Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಾಕಶಾಲೆಯಲ್ಲಿ 3 ಬಗೆ ಸ್ಪೆಷಲ್ ದೋಸೆ
ಬೇಕಾಗುವ ಸಾಮಾಗ್ರಿಗಳು:
3 ಕಪ್ ಕುಚ್ಚಲು ಅಕ್ಕಿ,
3 ಕಪ್ ಬೆಳ್ತಿಗೆ ಅಕ್ಕಿ,
ಒಂದು ಕಪ್ ಉದ್ದಿನ ಬೇಳೆ,
3 ಚಮಚ ಉಪ್ಪು,
ತುಪ್ಪ ಅಥವಾ ಡಾಲ್ಡ 1 ಕಪ್
ಮಾಡುವ ವಿಧಾನ:
ಅಕ್ಕಿಯನ್ನು ಉದ್ದಿನ ಬೇಳೆಯನ್ನು ನೆನೆ ಹಾಕಿಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ ನುಣ್ಣಗೆ ರುಬ್ಬಿ, ಉಪ್ಪು ಹಾಕಿ ಎರಡು 2 ಹಿಟ್ಟುಗಳನ್ನು ಸೇರಿಸಿ ಬೆರೆಸಿ ಮುಚ್ಚಿಡಬೇಕು. ನಂತರ ಮಾರನೆ ದಿನ ಹಿಟ್ಟನ್ನು ಸೌಟಿನಿಂದ ತಿರುವಿ ಒಲೆಯ ಮೇಲೆ ಕಾವಲಿ ಇಟ್ಟು, ಕಾದ ಕಾವಲಿಗೆ ತುಪ್ಪ ಹಚ್ಚಿ 1 ಸೌಟು ಹಿಟ್ಟು ಹಾಕಿ ಬೇಗನೆ ಹರಡಬೇಕು.
ಹಿಟ್ಟು ಬೇಯುವಾಗ 4 ಚಮಚ ತುಪ್ಪ ಹಾಕಿ ಕೆಂಪಗೆ ಆಗುವಾಗ ಮಧ್ಯದಿಂದ ಮಡಚಿ ತೆಗೆಯುವುದು.ಇದು ತೆಳ್ಳಗಾಗಿ ಗರಿಗರಿಯಾಗಿರಬೇಕು. ಇದನ್ನು ಕವಚಿ ಹಾಕಲಿಕ್ಕೆ ಇಲ್ಲ ಇದು ಬಿಸಿ ಇರುವಾಗಲೇ ತಿನ್ನಲು ರುಚಿ. ಆರಿದ ಮೇಲೆ ಗರಿಗರಿಯಾಗಿರುವುದಿಲ್ಲ. ಮಸಾಲೆ ದೋಸೆ ಆಗಬೇಕಾದರೆ ಕೆಳಗೆ ಹೇಳಿದ ಪಲ್ಯ ಹಾಕಿ ಮಗುಚಿದರಾಯಿತು. ಮೇಲಿನಿಂದ ಚಟ್ನಿ ಹಚ್ಚಿ ನಂತರ ಮಸಾಲೆ ಹಾಕುವುದುಂಟು. ಚಟ್ನಿ ಹಚ್ಚದಿದ್ದರೂ ರುಚಿ ಕಡಿಮೆಯಾಗುವುದಿಲ್ಲ.
ಈ ಹಿಟ್ಟು ಮರುದಿವಸಕ್ಕೆ ಉಳಿದರೆ ತುಂಬಾ ಈರುಳ್ಳಿ, ಹಸಿ ಮೆಣಸಿನಕಾಯಿ, ಸ್ವಲ್ಪ ಅರಿಸಿನಪುಡಿ, ಹಸಿ ಶುಂಠಿ, ಉಪ್ಪು ಇವುಗಳನ್ನು ಸಣ್ಣಗೆ ಹೆಚ್ಚಿ ಹಾಕಿ ದೋಸೆ ಕಾವಲಿನಲ್ಲಿ ತುಪ್ಪ ಹಚ್ಚಿ ದಪ್ಪಕ್ಕೆ ದೋಸೆ ಹಾಕಿ ಕೆಂಪಗೆ ಮಾಡಿ ಕವುಚಿ ಹಾಕಿ ತೆಗೆದರೆ ಉತ್ತಪ್ಪ ರೆಡಿಯಾಯಿತು.
ಇದೇ ಹಿಟ್ಟು ಟೊಮೆಟೋ, ಹಸಿ ಮೆಣಸಿನಕಾಯಿ, ಹಸಿ ಶುಂಠಿ ಇವುಗಳನ್ನು ಹೆಚ್ಚಿ ಹಾಕಬೇಕು. ಈ ಹಿಟ್ಟಿಗೆ ಸ್ವಲ್ಪ ಮೈದಾ ಹಿಟ್ಟು ಸೇರಿಸಬೇಕು. ಇದನ್ನು ಮೇಲಿನಿಂದ ಹಾಕವದು ಇದೇ ಟೊಮೆಟೋ ಅಮ್ಲೆಟ್.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
