ಗರ್ಭಾವಸ್ಥೆಯಲ್ಲಿ ಸೆಕ್ಸ್: ಗಮನದಲ್ಲಿರಬೇಕಾದ4 ಅಂಶಗಳು

By Manju

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುವುದು. ಮಗು ಗರ್ಭದಲ್ಲಿ ಬೆಳೆಯುತ್ತಿದ್ದಂತೆ ತಾಯಿಯ ದೇಹದಲ್ಲಿ ಹಾರ್ಮೋನ್‌ಗಳು ಬದಲಾಗುತ್ತವೆ, ದೇಹ ದಪ್ಪಗಾಗುತ್ತದೆ.

ಹೊಸ ಜೀವವೊಂದನ್ನು ಗಂಡ-ಹೆಂಡತಿ ಕಾತುರದಿಂದ ಕಾಯುತ್ತಿರುತ್ತಾರೆ, ಆದರೆ ಅದೇ ಸಮಯದಲ್ಲಿ ಗಂಡ-ಹೆಂಡತಿ ನಡುವೆ ಮೊದಲಿನಂತೆ ರೊಮ್ಯಾನ್ಸ್ ಇರುವುದಿಲ್ಲ. ಕೆಲವರು ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಾದರೂ, ಇನ್ನು ಕೆಲವರು ಇಷ್ಟಪಡುವುದಿಲ್ಲ. ಅವರಿಗೆ ಸೆಕ್ಸ್ ಆಸಕ್ತಿ ಮೂಡುವುದಿಲ್ಲ. ಗರ್ಭಾವಸ್ಥೆಯಲ್ಲಿ ಕಾಡುವ ಸುಸ್ತು, ಬದಲಾದ ದೇಹದ ಆಕೃತಿ ಈ ಎಲ್ಲಾ ಕಾರಣಗಳಿಂದಾಗಿ ರೊಮ್ಯಾನ್ಸ್‌ನಿಂದ ಸ್ವಲ್ಪ ದೂರ ಇರಲು ಬಯಸುತ್ತಾಳೆ.

ಇನ್ನು ಕೆಲವರಿಗೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದೇ , ಇಲ್ಲವೇ ಎಂಬ ಗೊಂದಲ ಇದ್ದೇ ಇರುತ್ತದೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು, ಬಿಡುವುದು ಆ ದಂಪತಿಯ ಇಚ್ಛೆ ಹಾಗೂ ವೈದ್ಯರ ಸಲಹೆಯನ್ನು ಅವಲಂಬಿಸಿರುತ್ತದೆ. ಕೆಲವರಿಗೆ ವೈದ್ಯರೇ ಗಂಡನ ಜೊತೆ ಸೇರುವುದು ಸುರಕ್ಷತವಲ್ಲ ಎಂಬ ಸಲಹೆ ನೀಡುತ್ತಾರೆ, ಈ ರೀತಿ ಸಲಹೆಯನ್ನು ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ನೀಡಲಾಗಿರುತ್ತದೆ. ಇನ್ನು ಆರೋಗ್ಯದಲ್ಲಿ ಬೇರೇನೂ ತೊಂದರೆ ಇಲ್ದಿದ್ದರೆ 9 ತಿಂಗಳವರೆಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು.

ಆದರೆ ಗರ್ಭಿಣಿ ಮಹಿಳೆ ಸೆಕ್ಸ್ ವಿಷಯದಲ್ಲಿ ಈ ಅಂಶಗಳನ್ನೂ ಗಮನಿಸುವುದು ಒಳ್ಳೆಯದು:

1. ದೇಹದಲ್ಲಾಗುವ ಬದಲಾವಣೆ

1. ದೇಹದಲ್ಲಾಗುವ ಬದಲಾವಣೆ

ಸಾಮಾನ್ಯ ಮಹಿಳೆಯಾಗಿರಲಿ ಅಥವಾ ಸೆಲೆಬ್ರಿಟಿಯಾಗಿರಲಿ ಗರ್ಭಿಣಿಯಾದ ಮೇಲೆ ದೇಹದಲ್ಲಿ ಬದಲಾವಣೆಗಳು ಗೋಚರಿಸುವುದು ಸಹಜ. ಕೆಲವರಿಗೆ ಮೈ ಬಣ್ಣ ಕಪ್ಪು-ಕಪ್ಪಾಗಬಹುದು, ಬಳಕುವ ಬಳ್ಳಿಯಂತೆ ಇದ್ದವರು ದಪ್ಪಗಾಗಬಹುದು. ಇದರ ಜೊತೆ ವಾಂತಿ, ಸುಸ್ತು ಈ ಎಲ್ಲಾ ಕಾರಣಗಳಿಂದ ದೇಹ ಬಳಲಿ ಹೋಗಿರುತ್ತದೆ.

ಇನ್ನು ಎರಡನೇ ಹಾಗೂ 3ನೇ ತ್ರೈಮಾಸಿಕದಲ್ಲಿ ಹೊಟ್ಟೆ ಗಾತ್ರ ಹೆಚ್ಚಾಗುತ್ತದೆ, ಇದರಿಂದ ಕೂರಲು, ಓಡಾಡಲು ಕೂಡ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಎಂಬುವುದನ್ನು ಗಂಡನ ಬಳಿ ಹೇಳಿ. ಸಂಕೋಚ ಬೇಡ, ಅವರು ಕೂಡ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವರು.

