Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಗರ್ಭಾವಸ್ಥೆಯಲ್ಲಿ ಯೀಸ್ಟ್ ಸೋಂಕು: ತಿಳಿಯಲೇಬೇಕಾದ ಸಂಗತಿಗಳು
ಹೆಣ್ಣಿಗೆ ತಾಯಿಯಾಗುತ್ತೇನೆ ಎಂಬ ಭಾವವೇ ಅತ್ಯಂತ ಶ್ರೇಷ್ಠ ಭಾವ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅದೇನೇ ಬದಲಾವಣೆಗಳು ನಡೆದರೂ ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತೇವೆ ಎಂಬ ಖುಷಿಯೇ ಹೇಳತೀರದು. ಆದರೆ ಗರ್ಭಿಣಿ ಸ್ತ್ರೀಯ ಆರೋಗ್ಯವೂ ಅಷ್ಟೇ ಮುಖ್ಯ. ಸಾಮಾನ್ಯವಾಗಿ ನೀಡುವ ಔಷಧಗಳನ್ನು ನೀಡಲಾಗದು. ತಾಯಿ ಮತ್ತು ಮಗುವಿನ ಇಬ್ಬರ ಆರೋಗ್ಯದ ಬಗ್ಗೆಯೂ ಗಮನ ಅಗತ್ಯ. ಗರ್ಭಿಣಿಯಾದಾಗ ಬರುವ ಅತ್ಯಂತ ಸಾಮಾನ್ಯ ಸೋಂಕು ಎಂದರೆ ಯೀಸ್ಟ್ ಸೋಂಕು.

ಗರ್ಭಿಣಿಯರು ಸಾಮಾನ್ಯವಾಗಿ ಯೀಸ್ಟ್ ನ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಅಪಾಯಕಾರಿ ಅಲ್ಲದಿದ್ದರೂ ನಿರುಪದ್ರವಿ ಅಲ್ಲದ ಸೋಂಕನ್ನು ತಡೆಯುವ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿಯರು ಆ ಅವಧಿಯಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ಈಗಾಗಲೇ ಸಾಕಷ್ಟು ಅನುಭವಿಸಿರುತ್ತಾರೆ ಅದರ ಜೊತೆಗೆ ಯೀಸ್ಟ್ ನ ಸೋಂಕು ತಗುಲಿದರೆ ಅವರ ಕಷ್ಟ ಹೇಳತೀರದು. ಸಾಮಾನ್ಯವಾಗಿ ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗುವುದರಿಂದ ಯೋನಿಯಲ್ಲಿ ಯೀಸ್ಟ್ ನ ಸೋಂಕು ತಗುಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವರದಿಯ ಪ್ರಕಾರ ಶೇಕಡಾ ೭೫ ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಯೀಸ್ಟ್ ನ ಸೋಂಕಿಗೆ ಒಳಗಾಗಿರುತ್ತಾರೆ. ಇದು ಮಹಿಳೆ ಗರ್ಭಿಣಿ ಆದಾಗ ಆದಲ್ಲಿ ಬಹಳ ತ್ರಾಸದಾಯಕ ಆಗಿರುತ್ತದೆ. ಇದರಿಂದಾಗಿ ಮಗುವಿಗೆ ಅಥವಾ ಪ್ರಸವಕ್ಕೆ ನೇರವಾಗಿ ಯಾವುದೇ ಸಂಬಂಧ ಇಲ್ಲದೇ ಇದ್ದರೂ ಕಿರಿಕಿರಿ ಉಂಟುಮಾಡುವುದು ಮಾತ್ರ ಸುಳ್ಳಲ್ಲ.

ಯೀಸ್ಟ್ ಸೋಂಕಿಗೆ ಮುಖ್ಯ ಕಾರಣ
ಬೇರೆ ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವ ಕಾಂಡಿಡಾ ಆಲ್ಬಿಕನ್ ಎನ್ನುವ ಜನನಾಂಗದ ಯೀಸ್ಟ್ ಗರ್ಭಿಣಿ ಆದಾಗ ಹೆಚ್ಚಾಗಿ ವೃದ್ಧಿಸುತ್ತದೆ. ಜನನಾಂಗದಲ್ಲಿ ಬಾಕ್ಟೀರಿಯಾ ಮತ್ತು ಯೀಸ್ಟ್ ನ ಸಮತೋಲನ ಏರುಪೇರಾದಾಗ - ಈಸ್ಟ್ರೋಜನ್ ಥೆರಪಿ, ಗರ್ಭನಿರೋಧಕಗಳ ಬಳಕೆ ಅಥವಾ ಗರ್ಭಿಣಿಯರಲ್ಲಿ ಹೆಚ್ಚಾಗಿರುವ ಈಸ್ಟ್ರೋಜನ್ ಪ್ರಮಾಣದಿಂದಾಗಿ ಯೀಸ್ಟ್ ನ ಬೆಳವಣಿಗೆ ಹೆಚ್ಚಾಗಿ ಈ ಸೋಂಕು ತಗುಲಬಹುದು.
