For Quick Alerts
ALLOW NOTIFICATIONS  
For Daily Alerts

ಆಲೂ ದಮ್: ಬೆಂಗಾಲಿ ಶೈಲಿಯ ರೆಸಿಪಿ

Posted By:
|

ನೀವು ಬೆಂಗಾಲಿ ಶೈಲಿಯ ಆಲೂ ದಮ್ ರುಚಿ ನೋಡಿದರೆ ವಾವ್‌! ಆಲೂಗಡ್ಡೆಯಿಂದ ಇಷ್ಟೊಂದು ಟೇಸ್ಟಿ ಅಡುಗೆ ಮಾಡಬಹುದೇ ಎಂದು ಅಚ್ಚರಿ ಪಡುವಿರಿ, ಅಷ್ಟೊಂದು ರುಚಿಯಾಗಿರುತ್ತದೆ.

ಈ ಆಲೂದಮ್ ವೀಕೆಂಡ್‌ಗಳಲ್ಲಿ ಸ್ಪೆಷಲ್‌ ಬ್ರೇಕ್‌ಫಾಸ್ಟ್ ಸವಿಯಬೇಕೆಂದು ಅನಿಸಿದ ದಿನ ಪೂರಿಗೆ ಕಾಂಬಿನೇಷನ್ ಆಗಿ ಮಾಡಲು ಬೆಸ್ಟ್ ಅಡುಗೆಯಾಗಿದೆ.

Bengali aloo dum recipe

ಈ ಆಲೂದಮ್ ಮಾಡಲು ಸ್ವಲ್ಪ ಅಧಿಕ ಸಮಯ ಹಿಡಿಯುವುದು ಆದರೆ ಇದರ ರುಚಿಯ ಮುಂದೆ ಪಟ್ಟ ಶ್ರಮ ಸಾರ್ಥಕ ಅನಿಸುವುದು. ಇದನನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ ನೋಡಿ:

Bengali Aloo Dum Recipe, ಆಲೂ ದಮ್ ರೆಸಿಪಿ
Bengali Aloo Dum Recipe, ಆಲೂ ದಮ್ ರೆಸಿಪಿ
Prep Time
20 Mins
Cook Time
40M
Total Time
1 Hours0 Mins

Recipe By: Reena TK

Recipe Type: Side Dish

Serves: 4

Ingredients
  • ಬೇಕಾಗುವ ಸಾಮಗ್ರಿ

    1 ಇಂಚಿನಷ್ಟು ದೊಡ್ಡದಿರುವ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)

    2 ಹಸಿ ಮೆಣಸಿನಕಾಯಿ, ಕತ್ತರಿಸಿದ್ದು

    1 ಈರುಳ್ಳಿ (ಕತ್ತರಿಸಿದ್ದು)

    4 ಬೆಳ್ಳುಳ್ಳಿ ಎಸಳು

    ಆಲೂಗಡ್ಡೆ ರೋಸ್ಟ್ ಮಾಡಲು

    250 ಗ್ರಾಂ ಚಿಕ್ಕ ಆಲೂಗಡ್ಡೆ (ಬೇಬಿ ಪೊಟೆಟೊ)

    1 ಚಮಚ ಸಾಸಿವೆ ಎಣ್ಣೆ

    ರುಚಿಗೆ ತಕ್ಕ ಉಪ್ಪು

    ಆಲೂ ದಮ್‌ಗೆ ಬೇಕಾಗುವ ಸಾಮಗ್ರಿ

    1 ಚಮಚ ಸಾಸಿವೆ ಎಣ್ಣೆ

    4 ಏಲಕ್ಕಿ

    1 ಇಂಚಿನಷ್ಟು ದೊಡ್ಡದಿರುವ ಚಕ್ಕೆ

    4 ಲವಂಗ

    2 ಪಲಾವ್ ಎಲೆ

    1 ಚಮಚ ಅರಿಶಿಣ ಪುಡಿ

    1 ಚಮಚ ಖಾರದ ಪುಡಿ

    1 ಚಮಚ ಗರಂ ಮಸಾಲ ಪುಡಿ

    1ಚಮಚ ಕೊತ್ತಂಬರಿ ಪುಡಿ

    ಅರ್ಧ ಕಪ್ ಟೊಮೆಟೊ ಪೇಸ್ಟ್(ಮನೆಯಲ್ಲಿಯೇ ಮಾಡಿದ್ದು)

    ಅರ್ಧ ಕಪ್ ಮೊಸರು

    1 ಚಮಚ ಸಕ್ಕರೆ

    ರುಚಿಗ ತಕ್ಕ ಉಪ್ಪು

    ಸ್ವಲ್ಪ ಕೊತ್ತಂಬರಿ ಸೊಪ್ಪು

Red Rice Kanda Poha
How to Prepare
  • ಮಾಡುವ ವಿಧಾನ:

    * ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಟ್ಟುಕೊಳ್ಳಿ.

