Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಸಂಜಿಮುಂದ ತಟ್ಟಿ ಸಜ್ಜೆ ರೊಟ್ಟಿ

* ಆದಿತ್ಯ ನಾಡಿಗ್, ನೀಚಡಿ, ಸಾಗರ
ಬೇಕಾಗುವ ಸಾಮಾನುಗಳು:
ಸಜ್ಜೆ ಹಿಟ್ಟು - 2 ಬಟ್ಟಲು
ಉಪ್ಪು - 1/4 ಚಮಚ
ಬಿಸಿನೀರು - 1.25 ಬಟ್ಟಲು
ಮಾಡುವ ವಿಧಾನ :
ಸಜ್ಜೆ ಹಿಟ್ಟಿಗೆ ಉಪ್ಪು, ಬಿಸಿನೀರು ಹಾಕಿ ಚೆನ್ನಾಗಿ ಕಲೆಸಿ, ನಾದಿಕೊಳ್ಳಿ. Gluten ಎಂಬ ಪದಾರ್ಥ ಸಜ್ಜೆಹಿಟ್ಟಿನಲ್ಲಿ ಕಮ್ಮಿಯಾಗಿರುವುದರ ಪರಿಣಾಮವಾಗಿ ಕಲೆಸಿಕೊಂಡ ಹಿಟ್ಟು ಚಪಾತಿ ಹಿಟ್ಟಿನಂತೆ ಮೃದುವಾಗಿರುವುದಿಲ್ಲ. ಹೀಗೆ ಕಲಸಿದ ಹಿಟ್ಟನ್ನು ಒಂದು ಒದ್ದೆಬಟ್ಟೆಯಲ್ಲಿ ಕಟ್ಟಿ ಅರ್ಧಗಂಟೆ ಇಡಿ.
ಅರ್ಧಗಂಟೆಯ ನಂತರ ಕಲೆಸಿದ ಹಿಟ್ಟನ್ನು ಸಣ್ಣ ಹಿಟ್ಟಿನ ಉಂಡೆಗಳಾಗಿ ಮಾರ್ಪಡಿಸಿ. ಹಳೆಯ ಸಂಪ್ರದಾಯದ ಪ್ರಕಾರ ಸಜ್ಜೆರೊಟ್ಟಿಯನ್ನು ಕೈಯಲ್ಲೆ ತಟ್ಟಿ ಮಾಡಬೇಕು (ಜೋಳದ ರೊಟ್ಟಿಯ ತರಹ). ಆ ರೀತಿ ಕಷ್ಟ ಅನಿಸಿದರೆ, ಹಿಟ್ಟಿನ ಉಂಡೆಯನ್ನು 2 ಪ್ಲಾಸ್ಟಿಕ್ ಹಾಳೆಗಳ ಮಧ್ಯ ಇಟ್ಟು ಚಪತಿಯಂತೆ ಲಟ್ಟಿಸಿಕೊಳ್ಳಬಹುದು. ಕೈಯಲ್ಲೆ ರೊಟ್ಟಿ ತಟ್ಟುವುದಾದರೆ ಕೈಗೆ ನೀರನ್ನು ಹಚ್ಚಿಕೊಂಡು ತಟ್ಟಿದರೆ ಸುಲಭವಾಗುತ್ತದೆ.
ಒಂದು ಕಾವಲಿಯನ್ನು (ತವಾ/ಹೆಂಚು) ಒಲೆಯ ಮೇಲಿಟ್ಟು ಬಿಸಿಮಾಡಿಕೊಳ್ಳಿ. ಕಾವಲಿ ಕಾದನಂತರ ಲಟ್ಟಿಸಿಕೊಂಡ ಅಥವಾ ತಟ್ಟಿದ ರೊಟ್ಟಿಯನ್ನು ಅದರಮೇಲೆ ಹಾಕಿ. ಚಪಾತಿಗೆ ಎಣ್ಣೆ ಸವರುವಂತೆ ಬೇಯುತ್ತಿರುವ ರೊಟ್ಟಿಯ ಮೇಲೆ ನೀರನ್ನು ಸವರಿ, ರೊಟ್ಟಿಯ ಎರಡೂ ಕಡೆ ಬೇಯಿಸಿಕೊಳ್ಳಿ. ಒಂದು ರೊಟ್ಟಿ ಚನ್ನಾಗಿ ಬೇಯಲು 3 ನಿಮಿಷ ಸಾಕಾಗುತ್ತದೆ.
ಬಿಸಿ ಬಿಸಿ ಸಜ್ಜೆ ರೊಟ್ಟಿಯ ಜೊತೆ ನೆಂಚಿಕೊಳ್ಳಲು ಬೆಳ್ಳುಳ್ಳಿ ಚಟ್ನಿ ಮತ್ತು ಬೆಣ್ಣೆ ಬಳಸಿ.
ಸಲಹೆ : ಹಿಟ್ಟನ್ನು ಮೃದುವಾಗಿಸಲು 1/2 ಬಟ್ಟಲು ಗೋದಿಹಿಟ್ಟನ್ನು ಬಳಸಬಹುದು.



Click it and Unblock the Notifications
