For Quick Alerts
ALLOW NOTIFICATIONS  
For Daily Alerts

ಬಾದಾಮಿ ಹಲ್ವಾ ಪಾಕವಿಧಾನ

Posted By: Divya Pandith
|

ಬಾದಾಮಿ ಹಲ್ವಾ ಭಾರತದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ವಿಶೇಷ ಕಾರ್ಯ, ಉತ್ಸವ ಹಾಗೂ ಸಮಾರಂಭಗಳ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮದುವೆ, ನಾಮಕರಣ, ಮುಂಜಿಗಳಂತಹ ಕಾರ್ಯಕ್ರಮಗಳಲ್ಲಿ ತಯಾರಿಸುತ್ತಾರೆ. ಭಾರತದಾದ್ಯಂತ ತಯಾರಿಸುವಂತ ಸಿಹಿ ತಿಂಡಿಗಳಲ್ಲಿ ಇದೂ ಒಂದು.

ರುಚಿಕರವಾದ ಈ ಸಿಹಿ ತಿಂಡಿಗೆ ಪ್ರಮುಖವಾಗಿ ಬಾದಾಮಿ, ಸಕ್ಕರೆ ಮತ್ತು ತುಪ್ಪವನ್ನು ಬಳಸಲಾಗುತ್ತದೆ. ಮುಖ್ಯವಾಗಿ ಬಾದಾಮಿಯಿಂದಲೇ ತಯಾರಿಸುವ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿದರೆ ನಾಲಿಗೆಯು ಮತ್ತೆ ಮತ್ತೆ ಚಪ್ಪರಿಸಬೇಕೆನ್ನುವ ಸಂವೇದನೆಯನ್ನು ನೀಡುತ್ತದೆ. ಆರೋಗ್ಯ ಪೂರ್ಣ ಘಟಕಾಂಶವಾದ ಬಾದಾಮಿಯಿಂದಲೇ ಈ ಸಿಹಿತಿಂಡಿಯನ್ನು ತಯಾರಿಸುವುದರಿಂದ ಹೆಚ್ಚು ಪೋಷಕಾಂಶಗಳಿಂದಲೇ ಕೂಡಿರುವುದು. ಜೊತೆಗೆ ಸಕ್ಕರೆ ಮತ್ತು ತುಪ್ಪದ ಸಮ್ಮಿಲನವಾಗಿರುವುದರಿಂದ ಈ ಸಿಹಿ ತಿಂಡಿಯ ಶ್ರೀಮಂತಿಕೆ ಹೆಚ್ಚು.

ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಸಿಹಿ ತಿಂಡಿಯನ್ನು ಮನೆಯಲ್ಲಿ ಬಹಳ ಸುಲಭ ಹಾಗೂ ಸರಳ ಪಾಕವಿಧಾನದಿಂದ ತಯಾರಿಸಬಹುದು. ಇದನ್ನು ತಯಾರಿಸಲು ಅಡುಗೆ ಮನೆಯಲ್ಲಿ ಅಧಿಕ ಸಮಯವನ್ನು ಕಳೆಯಬೇಕೆಂದಿಲ್ಲ. ಇದರ ತಯಾರಿಸುವ ವಿಧಾನದಲ್ಲಿ ಕಲಕುವಿಕೆಯು ಕೊಂಚ ಆಯಾಸವನ್ನುಂಟುಮಾಡಬಹುದು. ಆದರೆ ಫಲಿತಾಂಶದಲ್ಲಿ ಉತ್ತಮ ರುಚಿಯಿಂದ ಕೂಡಿರುವ ಬಾದಾಮಿ ಹಲ್ವಾ ತಯಾರಿಸಿರುವ ಖುಷಿ ನಿಮ್ಮದಾಗಿರುತ್ತದೆ. ವಿಶೇಷವಾದ ಈ ಸಿಹಿ ತಿಂಡಿಯನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ಬೋಲ್ಡ್ ಸ್ಕೈ ನೀಡಿರುವ ಹಂತ ಹಂತವಾದ ವೀಡಿಯೋ ಮತ್ತು ಚಿತ್ರ ವಿವರಣೆಯನ್ನು ಪರಿಶೀಲಿಸಿ.

