Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಈ ದಸರಾ ರಜೆಯಲ್ಲಿ ಮಕ್ಕಳು ಕಸಿನ್ಸ್ ಜೊತೆ ಆಡಲಿ, ಏಕೆ ಗೊತ್ತಾ?
ಮಕ್ಕಳಿಗೆ ದಸರಾ ರಜೆ ಬರುತ್ತಿದೆ. ರಜೆ ಎಂದರೆ ಈಗೀನ ಮಕ್ಕಳಿಗೆ ಶಾಲೆಯಿಂದ ಬಿಡುವು ಅಷ್ಟೇ, ಟ್ಯೂಷನ್‌ಗಳು ಯಥಾ ಪ್ರಕಾರ ನಡೆಯುತ್ತಿರುತ್ತದೆ, ಇನ್ನು ಮಕ್ಕಳು ಮನೆಯಲ್ಲಿ ಟಿವಿ, ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಾರೆ. ಹೆಚ್ಚೆಂದರೆ ಒಂದು ಚಿಕ್ಕ ಫ್ಯಾಮಿಲಿ ಟ್ರಿಪ್ ಹೋಗಿ ಬರುತ್ತಾರೆ, ಅಷ್ಟೇ ಈಗೀನ ರಜೆಯ ಘಮ್ಮತ್ತು. ಆದರೆ ಈ ರೀತಿ ದಸರಾ ರಜೆ ಬಂದಾಗ ಅಥವಾ ಬೇಸಿಗೆ ರಜೆ ಬಂದಾಗ ಈ ಹಿಂದೆ ನಮಗಿದ್ದ ಸಂಭ್ರಮ ಈಗ ನಮ್ಮ ಮಕ್ಕಳಿಗೆ ಇದೆಯೇ ಎಂದು ಯೋಚಿಸಿ ನೋಡಿ...

ರಜೆ ಬಂತೆಂದರೆ ಸಾಕು ಬಟ್ಟೆಬರೆ ಸೀದಾ ಅಜ್ಜ-ಅಜ್ಜಿ ಮನೆ , ಅತ್ತೆ ಮನೆ, ಆಂಟಿ ಮನೆ ಎಂದು ಹೋಗಿ ಬಿಡುತ್ತಿದ್ದೇವೆ. ಅಲ್ಲಿಗೆ ಕಸಿನ್ಸ್ ಎಲ್ಲಾ ಬಂದು ಸೇರುತ್ತಿದ್ದರು, ಆ ಸಡಗರ-ಸಂಭ್ರಮ ವಾವ್! ಈಗಲೂ ನೆನೆಸಿಕೊಂಡರೆ ಅದೆಷ್ಟು ಸುಂದರ ನೆನಪುಗಳು ನಮ್ಮಲ್ಲಿ ಇದೆಯೇ, ಆದರೆ ಅಂಥ ಸುಂದರ ನೆನಪು ನಮ್ಮ ಮಕ್ಕಳಿಗೆ ಇದೆಯೇ? ಅಪ್ಪ-ಅಮ್ಮ ಕೆಲಸದಲ್ಲಿ ಬ್ಯುಸಿ ಇರುತ್ತಾರೆ.
ಒಬ್ಬ ಸಹೋದರನಾ ಅಥವಾ ಸಹೋದರಿ ಇದ್ದರೆ ಅವರ ಜೊತೆ ಆಡಿಕೊಳ್ಳುತ್ತಾರೆ, ಆದರೆ ತುಂಬಾ ದಂಪತಿಗಳು ನಮಗೆ ಒಂದೇ ಮಗು ಸಾಕು ಎಂದು ನಿರ್ಧರಿಸಿರುತ್ತಾರೆ. ಅಂಥ ಮಕ್ಕಳು ಶಾಲೆಗೆ ರಜೆಯಿದ್ದಾಗ ತುಂಬಾನೇ ಒಂಟಿತನ ಅನುಭವಿಸುತ್ತಾರೆ. ಆದ್ದರಿಂದ ಈ ದಸರಾ ರಜೆಯಲ್ಲಿ ನಿಮ್ಮ ಮಕ್ಕಳು ಕಸಿನ್ಸ್ ಜೊತೆ ಖುಷಿಯಿಂದ ಕಳೆಯುವಂತೆ ನೋಡಿಕೊಳ್ಳಿ.
