ಬೆಣ್ಣೆಹಣ್ಣು ಗರ್ಭಿಣಿಯರಿಗೆ ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ?

ಅನಾರೋಗ್ಯಕರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಜತೆಗೆ ಅತಿಯಾದ ಒತ್ತಡ ಸಹಿತ ಹಲವಾರು ಕಾರಣಗಳಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಫಲವತ್ತತೆ ಸಮಸ್ಯೆಯು ಕಾಣಿಸುವುದು. ಇದಕ್ಕೆ ಕೆಲವೊಂದು ಚಿಕಿತ್ಸೆಗಳು ಇದ್ದರೂ ತುಂಬಾ ದುಬಾರಿ ಮತ್ತು ಇನ್ನು ಕೆಲವರಿಗೆ ಇಂತಹ ಚಿಕಿತ್ಸೆಯಿಂದ ಬೇರೆ ಪರಿಣಾಮಗಳು ಕೂಡ ಆಗಬಹುದು. ಇದಕ್ಕೆ ನೈಸರ್ಗಿಕದತ್ತವಾಗಿ ಫಲವತ್ತತೆ ಹೆಚ್ಚಿಸುವ ಹಣ್ಣು ತಿಂದರೆ ಅದು ತುಂಬಾ ಒಳ್ಳೆಯದು.

Health Benefits Of Eating Avocados During Pregnancy

ಇದರಲ್ಲಿ ಅವಕಾಡೊ/ಬೆಣ್ಣೆಹಣ್ಣು ತುಂಬಾ ಒಳ್ಳೆಯದು. ಇದು ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆ ಹೆಚ್ಚು ಮಾಡುತ್ತದೆ. ಇದನ್ನು ಗರ್ಭಿಣಿಯರು ಸೇವಿಸಿದರೂ ಅವರಿಗೂ ಹಲವಾರು ಲಾಭಗಳು ಸಿಗುವುದು. ಇದನ್ನು ನಮ್ಮ ಕನ್ನಡದಲ್ಲಿ ಬೆಣ್ಣೆ ಹಣ್ಣು ಎಂದು ಕರೆಯುವರು. ಕಡು ಹಸಿರು, ಹಣ್ಣು ಒಳ್ಳೆಯ ರುಚಿ ಹಾಗೂ ಹಲವಾರು ಪೋಷಕಾಂಶಗಳನ್ನು ಹೊಂದಿದೆ.

ಆದರೆ ಕೆಲವರಿಗೆ ಈ ಹಣ್ಣನ್ನು ಗರ್ಭಧಾರಣೆ ವೇಳೆ ತಿನ್ನಬಹುದೇ ಎನ್ನುವ ಬಗ್ಗೆ ಗೊಂದಲಗಳು ಇವೆ. ಇದನ್ನು ನಿವಾರಣೆ ಮಾಡಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಗರ್ಭಧಾರಣೆ ಸಂದರ್ಭದಲ್ಲಿ ಅವಕಾಡೋ ಒಳ್ಳೆಯದೇ ಎಂದು ತಿಳಿಯಿರಿ.

ಗರ್ಭಧಾರಣೆ ವೇಳೆ ಅವಕಾಡೋ ಒಳ್ಳೆಯದೇ?

ಗರ್ಭಧಾರಣೆ ವೇಳೆ ಅವಕಾಡೋ ಒಳ್ಳೆಯದೇ?

ಅವಕಾಡೋದಲ್ಲಿ ಕೆಲವೊಂದು ಉನ್ನತ ರೀತಿಯ ಪೋಷಕಾಂಶಗಳು ಇರುವ ಕಾರಣದಿಂದಾಗಿ ಇದು ತುಂಬಾ ಒಳ್ಳೆಯದು. ಇದು ಮಗುವಿನ ಬೆಳವಣಿಗೆಗೆ ತುಂಬಾ ಸಹಕಾರಿ ಆಗುವುದು. ಕೊಬ್ಬು, ಇತರ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಹೊಂದಿರುವ ಬೆಣ್ಣೆ ಹಣ್ಣು ಗರ್ಭಧಾರಣೆ ವೇಳೆ ಧನಾತ್ಮಕ ಪರಿಣಾಮ ಬೀರುವುದು.

ಗರ್ಭಧಾರಣೆ ವೇಳೆ ಅವಕಾಡೋ ತಿಂದರೆ ಸಿಗುವ ಲಾಭಗಳು

ಗರ್ಭಧಾರಣೆ ವೇಳೆ ಅವಕಾಡೋ ತಿಂದರೆ ಸಿಗುವ ಲಾಭಗಳು

ಅವಕಾಡೋ ಹಣ್ಣಿನಿಂದ ಹಲವಾರು ಲಾಭಗಳು ನಿಮಗೆ ಸಿಗಲಿದೆ. ಇದರ ಲಾಭಗಳು ಈ ರೀತಿಯಾಗಿ ವಿವರಿಸಲಾಗಿದೆ.

