Latest Updates
-
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್!
ಹದಿಹರೆಯದ ಮಕ್ಕಳು ಹಾದಿ ತಪ್ಪಬಾರದೆಂದರೆ ಈ ಟಿಪ್ಸ್ ಪಾಲಿಸಿ,
ಮಕ್ಕಳು ಬಹುಬೇಗ ಬೆಳೆದು ದೊಡ್ಡವರಾಗಿ ಬಿಡುತ್ತಾರೆ. ನಮ್ಮ ಕಣ್ಣ ಮುಂದೆ ಆಡಿ ಬೆಳೆಯುತ್ತಿದ್ದ ಮಕ್ಕಳು ನೋಡನೋಡುತ್ತಿದ್ದಂತೆ ಎದೆಯೆತ್ತರಕ್ಕೆ ಬೆಳೆಯುತ್ತಾರೆ. ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬದಲಾಗುತ್ತಾರೆ. ಈ ಸಮಯದಲ್ಲಿ ಮಕ್ಕಳಿಗೆ ಎಲ್ಲವೂ ಹೊಸತರಂತೆ ಕಾಣುತ್ತದೆ. ಎಲ್ಲದರ ಅನುಭವ ಪಡೆಯಬೇಕೆಂಬ ಕಾತುರತೆ ಹೆಚ್ಚಾತ್ತದೆ. ಇಂತಹ ಸಮಯದಲ್ಲಿ ಮಕ್ಕಳನ್ನು ನಿಯಂತ್ರಿಸದೇ ಹೋದರೆ ಕೈ ತಪ್ಪಿ ಹೋಗುತ್ತಾರೆ.
ಹದಿಹರೆಯದ ವಯಸ್ಸಿನಲ್ಲೇ ಮಕ್ಕಳು ಕೆಟ್ಟ ಚಟಗಳ ಗೀಳಿಗೆ ಬಿದ್ದು ಬದುಕು ಹಾಳು ಮಾಡಿಕೊಳ್ಳುತ್ತಾರೆ. ಇದನ್ನು ತಡೆಯೋದು ಪೋಷಕರ ಕರ್ತವ್ಯ. ಮಕ್ಕಳು ಹಾಳಾಗೋದಕ್ಕೆ ಅವಕಾಶ ನೀಡಲೇಬಾರದೆಂದರೆ ಯಾವತ್ತೂ ಅವರ ಮೇಲೆ ಒಂದು ಹದ್ದಿನ ಕಣ್ಣಿಟ್ಟಿರಲೇಬೇಕು. ಹದಿಹರೆಯದಲ್ಲಿ ಪೋಷಕರು ಈ ಟಿಪ್ಸ್‌ಗಳನ್ನು ಪಾಲಿಸಿದರೆ ಮಕ್ಕಳು ಹಾಳಾಗೋದನ್ನು ತಪ್ಪಿಸಬಹುದು. ಹಾಗಾದ್ರೆ ಪೋಷಕರು ಹದಿಹರೆಯದ ಮಕ್ಕಳನ್ನು ಬೆಳೆಸುವಾಗ ಯಾವ ಟಿಪ್ಸ್ ಪಾಲಿಸಬೇಕು ಅನ್ನೋದನ್ನು
ತಿಳಿಯೋಣ.

1. ಮಕ್ಕಳ ಜೊತೆಗೆ ಸ್ನೇಹಿತರಾಗಿರಿ
ಹದಿಹರೆಯದ ಮಕ್ಕಳನ್ನು ದಾರಿ ತಪ್ಪಲು ಬಿಡಬಾರದು ಎಂದರೆ ಅವರ ಜೊತೆಗೆ ನೀವು ಸ್ನೇಹಿತರಂತೆ ವರ್ತಿಸಬೇಕು. ಆಗ ಅವರು ನಿಮ್ಮ ಜೊತೆಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಒಂದು ವೇಳೆ ಅವರು ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ ಎಂದಾದರೆ ಅವರಿಗೆ ತಿದ್ದಿ ಬುದ್ಧಿ ಹೇಳಬಹುದು. ಅದನ್ನು ಬಿಟ್ಟು ಹೊಡೆದು, ಬಡಿದು ಜೋರು ಮಾಡಿದರೆ ಮಕ್ಕಳು ಈ ವಯಸ್ಸಿನಲ್ಲಿ ಕೇಳೋದಿಲ್ಲ. ನಿಮಗೆ ಎದುರು ಮಾತನಾಡೋ ಸಾಧ್ಯತೆಗಳಿರುತ್ತದೆ. ಅಥವಾ ನಿಮ್ಮ ಕೈ ತಪ್ಪಿ ಹೋಗುವ ಸಾಧ್ಯತೆಯು ಹೆಚ್ಚಿರುತ್ತದೆ.
