Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದಾಸರು ಮೆಚ್ಚಿದ ರಾಗಿ ಹುರಿಟ್ಟು ತಿಂದೀರಾ?

* ವಸುಮತಿ ಕುಮಾರ್, ತುಮಕೂರು
ಅದೇಕೋ ರಾಗಿಯ ಬಗ್ಗೆ ಜನರಿಗೆ ಅಸಡ್ಡೆ. ರಾಗಿ ಆರೋಗ್ಯವರ್ಧಕ ಎಂದು ಗೊತ್ತಿದ್ದರೂ, ಅಕ್ಕಿಗೆ ಇರುವಷ್ಟು ಗೌರವ ರಾಗಿಗಿಲ್ಲ. ಬಹುಶಃ ರಾಗಿ ತನ್ನ ಕಪ್ಪು ಬಣ್ಣದಿಂದಲೇ ಕುಬ್ಜವಾಯಿತೋ ಏನೋ! ರಾಗಿ ಬಡವರ ಧಾನ್ಯ ಎಂದೇ ಕರೆಸಿಕೊಂಡಿದ್ದೂ ರಾಗಿ ಮಹತ್ವ ಜನರಿಗೆ ತಿಳಿಯದೇ ಹೋಗಲು ಕಾರಣ ಇರಬಹುದು.
ಅದೇನೇ ಇರಲಿ, ರಾಗಿ ಒಂದು ಪೌಷ್ಟಿಕ ಆಹಾರ. ರಾಗಿಯಿಂದ ಮಾಡಿದ ದೋಸೆ ಬಲು ರುಚಿ. ಅಂತೆಯೇ ರಾಗಿ ಹುರಿಟ್ಟು ಕೂಡ. ರಾಗಿಯ ಹುರಿಟ್ಟು ಮತ್ತೂ ಸಮೃದ್ಧ. ಸಿರಿವಂತರೂ ಹುರಿಟ್ಟು ತಿನ್ನುತ್ತಾರೆ. ಬನ್ನಿ, ಹುರಿಟ್ಟು ಮಾಡಿ ತಿನ್ನೋಣ.
ಬೇಕಾಗುವ ಪದಾರ್ಥ : ರಾಗಿ ಹುರಿಟ್ಟು ಮಾಡಲು ಬೇಕಾಗುವ ಪದಾರ್ಥಗಳು ಕೇವಲ ಕೆಲವೇ ಕೆಲವು. ಒಂದು ಕೆಜಿ ರಾಗಿ, ನೀರು, ಬೆಲ್ಲ, ತೆಂಗಿನ ತುರಿ ಮತ್ತು ಏಲಕ್ಕಿ ಪುಡಿ.
ಮಾಡುವ ವಿಧಾನ : ರಾಗಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಂದು ಬಿಳಿಯ ಬಟ್ಟೆಯಲ್ಲಿ ನೀರನ್ನು ಬಸಿದು ಆನಂತರ ಒಣಗಿಸಬೇಕು. ರಾಗಿ ಒಣಗಿದ ಬಳಿಕ ಉರಿಯುವ ಒಲೆಯ ಮೇಲೆ ಬಾಣಲೆ ಇಟ್ಟು, ಒಂದೊಂದು ಹಿಡಿಯಷ್ಟು ರಾಗಿಯನ್ನು ಬಾಣಲೆಗೆ ಹಾಕಿ ಹುರಿಯಬೇಕು. ಹುರಿದಾಗ ರಾಗಿ ಅರಳುತ್ತದೆ. ಈ ರಾಗಿ ಅರಳನ್ನು ಮಿಕ್ಸರ್‌ನಲ್ಲಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಅಲ್ಲಿಗೆ ರಾಗಿ ಹುರಿದ ಹಿಟ್ಟು ಅರ್ಥಾತ್ ಹುರಿಟ್ಟು ಸಿದ್ಧ.
ಈ ಹುರಿಟ್ಟಿಗೆ ಬೆಲ್ಲ ಹೆರೆದು ಹಾಕಿ, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ ಹಾಕಿ ನೀರಿನಲ್ಲಿ ಕಲೆಸಿ ಉಂಡೆ ಕಟ್ಟಿ ತಿಂದರೆ ರುಚಿಯೇ ರುಚಿ. ಇದನ್ನು ಬೆಲ್ಲದ ರಾಗಿ ಹುರಿಟ್ಟು ಅಂತಲೂ ಕರೆಯುತ್ತಾರೆ.
ರಾಗಿ ಹುರಿಟ್ಟು ಸಿದ್ಧಮಾಡಿಟ್ಟುಕೊಂಡು ಬೇಕಿನಿಸಿದಾಗ ಸಕ್ಕರೆ, ಹಾಲು ಬೆರೆಸಿ ಕಲೆಸಿಯೂ ತಿನ್ನಬಹುದು. ಹುಣಸೇಹಣ್ಣನ್ನು ನೀರಿನಲ್ಲಿ ನೆನೆಸಿ, ಕಿವುಚಿ ಹುಣಸೆ ಹಣ್ಣಿನ ರಸದ ಜತೆಗೆ ಹುರಿಟ್ಟು ಹಾಕಿ ಬೆಲ್ಲದ ನೀರಿನಲ್ಲಿ ಕಲೆಸಿಯೂ ಅಂಬಲಿಯಂತೆ ಮಾಡಿ ಕುಡಿಯಬಹುದು.
ರಾಗಿಯ ಇನ್ನಷ್ಟು ತಿನಿಸುಗಳು
ಅಪ್ಪಟ ಕನ್ನಡ ಮಣ್ಣಿನ ಖಾದ್ಯ: ರಾಗಿ ದೋಸೆ
ಹುಚ್ಚೆಳ್ ಚಟ್ನಿ ಇಲ್ಲದ ರಾಗಿರೊಟ್ಟಿ
ಜನಾನು'ರಾಗಿ' ಮುದ್ದೆ ಮಿಶಿನ್ನು



Click it and Unblock the Notifications