ಯೀಸ್ಟ್ ಸೋಂಕಿನ ಮುಖ್ಯ ಲಕ್ಷಣಗಳು
ಗರ್ಭಿಣಿಯರಲ್ಲಿ ಯೋನಿಯ ಸ್ರಾವ ಸ್ವಲ್ಪ ಹೆಚ್ಚಾಗಿರುವುದು ಸಾಮಾನ್ಯ. ತೆಳುವಾದ, ಹಾಲಿನಂತಹ, ಸ್ವಲ್ಪ ವಾಸನೆಯುಕ್ತ, ಸ್ರಾವ ಸಾಮಾನ್ಯವಾಗಿದ್ದು ಇದನ್ನು ಲುಕೋರಿಯಾ ಎಂದು ಕರೆಯುತ್ತಾರೆ. ಯೀಸ್ಟ್ ನ ಸೋಂಕು ಇದ್ದಲ್ಲಿ ಈ ಸ್ರಾವ ಬಿಳಿಯಾಗಿ, ಮುದ್ದೆಯಂತೆ ವಾಸನೆ ರಹಿತವಾಗಿರುತ್ತದೆ. ಯೋನಿಯ ಹೊರಭಾಗದಲ್ಲಿ ತುರಿಕೆ, ಸುಡುವ ಅನುಭವ, (ಇದನ್ನು ವಲ್ವಾ ಎಂದು ಕರೆಯುತ್ತಾರೆ) ಕೆಂಪಾಗಿ ಊದುಕೊಂಡಿರುವ ಹಾಗೆ ಕಾಣಬಹುದು. ಬೇರೆ ಲಕ್ಷಣಗಳೆಂದರೆ ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವುದು ಮತ್ತು ಸಂಭೋಗದ ಸಮಯದಲ್ಲಿ ಕಿರಿಕಿರಿ ಉಂಟಾಗಬಹುದು.

ಯೀಸ್ಟ್ ಸೋಂಕಿನಿಂದಾಗುವ ಸಮಸ್ಯೆಗಳು
ಅದೃಷ್ಟವಶಾತ್ ಯೀಸ್ಟ್ ನ ಸೋಂಕು ಅಪಾಯಕಾರಿಯಲ್ಲ. (ತುರಿಕೆ ಮತ್ತು ಕಿರಿಕಿರಿ ಉಂಟುಮಾಡುವುದಕ್ಕಿಂತ ಹೆಚ್ಚಿನ ಅಪಾಯವಿಲ್ಲ). ಆದರೆ ನೀವು ಮಗುವಿಗೆ ಜನ್ಮ ಕೊಡುವಾಗಲೂ ಯೀಸ್ಟ್ ನ ಸೋಂಕು ಇದ್ದಲ್ಲಿ ಆ ಸೋಂಕು ಮಗುವಿಗೂ ತಗುಲುವ ಸಾಧ್ಯತೆ ಇರುತ್ತದೆ. ಯೋನಿಯಲ್ಲಿ ಸೋಂಕು ಉಂಟುಮಾಡುವ ಶಿಲೀಂಧ್ರವು ಥ್ರಶ್ (ಬಾಯಿಯಲ್ಲಿ ಯೀಸ್ಟ್ ನ ಅಸಮತೋಲನ) ಕೂಡ ಉಂಟುಮಾಡಬಲ್ಲುದು. ಈ ಸಂದರ್ಭದಲ್ಲಿ ನಿಮ್ಮ ನವಜಾತ ಶಿಶು ಬಾಯಿಯಲ್ಲಿ ಬಿಳಿಯ ತೇಪೆಗಳಿರುವ ಸಾಧ್ಯತೆ ಇದೆ. ಇದೇ ಸೋಂಕು ನೀವು ಮಗುವಿಗೆ ಸ್ತನಪಾನ ಮಾಡಿಸುವಾಗ ನಿಮಗೂ ಅಂಟುವ ಸಾಧ್ಯತೆ ಇದೆ. ಈ ಥ್ರಶ್ ಅನ್ನು ಸೌಮ್ಯವಾದ ಆಂಟಿಫಂಗಲ್ ಔಷಧಿಗಳ ಮೂಲಕ ಮತ್ತು ನಿಮೆಗೆ ಆಂಟಿಫಂಗಲ್ ಕ್ರೀಮ್ ನ ಮೂಲಕ ಗುಣಪಡಿಸಬಹುದು.

