For Quick Alerts
ALLOW NOTIFICATIONS  
For Daily Alerts

ಅವಳಿ ಮಕ್ಕಳ ಗರ್ಭಿಣಿಯರಲ್ಲಿ ಮಧುಮೇಹದ ಅಪಾಯ ಅಧಿಕ, ಏಕೆ?

|

ಗರ್ಭಿಣಿಯಾದ ಮೇಲೆ ಮಹಿಳೆಯರ ದೇಹದಲ್ಲಿ ನಾನಾ ಬದಲಾವಣೆಗಳಾಗುತ್ತವೆ, ಮೈ ತೂಕ ಹೆಚ್ಚಾಗುವುದು, ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಕಂಡು ಬರುವುದು, ಇದರ ಜೊತೆಗೆ ಕೆಲವೊಂದು ಆರೋಗ್ಯ ಸಮಸ್ಯೆ ಕೂಡ ಉಂಟಾಗುವುದು, ಅಂತ ಆರೋಗ್ಯ ಸಮಸ್ಯೆಗಳಲ್ಲೊಂದು ಮಧುಮೇಹ.

 Risk Of Gestational Diabetes With Twins in Kannada

ಗರ್ಭಾವಸ್ಥೆಯಲ್ಲಿ ಮಧುಮೇಹದ ಅಪಾಯ ಅಧಿಕ ಮೈ ತೂಕ ಇರುವವರಲ್ಲಿ, ಬೆಡ್‌ ರೆಸ್ಟ್‌ನಲ್ಲಿ ಇರುವವರಲ್ಲಿ, 30 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಾವಸ್ಥೆಯ ಮಧುಮೇಹ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ನಿಯಂತ್ರಣದಲ್ಲಿಡುವುದು ತುಂಬಾನೇ ಮುಖ್ಯವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದಾಗ ಒಂದು ಮಗುವಿರುವ ಗರ್ಭಿಣಿಯರಿಗಿಂತ ಅವಳಿ ಮಕ್ಕಳಿರುವ ಗರ್ಭಿಣಿಯರಿಗೆ ಅಪಾಯದ ಸಾಧ್ಯತೆ ಹೆಚ್ಚು. ಏಕೆಂದರೆ ಅವಳಿ ಮಕ್ಕಳಿದ್ದರೆ ಪ್ರೆಗ್ನೆನ್ಸಿ ಹಾರ್ಮೋನ್‌ಗಳು ಕೂಡ ಅಧಿಕವಿರುತ್ತದೆ, ಇದರ ಜೊತೆಗೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಅನೇಕ ಸಮಸ್ಯೆಗಳು ಉಂಟಾಗಬಹುದು.


ಅವಳಿ ಮಕ್ಕಳಿರುವವರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚಾಗಿ ಕಂಡು ಬರುವುದೇಕೆ?ಇದರ ಲಕ್ಷಣಗಳೇನು? ಇದನ್ನು ತಡೆಗಟ್ಟಬಹುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಅವಳಿ ಮಕ್ಕಳ ಗರ್ಭಿಣಿಯರಲ್ಲಿ ಮಧುಮೇಹ ಸಮಸ್ಯೆ

ಒಂದು ಮಗುವಿರುವ ಗರ್ಭಿಣಿಯರಿಗಿಂತ ಅವಳಿ ಮಕ್ಕಳಿರುವ ಗರ್ಭಿಣಿಯರಲ್ಲಿ ಮಧುಮೇಹದ ಅಪಾಯ ಅಧಿಕವಿರುತ್ತದೆ. ಗರ್ಭಿಣಿಯರಿಗೆ ಮಧುಮೇಹ ಬಂದರೆ ಇದರಿಂದ ಅನೇಕ ಅಪಾಯಗಳಿವೆ, ಆದ್ದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹವನ್ನು ನಿಯಂತ್ರಣದಲ್ಲಿಡಬೇಕು, ಇಲ್ಲದಿದ್ದರೆ ಕಷ್ಟ.

