Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಿಣಿಯರಲ್ಲಿ ಕಂಡುಬರುವ ಈ ವಿಚಿತ್ರ ಲಕ್ಷಣಗಳ ಬಗ್ಗೆ ಭಯ ಬೇಡ
ಮಹಿಳೆಯ ಜೀವನದಲ್ಲಿ ಗರ್ಭಧಾರಣೆ ಎನ್ನುವುದು ತುಂಬಾ ಸಂಭ್ರಮದ ಕ್ಷಣ. ಕೆಲವುರಿಗೆ ಇದು ಆರಂಭದಲ್ಲಿ ತಿಳಿದು ಬರುವುದಿಲ್ಲ. ಆದರೆ ಮಹಿಳೆಯರು ಗರ್ಭಧರಿಸಿದರೆ ಅವರಿಗೆ ಆರಂಭದಲ್ಲೇ ಕೆಲವೊಂದು ಲಕ್ಷಣಗಳು ಕಾಣಿಸುವುದು. ಇದರಲ್ಲಿ ಮುಖ್ಯವಾಗಿ ಬೆಳಗ್ಗಿನ ಅವಧಿಯ ಅನಾರೋಗ್ಯ (ಮಾರ್ನಿಂಗ್ ಸಿಕ್ನೆಸ್), ಸ್ತನಗಳು ನೋಯುವುದು, ಆಹಾರದ ಬಯಕೆ ಇತ್ಯಾದಿಗಳು ಸಾಮಾನ್ಯ.

ಆದರೆ ಇನ್ನು ಕೆಲವೊಂದು ಲಕ್ಷಣಗಳು ಹಾಗೆ ತೆರೆಮರೆಯಲ್ಲಿ ಚರ್ಚೆಯಾಗದೆ ಉಳಿದಿರುವುದು. ಹೆಚ್ಚಿನ ಮಹಿಳೆಯರಲ್ಲಿ ಇಂತಹ ಕೆಲವೊಂದು ವಿಚಿತ್ರ ಲಕ್ಷಣಗಳು ಕಾಣಿಸುವುದು. ಆದರೆ ಅವರು ಇದರ ಬಗ್ಗೆ ಮಾತನಾಡಲು ಹಿಂಜರಿಯುವರು.
ಇಲ್ಲಿ ಈ ಲೇಖನದಲ್ಲಿ ಗರ್ಭಧಾರಣೆ ವೇಳೆ ಕಂಡುಬರುವಂತಹ ಕೆಲವು ವಿಚಿತ್ರ ಲಕ್ಷಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಪಾದಗಳು ದೊಡ್ಡದಾಗುವುದು
ಗರ್ಭಧಾರಣೆ ವೇಳೆ ದೇಹದಲ್ಲಿ ಹಾರ್ಮೋನ್ ಗಳು ಬದಲಾಗುವುದು ಸಾಮಾನ್ಯ ವಿಚಾರ. ಇದರಿಂದಾಗಿ ಅಸ್ಥಿರಜ್ಜುಗಳು ಸ್ವಲ್ಪ ಎಳೆಯಲ್ಪಡುವುದು ಮತ್ತು ಇದರಿಂದ ಪಾದದ ಗಾತ್ರ ಸ್ವಲ್ಪ ಹಿಗ್ಗಬಹುದು.

ಗರ್ಭಧಾರಣೆ ಮೆದುಳು
ಇದು ತುಂಬಾ ವಿಚಿತ್ರ. ಆದರೂ ಕೆಲವು ಮಹಿಳೆಯರಲ್ಲಿ ಗರ್ಭಧಾರಣೆಯ ಮೊದಲ ಹಂತದಲ್ಲಿ ನೆನಪಿನ ಶಕ್ತಿಯು ಕುಂದುವುದು. ನಿಮಗೆ ಕೆಲವು ವಿಷಯಗಳು ನೆನಪಿಗೆ ಬರದೇ ಇರಬಹುದು. ಗರ್ಭಿಣಿಯರಲ್ಲಿ ನೆನಪಿನ ಶಕ್ತಿಯು ಕಡಿಮೆ ಆಗುವುದು ಕೆಲವು ಅಧ್ಯಯನಗಳು ಕಂಡುಕೊಂಡಿವೆ.

ಉದ್ದ ಕೂದಲು
ದೇಹದಲ್ಲಿ ಹಾರ್ಮೋನ್ ಗಳು ಅದರಲ್ಲೂ ಈಸ್ಟ್ರೋಜನ್ ಹೆಚ್ಚಾಗುವ ಕಾರಣದಿಂದಾಗಿ ಇದು ಕೂದಲಿನ ಬೆಳವಣಿಗೆ ಹೆಚ್ಚಿಸುವುದು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು. ಇದರಿಂದ ಉದ್ದ ಹಾಗೂ ದಪ್ಪಗಿನ ಕೂದಲು ಬರುವುದು.