ಗರ್ಭಿಣಿ ಆಗಿರುವಾಗ ಜ್ವರ
ಗರ್ಭಿಣಿಯರಲ್ಲಿ ಲೈಂಗಿಕವಾಗಿ ಹರಡಬಹುದಾದ ರೋಗಗಳು
ಇನ್ನೊಂದು ಮುಖ್ಯ ವಿಷಯ: ಯೀಸ್ಟ್ ನ ಸೋಂಕು ಬಹಳ ಅಪಾಯಕಾರಿಯಾದ ಬಾಕ್ಟೀರಿಯಾ ಕಾರಕ ವಾಜಿನೋಸಿಸ್ ಅಥವಾ ಅನೇಕ ಲೈಂಗಿಕವಾಗಿ ಹರಡಬಹುದಾದ ರೋಗಗಳಂತೆ ಕಾಣಬಹುದು. ಈ ಕಾರಣದಿಂದ ನೀವು ಯೀಸ್ಟ್ ನ ಸೋಂಕಿನ ಲಕ್ಷಣಗಳು ಕಂಡುಬಂದರೆ ನೀವದನ್ನು ನಿರ್ಲಕ್ಷಿಸಬಾರದು. ನಿಮ್ಮ ಯೋನಿಯ ಪ್ರದೇಶದಲ್ಲಿ ತುರಿಕೆ, ಸುಡುವ ಅನುಭವ, ಹಳದಿ ಅಥವಾ ಕಂದು ಬಣ್ಣದ ಸ್ರಾವ ಇದ್ದಲ್ಲಿ ನಿಮ್ಮ ವೈದ್ಯರಿಗೆ ಕೂಡಲೇ ತಿಳಿಸಿ.

ಯೀಸ್ಟ್ ನ ಸೋಂಕನ್ನು ತಡೆಯುವುದು ಹೇಗೆ?
ನಿಮ್ಮ ಹಾರ್ಮೋನ್ನುಗಳನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲಿ ಇಲ್ಲದೇ ಇದ್ದರೂ (ಹಾಗೆ ಮಾಡಲಾಗುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು) ಯೀಸ್ಟ್ ನ ಸೋಂಕನ್ನು ತಡೆಯಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಜನನಾಂಗದ ಸುತ್ತಲೂ ಸ್ವಚ್ಛವಾಗಿಡುವುದು ಮತ್ತು ಆ ಪ್ರದೇಶದಲ್ಲಿ ಗಾಳಿಯಾಡುವಂತೆ ಇಡುವುದು. ಈ ಕೆಳಗಿನವುಗಳನ್ನು ಪ್ರಯತ್ನಿಸಿ :
- ಹತ್ತಿಯ ಬಟ್ಟೆಯಿಂದ ಮಾಡಿದ ಒಳಉಡುಪನ್ನು ಧರಿಸುವ ಮೂಲಕ ಗಾಳಿಯಾಡಲು ಅನುಕೂಲ ಆಗುವಂತೆ ಮಾಡಿ. (ಅರ್ಧಂಬರ್ಧ ಇರುವ ಒಳೌಡುಪಿಗಿಂತ ಸರಿಯಾಗಿ ಆವರಿಸುವ ಒಳಉಡುಪುಗಳನ್ನೇ ಆಯ್ಕೆ ಮಾಡಿ.
- ಸಾನ್ಸ್ ಒಳ ಉಡುಪು ಅಥವಾ ಪೈಜಾಮಾ ಹಾಕಿ ಮಲಗಿ ಗಾಳಿ ಹರಿದಾಡಲು ಅವಕಾಶ ಮಾಡಿಕೊಡಿ.