ಅವಳಿ ಮಕ್ಕಳ ಗರ್ಭಿಣಿಯರಲ್ಲಿ ಮಧುಮೇಹದ ಲಕ್ಷಣಗಳು

ಗರ್ಭಾವಸ್ಥೆಯಲ್ಲಿ ಮಧುಮೇಹದ ಲಕ್ಷಣಗಳನ್ನು ತಿಳಿಯುವುದು ಕಷ್ಟ, ರಕ್ತ ಪರೀಕ್ಷೆ ಮಾಡಿದಾಗ ತಿಳಿಯುತ್ತದೆ, ಇಲ್ಲದಿದ್ದರೆ ತಿಳಿಯುವುದಿಲ್ಲ. ಏಕೆಂದರೆ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಇವೆಲ್ಲಾ ಗರ್ಭಿಣಿಯರಲ್ಲಿ ಸಹಜ. ಗರ್ಭಿಣಿಯಾಗಿ 24 ವಾರಗಳಾದ ಮಧುಮೇಹ ಪರೀಕ್ಷೆ ಮಾಡಲಾಗುವದು, ಆಗ ಗರ್ಭಾವಸ್ಥೆಯಲ್ಲಿ ಮಧುಮೇಹ ಇದೆಯೇ, ಇಲ್ಲವೇ ಎಂಬುವುದು ತಿಳಿಯುತ್ತದೆ.

ಅವಳಿ ಮಕ್ಕಳ ಗರ್ಭಿಣಿಯರಲ್ಲಿ ಮಧುಮೇಹಕ್ಕೆ ಕಾರಣಗಳು

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ಹೆರಿಗೆ ನಂತರ ಇರುವುದಿಲ್ಲ. ಇಂಥವರಲ್ಲಿ ಗರ್ಭಣಿಯಾದಾಗ ಮಧುಮೇಹ ಅಪಾಯ ಅಧಿಕ:
* ಒಬೆಸಿಟಿ ಅಥವಾ ಅತ್ಯಧಿಕ ಮೈ ತೂಕ
* ಆರೋಗ್ಯಕರವಲ್ಲದ ಜೀವನಶೈಲಿ ಅಂದರೆ ಒಂದೇ ಕಡೆ ಕೂತು ಕೆಲಸ ಮಾಡುವುದು
* ಗರ್ಭಧಾರಣೆಯ ಮೊದಲೇ ರಕ್ತದಲ್ಲಿ ಸಕ್ಕರೆಯಂಶ ಅಧಿಕವಿದ್ದರೆ
* 30 ವರ್ಷ ದಾಟಿದ್ದರೆ
* ಕುಟುಂಬದಲ್ಲಿ ಇತಿಹಾಸವಿದ್ದರೆ
* ಈ ಮೊದಲ ಹೆರಿಗೆಯಲ್ಲಿ ಮಗುವಿನ ತೂಕ 4 ಕೆಜಿಯಷ್ಟು ಇದ್ದರೆ
* ಮೊದಲ ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದರೆ
* ಪಿಸಿಒಡಿ ಸಮಸ್ಯೆ ಇದ್ದಿದ್ದರೆ
* ಕೆಲವೊಂದು ಔಷಧಗಳು ಉದಾಹರಣೆಗೆ corticosteroids ಮತ್ತು anti-psychotics


ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದರೆ ಅಪಾಯವೇನು?

