Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರಾಮಮಂದಿರ ಉದ್ಘಾಟನೆ ದಿನ ಮನೆಯಲ್ಲಿ ರಾಮನ ಪೂಜಿಸಿ ನೈವೇದ್ಯ ಅರ್ಪಿಸಲು 3 ರೆಸಿಪಿ
ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ. ಈ ದಿನದಂದು ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುವುದು, ಹಿಂದೂಗಳ ಮನೆ-ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುವುದು, ಶ್ರೀರಾಮನಿಗೆ ಪೂಜೆ ಸಲ್ಲಿಸುವಾಗ ನೈವೇದ್ಯವಾಗಿ ಇವುಗಳನ್ನು ಅರ್ಪಿಸಬಹುದು.

ರೆಸಿಪಿ 1
ಅಕ್ಕಿಪಾಯಸ
ಬಾಸುಮತಿ ಅಕ್ಕಿ 1/2ಕಪ್
ಬಾದಾಮಿ 6-8
ಪಿಸ್ತಾ 6-8
ಒಣದ್ರಾಕ್ಷಿ 8-10
ಹಾಲು 1 ಲೀಟರ್
ಸಕ್ಕರೆ 3/4 ಕಪ್
ಏಲಕ್ಕಿ 3-4
ಸ್ವಲ್ಪ ಕೇಸರಿ
ವಿಧಾನ
ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಹಾಕಿ, ನಂತರ ಅದರ ನಿರನ್ನು ಸೋಸಿ,ನೀರಿನಂಶ
ಸಂಪೂರ್ಣ ಹೋಗಿರಬೇಕು, ತರಿತರಿಯಾಗಿ ರುಬ್ಬಿ.
* ಬಾದಾಮಿ, ಪಿಸ್ತವನ್ನು ಚಿಕ್ಕದಾಗಿ ಕತ್ತರಿಸಿ
* ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ
* ಅದಕ್ಕೆ ಅಕ್ಕಿಪುಡಿ, ಸಕ್ಕರೆ ಸೇರಿಸಿ, ಏಲಕ್ಕಿ ಗುದ್ದಿ ಹಾಕಿ, ನಂತರ ಬೆಂದ
ಮೇಲೆ ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.
ರೆಸಿಪಿ 2
ಬೇಕಾಗುವ ಸಾಮಗ್ರಿ
1/2 ಕಪ್ ಹೆಸರು ಬೇಳೆ
1 ಹಸಿ ಮೆಣಸಿನಕಾಯಿ
1 ಚಮಚ ಸೌತೆ
1 ಚಮಚ ತೆಂಗಿನತುರಿ
2 ಚಮಚ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
1 ಚಮಚ ನಿಂಬೆರಸ
ಮಾಡುವ ವಿಧಾನ
ಹೆಸರುಬೇಳೆಯನ್ನು ಒಂದು ಗಂಟೆ ಕಾಲ ನೆನೆ ಹಾಕಿ, ನಂತರ ಅದರ ನೀರನ್ನು ಚೆನ್ನಾಗಿ
ಸೋಸಿ, ನಂತರ ಉಳಿದೆಲ್ಲಾ ಸಾಮಗ್ರಿ ಸೇರಿಸಿ ಮಿಕ್ಸ್ ಮಾಡಿ, ನಂತರ 1 ಚಮಚ ನಿಂಬೆರಸ
ಹಾಕಿ ಮಿಕ್ಸ್ ಮಾಡಿ ಶ್ರೀರಾಮನಿಗೆ ನೈವೇದ್ಯವನ್ನಾಗಿ ಅರ್ಪಿಸಿ.
ರೆಸಿಪಿ 3
ಕಡ್ಲೆ ಕಾಳು ಉಸಳಿ
ಇದನ್ನು ಕೂಡ ನೈವೇದ್ಯವನ್ನಾಗಿ ಇಡಲಾಗುವುದು.
ಬೇಕಾಗುವ ಸಾಮಗ್ರಿ
1/4 ಕೆಜಿ ಕಡ್ಲೆಕಾಳು (ರಾತ್ರಿಯೇ ನೆನೆಹಾಕಿ), ಬೇಯಿಸಿ
ಕೊತ್ತಂಬರಿಸೊಪ್ಪು 1-2 ಚಮಚ
ಎಣ್ಣೆ 1 ಚಮಚ
ಹಸಿ ಮೆಣಸು 2-3 ಚಮಚ
ಸ್ವಲ್ಪ ಶುಂಠಿ ಪುಡಿ
ಜೀರಿಗೆ ಪುಡಿ1/2 ಚಮಚ
ಅರಿಶಿಣ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1 ಚಮಚ
ಮ್ಯಾಂಗೋ ಪುಡಿ 1/4 ಚಮಚ
ಗರಂ ಮಸಾಲ 1/4 ಚಮಚ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
* ಮೊಡಲು ಕಡ್ಲೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ
* ನಂತರ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಜೀರಿಗೆ ಹಾಕಿ,
ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಬೇಯಿಸಿದ ಕಡ್ಲೆ, ನಂತರ ಇತರ ಉಳಿದ ಸಾಮಗ್ರಿ
ಹಾಕಿ ಒಂದು 5 ನಿಮಿಷ ಫ್ರೈ ಮಾಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್
ಮಾಡಿ, ನಂತರ ಇದನ್ನು ಪೂಜೆಗೆ ಬಂದವರಿಗೆ ಪ್ರಸಾದವನ್ನಾಗಿ ಮಾಡಬಹುದು.



Click it and Unblock the Notifications