2. ಗಂಡ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆಯೇ?

2. ಗಂಡ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆಯೇ?

ಗರ್ಭಿಣಿ ಆದ ಬಳಿಕ ಗಂಡ ಏಕೋ ದೈಹಿಕ ಅಂತರ ಕಾಯ್ದು ಕೊಳ್ಳುತ್ತಿದ್ದಾರೆ ಎಂದು ನಿಮಗನಿಸಿದರೆ ನೀವು ಅದನ್ನು ನೆಗೆಟಿವ್ ಆಗಿ ತಗೋಬೇಕಾಗಿಲ್ಲ, ಅವರಿಗೂ ಭಯ ಇರುತ್ತದೆ, ನಿಮ್ಮ ಬಳಿ ಹೇಳಿರಲ್ಲ, ಇಂಥ ಸಂದರ್ಭದಲ್ಲಿ ಇಬ್ಬರು ಪರಸ್ಪರ ಮನಸ್ಸು ಬಿಚ್ಚಿ ಮಾತನಾಡಿ, ಇದರಿಂದ ಇಬ್ಬರ ನಡುವಿನ ಅನ್ಯೂನ್ಯತೆ ಮತ್ತಷ್ಟು ಹೆಚ್ಚುವುದು.

3. ಗರ್ಭಾವಸ್ಥೆಯಲ್ಲಿ ಕೆಲವರಿಗೆ ಸೆಕ್ಸ್ ಬಯಕೆ ಹೆಚ್ಚುವುದು

3. ಗರ್ಭಾವಸ್ಥೆಯಲ್ಲಿ ಕೆಲವರಿಗೆ ಸೆಕ್ಸ್ ಬಯಕೆ ಹೆಚ್ಚುವುದು

ವ್ಯಕ್ತಿಯಿಂದ-ವ್ಯಕ್ತಿ ಭಿನ್ನವಾಗಿರುತ್ತಾರೆ. ಕೆಲವರಿಗೆ ಗರ್ಭಾವಸ್ಥೆಯಲ್ಲಿ ಸೆಕ್ಸ್ ಬಗ್ಗೆ ನಿರಾಸಕ್ತಿ ಮೂಡಿದರೆ ಇನ್ನು ಕೆಲವರಿಗೆ ಆಸಕ್ತಿ ಹೆಚ್ಚುವುದು. ಇದೆಲ್ಲಾಆ ಹಾರ್ಮೋನ್‌ಗಳ ಬದಲಾವನೆಯಿಂದಾಗಿ ಉಂಟಾಗುವುದು.

ಗರ್ಭಾವಸ್ಥೆಯಲ್ಲಿ ಬಯಸಿದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು. ಇದರಿಂದ ಆಕ್ಸಿಟೋನ್ ಹಾರ್ಮೋನ್ ಬಿಡುಗಡೆ ಆಗಿ ರಿಲ್ಯಾಕ್ಸ್ ಆಗುವಿರಿ.

4. ಮೂರನೇ ತ್ರೈಮಾಸಿಕದಲ್ಲಿ ಸೆಕ್ಸ್ ಸುರಕ್ಷಿತವೇ?

4. ಮೂರನೇ ತ್ರೈಮಾಸಿಕದಲ್ಲಿ ಸೆಕ್ಸ್ ಸುರಕ್ಷಿತವೇ?

ಈ ಸಂದರ್ಭದಲ್ಲಿ ಬಯಸಿದರೂ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗಬಹುದು. ಗಂಡ-ಹೆಂಡತಿ ಈ ಸಮಯದಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂದೇನಿಲ್ಲ, ಕಿಸ್ಸಿಂಗ್, ಅಪ್ಪಿಕೊಳ್ಳುವುದು ಹಾಗೂ ನಿಮಗೆ ಕಂಫರ್ಟ್ ಆಗುವ ರೀತಿಯಲ್ಲಿ ರೊಮ್ಯಾನ್ಸ್‌ನಲ್ಲಿ ತೊಡಗಿಕೊಳ್ಳುವುದರಿಂದ ಇಬ್ಬರಿಗೂ ಖುಷಿ ಸಿಗುವುದು.

ಗರ್ಭಾವಸ್ಥೆಯಲ್ಲಿ ನಿಮಗೆ ಲೈಂಗಿಕ ಆಸಕ್ತಿ ಕಡಿಮೆಯಾದರೆ ತುಂಬಾ ತಲೆಕೆಡಿಸಿಕೊಳ್ಳಬೇಡಿ, ಹೆರಿಗೆಯ ಬಳಿಕ ಎಲ್ಲವೂ ಸರಿ ಹೋಗುವುದು, ಆದರೆ ಗಂಡನ ಬಳಿ ಮನಬಿಚ್ಚಿ ಮಾತನಾಡಿ, ಮಾನಸಿಕವಾಗಿ ಇಬ್ಬರೂ ಮತ್ತಷ್ಟು ಗಟ್ಟಿಯಾಗಲು ಪ್ರಯತ್ನಿಸಿ.

English summary

Sex During Pregnancy: Things Every Expecting Mother Must Remember

Sex During Pregnancy: Things Every Expecting Mother Must Remember, Read on...
X
Desktop Bottom Promotion