ಕಸಿನ್ಸ್ ಜೊತೆ ಬೆರೆಯುವುದು ಅವರ ಮಾನಸಿಕ ಆರೋಗ್ಯಕ್ಕೂ ತುಂಬಾನೇ ಮುಖ್ಯವಾಗಿದೆ. ಕಸಿನ್ಸ್ ಜೊತೆ ಮಕ್ಕಳು ಕೂಡಿ ಆಡುವುದರಿಂದ ಎಂಥೆಲ್ಲಾ ಪ್ರಯೋಜನಗಳಿವೆ ಗೊತ್ತಾ?
* ಮಕ್ಕಳಿಗೆ ಸಂಬಂಧಗಳ ಬೆಲೆ ಗೊತ್ತಾಗುವುದು
ಅಜ್ಜ-ಅಜ್ಜಿ, ಅತ್ತೆ-ಮಾವ, ಚಿಕ್ಕಮ್ಮ-ಚಿಕ್ಕಪ್ಪ ಇವರೆಲ್ಲಾ ಸ್ನೇಹ ಮಕ್ಕಳಿಗೆ ಗೊತ್ತಾಗುವುದರಿಂದ ಸಂಬಂಧದ ಬೆಲೆ ಗೊತ್ತಾಗುವುದು. ಕುಟುಂಬದವರ ಜೊತೆ ಬಾಂಧವ್ಯ ಹೆಚ್ಚಾಗುವುದು.
* ಒಂಟಿತನ ಕಾಡಲ್ಲ, ರಜೆ ಬೋರ್ ಅನಿಸಲ್ಲ
ಮಕ್ಕಳಿಗೂ ಅಷ್ಟೇ ರಜೆ ದಿನ ಬೋರ್ ಅನಿಸಲ್ಲ. ಟಿವಿ, ಮೊಬೈಲ್ ಮುಂದೆ ಸಮಯ ಕಳೆಯುವ ಬದಲಿಗೆ ಖುಷಿಯಿಂದ ರಜೆ ದಿನಗಳನ್ನು ಸಂಭ್ರಮಿಸುತ್ತಾರೆ. ಕಸಿನ್ಸ್ ಜೊತೆಯಾಗಿ ಖುಷಿಯಿಂದ ಆಟ ಆಡುತ್ತಾ ಸಮಯ ಕಳೆಯುತ್ತಾರೆ. ಇದರಿಂದ ರಜೆ ದಿನಗಳು ಅವರ ಬಾಲ್ಯವನ್ನು ಮತ್ತಷ್ಟು ಸುಂದರವಾಗಿಸುತ್ತದೆ.
* ಸಹೋದರ-ಸಹೋದರಿ ಬಾಂಧವ್ಯ ಗಟ್ಟಿಯಾಗುವುದು
ಒಂದೇ ಮಗುವಾಗಿದ್ದರೆ ಅವರಿಗೆ ಕಸಿನ್ಸ್‌ನಲ್ಲಿ ಒಬ್ಬ ಅಣ್ಣ-ಅಕ್ಕ-ತಂಗಿ-ತಮ್ಮ ಅಂತ ಸಿಗುವುದರಿಂದ ಅವರೊಡನೆ ಬಾಂಧವ್ಯ ತುಂಬಾನೇ ಗಟ್ಟಿಯಾಗುವುದು. ಕಸಿನ್ಸ್ ನಮ್ಮ ಉತ್ತಮ ಸ್ನೇಹಿತರಾಗುತ್ತಾರೆ.
* ಹದಿಹರೆಯದಲ್ಲಿ ಖಿನ್ನತೆ ಕಾಡುವುದಿಲ್ಲ
ಅತ್ಯುತ್ತಮವಾದ ಬಾಲ್ಯ ಮಕ್ಕಳಲ್ಲಿ ಖಿನ್ನತೆ ತಡೆಗಟ್ಟಲು ಸಹಕಾರಿಯಾಗಿದೆ. ಮಕ್ಕಳಲ್ಲಿ ಒಂಟಿತನ ಕಾಡಲಾರಂಭಿಸಿದರೆ ಅವರಿಗೆ ಖಿನ್ನತೆ ಉಂಟಾಗುವುದು. ಆದ್ದರಿಂದ ಮಕ್ಕಳಲ್ಲಿ ಒಂಟಿತನ ಕಾಡದಂತೆ ನೋಡಿಕೊಳ್ಳಿ.
ಈಗ ಹೇಳಿ ಈ ದಸರಾ ರಜೆಯಲ್ಲಿ ನೀವು ಅನುಭವಿಸಿದ ಸುಂದರ ಬಾಲ್ಯ ನಿಮ್ಮ ಮಕ್ಕಳಿಗೂ ಕೊಡುವಿರಾ?



Click it and Unblock the Notifications