ಫಾಲಿಕ್ ಆಮ್ಲ ಉನ್ನತ ಮಟ್ಟದಲ್ಲಿದೆ

ಫಾಲಿಕ್ ಆಮ್ಲವು ಕಡಿಮೆ ಇದ್ದರೆ ಆಗ ಜನನದ ವೇಳೆ ಮಗು ಅಂಗಾಂಗ ವೈಕಲ್ಯ ಉಂಟಾಗುವ ಸಾಧ್ಯತೆ ಇರುವುದು. ಇದರಿಂದ ಭ್ರೂಣದಲ್ಲಿರುವ ಮಗುವಿನ ಅಂಗಾಂಗಗಳ ಬೆಳವಣಿಗೆಗೆ ಹೆಚ್ಚಿನ ಮಟ್ಟದ ಫಾಲಿಕ್ ಆಮ್ಲವು ಬೇಕಾಗಿರುವುದು. ಅರ್ಧ ಕಪ್ ಹಣ್ಣಿನಲ್ಲಿ 5 ಎಂಸಿಜಿ ಫಾಲಿಕ್ ಆಮ್ಲವಿದೆ ಎಂದು ಹೇಳಲಾಗುತ್ತದೆ.

ರಕ್ತ ಹೀನತೆ ನಿವಾರಣೆ

ರಕ್ತ ಹೀನತೆ ನಿವಾರಣೆ

ಗರ್ಭಿಣಿಯರಲ್ಲಿ ಕಬ್ಬಿನಾಂಶದ ಕೊರತೆಯಿಂದಾಗಿ ರಕ್ತಹೀನತೆ ಸಮಸ್ಯೆಯು ಕಂಡುಬರುವುದು. ಇದರಿಂದ ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನಾಂಶ ಸೇವಿಸಬೇಕು. ಇದಕ್ಕೆ ಅವಕಾಡೋ ತಿಂದರೆ ಸಾಕು.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಹೊಟ್ಟೆಯ ಅನಾರೋಗ್ಯ ಮತ್ತು ಮಲಬದ್ಧತೆಯು ಗರ್ಭಿಣಿಯರಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಅವಕಾಡೊದಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಹೊಟ್ಟೆಯ ಕ್ರಿಯೆಯನ್ನು ಸುಧಾರಿಸುವುದು.

ವಿಟಮಿನ್ ಗಳು

ವಿಟಮಿನ್ ಗಳು

ಬೆಣ್ಣೆ ಹಣ್ಣಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳಾಗಿರುವಂತಹ ಬಿ1, ಬಿ2, ಬಿ5, ಬಿ6, ಸಿ, ಇ ಮತ್ತು ಕೆ ಇದೆ. ಇದೆಲ್ಲವೂ ಗರ್ಭಿಣಿಯರ ಆರೋಗ್ಯಕ್ಕೆ ಅತ್ಯಗತ್ಯ ಮತ್ತು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಕೂಡ.

ಮಾರ್ನಿಂಗ್ ಸಿಕ್ನೆಸ್ ತಡೆಯುವುದು

ಮಾರ್ನಿಂಗ್ ಸಿಕ್ನೆಸ್ ತಡೆಯುವುದು

ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಈ ಸಮಸ್ಯೆಯು ಕಂಡುಬರುವುದು. ಇದು ಮೊದಲ ತ್ರೈಮಾಸಿಕದಲ್ಲಿ ಹೆಚ್ಚಾಗಿ ಕಾಡುವುದು. ಅವಕಾಡೊದಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಇದನ್ನು ನಿವಾರಿಸುವುದು.

ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟ ನಿರ್ವಹಿಸುವುದು

ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟ ನಿರ್ವಹಿಸುವುದು

ನಿಯಮಿತವಾಗಿ ಅವಕಾಡೊ ಸೇವನೆ ಮಾಡಿದರೆ ಅದರಿಂದ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತು ಸಕ್ಕರೆ ಮಟ್ಟವು ಸಮತೋಲನದಲ್ಲಿ ಇರುವುದು.

ಕಾಲಿನ ಸೆಳೆತಕ್ಕೆ ಶಮನ

ಕಾಲಿನ ಸೆಳೆತಕ್ಕೆ ಶಮನ

ಗರ್ಭಧಾರಣೆ ವೇಳೆ ಕಾಲಿನ ಸೆಳೆತವು ಸಾಮಾನ್ಯ ಮತ್ತು ಅವಕಾಡೊ ತಿಂದರೆ ಕಾಲಿನ ಸೆಳೆತದಿಂದ ಪರಿಹಾರ ಸಿಗುವುದು. ಇದರಲ್ಲಿ ಬಾಳೆಹಣ್ಣಿಗಿಂತಲೂ ಹೆಚ್ಚಿನ ಪ್ರಮಾಣದ ಪೊಟಾಶಿಯಂ ಇದೆ. ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಜತೆಯಾಗಿ ಕಾಲಿನ ಸೆಳೆತ ಕಡಿಮೆ ಮಾಡುವುದು.

