Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಸಾಕುವ ಪೋಷಕರೇ ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಕೈಯಾರೆ ಹಾಳು ಮಾಡಿಕೊಂಡಂತೆ!
ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹೀಗಾಗಿ ಅನೇಕ ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಸ್ತಿನ ಪಾಠ ಹೇಳಿಕೊಡೋದಕ್ಕೆ ಇಚ್ಛಿಸುತ್ತಾರೆ. ಹೀಗಾಗಿ ಮಕ್ಕಳಿಗೆ ಬುದ್ಧಿ ಬರೋ ವಯಸ್ಸಿನಿಂದಲೇ ಅವರನ್ನು ಸ್ಟ್ರಿಕ್ಟ್ ಆಗಿ ಬೆಳೆಸುತ್ತಾರೆ. ಹೀಗಾಗಿ ಮಕ್ಕಳಿಗೆ ಪ್ರತಿಯೊಂದು ಹೆಜ್ಜೆ ಇಡುವಾಗಲೂ ಭಯ ಕಾಡುತ್ತೆ. ಪೋಷಕರು ಏನು ಅಂದು ಬಿಡುತ್ತಾರೋ ಎನ್ನುವ ದುಗುಡ ಕಾಡುತ್ತದೆ.
ಅನೇಕ ಪೋಷಕರು ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಬೆಳೆಸೋದ್ರಿಂದ ಅವರ ಗುಣ ಉತ್ತಮವಾಗುತ್ತೆ ಅಂತ ಅಂದುಕೊಳ್ಳುತ್ತಾರೆ. ಆದರೆ ಇದ್ರಿಂದ ಮಕ್ಕಳ ಮೇಲೆ ಯಾವ ರೀತಿ ಋಣಾತ್ಮಕ ಪರಿಣಾಮ ಬೀರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ? ನೀವು ನಿಮಗೆ ಗೊತ್ತಿಲ್ಲದ ಹಾಗೆ ಮಕ್ಕಳ ಭವಿಷ್ಯವನ್ನು ಅಂದಕಾರಕ್ಕೆ ತಳ್ಳುತ್ತೀರಿ. ಅಷ್ಟಕ್ಕು ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಸಾಕೋದ್ರಿಂದ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನು ತಿಳಿಯೋಣ.

1. ಮಕ್ಕಳಲ್ಲಿ ಸಮಾಜ ವಿರೋಧಿ ವರ್ತನೆ ಹೆಚ್ಚಾಗಬಹುದು
ಕೆಲವೇ ಕೆಲವು ಮನೆಗಳಲ್ಲಿ ಮಾತ್ರ ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಸಾಕೋದ್ರಿಂದ ಅವರ ಗುಣ ಉತ್ತಮವಾಗಬಹುದು. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಇದು ನೇರವಾಗಿ ನಿಮ್ಮ ಮಗುವಿನ ಮನಸ್ಸಿನ ಮೇಲೆ ಪರಿಣಾಮನ್ನು ಬೀರುತ್ತದೆ. ಮಕ್ಕಳಿಗೆ ಪೋಷಕರು ಪ್ರತಿಯೊಂದಕ್ಕೂ ಕಂಡಿಷನ್ ಗಳನ್ನು ಹಾಕುತ್ತಿದ್ದರೆ ಅವರನ್ನು ನಿಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳೋದಕ್ಕೆ ಯತ್ನಿಸಿದರೆ ಮಕ್ಕಳಲ್ಲಿ ಕೋಪ, ಆತಂಕ, ಆಕ್ರಮಣಕಾರಿ ಗುಣ ಹೆಚ್ಚಾಗುತ್ತದೆ. ಇದರಿಂದ ಅವರು ಬೇರೆಯವರ ಮೇಲೆ ಹಲ್ಲೆ ಮಾಡುವ ಮಟ್ಟಿಗೂ ಕೂಡ ಹೋಗುವ ಸಾಧ್ಯತೆ ಇದೆ.