2. ಕೆಲವೊಂದು ನಿಯಮಗಳನ್ನು ಪಾಲಿಸಿಸುವಂತೆ ತಿಳಿಸಿ
ಹದಿಹರೆಯದ ಮಕ್ಕಳನ್ನು ನಿಯಂತ್ರಣದಲ್ಲಿಡೋದು ಪೋಷಕರ ಕರ್ತವ್ಯ. ಹೀಗಾಗಿ ಹೊರಗಡೆ ಹೋದ ಮಕ್ಕಳಿಗೆ ರಾತ್ರಿ ಇಷ್ಟು ಹೊತ್ತಿಗೆ ಮನೆಗೆ ಬಂದು ಸೇರಬೇಕು ಎಂದು ಷರತ್ತು ವಿಧಿಸಿ. ಹೆಣ್ಣುಮಕ್ಕಳನ್ನು ಪಾರ್ಟಿಗೆ ಕಳುಹಿಸುವಾಗ ಅವರ ಜೊತೆಗೆ ಯಾರೆಲ್ಲಾ ಹೋಗುತ್ತಿದ್ದಾರೆ ಅನ್ನೋ ಬಗ್ಗೆ ನಿಗಾ ಇರಲಿ. ಇನ್ನೂ ಹದಿನೆಂಟು ವರ್ಷ ತುಂಬದೇ ಮಕ್ಕಳಿಗೆ ಯಾವುದೇ ವಾಹನಗಳನ್ನು ಉಡುಗೊರೆಯಾಗಿ ನೀಡಬೇಡಿ. ಮಾದಕ ವಸ್ತುಗಳನ್ನು ಸೇವಿಸಿ ಬಂದರೆ ಮನೆಗೆ ಸೇರಿಸುವುದಿಲ್ಲ ಅನ್ನೋ ಷರತ್ತುಗಳನ್ನು ಹಾಕಿ.
3. ಐಷಾರಾಮಿ ವಸ್ತುಗಳನ್ನು ಮಕ್ಕಳಿಗೆ ನೀಡಬೇಡಿ
ಮಕ್ಕಳಿಗೆ ಈ ವಯಸ್ಸಿನಲ್ಲಿ ಬೈಕು, ಕಾರು, ಐಫೋನ್ ಬೇಕೆಂಬ ಆಸೆ ಇರುತ್ತದೆ. ಆದರೆ ಈ ವಯಸ್ಸಿನಲ್ಲಿ ಮಕ್ಕಳಿಗೆ ಇದನ್ನೆಲ್ಲಾ ತೆಗೆದುಕೊಟ್ಟರೆ ಮಕ್ಕಳು ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ಇದನ್ನೆಲ್ಲಾ ಅವರ ದುಡಿದು ಗಳಿಸಿದರೆ ಅವುಗಳ ಬೆಲೆ ಗೊತ್ತಿರುತ್ತದೆ. ಇನ್ನೂ ಅವರು ಕೇಳಿದಾಗಲೆಲ್ಲಾ ಬೇಕಾದ ಹಾಗೆ ದುಡ್ಡು ಕೊಡೋದನ್ನು ಅಭ್ಯಾಸ ಮಾಡಬೇಡಿ. ದುಡ್ಡು ಕೈಯಲ್ಲಿ ಹೆಚ್ಚಿದ್ದಾಗ ಮಾದಕ ವಸ್ತುಗಳ ಕಡೆಗೆ ಅವರ ಗಮನ ಹೋಗುವ ಸಾಧ್ಯತೆಗಳಿರುತ್ತದೆ.