ವಾಸನೆ ಗ್ರಹಿಸುವ ಶಕ್ತಿ ಹೆಚ್ಚಳ
ಗರ್ಭಧಾರಣೆ ವೇಳೆ ಈಸ್ಟ್ರೋಜನ ಮಟ್ಟವು ಉನ್ನತ ಮಟ್ಟದಲ್ಲಿ ಇರುವ ಪರಿಣಾಮವಾಗಿ ವಾಸನೆ ಗ್ರಹಿಸುವ ಸಾಧ್ಯತೆಯು ಹೆಚ್ಚಾಗುವುದು. ಇಂತಹ ವಾಸನೆ ಗ್ರಹಿಸುವ ಶಕ್ತಿ ಹೆಚ್ಚಳಕ್ಕೆ ಮಾರ್ನಿಂಗ್ ಸಿಕ್ನೆಸ್ ಪ್ರಮುಖ ಕಾರಣವೆಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ.

ಲೋಹದ ರುಚಿ
ಈಸ್ಟ್ರೋಜನ್ ಮಟ್ಟವು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹೆಚ್ಚಾಗಿರುವ ಕಾರಣದಿಂದಾಗಿ ಬಾಯಿಯಲ್ಲಿ ಲೋಹದ ರುಚಿಯು ಬರಬಹುದು. ಇದರಿಂದಾಗಿ ವಾಕರಿಕೆ ಮತ್ತು ವಾಂತಿಯು ಬರುವುದು. ಹೀಗಾಗಿ ಕೆಲವು ಆಹಾರಗಳು ಪಥ್ಯವಾಗದೆ ಇರಬಹುದು.

ಮೊಡವೆ ಮತ್ತು ಕನಸು
ಹಾರ್ಮೋನ್ ಬದಲಾವಣೆಯಿಂದಾಗಿ ಗರ್ಭಧಾರಣೆಯ ಸಂದರ್ಭದಲ್ಲಿ ಮೊಡವೆಯು ಹೆಚ್ಚಾಗುವುದು.
ನಿಮಗೆ ರಾತ್ರಿ ವೇಳೆ ದುಸ್ವಪ್ನ, ಸುಂದರ ಸ್ವಪ್ನ ಅಥವಾ ಬೇರೆ ಯಾವುದೇ ಸ್ವಪ್ನಗಳು ಕಾಣಿಸಬಹುದು. ಇದು ನಿಮಗೆ ವಾಸ್ತವವೆಂದು ಅನಿಸಬಹುದು.

ಹೊಟ್ಟೆ ಘೀಳಿಡುವುದು
ನೀವು ಗರ್ಭಧಾರಣೆ ವೇಳೆ ಸ್ವಲ್ಪ ಹೊತ್ತು ಆಹಾರ ಅಥವಾ ನೀರಿಲ್ಲದೆ ಕುಳಿತರೆ ಆಗ ಹೊಟ್ಟೆಯು ಬೊಬ್ಬೆ ಹಾಕಲು ಆರಂಭಿಸುವುದು. ನಿಮಗೆ ಪದೇ ಪದೇ ಹಸಿವಾಗಬಹುದು ಮತ್ತು ಬಯಕೆಯು ಹೆಚ್ಚಾಗುವುದು.

ಐರೋಲಾ (ಸ್ತನದ ತೊಟ್ಟಿನ ಸುತ್ತಲಿನ ಕಪ್ಪು ವೃತ್ತ) ಸುತ್ತಲು ಉಬ್ಬುಗಳು
ಗರ್ಭಧಾರಣೆಯು ಸಾಗುತ್ತಾ ಹೋದಂತೆ ಐರೋಲಾ ಸುತ್ತಲು ಇರುವಂತಹ ಮಾಂಟ್ಗೊಮೆರಿ ಗ್ರಂಥಿಗಳು ಹೆಚ್ಚು ಕಾರ್ಯಶೀಲವಾಗುವುದು ಮತ್ತು ಐರೋಲಾವು ಇನ್ನಷ್ಟು ಕಡು ಬಣ್ಣಕ್ಕೆ ತಿರುಗುವುದು. ಮಾಂಟ್ಗೊಮೆರಿ ಗ್ರಂಥಿಗಳು ಉಬ್ಬುಗಳನ್ನು ಉಂಟು ಮಾಡಬಹುದು ಮತ್ತು ಇದು ಉತ್ತೇಜಿಸಿದ ವೇಳೆ ಎದ್ದು ಕಾಣುವುದು.