- ಶವರ್ ಸ್ನಾನ ಮಾಡಿ (ವಿಶೇಷವಾಗಿ ಬಬಲ್ ಸ್ನಾನ)
- ಸೌಮ್ಯವಾದ ಸಾಬೂನನ್ನೇ ಬಳಸಿ. ಜನನಾಂಗದ ಸುತ್ತ ಸ್ವಚ್ಛ ಗೊಳಿಸಲು ಅಂತಹ ಸಾಬೂನನ್ನೇ ಬಳಸಿ.
- ಯೋನಿ ದ್ರವಗಳು ಮತ್ತು ಡಿಯೋಂಡ್ರೆಂಟ್ ಗಳನ್ನು ಬಳಸಬೇಡಿ.
- ಸ್ವಚ್ಛತೆಯನ್ನು ಕಾಪಾಡಿ. ಸ್ನಾನಗೃಹಕ್ಕೆ ಹೋದಾಗ ಹೆಚ್ಚಿನ ಕಾಳಜಿ ವಹಿಸಿ. (ಉದಾ: ಯಾವಾಗಲೂ ಮುಂಭಾಗದಿಂದ ಹಿಂಭಾಗಕ್ಕೆ ಒರೆಸಿ)
- ಒದ್ದೆ ಸ್ನಾನದ ಬಟ್ಟೆಯಲ್ಲಿ ಎಲ್ಲೂ ಕೂರಬೇಡಿ.
- ಸ್ನಾನ ಅಥವಾ ಸ್ವಿಮ್ಮಿಂಗ್ ಪೂಲ್ ನಿಂದ ಹೊರಗೆ ಬಂದ ಮೇಲೆ ಜನನಾಂಗದ ಸುತ್ತಲೂ ಸ್ವಚ್ಛಗೊಳಿಸಿದ ಮೇಲಷ್ಟೇ ಒಳ ಉಡುಪಾಗಲೀ ಅಥವಾ ಬೇರೆ ಉಡುಪನ್ನಾಗಲೀ ಧರಿಸಿ.
- ನಿಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ (ಯೀಸ್ಟ್ ಗೆ ಸಕ್ಕರೆ ಬಹಳ ಪ್ರಿಯ) ಇದರ ಜೊತೆಗೆ ಸಂಸ್ಕರಿಸಿದ ಧಾನ್ಯಗಳ (ನಿಮ್ಮ ದೇಹ ಇದನ್ನು ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ) ಬಳಕೆ ಕೂಡ ಕಡಿಮೆ ಮಾಡಿ.
- ಮೊಸರು, ಲೈವ್ ಲಾಕ್ಟೋ ಬಾಸಿಲಸ್ ಹೊಂದಿರುವ ಪ್ರೋಬಯಾಟಿಕ್ ವಸ್ತುಗಳು, ಅಥವಾ ಇತರ ನೈಸರ್ಗಿಕ ಪರಿಹಾರಗಳು (ಬೆಳ್ಳುಳ್ಳಿ, ಚಹಾ, ಮರದ ಎಣ್ಣೆ ) ಯೀಸ್ಟ್ ನ ಸೋಂಕನ್ನು ತಡೆಯಲು ಸಹಾಯಕ ಎಂಬ ಮಾತಿಗೆ ಯಾವುದೇ ಪುರಾವೆಗಳು ಇಲ್ಲದೇ ಹೋದರೂ ಮೊಸರಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ನಿಮ್ಮ ದೈನಂದಿನ ಆಹಾರದಲ್ಲಿ ಇದನ್ನು ಸೇರಿಸಲು ಯಾವುದೇ ಅಡ್ಡಿ ಇಲ್ಲ.

