Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಲಭವಾಗಿ ತಯಾರಿಸಬಹುದು ಆಲೂಪರೋಟ

ಆಲೂ ಪರೋಟಕ್ಕೆ ಬೇಕಾಗುವ ಸಾಮಾಗ್ರಿಗಳು:
1. ಆಲೂಗೆಡ್ಡೆ 2 (ಬೇಯಿಸಿ ಸಿಪ್ಪೆ ಸುಲಿದಿದ್ದು)
2. ಮೈದಾ 2 ಕಪ್
3. ಗೋಧಿ (ಸ್ವಲ್ಪ ತರಿಯಿರಬೇಕು)
4. ಒಣಗಿದ ಮಾವಿನ ಪುಡಿ (ಅಮೆಚ್ಯೂರ್) 1 ಚಮಚ
5. ಚಿಟಿಕೆಯಷ್ಟು ಅಜ್ವೈನ್
6. ಕತ್ತರಿಸಿದ ಕೊತ್ತಂಬರಿ ಸೊಪ್ಪು
7. ರುಚಿಗೆ ತಕ್ಕ ಉಪ್ಪು
8. ಹಸಿಮೆಣಸಿನಕಾಯಿ
9. ತುಪ್ಪ
ತಯಾರಿಸುವ ವಿಧಾನ:
1. ಆಲೂಪರೋಟ ಬೆಳಗ್ಗೆ ಮಾಡಲು ರಾತ್ರಿ ಮೈದಾ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಹಾಕಿ ಕಲೆಸಿಡಬೇಕು. ಹಿಟ್ಟು ಮೃದುವಾಗಿರಲು ಕಲೆಸುವಾಗ 2 ಚಮಚ ತುಪ್ಪ ಹಾಕಿರಬೇಕು. ನಂತರ ಹಿಟ್ಟನ್ನು ತೇವವಾದ ಮಸ್ಲೀನ್ ಬಟ್ಟೆಯಿಂದ ಸುತ್ತಿ ಇಡಬೇಕು.
2. ಬೆಳಗ್ಗೆ ಆಲೂಗೆಡ್ಡೆಯನ್ನು ಬೇಯಿಸಬೇಕು. ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಬೇಕು.
3. ಪರೋಟಕ್ಕೆ ತಟ್ಟಲು ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಬೇಕು.
4. ಆಲೂಗೆಡ್ಡೆಯ ಸಿಪ್ಪೆ ಸುಲಿದು ಅದನ್ನು ಚೆನ್ನಾಗಿ ಹಿಸುಕಿ ಅದರಲ್ಲಿ ಕೊತ್ತಂಬರಿ ಸೊಪ್ಪು, ಅಜ್ವೈನ್, ಅಮೆಚ್ಯೂರ್, ಹಸಿಮೆಣಸಿಕಾಯಿ ಹಾಕಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
5. ಈಗ ಪರೋಟ ಹಿಟ್ಟಿನ ಉಂಡೆಯನ್ನು ಕೈ ಬೆರಳಿನಿಂದ ಸ್ವಲ್ಪ ಗುಂಡಿ ಮಾಡಿ ಅದಕ್ಕೆ ಆಲೂ ಮಿಶ್ರಣವನ್ನು ತುಂಬಿ ಮೈದಾ ಪರೋಟಕ್ಕೆ ತಟ್ಟಿದ ರೀತಿ ತಟ್ಟಬೇಕು.
6. ನಂತರ ಪರೋಟವನ್ನು ಕಡಿಮೆ ಉರಿಯಲ್ಲಿ ಕಾವಲಿಗೆ ಸ್ವಲ್ಪ ತುಪ್ಪ ಹಾಕಿ ಪರೋಟ ಹಾಕಬೇಕು. ನಂತರ ಅದನ್ನು ಮಗುಚಿ ಹಾಕಿ ತುಪ್ಪ ಹಾಕಬೇಕು. ಈ ರೀತಿ ಮಾಡಿದರೆ ರುಚಿಕರವಾದ ಆಲೂ ಪರೋಟ ರೆಡಿ.



Click it and Unblock the Notifications