badam halwa recipe
ಬಾದಾಮ್ ಹಲ್ವಾ ರೆಸಿಪಿ| ಬಾದಾಮಿ ಹಲ್ವಾ ರೆಸಿಪಿ| ಮನೆಯಲ್ಲಿಯೇ ಮಾಡಿದ ಬಾದಾಮ್ ಹಲ್ವಾ ರೆಸಿಪಿ| ಬಾದಾಮ್ ಹಲ್ವಾ ಮಾಡುವುದು ಹೇಗೆ
ಬಾದಾಮ್ ಹಲ್ವಾ ರೆಸಿಪಿ| ಬಾದಾಮಿ ಹಲ್ವಾ ರೆಸಿಪಿ| ಮನೆಯಲ್ಲಿಯೇ ಮಾಡಿದ ಬಾದಾಮ್ ಹಲ್ವಾ ರೆಸಿಪಿ| ಬಾದಾಮ್ ಹಲ್ವಾ ಮಾಡುವುದು ಹೇಗೆ
Prep Time
5 Mins
Cook Time
40M
Total Time
45 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 3-4 ಮಂದಿಗೆ

Ingredients
  • ಬಾದಾಮಿ- 1 ಕಪ್

    ಸಕ್ಕರೆ - 1/2 ಕಪ್

    ನೀರು -5, 1/2 ಕಪ್

    ತುಪ್ಪ - 1/2 ಕಪ್

    ಕೇಸರಿ ಎಳೆ -7-8

Red Rice Kanda Poha
How to Prepare
  • 1. ಒಂದು ಪಾತ್ರೆಗೆ 4 ಕಪ್ ನೀರನ್ನು ಸೇರಿಸಿ ಬಿಸಿ ಮಾಡಿ.

    2. ನೀರು ಚೆನ್ನಾಗಿ ಕುದಿಯಲು 2 ನಿಮಿಷ ಬಿಡಿ.

    3. ಬಾದಾಮಿಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ.

    4. ದೊಡ್ಡ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.

    5. ಬಾದಾಮಿ ಬೆಂದಿದೆಯೇ ಎಂದು ಪರೀಕ್ಷಿಸಿ. (ಒಂದು ಬಾದಾಮಿಯನ್ನು ತೆಗೆದು, ಅದನ್ನು ಒತ್ತಿ ನೋಡಿ. ಬಾದಾಮಿಯ ಸಿಪ್ಪೆ ಸುಲಭವಾಗಿ ನುಣುಚಿಕೊಳ್ಳುತ್ತದೆ ಎಂದರೆ ಬೆಂದಿದೆ ಎಂದು ಅರ್ಥ)

    6. ಉರಿಯಿಂದ ಕೆಳಗಿಳಿಸಿ. ಒಂದು ಬೌಲ್‍ಗೆ ವರ್ಗಾಯಿಸಿ. ತಣಿಯಲು ಬಿಡಿ.

    7. ಇನ್ನೊಂದು ಬೌಲ್‍ನಲ್ಲಿ ಒಂದು ಕಪ್ ನೀರನ್ನು ಹಾಕಿ.

    8. ಬಾದಾಮಿಯನ್ನು ಸ್ವಲ್ಪ ಒತ್ತಿದರೆ ಸಿಪ್ಪೆಯು ಕಳಚಿಕೊಳ್ಳುತ್ತದೆ. ಹಾಗೆಯೇ ಸುಲಭವಾಗಿ ಎಲ್ಲಾ ಬಾದಾಮಿಯ ಸಿಪ್ಪೆ ತೆಗೆದುಕೊಳ್ಳಿ.

    9. ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿಕೊಳ್ಳಿ.

    10. ಎಲ್ಲಾ ಬಾದಾಮಿಯ ಸಿಪ್ಪೆ ತೆಗೆದ ನಂತರ ಎಲ್ಲಾ ಬಾದಾಮಿಯನ್ನು ಮಿಕ್ಸರ್ ಜಾರ್‍ಗೆ ವರ್ಗಾಯಿಸಿ.

    11. ಕಾಲು ಕಪ್ ನೀರನ್ನು ಸೇರಿಸಿ, ಮೃದುವಾಗಿ ರುಬ್ಬಿಕೊಳ್ಳಿ.

    12. ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್ ನೀರನ್ನು ಬಿಸಿಮಾಡಿ.

    13. ಅದಕ್ಕೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ತಿರುವಿ ಮತ್ತು ಪಾಕ ಬರಲು ಬಿಡಿ.

    14. ಕೇಸರಿ ಎಳೆಯನ್ನು ಸೇರಿಸಿ.

    15. ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ, ನಂತರ ಸಣ್ಣ ಉರಿಯಲ್ಲಿ ಇಡಿ.