ಗರ್ಭಿಣಿಯರಿಗೆ ಯೀಸ್ಟ್ ಸೋಂಕಿಗೆ ಚಿಕಿತ್ಸೆ ನೀಡುವುದು ಹೇಗೆ
ನಿಮಗೆ ಈ ಮೊದಲೂ ಯೀಸ್ಟ್ ನ ಸೋಂಕು ಬಂದಿದ್ದರೂ ನಿಮಗೆ ರೋಗ ಲಕ್ಷಣದ ಬಗ್ಗೆ ಸರಿಯಾಗಿ ತಿಳಿದಿದ್ದರೂ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಕೆಲವು ಮಹಿಳೆಯರು ತಮಗೆ ಯೀಸ್ಟ್ ನ ಸೋಂಕು ತಗುಲಿದೆ ಎಂದುಕೊಂಡವರಿಗೆ ನಿಜವಾಗಿ ಬಾಕ್ಟೀರಿಯಲ್ ವಾಜಿನೋಸಿಸ್ ಅಥವಾ ಟ್ರಿಕೊಮೊನಾಸಿಸ್ ನಂತಹ ಬಾಕ್ಟೀರಿಯಾ ಸೋಂಕು ಬಂದಿರುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಸ್ವತಃ ಔಷಧಿ ತೆಗೆದುಕೊಂಡರೆ ಸಮಸ್ಯೆಯನ್ನು ಮುಂದೂಡುವುದಷ್ಟೇ. (ನಿಮಗೆ ಬಾಕ್ಟೀರಿಯಾ ಸೋಂಕು ತಗುಲಿದ್ದು ನಿಜವೇ ಆದಲ್ಲಿ ನಿಮ್ಮ ವೈದ್ಯರು ನಿಮಗೆ ಕ್ಲಿಂಡಾಮೈಸಿನ್ ಅಥವಾ ನೀವು ನಿಮ್ಮ ಮೂರನೆಯ ತ್ರೈಮಾಸಿಕದಲ್ಲಿ ಇದ್ದರೆ ಮೆಟ್ರೋಂಡಿಜೋಲ್ ಪ್ರತಿಜೀವಕ (ಆಂಟಿಬಯೋಟಿಕ್) ಗಳನ್ನು ನೀಡುತ್ತಾರೆ).
ನಿಮಗೆ ಯೀಸ್ಟ್ ಸೋಂಕೆ ಆಗಿದ್ದಲ್ಲಿ ನೀವು ನೇರವಾಗಿ ಆಂಟಿ ಫಂಗಲ್ ಕ್ರೀಮ್ ಅನ್ನು ಬಳಸಬಹುದಾಗಿದೆ. ಆದರೆ ನಿಮ್ಮ ವೈದ್ಯರ ಬಳಿ ಖಚಿತ ಪಡಿಸಿಕೊಳ್ಳಿ. (ಸಾಮಾನ್ಯವಾಗಿ ಎಲ್ಲರೂ ನೀಡುವ ಔಷಧಿಯಾದ ಫ್ಲುಕೋನಾಜೋಲ್ ಗರ್ಭಿಣಿ ಸ್ತ್ರೀಯರಿಗೆ ನೀಡುವುದಿಲ್ಲ. ಇದರ ಪ್ರಮಾಣ ಜಾಸ್ತಿಯಾದರೆ ಹುಟ್ಟುವ ಮಗುವಿನಲ್ಲಿ ಜನ್ಮ ದೋಷಗಳಿಗೂ ಕಾರಣವಾಗಬಹುದು.) ಈ ಔಷಧಿಗಳು ನಿಮಗೆ ಪರಿಣಾಮ ತೋರಿಸಲು ಹಲವು ದಿನಗಳನ್ನೆ ತೆಗೆದುಕೊಳ್ಳಬಹುದು. ಒಮ್ಮೆ ಪರಿಣಾಮ ಸಿಕ್ಕ ಮೇಲೂ ವೈದ್ಯರು ಹೇಳಿದಷ್ಟು ದಿನಗಳು ಔಷಧಿಯನ್ನು ಮುಂದುವರಿಸಬೇಕು. ಅದು ಒಂದು ವಾರವೂ ಆಗಿರಬಹುದು ಅಥವಾ ಹೆಚ್ಚಿನ ದಿನಗಳೂ ಆಗಿರಬಹುದು.
ಆದರೆ ದುರದೃಷ್ಟವಶಾತ್ ಯೀಸ್ಟ್ ಸೋಂಕನ್ನು ಔಷಧಿ ಒಮ್ಮೆ ಮಾತ್ರ ಕಡಿಮೆ ಮಾಡಬಹುದು. ಸೋಂಕು ಮರಳಿ ಬರುವ ಸಾಧ್ಯತೆಗಳು ಹೆಚ್ಚು. ಮಗುವಿಗೆ ಜನ್ಮ ನೀಡುವ ತನಕ ನಿಯಮಿತ ದಿನಗಳಲ್ಲಿ ಔಷಧಿಗಳನ್ನು ಮುಂದುವರಿಸಬೇಕಾಗಬಹುದು.



Click it and Unblock the Notifications