4. ಮಕ್ಕಳಿಗೆ ಜವಾಬ್ದಾರಿಯನ್ನು ನೀಡಿ
ಚಿಕ್ಕಂದಿನಿಂದಲೇ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಬೇಕು. ಇನ್ನೂ ಮಕ್ಕಳು ಹದಿಹರೆಯದ ವಯಸ್ಸಿಗೆ ಬಂದಾಗ ಅವರಿಗೆ ಮನೆಯ ಕೆಲವೊಂದು ಜವಾಬ್ದಾರಿಗಳನ್ನು ನೀಡಿ. ಮನೆ ಕೆಲಸದಲ್ಲಿ ತಾಯಿಗೆ ಸಹಾಯ ಮಾಡಲು ತಿಳಿಸಿ, ಶಾಪಿಂಗ್‌ಗೆ ಒಬ್ಬರನ್ನೇ ಕಳುಹಿಸಿ, ಬೈಕ್, ಕಾರ್ ತೊಳೆಯಲು ಮಕ್ಕಳ ಸಹಾಯ ತೆಗೆದುಕೊಳ್ಳಿ, ಮನೆಯಲ್ಲಿ ಹಿರಿಯರಿದ್ದರೆ ಅವರ ಸೇವೆ ಮಾಡೋದಕ್ಕೆ ಹೇಳಿ. ಈ ರೀತಿ ಮಕ್ಕಳಿಗೆ ಜವಾಬ್ದಾರಿ ನಿರ್ವಹಿಸಲು ಕೊಟ್ಟರೆ ನಿಧಾನವಾಗಿ ಎಲ್ಲವನ್ನೂ ಕಲಿಯುತ್ತಾರೆ.
5. ವಿನಯ, ವಿಧೇಯತೆ, ಶಿಸ್ತು ಕಲಿಸಿ
ಈ ಮೂರು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸೋಲೇ ಇಲ್ಲ. ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳೋದನ್ನು ರೂಢಿಸಿ, ಯಾಕಂದ್ರೆ ಶಿಸ್ತಿನ ಜೀವನ ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿಸಲು ಸಹಕರಿಸುತ್ತದೆ. ಇನ್ನೂ ಹಿರಿಯರಲ್ಲಿ ವಿನಯ, ವಿಧೇಯತೆ, ಗೌರವದಿಂದ ಮಾತನಾಡಿಸಬೇಕು. ಸಿಕ್ಕ ಸಿಕ್ಕ ಹಾಗೇ ಮಾತನಾಡಿದರೆ ಅದು ನಮ್ಮ ಗೌರವಕ್ಕೆ ಶೋಭೆ ತರೋದಿಲ್ಲ. ಮಕ್ಕಳಿಗೆ ಈ ಎಲ್ಲಾ ಗುಣಗಳನ್ನು ಕಲಿಸೋದು ಪೋಷಕರ ಕರ್ತವ್ಯ.
6. ಕಾಲೇಜು, ಸ್ನೇಹಿತರು, ಮೊಬೈಲ್ ಮೇಲೆ ಒಂದು ಕಣ್ಣಿಟ್ಟಿರಿ
ಹದಿಹರೆಯದಲ್ಲಿ ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ. ಆ ಹಾಳೆಯಲ್ಲಿ ಒಂದು ಕಪ್ಪು ಚುಕ್ಕೆಯೂ ಬೀಳದಂತೆ ನೋಡಿಕೊಳ್ಳುವುದು ಪೋಷಕರಾದ ನಿಮ್ಮ ಕರ್ತವ್ಯ. ಹೀಗಾಗಿ ನಿಮ್ಮ ಮಗ/ಮಗಳು ಕಾಲೇಜಿನಲ್ಲಿ ಹೇಗೆ ಓದುತ್ತಿದ್ದಾರೆ ಎನ್ನುವುದನ್ನು ಆಗಾಗ್ಗೆ ಕಾಲೇಜಿಗೆ ಹೋಗುವುದರ ಮೂಲಕ ಮಾಹಿತಿ ಪಡೆದುಕೊಳ್ಳಿ. ಇನ್ನೂ ಅವರ ಸ್ನೇಹಿತರನ್ನು ಮನೆಗೆ ಸ್ವಾಗತಿಸಿ ಅವರ ಬಳಿ ಮಾತನಾಡಿ ನಿಮ್ಮ ಮಕ್ಕಳ ಬಗ್ಗೆ ತಿಳಿದುಕೊಳ್ಳಿ. ಮುಖ್ಯವಾಗಿ ಅವರು ಮೊಬೈಲ್‌ನಲ್ಲಿ ಏನು ನೋಡಿತ್ತಿದ್ದಾರೆಂದು ಕಣ್ಣಿಡಿ.
ಈ ವಯಸ್ಸಿನಲ್ಲಿ ಮಕ್ಕಳನ್ನು ಕಾಯುವುದು ಪೋಷಕರ ಕರ್ತವ್ಯ. ಕೊಂಚ ಸಲಿಗೆ ಕೊಟ್ಟರೂ ಕೂಡ ಅವರು ನಿಮ್ಮ ಕೈ ತಪ್ಪಿ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತದೆ.



Click it and Unblock the Notifications


