Latest Updates
-
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್ -
ಶಾರುಖ್-ಕರೀನಾ 'ಡ್ಯಾಡಿ ಕೂಲ್' ಹಾಡು ರಿಲೀಸ್: ರೀಲ್ಸ್ ಮಾಡಲು ರೆಡಿಯಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿಯಲ್ಲಿ ಚಳಿ, ಮಂಜಿನ ಆರ್ಭಟ: ಮನೆಯಲ್ಲೇ ಫಿಟ್ ಆಗಿರಲು ಸರಳ ವ್ಯಾಯಾಮಗಳು -
ಬ್ಲ್ಯಾಕ್ ಫ್ರೈಡೇ ಸೇಲ್: ಜಗಳವಿಲ್ಲದೆ ಶಾಪಿಂಗ್ ಮಾಡಲು ದಂಪತಿಗಳಿಗೆ ಇಲ್ಲಿದೆ 5 ಸಿಂಪಲ್ ಟಿಪ್ಸ್ -
ರಕ್ತಹೀನತೆ ಬಗ್ಗೆ ಆತಂಕ ಬೇಡ: ICMR SAMPADA ವರದಿಯ ಹೊಸ ಸತ್ಯಾಂಶ ಮತ್ತು ನಿಮ್ಮ ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು -
ಗುರುನಾನಕ್ ಜಯಂತಿ & ಕಾರ್ತಿಗೈ ದೀಪೋತ್ಸವ: ಹಬ್ಬದ ಸಂಭ್ರಮದ ನಡುವೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ದೆಹಲಿ-ಎನ್ಸಿಆರ್ ವಾಯು ಮಾಲಿನ್ಯ: ಮನೆಯಲ್ಲೇ ಫಿಟ್ ಆಗಿರಲು ಸರಳ ವರ್ಕೌಟ್ ಟಿಪ್ಸ್ -
ಬೆಂಗಳೂರಿನಲ್ಲಿ ಹೊಸ ಮನೆಗೆ ಶಿಫ್ಟ್ ಆಗ್ತಿದ್ದೀರಾ? ₹2.53 ಲಕ್ಷ ಖರ್ಚಾಗದಂತೆ ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಎಚ್ಚರ! FSSAI ಕಟ್ಟುನಿಟ್ಟಿನ ಕ್ರಮ: ನೀವು ಬಳಸುವ ನೀರು, ಜೀರಿಗೆ ಸುರಕ್ಷಿತವೇ?
ಹದಿನೈದು ನಿಮಿಷದಲ್ಲಿ ಬ್ರೆಡ್ ಉಪ್ಪಿಟ್ಟು ರೆಡಿ

* ಯಶ್
ಬ್ರೆಡ್ ಉಪ್ಪಿಟ್ಟು ಮಾಡಲು ರವೆ ಉಪ್ಪಿಟ್ಟು ಮಾಡಲು ಬೇಕಾಗುವ ಸಮಯ ಬೇಕಾಗಿಲ್ಲ. ಇನ್ನೊಂದು ಅಡ್ವಾಂಟೇಜ್ ಅಂದರೆ, ಒಗ್ಗರಣೆ ಹಾಕಿ ಮಾಡುವ ಯಾವುದೇ ತಿಂಡಿಗಿಂತ ವೇಗವಾಗಿ ಬ್ರೆಡ್ ಉಪ್ಪಿಟ್ಟನ್ನು ತಯಾರಿಸಬಹುದು. ಇಲ್ಲಿ ಬಳಸಲಾಗುವ ಸಾಮಗ್ರಿಗಳನ್ನು ಅಳೆದು ತೂಗುವ ಅಗತ್ಯವೂ ಇಲ್ಲ. ಯಾರ ಸಹಾಯವೂ ಇಲ್ಲದೆ, ಯಾವುದೇ ಸಮಯದಲ್ಲಿ ದಿಢೀರನೆ ತಯಾರಿಸಬಹುದಾದ ರೆಸಿಪಿ ಇದು. ಬೆಳಿಗ್ಗೆ ಮತ್ತೆ ರವೆ ಉಪ್ಪಿಟ್ಟಾ, ಅವಲಕ್ಕಿ ಒಗ್ಗರಣೆಯಾ ಅಂತ ಮುಖ ಕಿವುಚುವರಿಗೆ ಇದು ಹೇಳಿ ಮಾಡಿಸಿದ ಬ್ರೆಕ್ ಫಾಸ್ಟ್ ಅಲ್ಲ ಬ್ರೆಡ್ ಫಾಸ್ಟ್.