2. ಮಕ್ಕಳು ಸುಳ್ಳು ಹೇಳೋದಕ್ಕೆ ಶುರು ಮಾಡುತ್ತಾರೆ
ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಸಾಕೋದು ಒಳ್ಳೆಯದಲ್ಲ. ಯಾಕಂದ್ರೆ ಇದು ಅವರಿಗೆ ಉಸಿರು ಕಟ್ಟಿದಂತೆ ಆಗಬಹುದು. ನಿಮ್ಮ ಇಷ್ಟದ ಹಾಗೆ ಅವರಿಗೆ ಬದುಕೋದಕ್ಕೆ ಸಾಧ್ಯ ಇರದೇ ಇದ್ದಾಗ ಅವರು ಪೋಷಕರಲ್ಲಿ ಸುಳ್ಳು ಹೇಳುತ್ತಾರೆ. ಮನೆಯಲ್ಲಿ ಮಾತ್ರ ನಿಮಗೆ ಬೇಕಾದ ಹಾಗೆ ಇದ್ದು, ಮನೆಯ ಹೊರಗಡೆ ಅವರ ಇಷ್ಟದ ಪ್ರಕಾರ ಬದುಕುತ್ತಾರೆ. ಒಂದು ರೀತಿ ನಾಟಕದ ಜೀವನ ನಡೆಸುತ್ತಾರೆ. ಪೋಷಕರಿಗೆ ಕದ್ದು ಮುಚ್ಚಿ ಕೆಟ್ಟ ಕೆಲಸಗಳನ್ನು ಮಾಡುವ ಸಾಧ್ಯತೆಯಿದೆ.
3. ಮಕ್ಕಳ ಪ್ರೇರಣೆಯನ್ನು ಕುಗ್ಗುವಂತೆ ಮಾಡುತ್ತದೆ
ಕೆಲ ಪೋಷಕರು ತಮ್ಮ ಹೊರತಾಗಿ ಮಕ್ಕಳು ಶೂನ್ಯ ಎಂದು ಭಾವಿಸಿರುತ್ತಾರೆ. ಹೀಗಾಗಿ ಅವರ ಶಾಲೆಯಿಂದ ಹಿಡಿದು ಪಠ್ಯೇತರ ಚಟುವಟಿಕೆಯವರೆಗೂ ಎಲ್ಲಾ ನಿರ್ಧಾರವನ್ನು ಪೋಷಕರೇ ಮಾಡುತ್ತಾರೆ. ಅವರ ಬೇಕು ಬೇಡಗಳನ್ನು ಪೋಷಕರೇ ನೋಡಿಕೊಳ್ಳುತ್ತಾರೆ. ಇಲ್ಲ ಮಕ್ಕಳ ಆಸಕ್ತಿ. ಅವರ ಇಷ್ಟ ಕಷ್ಟಗಳಿಗೆ ಅವಕಾಶವೇ ಇರೋದಿಲ್ಲ. ಇದರಿಂದಾಗಿ ಅವರ ಒಳಗಿನ ಪ್ರೇರಣೆ ಕುಗ್ಗಿ ಹೋಗುತ್ತದೆ. ಅವರು ದುರ್ಬಲರಾಗುತ್ತಾರೆ. ಸ್ಟ್ರಿಕ್ಟ್ ಪೋಷಕರು ಯಾವಾಗಲೂ ಅವರಿಗೆ ಬೆದರಿಕೆ ಒಡ್ಡಿ ಅವರನ್ನು ಸಾಕುತ್ತಾರೆ. ಇದರಿಂದಾಗಿ ಅವರು ಇಷ್ಟವಿಲ್ಲದ ಕೆಲಸವನ್ನು ಕೇವಲ ತೋರ್ಪಡಿಕೆಗಾಗಿ ಮಾಡಬೇಕಾಗುತ್ತದೆ.
4. ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ
ಪೋಷಕರು ಯಾವಾಗಲೂ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಬೇಕು. ಆದರೆ ಮಕ್ಕಳ ಆಸಕ್ತಿಗಳಿಗೆ ಪ್ರೋತ್ಸಾಹ ನೀಡದೇ ತಮ್ಮ ಇಷ್ಟದ ಪ್ರಕಾರ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಅವರಿಗೆ ಜೀವನವೇ ಸಾಕಾಗಿ ಬಿಡಬಹುದು. ನೋವು, ದು:ಖ, ಖಿನ್ನತೆ ಹೆಚ್ಚಾಗಿ ಅವರು ಆತ್ಮಹತ್ಯೆಗೆ ಯತ್ನಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳ ಮನಸ್ಸು ತುಂಬಾನೇ ಸೂಕ್ಷ್ಮ ಅವರ ಮೇಲೆ ಅತಿಯಾಗಿ ಒತ್ತಡ ಹೇರುವುದು ಸರಿಯಲ್ಲ.
