For Quick Alerts
ALLOW NOTIFICATIONS  
For Daily Alerts

Navaratri Recipe: ದಸರಾ ಹಬ್ಬಕ್ಕೆ ಬಾದಾಮ್‌ ಪುರಿ ರೆಸಿಪಿ

|

ಸಿಹಿ ತಿಂಡಿ ಯಾರಿಗೆ ತಾನೇ ಇಷ್ಟ ಇಲ್ಲ, ಎಂಥಾ ಖಾರದ ತಿಂಡಿ ಪ್ರಿಯರು ಕೂಡ ಆಗಾಗ್ಗೆ ಸಿಹಿ ತಿಂಡಿಯನ್ನು ಬಯಸುತ್ತಾರೆ. ಇನ್ನು ಹಬ್ಬದ ಸಮಯಗಳಲ್ಲಂತೂ ಮನೆಯಲ್ಲಿ ಸಿಹಿ ಖಾದ್ಯ ಮಾಡಲೇಬೇಕು. ಹಬ್ಬದ ಊಟದ ರುಚಿ ಹೆಚ್ಚಿಸುವುದೇ ಸಿಹಿ ಖಾದ್ಯಗಳು.

Badam Puri Recipe

ಇನ್ನೇನು ನವರಾತ್ರಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ, ಒಂಬತ್ತು ದಿನ ನಿತ್ಯ ಸಿಹಿಖಾದ್ಯಗಳ ನೈವೇದ್ಯ ದೇವರಿಗೆ ಅರ್ಪಿಸುವುದು ವಾಡಿಕೆ. ಅಂತೆಯೇ ಈಗಾಗಲೇ ನಾವು ಸರಣಿಯಾಗಿ ಸಿಂಪಲ್‌ ಆಗಿ ತಯಾರಿಸಬಹುದಾದ ಸಿಹಿ ಖಾದ್ಯಗಳನ್ನು ನೀಡುತ್ತಿದ್ದೇವೆ. ಇದು ಬಹುಜನರ ನೆಚ್ಚಿನ ತಿಂಡಿ ಬಾದಾಮ್‌ ಪುರಿ ಮಾಡುವ ವಿಧಾನವನ್ನು ತಿಳಿಸಿಕೊಡಲಿದ್ದೇವೆ.
ಗರಿಗರಿಯಾದ ಹೊರ ಪದರ ಮತ್ತು ಒಳಗಿನ ಮೃದುವಾದ ಸಕ್ಕರೆ ನೆನೆಸಿದ ಸಿರಪ್ ಆಹಾ ಕೇಳುತ್ತಲೇ ಬಾಯಲ್ಲಿ ನೀರು ತರಿಸುವ ತಿಂಡಿ ಬಾದಾಮ್‌ ಪುರಿ. ಮನೆಯಲ್ಲೇ ಹೇಗೆ ರುಚಿಯಾಗಿ ಬಿಸಿಬಿಸಿ ಬಾದಾಮ್‌ ಪುರಿ ತಯಾರಿಸಬಹುದು ಬನ್ನಿ ನೋಡೋಣ:

Badam Puri Recipe/ ಬಾದಾಮ್‌ ಪುರಿ ರೆಸಿಪಿ
Badam Puri Recipe/ ಬಾದಾಮ್‌ ಪುರಿ ರೆಸಿಪಿ
Prep Time
14 Mins
Cook Time
30M
Total Time
44 Mins

Recipe By: Kavya

Recipe Type: Sweet

Serves: 10

Ingredients
  • ಬೇಕಾಗುವ ಸಾಮಾಗ್ರಿಗಳು

    1. ಮೈದಾ ಹಿಟ್ಟು - 1 ಕಪ್

    2. ಸಕ್ಕರೆ - ಒಂದು ಕಪ್

    3. ತುಪ್ಪ - 1/4 ಕಪ್

    4. ಒಣ ತೆಂಗಿನಕಾಯಿ - ಒಂದು ಕಪ್

    5. ಎಣ್ಣೆ

    6. ಅಕ್ಕಿ ಹಿಟ್ಟು - 2 ಚಮಚ

    7. ನೀರು - 1 ಕಪ್

    8. ಉಪ್ಪು - ರುಚಿಗೆ

    9. ಏಲಕ್ಕಿ ಪುಡಿ - 1 ಚಮಚ

    10. ಲವಂಗ - 8-10

Red Rice Kanda Poha
How to Prepare
  • ತಯಾರಿಸುವ ವಿಧಾನ

    1. ಒಂದು ಬಟ್ಟಲು ತೆಗೆದುಕೊಳ್ಳಿ ಅದಕ್ಕೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ತುಪ್ಪ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