ಬೇಕಾಗುವ ಪದಾರ್ಥಗಳು
ಒಂದು ಪೌಂಡ್ ಬ್ರೆಡ್
ಮೂರು ಈರುಳ್ಳಿ
ಆರೆಂಟು ಹಸಿ ಮೆಣಸಿನಕಾಯಿ
ತುಣುಕು ಹಸಿ ಶುಂಠಿ
ತುರಿದ ಹಸಿ ಕೊಬ್ಬರಿ
ಕರಿಬೇವು, ಕೋತಂಬರಿ, ನಿಂಬೆಹಣ್ಣು ಇತ್ಯಾದಿ ಇತ್ಯಾದಿ.
ಮಾಡುವ ವಿಧಾನ
ಮೊದಲು ಅಂಗಡಿಗೆ ಹೋಗಿ ತಾಜಾ ಬ್ರೆಡ್ ತೆಗೆದುಕೊಂಡು ಬನ್ನಿ. ತಾಜಾ ಆಗಿ, ಮೆದುವಾಗಿದ್ದರೆ ಒಳ್ಳೆಯದು. ಪುಡಿಪುಡಿಯಾಗುವಂತಿದ್ದರೆ ಉಪ್ಪಿಟ್ಟು ಮಾಡಲೂ ಸರಿಯಾಗಿರುವುದಿಲ್ಲ, ತಿನ್ನಲೂ ಸರಿಯಾಗಿರುವುದಿಲ್ಲ. ಜಾಸ್ತಿ ಶಿಸ್ತು ಬಯಸುವವರು ಬ್ರೆಡ್ ಸ್ಲೈಸುಗಳನ್ನು ಚಾಕುವಿನ ಸಹಾಯದಿಂದ ನೀಟಾಗಿ ತುಂಡು ಮಾಡಿಕೊಳ್ಳಬಹುದು. ವ್ಯವಧಾನವಿಲ್ಲದವರು ಪರಪರ ಕೈಯಿಂದಲೇ ತುಣುಕುಗಳನ್ನಾಗಿ ಮಾಡಿಕೊಳ್ಳಬಹುದು.
ನಂತರ, ಈರುಳ್ಳಿ, ಹಸಿ ಮೆಣಸಿನಕಾಯಿ, ಹಸಿ ಶುಂಠಿಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಅಳತೆಗೊಂದಿಷ್ಟು ಎಳ್ಳೆಣ್ಣೆ ಬುಟ್ಟಿಯಲ್ಲಿ ಹಾಕಿ ಸಾಸಿವೆ, ಅರಿಷಿಣ, ಕರಿಬೇವು, ಇಂಗನ್ನು ಸೇರಿಸಿದ ನಂತರ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಶುಂಠಿ, ತುರಿದ ಹಸಿಕೊಬ್ಬರಿಯನ್ನು ಹಾಕಿ ಚೆನ್ನಾಗಿ ತಾಳಿಸಿಕೊಳ್ಳಬೇಕು. ನಂತರ ಅದಕ್ಕೆ ತುಂಡು ಮಾಡಿದ ಬ್ರೆಡನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ತಾಳಿಸಬೇಕು. ಕೆಳಗೆ ಇಳಿಸಿದ ನಂತರ ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಕೈಆಡಿಸಿದರಾಯಿತು, ಬ್ರೆಡ್ ಉಪ್ಪಿಟ್ ತಯಾರ್.



Click it and Unblock the Notifications