5. ಮಕ್ಕಳ ಆತ್ಮ ವಿಶ್ವಾಸವೇ ಬತ್ತಿ ಹೋಗಬಹುದು
ಆತ್ಮ ವಿಶ್ವಾಸ ಎನ್ನುವುದು ಯಾರಿಗೂ ಹುಟ್ಟಿನಿಂದಲೇ ಬರೋದಿಲ್ಲ. ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಸುವುದು ಪೋಷಕರ ಕರ್ತವ್ಯ. ಆದರೆ ಮಕ್ಕಳನ್ನು ಕಟ್ಟು ನಿಟ್ಟಾಗಿ ಸಾಕಬೇಕು ಎನ್ನುವ ಹಠಕ್ಕೆ ಬಿದ್ದ ಪೋಷಕರು ತಮ್ಮ ಇಷ್ಟದಂತೆ ಮಕ್ಕಳು ಬದುಕಬೇಕೆಂದು ಒತ್ತಡ ಹೇರುತ್ತಾರೆ. ಮಕ್ಕಳು ಸೋತು ಹೋದಾಗ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಬದಲು ಅವರಿಗೆ ಬೈಯುತ್ತಾರೆ. ಯಾವಾಗಲೂ ಬೇರೆ ಮಕ್ಕಳೊಂದಿಗೆ ಅವರನ್ನು ಹೋಲಿಕೆ ಮಾಡುತ್ತಾರೆ. ಇದರಿಂದ ನಿಧಾನವಾಗಿ ಅವರಲ್ಲಿ ಆತ್ಮ ವಿಶ್ವಾಸವೇ ಇಲ್ಲದಂತಾಗುತ್ತದೆ.
6. ಮಕ್ಕಳ ಮಾನಸಿಕ ಆರೋಗ್ಯ ಹಾಳಾಗುತ್ತದೆ
ಒತ್ತಡ ರಹಿತವಾಗಿ ಜೀವನ ನಡೆಸೋದೇ ಮಕ್ಕಳು. ಚಿಕ್ಕವಯಸ್ಸಿನಲ್ಲಿ ಅವರು ಆಟ-ಪಾಠಗಳಲ್ಲಿ ಬ್ಯೂಸಿಯಾಗಿರುತ್ತಾರೆ. ಅವರ ಲೋಕದಲ್ಲೇ ಕಾಲ ಕಳೆಯುತ್ತಾರೆ. ಲೋಕದ ಚಿಂತೆ ಅವರಿಗೆ ಇರೋದಿಲ್ಲ. ಆದರೆ ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಸಾಕೋದ್ರಿಂದ ಅವರ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಪೋಷಕರು ನೂರಕ್ಕೆ ನೂರು ಅಂಕ ಪಡೆಯಬೇಕೆಂದು ಒತ್ತಡ ಹೇರುತ್ತಾರೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಾಗ ಮಕ್ಕಳಲ್ಲಿ ಒಂದು ರೀತಿಯ ಒತ್ತಡ ಹೆಚ್ಚಾಗುತ್ತೆ. ಇದರಿಂದ ಅವರು ಆತಂಕಕ್ಕೆ ಒಳಗಾಗುತ್ತಾರೆ. ಪೋಷಕರು ಏನು ಹೇಳುತ್ತಾರೋ ಅನ್ನೋ ಭಯ ಕಾಡೋದಕ್ಕೆ ಶುರುವಾಗುತ್ತದೆ. ಒಟ್ಟಿನಲ್ಲಿ ಅವರ ಮಾನಸಿಕ ಆರೋಗ್ಯವೇ ಹಾಳಾಗಿ ಹೋಗುತ್ತದೆ.
ಸೂಕ್ಷ್ಮ ಮನಸ್ಸಿನ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಅವರ ವಯಸ್ಸಿನಲ್ಲಿ ಅವರಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನು ಮಾತ್ರ ಮಾಡಿದರೆ ಸಾಕು. ಪೋಷಕರು ಅನವಶ್ಯಕವಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು.



Click it and Unblock the Notifications