    3. ನೀರನ್ನು ಸ್ವಲ್ಪಮಟ್ಟಿಗೆ ಸೇರಿಸಿ ಮತ್ತು ಮೃದುವಾದ ಹಿಟ್ಟಿನಲ್ಲಿ ಬೆರೆಸಿಕೊಳ್ಳಿ.

    4. ಹಿಟ್ಟನ್ನು 10 ನಿಮಿಷಗಳ ಕಾಲ ಹಾಗೇ ಇಡಿ.

    5. ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ನೀರು ಸೇರಿಸಿ.

    6. ಪಾಕದಲ್ಲಿ ಸಕ್ಕರೆ ಕರಗುವ ತನಕ ನೀರನ್ನು ಬೆರೆಸಿ ಒಂದು ಎಳೆ ಪಾಕ ಸಿದ್ಧ ಮಾಡಿಕೊಳ್ಳಿ.

    7. ಪಾಕಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ತಣ್ಣಗಾಗಲು ಬಿಡಿ.

    8. ಹಿಟ್ಟನ್ನು ಸಣ್ಣ ಭಾಗಗಳಾಗಿ ಮಾಡಿ ಚೆಂಡುಗಳಾಗಿ ಸುತ್ತಿಕೊಳ್ಳಿ.

    9. ಹಿಟ್ಟನ್ನು ಚಪಾತಿ ರೀತಿ ಹೊಸೆದು ಅವುಗಳನ್ನು ತ್ರಿಕೋನದ ರೀತಿ ಸುತ್ತಿಕೊಳ್ಳಿ ಮತ್ತು ಪೂರಿಯ ಎಲ್ಲಾ ಪದರಗಳನ್ನು ಸುರಕ್ಷಿತಗೊಳಿಸಲು ಲವಂಗವನ್ನು ಪಿನ್ ಮಾಡಿ.

    10. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ನಿಧಾನವಾಗಿ ಒಂದೊಂದೆ ಬಾದಾಮ್‌ ಪುರಿಯನ್ನು ಎಣ್ಣೆಗೆ ಬಿಟ್ಟು ಡೀಪ್ ಫ್ರೈ ಮಾಡಿ.

    11. ಗರಿಗರಿಯಾದ ಬಾದಾಮ್‌ ಪುರಿಯನ್ನು ಸಕ್ಕರೆ ಪಾಕದಲ್ಲಿ ಹಾಕಿ 2 ನಿಮಿಷದ ನಂತರ ತೆಗೆಯಿರಿ.

    12. ಕೂಡಲೇ ಬಾದಾಮ್‌ ಪುರಿ ಮೇಲೆ ತುರಿದ ತೆಂಗಿನಕಾಯಿಂದ ಅಲಂಕರಿಸಿ.

Instructions
  • 1. ಸಿರಪ್ ಅನ್ನು ವೇಗವಾಗಿ ಮಾಡಲು, ಪ್ಯಾನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ ಮತ್ತು ನೀವು ಬಯಸಿದ ಪಾಕದ ಎಳೆ ಪಡೆಯುವವರೆಗೆ ಬೆರೆಸಿ. 2. ಪಾಕದಲ್ಲಿ ಬಾದಾಮ್‌ ಪುರಿಯನ್ನು ಹಾಕಿದ ಕೂಡಲೇ ತ್ವರಿತವಾಗಿ ದಪ್ಪವಾಗುವುದು. ಆದ್ದರಿಂದ ಪಾಕ ತಣ್ಣಗಾಗಲು ಬಿಡಿ.
Nutritional Information
  • ಕ್ಯಾಲೋರಿಗಳು - - 140 ಕ್ಯಾಲೊರಿ
[ 4 of 5 - 46 Users]
X
Desktop Bottom Promotion