Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಡವಲಕಾಯಿ ಗಸಿ ಅಥವಾ ಪಟ್ಲಕಾಯಿ ಹಶಿ

* ತೇಜಸ್ವಿನಿ ಹೆಗಡೆ, ಬೆಂಗಳೂರು
ಪಡವಲಕಾಯಿ ಒಂದು ಉತ್ತಮ ಕಾಯಿಪಲ್ಲೆ ಆಗಿದೆ. ಮಲಬದ್ಧತೆಗೆ ಇದು ತುಂಬಾ ಉಪಯುಕ್ತ. ಕೆಲವೆಡೆ ಇದನ್ನು ಪಟ್ಲಕಾಯಿ ಎಂದೂ ಹೇಳುತ್ತಾರೆ. ಇಂಗ್ಲೀಷಿನಲ್ಲಿ "Snake gourd" ಎಂದು ಹೇಳುವುದಲ್ಲದೇ, "Serpent gourd" ಎಂದೂ ಹೇಳುತ್ತಾರೆ. ಪಡವಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ಗಳು ಹಾಗೂ ನೀರು ತುಂಬಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. ಕೊಬ್ಬಿನಂಶಗಳು ಹೆಚ್ಚಿನ ಪ್ರಮಾಣದಲ್ಲಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಅಪಾಯಕಾರಿಯಲ್ಲ. ಇದರಲ್ಲಿ ಮೆಗ್ನೇಶಿಯಮ್, ಕ್ಯಾಲ್ಶಿಯಮ್ ಹಾಗೂ ರಂಜಕಗಳ ಖನಿಜಾಂಶಗಳು ಹೇರಳವಾಗಿವೆ. ಇದರ ಹಸಿರೆಲೆಗಳು ಕಾಮಾಲೆ ರೋಗಕ್ಕೆ, ಹೃದಯ ರೋಗ, ಜ್ವರ, ಅತಿಯಾದ ಕೂದಲುದುರುವಿಕೆ ಮುಂತಾದ ಸಮಸ್ಯೆಗಳಿಗೆ ಉತ್ತಮ ಔಷಧವೆಂದು ಸಾಬೀತಾಗಿದೆ. ಆಯುರ್ವೇದದಲ್ಲಿ ವಿಷ ಸೇವಿಸಿದ ವ್ಯಕ್ತಿಯಿಂದ ವಿಷವನ್ನು ಕಾರಿಸಿ ಹೊರ ತೆಗೆಯಲೂ ಈ ಪಡವಲ ಕಾಯಿಯನ್ನು ಬಳಸುತ್ತಾರೆ.
ಈ ಕಾಯಿಪಲ್ಲೆಯ ಹಶಿಯನ್ನು ಉತ್ತರಕನ್ನಡದ ಕಡೆ ಹೆಚ್ಚಾಗಿ ಮಾಡುತ್ತಾರೆ. ಬಿಸಿ ಅನ್ನದೊಂದಿಗೆ ಇದನ್ನು ತೆಗೆದುಕೊಂಡರೆ ಬಲು ರುಚಿಕರ.
ಬೇಕಾಗುವ ಸಾಮಗ್ರಿಗಳು :
ಪಡವಲಕಾಯಿ - ಒಂದು (ಸಾಮಾನ್ಯ ಗಾತ್ರದ್ದು).
ತೆಂಗಿನಕಾಯಿಯ ತುರಿ - ಅರ್ಧ ಭಾಗದಲ್ಲಿ ಅರ್ಧದಷ್ಟು.
ಇಂಗು - ಚಿಟಿಕೆಯಷ್ಟು.
ಸಾಸಿವೆ - 1/2 ಚಮಚ
ಕಡ್ಡಿ ಮೆಣಸು (ಕೆಂಪು ಮೆಣಸು)- ಒಂದು
ಬೆಲ್ಲ - ರುಚಿಗೆ ತಕ್ಕಷ್ಟು. ಸಾಮಾನ್ಯವಾಗಿ ೧-೨ ಚಮಚ ಬೆಲ್ಲವನ್ನು ಹಾಕುತ್ತೇವೆ.
ಉಪ್ಪು - ರುಚಿಕೆ ತಕ್ಕಷ್ಟು
ಮೊಸರು - 2 ಸೌಟು
ಒಗ್ಗರಣೆಗೆ ತೆಂಗಿನೆಣ್ಣೆ - 1/2 ಅಥವಾ 1 ಚಮಚ
ಮಾಡುವ ವಿಧಾನ :
* ಮೊದಲಿಗೆ ಪಡವಲ ಕಾಯಿಯನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.
* ನಂತರ ಇದಕ್ಕೆ ಸ್ವಲ್ಪ ಬೆಲ್ಲ ಹಾಗೂ ಉಪ್ಪನ್ನು ಹಾಕಿ ಬೇಯಿಸಬೇಕು. ತುಂಬಾ ಕರಟುವಂತೆ ಬೇಯಬಾರದು. ಹದವಾಗಿ ಬೇಯಿಸಿಕೊಂಡರೆ ಸಾಕು. ಬೆಂದ ಮೇಲೆ ತಣಿಯಲು ಬಿಡಬೇಕು.
* ತೆಂಗಿನತುರಿಯನ್ನು ನುಣ್ಣಗೆ ಬೀಸಿಕೊಳ್ಳಬೇಕು. ಇದಕ್ಕೆ ಬೇಯಿಸಿ ಚೆನ್ನಾಗಿ ತಣಿಸಿದ ಪಡವಲಕಾಯಿಯನ್ನು ಹಾಕಬೇಕು. (ಸ್ವಲ್ಪ ಬಿಸಿ ಇದ್ದರೂ ಕಾಯಿಗೆ ಹಾಕಿದ ತುಸು ಹೊತ್ತಿಗೇ ಕಸರಾಗುವ ಸಾಧ್ಯತೆ ಇದೆ. ಹಾಗಾಗಿ ಸಂಪೂರ್ಣ ತಣಿದ ನಂತರವೇ ಸೇರಿಸಬೇಕು.)
* ಈ ಮಿಶ್ರಣಕ್ಕೆ ಮೊಸರನ್ನು ಹಾಕಿ, ಬೇಕಿದ್ದರೆ ಉಪ್ಪು ಹಾಗೂ ನೀರನ್ನು ಸ್ವಲ್ಪ ಸೇರಿಸಿ, ಇದಕ್ಕೆ ಸಾಸಿವೆ, ಇಂಗು ಹಾಗೂ ಕಡ್ಡಿಮೆಣಸು ಚೂರುಗಳ ಒಗ್ಗರಣೆ ಹಾಕಿದರೆ ಘಮ್ಮೆನ್ನುವ ಪಟ್ಲಕಾಯಿ ಹಶಿ ಬಿಸಿ ಅನ್ನಕ್ಕೆ ಕಲಸಿಕೊಂಡು ತಿನ್ನಲು ರೆಡಿ.



Click it and Unblock the Notifications