ಭ್ರೂಣದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ

ಭ್ರೂಣದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ

ಒಂದು ಕಪ್ ಅವಕಾಡೊದಲ್ಲಿ 22 ಮಿ.ಗ್ರಾಂ. ಕೋಲೀನ್ ಅಂಶವಿದ್ದು, ಮಗುವಿನ ಮೆದುಳು ಮತ್ತು ನರಗಳ ಬೆಳವಣಿಗೆಗೆ ಇದು ಅಗತ್ಯ.

ಖನಿಜಾಂಶಗಳಿಂದ ಸಮೃದ್ಧ

ಖನಿಜಾಂಶಗಳಿಂದ ಸಮೃದ್ಧ

ಅವಕಾಡೊದಲ್ಲಿ ದಿನನಿತ್ಯದ ಅಗತ್ಯಕ್ಕೆ ಬೇಕಾಗಿರುವಷ್ಟು ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನಿಶಿಯಂ, ನಿಯಾಸಿನ್, ಪೋಸ್ಪರಸ್, ತಾಮ್ರ, ಸತು ಮತ್ತು ಮೆಗ್ನಿಶಿಯಂ ಇದೆ. ಇದೆಲ್ಲವೂ ಗರ್ಭಿಣಿಯರಿಗೆ ಅಗತ್ಯ.

ಪೋಷಕಾಂಶ ಹೀರುವಿಕೆಗೆ ನೆರವಾಗುವುದು

ಪೋಷಕಾಂಶ ಹೀರುವಿಕೆಗೆ ನೆರವಾಗುವುದು

ಅವಕಾಡೋದಲ್ಲಿ ಪೋಷಕಾಂಶಗಳು ಮಾತ್ರ ಇರುವುದಲ್ಲದೆ, ಇದು ದೇಹದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಗೆಣಸು, ಹಸಿರೆಲೆ ತರಕಾರಿ ಮತ್ತು ಕ್ಯಾರೆಟ್ ನಲ್ಲಿ ಇರವಂತಹ ಕೊಬ್ಬು ಹೀರಿಕೊಳ್ಳುವ ವಿಟಮಿನ್ ಗಳನ್ನು ಹೀರಿಕೊಳ್ಳುವಂತೆ ಮಾಡುವುದು.

ಆರೋಗ್ಯಕಾರಿ ಕೊಬ್ಬಿನಿಂದ ಸಮೃದ್ಧ

ಆರೋಗ್ಯಕಾರಿ ಕೊಬ್ಬಿನಿಂದ ಸಮೃದ್ಧ

ಭ್ರೂಣವು ಸರಿಯಾಗಿ ಬೆಳವಣಿಗೆ ಆಗಲು ಹೆಚ್ಚಿನ ಪ್ರಮಾಣದ ಕ್ಯಾಲರಿ ಹಾಗೂ ಒಳ್ಳೆಯ ಕೊಬ್ಬು ಬೇಕಿರುವುದು. ಅವಕಾಡೊದಲ್ಲಿ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಇವೆ. ಇದು ತಾಯಿ ಮತ್ತು ಗರ್ಭದಲ್ಲಿರುವ ಮಗುವಿಗೆ ತುಂಬಾ ಒಳ್ಳೆಯದು.

ತೂಕ ಹೆಚ್ಚಳವಾಗುವ ಸಾಧ್ಯತೆ ಕಡಿಮೆ

ತೂಕ ಹೆಚ್ಚಳವಾಗುವ ಸಾಧ್ಯತೆ ಕಡಿಮೆ

ಅವಕಾಡೊದಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿರುವ ಪರಿಣಾಮ ಇದು ತೂಕ ಹೆಚ್ಚಳದ ಸಾಧ್ಯತೆ ಕಡಿಮೆ ಮಾಡುವುದು. ಇದರಲ್ಲಿ ಶೇ.25ರಷ್ಟು ನಾರಿನಾಂಶವು ಹೀರಿಕೊಳ್ಳುವಂತದ್ದಾಗಿದೆ ಮತ್ತು ಇದು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗೆ ನೆರವಾಗುವುದು.

ಪ್ರಿಕ್ಲಾಂಪ್ಸಿಯಾ ಅಪಾಯ ಕಡಿಮೆ ಮಾಡುವುದು

ಪ್ರಿಕ್ಲಾಂಪ್ಸಿಯಾ ಅಪಾಯ ಕಡಿಮೆ ಮಾಡುವುದು

ಪೊಟಾಶಿಯಂ ಅಧಿಕವಾಗಿ ಇರುವಂತಹ ಅವಕಾಡೊ ಪ್ರಿಕ್ಲಾಂಪ್ಸಿಯಾದ ಅಪಾಯವನ್ನು ತಗ್ಗಿಸುವುದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಸಮಸ್ಯೆ ಎಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಬರುವಂತಹ ಹೃದಯ ಸಂಬಂಧಿ ಸಮಸ್ಯೆಯನ್ನು ಇದು ಕಡಿಮೆ ಮಾಡುವುದು.

English summary

Health Benefits Of Eating Avocados During Pregnancy

Here we are discussing about Health Benefits Of Eating Avocados During Pregnancy. Avocados, also known as butter fruits, are pear-shaped, dark green in color and botanically referred to as berries containing a single seed. Read more.
X
Desktop Bottom Promotion