    16. ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.

    17. ಒಮ್ಮೆ ಕರಗಿದ ಮೇಲೆ, ರುಬ್ಬಿಕೊಂಡ ಬಾದಾಮಿ ಪೇಸ್ಟ್‍ಅನ್ನು ಸೇರಿಸಿ.

    18. ಮಿಶ್ರಣವು ತುಪ್ಪದೊಂದಿಗೆ ಬರೆತು, ಹರಳಿನ ಸ್ಥಿರತೆ ಬರುವ ತನಕ 8-10 ನಿಮಿಷಗಳ ಕಾಲ ನಿರಂತರವಾಗಿ ತಿರುವುತ್ತಲೇ ಇರಿ.

    19. ಒಮ್ಮೆ ಸ್ಥಿರತೆಗೆ ಬಂದ ಮೇಲೆ ಸಕ್ಕರೆ ಪಾಕವನ್ನು ಸೇರಿಸಿ. ತುಪ್ಪವು ಬೇರ್ಪಡುವ ವರೆಗೆ ಚೆನ್ನಾಗಿ ಮಿಶ್ರಗೊಳಿಸಿ.

    20. ಉರಿಯನ್ನು ಆರಿಸಿ. ಹಲ್ವಾ ಅನ್ನು ಒಂದು ಬೌಲ್‍ಗೆ ವರ್ಗಾಯಿಸಿ.

    21. ಹಲ್ವಾ ಸಾಮಾನ್ಯ ತಾಪಮಾನಕ್ಕೆ ತಿರುಗಿದ ಮೇಲೆ ಅಥವಾ ಪ್ರಿಜ್‍ನಲ್ಲಿ ತಣ್ಣಗಾಗಿಸಿ ಸವಿಯಲು ನೀಡಿ.

Instructions
  • 1. ಬಾದಾಮಿ ಬೆಂದಮೇಲೆ ನೀರನ್ನು ಬಳಿಸಿ, ಬೇರೆ ನೀರನ್ನು ಸೇರಿಸಿ ಸಿಪ್ಪೆಯನ್ನು ತೆಗೆಯಿರಿ. 2. ಒಂದು ರಾತ್ರಿ ನೀರಿನಲ್ಲಿ ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆಯನ್ನು ತೆಗೆದುಕೊಳ್ಳಬಹುದು. 3. ಬಾದಾಮಿಯ ಸಿಪ್ಪೆ ತೆಗೆದು, ಒಂದು ಬೌಲ್ ನೀರಿನಲ್ಲಿಟ್ಟು, ರುಬ್ಬಿಕೊಂಡರೆ ಬಿಳಿ ಬಣ್ಣದಲ್ಲೇ ಇರುತ್ತದೆ.
Nutritional Information
  • ಬಡಿಸುವ ಪ್ರಮಾಣ - 1 ಟೇಬಲ್ ಚಮಚ
  • ಕ್ಯಾಲೋರಿ - 132 ಕ್ಯಾಲ್
  • ಕೊಬ್ಬು - 8 ಗ್ರಾಂ.
  • ಪ್ರೋಟೀನ್ - 3 ಗ್ರಾಂ.
  • ಕಾರ್ಬೋಹೈಡ್ರೇಟ್ - 15 ಗ್ರಾಂ.
  • ಸಕ್ಕರೆ - 14 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ:

1. ಒಂದು ಪಾತ್ರೆಗೆ 4 ಕಪ್ ನೀರನ್ನು ಸೇರಿಸಿ ಬಿಸಿ ಮಾಡಿ.

badam halwa recipe

2. ನೀರು ಚೆನ್ನಾಗಿ ಕುದಿಯಲು 2 ನಿಮಿಷ ಬಿಡಿ.

badam halwa recipe

3. ಬಾದಾಮಿಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ.

badam halwa recipe

4. ದೊಡ್ಡ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.

badam halwa recipe

5. ಬಾದಾಮಿ ಬೆಂದಿದೆಯೇ ಎಂದು ಪರೀಕ್ಷಿಸಿ. (ಒಂದು ಬಾದಾಮಿಯನ್ನು ತೆಗೆದು, ಅದನ್ನು ಒತ್ತಿ ನೋಡಿ. ಬಾದಾಮಿಯ ಸಿಪ್ಪೆ ಸುಲಭವಾಗಿ ನುಣುಚಿಕೊಳ್ಳುತ್ತದೆ ಎಂದರೆ ಬೆಂದಿದೆ ಎಂದು ಅರ್ಥ)

badam halwa recipe

6. ಉರಿಯಿಂದ ಕೆಳಗಿಳಿಸಿ. ಒಂದು ಬೌಲ್‍ಗೆ ವರ್ಗಾಯಿಸಿ. ತಣಿಯಲು ಬಿಡಿ.