ಬಿಳಿ ಡಿಸ್ಚಾರ್ಜ್
ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಬಿಳಿ ಅಥವಾ ಹಳದಿ ಬಣ್ಣದ ಡಿಸ್ಚಾರ್ಜ್ ಕಂಡುಬರಬಹುದು. ಇದು ಹಾರ್ಮೋನ್ ಬದಲಾವಣೆ ಅಥವಾ ಯೀಸ್ಟ್ ಸೋಂಕಿನಿಂದ ಕಂಡುಬರಬಹುದು.

ಹಲ್ಲುಜ್ಜುವ ವೇಳೆ ವಾಕರಿಕೆ ಮತ್ತು ಬಣ್ಣಗಳಿಗೆ ಸೂಕ್ಷ್ಮತೆ
ಕೆಲವು ಮಹಿಳೆಯರಿಗೆ ಹಲ್ಲುಜ್ಜುವ ವೇಳೆ ಅಥವಾ ಬಾಯಿ ಮುಕ್ಕಳಿಸುವ ಸಂದರ್ಭದಲ್ಲಿ ವಾಕರಿಕೆ ಬರುವುದು ಇದೆ.
ಕೆಲವು ಬಣ್ಣಗಳಿಗೆ ಸೂಕ್ಷ್ಮತೆಯು ಉಂಟಾಗುವುದು ಕೂಡ ಗರ್ಭಧಾರಣೆ ವೇಳೆ ಕಂಡುಬರುವುದು.

ಸ್ಕಿನ್ ಟ್ಯಾಗ್ ಮತ್ತು ದೇಹದ ಉಷ್ಣತೆ ಹೆಚ್ಚಾಗುವುದು
ದೇಹದಲ್ಲಿ ಹಾರ್ಮೋನ್ ಹೆಚ್ಚಳವಾಗುವ ಸಂದರ್ಭದಿಂದ ಸ್ಕಿನ್ ಟ್ಯಾಗ್ ಉಂಟಾಗುವುದು. ಇದು ಮುಖ, ಕಂಕುಳ, ಕುತ್ತಿಗೆ, ಸ್ತನಗಳು ಮತ್ತು ತೊಡೆಯ ಭಾಗದಲ್ಲಿ ಕಂಡುಬರುವುದು. ಇದು ಯಾವುದೇ ಹಾನಿ ಉಂಟು ಮಾಡದು.
ಅಂಡೋತ್ಪತ್ತಿ ಆದ 24 ಗಂಟೆಗಳ ಬಳಿಕ ದೇಹದ ತಾಪಮಾನವು ಹೆಚ್ಚಾಗುವುದು ಮತ್ತು ಇದು ಕೆಲವು ದಿನಗಳ ಕಾಲ ಹಾಗೆ ಇರುವುದು.

ನಾಭಿ ಭಾಗದಲ್ಲಿ ನೋವು
ಗರ್ಭಕೋಶವು ಬೆಳೆಯುತ್ತಿರುವ ಕಾರಣದಿಂದಾಗಿ ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಬಹುದು. ಇದರಿಂದ ನಾಭಿಯ ಸುತ್ತಲು ನೋವು ಬರುವುದು. ಇದು ತೀವ್ರ ನೋವುಂಟು ಮಾಡಿದರೂ ಹೆರಿಗೆ ಬಳಿಕ ಸರಿಯಾಗುವುದು.

ಸೂಚನೆ
ಕೆಲವು ಚಿಹ್ನೆಗಳು ಹಾಗೂ ಲಕ್ಷಣಗಳನ್ನು ಊಹೆಗಳ ಮೇಲೆ ನಿರ್ಧರಿಸಲಾಗಿದೆ. ಇದನ್ನೇ ನೀವು ಗರ್ಭಧಾರಣೆಯೆಂದು ಭಾವಿಸಬಾರದು. ನೀವು ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಳ್ಳಿ. ಇದರಿಂದ ನಿಮಗೆ ಗರ್ಭಧಾರಣೆ ಬಗ್ಗೆ ದೃಢವಾಗಲಿದೆ. ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಿ ಅವರಿಂದ ಪರೀಕ್ಷೆ ಮಾಡಿಸಿಕೊಳ್ಳಿ. ಗರ್ಭಧಾರಣೆಗೆ ರಕ್ತ ಮತ್ತು ಮೂತ್ರ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.



Click it and Unblock the Notifications