    * ಮಿಕ್ಸಿ ಜಾರ್‌ಗೆ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ರುಬ್ಬಿ ಒಂದು ಕಪ್‌ನಲ್ಲಿ ಹಾಕಿಡಿ.

    * ಮುಂದಿನ ಹಂತವೆಂದರೆ ಆಲೂಗಡ್ಡೆಯನ್ನು ರೋಸ್ಟ್ ಮಾಡುವುದು. 2 ಚಮಚ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆ, ಚಿಟಿಕೆಯಷ್ಟು ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ರೋಸ್ಟ್ ಮಾಡಿ. ಒಂದು 5-6 ನಿಮಿಷ ರೋಸ್ಟ್ ಮಾಡಿದರೆ ಸಾಕು. ಆಲೂಗಡ್ಡೆ ಕಂದು ಬಣ್ಣಕ್ಕೆ ತಿರುಗವಷ್ಟು ಹೊತ್ತು ರೋಸ್ಟ್ ಮಾಡಿರಬೇಕು. ನಂತರ ಅದನ್ನು ತೆಗೆದು ಒಂದು ಬೌಲ್‌ ನಲ್ಲಿ ಹಾಕಿಡಿ.

    * ಈಗ ಫ್ರೈ ಮಾಡುವ ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಡಿಮೆ ಉರಿಯಲ್ಲಿ ಸೌಟ್‌ನಿಂದ ಆಡಿಸಿ. ಈ ಪೇಸ್ಟ್‌ನ ಹಸಿ ವಾಸನೆ ಹೋಗಿ ಅದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಬೇಕು. ಹೀಗಾಗಲು 5 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಚಕ್ಕೆ ಹಾಗೂ ಲವಂಗ, ಪಲಾವ್ ಎಲೆ ಹಾಕಿ ಮತ್ತೆ 3-4 ನಿಮಿಷ ಸೌಟ್‌ನಿಂದ ಆಡಿಸುತ್ತಾ ಫ್ರೈ ಮಾಡಿ.

    * ಈಗ ಟೊಮೆಟೊ ಪೇಸ್ಟ್ ಹಾಕಿ, ಅದಕ್ಕೆ ಅರಿಶಿಣ ಪುಡಿ, ಒಂದು ಚಮಚ ಕೊತ್ತಂಬರಿ ಪುಡಿ, ಒಂದು ಚಮಚ ಗರಂ ಮಸಾಲ ಪುಡಿ ಹಾಕಿ, ಇವೆಲ್ಲಾ ಮಿಶ್ರವಾದ ಬಳಿಕ ಖಾರದ ಪುಡಿ ಹಾಕಿ.

    * ಈಗ ಚೆನ್ನಾಗಿ ಸೌಟ್‌ನಿಂದ ಆಡಿಸಿ, ಮೊಸರು ಹಾಕಿ ಮಿಶ್ರ ಮಾಡಿ, ಈಗ ರೋಸ್ಟ್ ಮಾಡಿದ ಆಲೂಗಡ್ಡೆ ಹಾಕಿ 1 ಚಮಚ ಸಕ್ಕರೆ ಹಾಕಿ.

    * ಉಪ್ಪು ಸರಿಯಾಗಿದೆಯೇ ನೋಡಿ, ಪಾತ್ರೆಯ ಬಾಯಿ ಮಿಚ್ಚಿ ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಂತೆ ಒಂದೆರಡು ಬಾರಿ ತಿರುಗಿಸಿ.

    * ಈಗ ಮಿಶ್ರ ಸ್ವಲ್ಪ ಗಟ್ಟಿಯಾದಾಗ ಸೌಟ್‌ ಆಫ್‌ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಪೂರಿ ಜೊತೆ ಸರ್ವ್ ಮಾಡಿ.

Instructions
  • ಆಲೂ ದಮ್‌ಗೆ ಆಲೂಗಡ್ಡೆಯನ್ನು ಡೀಪ್‌ ಫ್ರೈ ಮಾಡಿ ಬಳಸಿದರೆ ರುಚಿ ಹೆಚ್ಚು, ಆದರೆ ಅಧಿಕ ಎಣ್ಣೆಯಂಶ ಬೇಡ ಎನ್ನುವವರು ಪ್ಯಾನ್‌ನಲ್ಲಿ ರೋಸ್ಟ್ ಮಾಡಿ
Nutritional Information
  • ಕೊಬ್ಬು - 16ಗ್ರಾಂ
  • ಪ್ರೊಟೀನ್ - 3ಗ್ರಾಂ
  • ಕಾರ್ಬ್ಸ್ - 25ಗ್ರಾಂ
  • ನಾರಿನಂಶ - 2.4ಗ್ರಾಂ
[ 4 of 5 - 53 Users]
X
Desktop Bottom Promotion