Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಆಲೂ ಮಸಾಲೆ ತುಂಬಿದ ಮೆಣಸಿನಕಾಯಿ ಬಜ್ಜಿ ರೆಸಿಪಿ: ಟೀ ಜೊತೆ ಸವಿಯಲು ಬಲು ಟೇಸ್ಟ್
ಈ ಮಳೆಯಲ್ಲಿ ಈ ಬಜ್ಜಿ, ಬೋಂಡಾವೆಲ್ಲ ತುಂಬಾನೇ ಪ್ರಿಯವಾಗುವುದು. ಹಿರಗಡೆ ಸುರಿಯುತ್ತಿರುವ ಮಳೆ ಕೈಯಲ್ಲಿ ಬಿಸಿ ಬಿಸಿಯಾದ ಟೀ, ಜೊತೆಗೆ ಆಲೂ ಮಸಾಲೆ ತುಂಬಿದ ಈ ಮೆಣಸಿನ ಬಜ್ಜಿ ಸವಿಯುತ್ತಿದ್ದರೆ ಆ ಕ್ಷಣ ಎಲ್ಲಾ ಚಿಂತೆ ಮರೆತು ನಿಮ್ಮೆಲ್ಲಾ ಗಮನ ಬಜ್ಜಿ ಮೇಲೆಯೇ ಇರುತ್ತದೆ.
ಹೌದು ಹೊರಗಡೆ ನಿಮಗೆ ಇಂಥ ಬಜ್ಜಿ ಸಿಗಲ್ಲ ಕೊಡುವ 10, 20 ರುಪಾಯಿಗೆ ಈ ರೀತಿ ಆಲೂ ಮಸಾಲೆ ತುಂಬಿ ಕೊಟ್ಟರೆ ಲಾಭ ಕಷ್ಟ ಅಂತ ಈ ರೀತಿಯ ಬಜ್ಜಿ ಮಾಡುವುದಿಲ್ಲ, ಹಾಗಶಗಿ ಈ ರುಚಿಯ ಬಜ್ಜಿ ನೀವು ಮನೆಯಲ್ಲಿಯೇ ಮಾಡಬೇಕು.

ಬನ್ನಿ ಆಲೂ ಮಸಾಲೆ ತುಂಬಿದ ಮೆಣಸಿನಕಾಯಿ ಬಜ್ಜಿ ಮಾಡುವುದು ಹೇಗೆ ಎಂದು ನೋಡೋಣ:
ಸ್ಟೆಪ್ 1
ಬೇಕಾಗುವ ಸಾಮಗ್ರಿ
ಬೇಯಿಸಿದ ಆಲೂಗಡ್ಡೆ 2
ಈರುಳ್ಳಿ 2 (ಸಾಧಾರಣ ಗಾತ್ರದ್ದು)
1/2 ಚಮಚ ಮೆಣಸಿನ ಪುಡಿ
1/4 ಚಮಚ ಕಾಳು ಮೆಣಸಿನ ಪುಡಿ
1/4 ಚಮಚ ಅರಿಶಿಣ ಪುಡಿ
ಸ್ವಲ್ಪ ಜೀರಿಗೆ ಪುಡಿ
1/4 ಚಮಚ ಉಪ್ಪಿನ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ಟೆಪ್ 2
ಈಗ ಒಂದು ಲೋಟದಲ್ಲಿ 2 ಚಮಚ ಕಡ್ಲೆಹಿಟ್ಟು, 1 ಚಮಚ ಅಕ್ಕಿ ಹಿಟ್ಟು, ಉಪ್ಪು,
ಮೆಣಸಿನ ಪುಡಿ ನೀರು ಸೇರಿಸಿ ಮಿಕ್ಸ್ ಮಾಡಿ.
ಈಗ ನೀವು ತೊಳದಿಟ್ಟ ಬಜ್ಜಿ ಮೆಣಸು ತೆಗೆದು ಕತ್ತರಿಸಿ, ಅದರೊಳಗಡೆ ಮಿಕ್ಸ್ ಮಾಡಿಟ್ಟ ಆಲೂಗಡ್ಡೆಯನ್ನು ಚಿಕ್ಕ ರೋಲ್ ರೀತಿ ಮಾಡಿ ತುಂಬಿ
ಸ್ಟೆಪ್ 3
ಎಣ್ಣೆಯನ್ನು ಕಾಯಿಸಿ
'ನಂತರ ಮೆಣಸನ್ನು ಮೆಲ್ಲನೆ ಕಡ್ಲೆಹಿಟ್ಟು ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ
ಬಿಡಿ
ನೀವು ಈ ರೀತಿ ಮೆಣಸಿನಕಾಯಿ ಬಜ್ಜಿ ಮಾಡಿ ನೋಡಿ.
ಬಿಸಿ ಬಿಸಿಯಾದ ಟೀ ಜೊತೆಗೆ ಈ ಬಿಸಿ ಬಿಸಿ ಬಜ್ಜಿ ಸವಿದರೆ ಸ್ವರ್ಗಕ್ಕೆ ಕಿಚ್ಚು
ಹಚ್ಚೆಂದ ಸರ್ವಜ್ಞ..



Click it and Unblock the Notifications