* ಮಧುಮೇಹದ ಜೊತೆಗೆ ರಕ್ತದೊತ್ತಡ ಕೂಡ ಹೆಚ್ಚಾಗುವುದು
* ಗರ್ಭಚೀಲದಲ್ಲಿ ಅತ್ಯಧಿಕ ನೀರು ತುಂಬಿಕೊಳ್ಳುವುದು
* ಅವಧಿಪೂರ್ವ ಮಗು ಜನಿಸುವ ಸಾಧ್ಯತೆ ತುಂಬಾ ಹೆಚ್ಚು
* ಸಿ ಸೆಕ್ಷನ್‌ ಹೆರಿಗೆ
* ಜನಿಸಿದ ಮಕ್ಕಳಿಗೆ NICU ಸಪೋರ್ಟ್ ಬೇಕಾಗಬಹುದು
* ಜನಿಸಿದ ಮಗುವಿನಲ್ಲಿ ಕಾಮಲೆ ಸಮಸ್ಯೆ ಕಾಣಿಸಬಹುದು
* ಮಗುವಿನಲ್ಲಿ ಉಸಿರಾಟದ ತೊಂದರೆ ಹೆಚ್ಚುವುದು
* ಒಂದು ಅಥವಾ ಎರಡೂ ಮಕ್ಕಳಲ್ಲಿ ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಕಡಿಮೆ ಇರಬಹುದು (Neonatal hypoglycemia)

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ನಂತರ ಟೈಪ್‌ 2 ಮಧುಮೇಹ ಬರುವ ಸಾಧ್ಯತೆ ತುಂಬಾ ಅಧಿಕ

ಗರ್ಭಿಣಿಯಾಗಿದ್ದಾಗ ಮಧುಮೇಹ ಬಂದರೆ ಹೆರಿಗೆಯಾದ ಬಳಿಕ ಮಧುಮೇಹವಿರಲ್ಲ, ಆದರೆ ತುಂಬಾ ವರ್ಷಗಳು ಕಳೆದ ಮೇಲೆ ಟೈಪ್ 2 ಮಧುಮೇಹದ ಸಾಧ್ಯತೆ ಶೇ. 10ರಷ್ಟು ಅಧಿಕ ಎಂದು ಹೇಳಲಾಗುವುದು.

ಅವಳಿ ಮಕ್ಕಳಿದ್ದು ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ಚಿಕಿತ್ಸೆಯೇನು?
ವೈದ್ಯರು ನಿಮಗೆ ಲೈಫ್‌ಸ್ಟೈಲ್‌ನಲ್ಲಿ ಬದಲಾವಣೆ ಮಾಡಲು ಅಂದರೆ ಆಹಾರ ಪದ್ಧತಿ ಬದಲಾಯಿಸಲು ತಿಳಿಸುತ್ತಾರೆ. ನಾರಿನಂಶ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು, ಕಾರ್ಬ್ಸ್ ತುಂಬಾ ಕಡಿಮೆ ಸೇವಿಸಬೇಕು. ಇನ್ನು ನಿಮ್ಮ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಕೆಲವೊಂದು ವ್ಯಾಯಾಮ ಕೂಡ ಸೂಚಿಸುತ್ತಾರೆ. ಗರ್ಭಾವಸ್ಥೆಯಲ್ಲಿ ಪರಿಣಿತರ ಸಲಹೆ ಮೇರೆಗೆ ಕೆಲವೊಂದು ಯೋಗಾಸನಗಳನನ್ಉ ಮಾಡುವುದರಿಂದ, ಸ್ವಲ್ಪ ನಡೆಯುವುದರಿಂದ ಮಧುಮೇಹದ ಅಪಾಯ ತಡೆಗಟ್ಟಬಹುದು.

ಕೆಲವರಿಗೆ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದಾದರೆ ಇನ್ಸುಲಿನ್ ಚುಚ್ಚುಮದ್ದು ನೀಡುವ ಮೂಲಕ ಮಧುಮೇಹವನ್ನು ನಿಯಂತ್ರಿಸಬೇಕಾಗುತ್ತದೆ.

English summary

Risk Of Gestational Diabetes With Twins in Kannada

Gestational Diabetes With Twins: Why the ris is more in pregnancy with twin, how can prevent it?
X
Desktop Bottom Promotion