ಆಹಾ, ಸವಿಯಲು ಬಲು ರುಚಿ 'ಆಲೂ ಸಮೋಸಾ'

By: Divya
Subscribe to Boldsky

ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿಬಿಸಿಯಾದ ಚಹಾ ಹಾಗೂ ಅದರೊಟ್ಟಿಗೆ ನಾಲಿಗೆ ಚಪ್ಪರಿಸುವಂತಹ ತಿಂಡಿಯಿದ್ದರೆ ಅದರ ಅದ್ಭುತವೇ ಬೇರೆ. ಇಂತಹ ಸುಂದರ ಅನುಭವಕ್ಕೆ ಆರೋಗ್ಯಕರ ತಿಂಡಿಯಾದರೆ ಇನ್ನಷ್ಟು ದೇಹವು ಉತ್ಸುಕವಾಗಿರುತ್ತದೆ. ನಿಜ, ಸಂಜೆಯ ಲಘು ಉಪಹಾರಕ್ಕೆ ಒಂದು ಉತ್ತಮವಾದ ತಿಂಡಿ ಆಲೂ ಸಮೋಸಾ.

ಗರಿಗರಿ ಚಿಕನ್ ಸಮೋಸ ರೆಸಿಪಿ!

ಇದರಲ್ಲಿ ಪನ್ನೀರ್, ತರಕಾರಿ ಹಾಗೂ ಇನ್ನಿತರ ಆರೋಗ್ಯಕರ ಅಂಶ ಇರುವುದರಿಂದ ರುಚಿಯೊಂದಿಗೆ ಉತ್ತಮವಾದ ಆರೈಕೆಯೂ ಸಿಗುವುದು. ಹಾಗಾದರೆ ಬನ್ನಿ ಈ ರುಚಿಕರ ತಿಂಡಿಯನ್ನು ತಯಾರಿಸುವ ವಿಧಾನವನ್ನು ಅರಿಯೋಣ...

Aloo Samosa

ಬೇಕಾಗುವ ಸಾಮಾಗ್ರಿಗಳು:

* 250 ಗ್ರಾಂ ಮೈದಾ ಹಿಟ್ಟು

* 2 ಕಪ್ ಬೇಯಿಸಿದ ಆಲೂಗಡ್ಡೆಯ ಚೂರುಗಳು

* ಹಸಿರು ಬಟಾಣಿ ಸ್ವಲ್ಪ

* ಮೆಣಸಿನ ಕಾಯಿ ಸ್ವಲ್ಪ

* ಕಡಲೇಕಾಯಿ/ಶೇಂಗಾ ಸ್ವಲ್ಪ

* ಜೀರಿಗೆ ಸ್ವಲ್ಪ

* ಗರಮ್ ಮಸಾಲ

* ಚಾಟ್ ಮಸಾಲ

* ಹುಳಿ ಪುಡಿ/ಮಾವಿನ ಹುಳಿ ಪುಡಿ

* ಜೀರಿಗೆ ಪುಡಿ

* ಉಪ್ಪು

* ಮೆಣಸಿನ ಪುಡಿ/ಖಾರ ಪುಡಿ

* ಅರಿಶಿನ

* ಓಮ್ ಕಾಳು

* ಹುರಿಯಲು ಎಣ್ಣೆ

* ಬಿಸಿ ನೀರು

* ಸಮೋಸಾ ಮಾಡಲು ತುಪ್ಪ

ವಿಧಾನ:

1. ಬೆಚ್ಚಗಿನ ನೀರಿಗೆ ತುಪ್ಪ, ಉಪ್ಪು, ಓಮ್‍ಕಾಳು ಒಂದು ಚಮಚ ಎಲ್ಲವನ್ನು ಸೇರಿಸಿ ಮೃದುವಾಗಿ ಹಿಟ್ಟನ್ನು ಕಲಸಿ, 30 ನಿಮಿಷಗಳ ಕಾಲ ಬಿಡಿ.

2. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಜೀರಿಗೆಯನ್ನು ಹುರಿಯಿರಿ. ನಂತರ ಮೆಣಸಿನ ಕಾಯಿ, ಅರಿಶಿನ, ಜೀರಿಗೆ ಪುಡಿ, ಹುಳಿ ಪುಡಿಯನ್ನು ಸೇರಿಸಿ.

3. ಆಲೂಗಡ್ಡೆ, ಹಸಿರು ಬಟಾಣಿ, ಹಸಿರು ಮೆಣಸಿನ ಕಾಯಿ, ಕಡಲೇ ಬೀಜವನ್ನು ಸೇರಿಸಿ. ಚೆನ್ನಾಗಿ ಮಿಶ್ರಣಗೊಳಿಸಿ. ನಂತರ ಉಪ್ಪು, ಗರಮ್ ಮಸಾಲೆ, ಚಾಟ್ ಮಸಾಲೆಯನ್ನು ಸೇರಿಸಿ ಮಿಶ್ರಣಗೊಳಿಸಿ. ಬಳಿಕ ಉರಿಯಿಂದ ಕೆಳಗಿಳಿಸಿ.

4. ಕಲಸಿಟ್ಟುಕೊಂಡ ಹಿಟ್ಟನ್ನು ಚಿಕ್ಕ ತ್ರಿಕೋನ ಆಕಾರದಲ್ಲಿ ಲಟ್ಟಿಸಿಕೊಂಡು ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ನಂತರ ಬೆರಳುಗಳ ಸಹಾಯದಿಂದ ಮುಚ್ಚಿ.

5. ಹುರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿರಿ. ಕಾದ ತಕ್ಷಣ ತ್ರಿಭುಜಾಕೃತಿಯ ಸಮೋಸವನ್ನು ಎಣ್ಣೆಯಲ್ಲಿ ಬಿಡಿ.

6. ಎಣ್ಣೆಯಲ್ಲಿ ನೊರೆಯಗುಳ್ಳೆಗಳು ಕಡಿಮೆಯಾದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ.

7. ಆಗ ಎಣ್ಣೆಯಿಂದ ತೆಗೆದು ಕಾಗದದ ಮೇಲೆ ಹಾಕಿ.

8. ಈಗ ಬಿಸಿ ಬಿಸಿ ಇರುವಾಗಲೇ ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್‍ನೊಂದಿಗೆ ಸವಿಯಲು ನೀಡಿ.

[ of 5 - Users]
Please Wait while comments are loading...
Subscribe Newsletter