗಾಗಿ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಅಕ್ಕಿ
* 1/2 ಕಪ್ ತೊಗರಿ ಬೇಳೆ
* 1 ಈರುಳ್ಳಿ
* 2 ಟೊಮೆಟೊ
* 2 ಕಪ್ ಬಟಾಣಿ
* 1/2 ಕಪ್ ಕ್ಯಾರೆಟ್
* 1/2 ಕಪ್ ಬೀನ್ಸ್
* ಸ್ವಲ್ಪ ಹುಣಸೆ ಹಣ್ಣಿನ ರಸ
* ಸ್ವಲ್ಪ ಕರಿಬೇವಿನ ಎಲೆ
* ಚಿಟಿಕೆಯಷ್ಟು ಇಂಗು
* ಎಣ್ಣೆ
*ಉಪ್ಪು
* 8-10 ಗೋಡಂಬಿ
ಪುಡಿ: 2 ಚಮಚ MTR ಬಿಸಿ ಬೇಳೆ ಬಾತ್ ಪುಡಿ ಹೊಸರುಚಿ : ಅವಲಕ್ಕಿ ಬಿಸಿಬೇಳೆ ಭಾತ್
ತಯಾರಿಸುವ ವಿಧಾನ:
1. ಸ್ವಲ್ಪ ಹುಣಸೆ ಹಣ್ಣನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ಅದಕ್ಕೆ ಬಿಸಿ ನೀರು ಹಾಕಿ, ಹುಣಸೆಯನ್ನು ಹಿಂಡಿ ರಸವನ್ನು ಮಾಡಿಡಬೇಕು.
2. ಒಂದು ಪಾತ್ರೆಯಲ್ಲಿ ತರಕಾರಿಗಳನ್ನು ಹಾಕಿ, ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.
3. ಈಗ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಬೇರೆ-ಬೇರೆ ಪಾತ್ರೆಯಲ್ಲಿ ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ಬೇಳೆಗೆ ಸ್ವಲ್ಪ ನೀರು ಅಧಿಕ ಹಾಕಿರಬೇಕು. ಅನ್ನ ಸ್ವಲ್ಪ ಅಧಿಕ ಬೆಂದಿರಬೇಕು. ಬೇಳೆಯನ್ನು ಸೌಟ್‌ನಿಂದ ಹಿಸುಕಬೇಕು.
4. ಈಗ ಸ್ವಲ್ಪ ದೊಡ್ಡ ಬಾಣಲೆಯನ್ನು ತೆಗೆದು ಅದನ್ನು ಉರಿಯಲ್ಲಿಟ್ಟು ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿಬೇವಿನ ಎಲೆ, ಚಿಟಿಕೆಯಷ್ಟು, ಗೋಡಂಬಿ ಚೂರುಗಳನ್ನು ಹಾಕಿ 2-3 ನಿಮಿಷ ಹುರಿಯಬೇಕು.
5. ಈಗ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವಾಗ ಟೊಮೆಟೊ ಹಾಕಿ, ಟೊಮೆಟೊ ಮೆತ್ತಾಗುವವರೆಗೆ ಬೇಯಿಸಬೇಕು. ಈಗ ಬೇಯಿಸಿದ ತರಕಾರಿಯನ್ನು ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಈಗ ಬಿಸಿ ಬೇಳೆ ಬಾತ್ ಪುಡಿ, ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು.
6. ಈಗ ಬೇಯಿಸಿದ ಅನ್ನ ಮತ್ತು ಹಿಸುಕಿದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಿಸಿ ಬೇಳೆ ಬಾತ್ ತುಂಬಾ ತೆಳ್ಳಗೆ ಬೇಕೆಂದರೆ ಸ್ವಲ್ಪ ನೀರು ಸೇರಿಸಬಹುದು. ನಂತರ 10 ನಿಮಿಷ ಬೇಯಿಸಿ ನಂತರ ಸ್ವಲ್ಪ ತುಪ್ಪ ಸೇರಿಸಿದರೆ( ಬೇಕಿದ್ದರೆ ಸೆರಿಸಬಹುದು) ರುಚಿಕರವಾದ ಬಿಸಿ ಬೇಳೆ ಬಾತ್ ರೆಡಿ.
ಇದನ್ನು ಚಿಪ್ಸ್ ಜೊತೆ ತಿನ್ನಲು ಅಥವಾ ಖಾರ ಬೂಂದಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಎಷ್ಟೇ ಆಗಲಿ ನಮ್ಮದು ಬಿಸಿಬೇಳೆ ಭಾತ್ ಘರಾನ ಅಲ್ವೇನ್ರಿ!



Click it and Unblock the Notifications