badam halwa recipe
badam halwa recipe

7. ಇನ್ನೊಂದು ಬೌಲ್‍ನಲ್ಲಿ ಒಂದು ಕಪ್ ನೀರನ್ನು ಹಾಕಿ.

badam halwa recipe

8. ಬಾದಾಮಿಯನ್ನು ಸ್ವಲ್ಪ ಒತ್ತಿದರೆ ಸಿಪ್ಪೆಯು ಕಳಚಿಕೊಳ್ಳುತ್ತದೆ. ಹಾಗೆಯೇ ಸುಲಭವಾಗಿ ಎಲ್ಲಾ ಬಾದಾಮಿಯ ಸಿಪ್ಪೆ ತೆಗೆದುಕೊಳ್ಳಿ.

badam halwa recipe

9. ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿಕೊಳ್ಳಿ.

badam halwa recipe
badam halwa recipe

10. ಎಲ್ಲಾ ಬಾದಾಮಿಯ ಸಿಪ್ಪೆ ತೆಗೆದ ನಂತರ ಎಲ್ಲಾ ಬಾದಾಮಿಯನ್ನು ಮಿಕ್ಸರ್ ಜಾರ್‍ಗೆ ವರ್ಗಾಯಿಸಿ.

badam halwa recipe

11. ಕಾಲು ಕಪ್ ನೀರನ್ನು ಸೇರಿಸಿ, ಮೃದುವಾಗಿ ರುಬ್ಬಿಕೊಳ್ಳಿ.

badam halwa recipe

12. ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್ ನೀರನ್ನು ಬಿಸಿಮಾಡಿ.

badam halwa recipe

13. ಅದಕ್ಕೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ತಿರುವಿ ಮತ್ತು ಪಾಕ ಬರಲು ಬಿಡಿ.

badam halwa recipe
badam halwa recipe

14. ಕೇಸರಿ ಎಳೆಯನ್ನು ಸೇರಿಸಿ.

badam halwa recipe

15. ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ, ನಂತರ ಸಣ್ಣ ಉರಿಯಲ್ಲಿ ಇಡಿ.

badam halwa recipe
badam halwa recipe

16. ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.

badam halwa recipe
badam halwa recipe

17. ಒಮ್ಮೆ ಕರಗಿದ ಮೇಲೆ, ರುಬ್ಬಿಕೊಂಡ ಬಾದಾಮಿ ಪೇಸ್ಟ್‍ಅನ್ನು ಸೇರಿಸಿ.

badam halwa recipe

18. ಮಿಶ್ರಣವು ತುಪ್ಪದೊಂದಿಗೆ ಬರೆತು, ಹರಳಿನ ಸ್ಥಿರತೆ ಬರುವ ತನಕ 8-10 ನಿಮಿಷಗಳ ಕಾಲ ನಿರಂತರವಾಗಿ ತಿರುವುತ್ತಲೇ ಇರಿ.

badam halwa recipe
badam halwa recipe

19. ಒಮ್ಮೆ ಸ್ಥಿರತೆಗೆ ಬಂದ ಮೇಲೆ ಸಕ್ಕರೆ ಪಾಕವನ್ನು ಸೇರಿಸಿ. ತುಪ್ಪವು ಬೇರ್ಪಡುವ ವರೆಗೆ ಚೆನ್ನಾಗಿ ಮಿಶ್ರಗೊಳಿಸಿ.

badam halwa recipe
badam halwa recipe

20. ಉರಿಯನ್ನು ಆರಿಸಿ. ಹಲ್ವಾ ಅನ್ನು ಒಂದು ಬೌಲ್‍ಗೆ ವರ್ಗಾಯಿಸಿ.

badam halwa recipe

21. ಹಲ್ವಾ ಸಾಮಾನ್ಯ ತಾಪಮಾನಕ್ಕೆ ತಿರುಗಿದ ಮೇಲೆ ಅಥವಾ ಪ್ರಿಜ್‍ನಲ್ಲಿ ತಣ್ಣಗಾಗಿಸಿ ಸವಿಯಲು ನೀಡಿ.

badam halwa recipe
[ 4 of 5 - 79 Users]
X
Desktop Bottom Promotion