Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಷ್ಟಕ್ಕೂ ಗರ್ಭಿಣಿಯರು ಸೀಬೆ ಹಣ್ಣನ್ನು ಸೇವಿಸಬಹುದೇ?
ಗರ್ಭಾವಸ್ಥೆ ಎಂಬುದು ಸ್ತ್ರೀಯ ಬಾಳಿನಲ್ಲಿ ಹೊಸ ಅನುಭೂತಿಯಾಗಿದೆ. ತನ್ನ ಮತ್ತು ಸಂಗಾತಿಯ ಪಡಿಯಚ್ಚನ್ನು ಒಳಗೊಂಡು ಹುಟ್ಟುವ ತನ್ನ ಕಂದಮ್ಮನನ್ನ ಒಂಭತ್ತು ತಿಂಗಳ ಕಾಲ ಗರ್ಭದಲ್ಲಿ ಹೊತ್ತು ಈ ಭೂಮಿಗೆ ಕರೆದೊಯ್ಯುವ ಅನುಭವ ಬೆಲೆ ಕೊಟ್ಟರೂ ಕೊಳ್ಳಲು ಸಾಧ್ಯವಾಗದೇ ಇರುವಂತಹದ್ದು. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಯು ತನ್ನ ಮಗುವಿನ ಕಾಳಜಿಯನ್ನು ಆದ್ಯತೆಯನ್ನಾಗಿಸಿಕೊಂಡು ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಾರೆ. ತಾಯಿ ಈ ಸಮಯದಲ್ಲಿ ಸೇವಿಸುವ ಆಹಾರವೇ ಕಂದನಿಗೆ ಪೂರಕ ಆಹಾರವಾಗಿರುತ್ತದೆ.
ಆದ್ದರಿಂದ ತಾಯಿ ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕಾಗುತ್ತದೆ. ವೈದ್ಯರು ಮತ್ತು ಹಿರಿಯರು ಹೆಚ್ಚು ಸೊಪ್ಪು ತರಕಾರಿ ಮತ್ತು ಹಣ್ಣುಗಳು ಹಾಗೂ ಹೈನು ಪದಾರ್ಥಗಳನ್ನು ಸೇವಿಸಲು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ಹೆಚ್ಚು ತಿನ್ನುವುದು ಬದಲಿಗೆ ಹೆಚ್ಚಿನ ಪೋಷಕಾಂಶವುಳ್ಳ ಆಹಾರಗಳನ್ನು ಇನ್ನಷ್ಟು ಹೆಚ್ಚು ತಿನ್ನಲು ಪ್ರಯತ್ನಿಸುವುದು ಉತ್ತಮವಾಗಿರುತ್ತದೆ. ಆದಾಗ್ಯೂ ಹಣ್ಣು ತರಕಾರಿಗಳ ವಿಷಯಕ್ಕೆ ಬಂದಾಗ ಎಲ್ಲಾ ಹಣ್ಣು ತರಕಾರಿಗಳನ್ನು ಸೇವಿಸಬಾರದು ಎಂದೂ ಹೇಳುತ್ತಾರೆ. ಕೆಲವು ಹಣ್ಣು ಇಲ್ಲವೇ ತರಕಾರಿಗಳು ನಂಜಿನ ಪದಾರ್ಥಗಳನ್ನು ಒಳಗೊಂಡಿರುವುದರಿಂದ ವೈದ್ಯರು ಸೂಚಿಸಿದ ಹಣ್ಣು ತರಕಾರಿಗಳ ಸೇವನೆಯನ್ನಷ್ಟೆ ಮಾಡಬೇಕಾಗುತ್ತದೆ.
ಇಂದಿನ ಲೇಖನದಲ್ಲಿ ಗರ್ಭಿಣಿಗೆ ಸೂಕ್ತವಾಗಿರುವ ಪೇರಳೆ ಹಣ್ಣಿನ ಕುರಿತು ನಾವು ಮಾಹಿತಿಯನ್ನು ನೀಡುತ್ತಿದ್ದು ಈ ಹಣ್ಣಿನ ಇನ್ನೊಂದು ಹೆಸರು ಸೀಬೆ ಎಂದಾಗಿದೆ. ವಿಟಮಿನ್ ಮತ್ತು ಮಿನರಲ್‌ಗಳನ್ನು ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಈ ಹಣ್ಣು ಹೊಂದಿದ್ದು ಕಬ್ಬಿಣ, ಕ್ಯಾಲ್ಶಿಯಂ, ಪೊಟಾಶಿಯಂ, ಮೆಗ್ನೇಶಿಯಂ ಮತ್ತು ಫಾಸ್‌ಫರಸ್ ಅನ್ನು ಇದು ಒಳಗೊಂಡಿದೆ. ಈ ಮುಂಚೆಯೇ ನಾವು ನಿಮಗೆ ತಿಳಿಸಿದಂತೆ ಕೆಲವೊಂದು ಹಣ್ಣುಗಳನ್ನು ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಸೇವಿಸಬಾರದಾಗಿದೆ. ಆದರೆ ಸೀಬೆ ಹಣ್ಣು ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಇದರ ಸೇವನೆ ಗರ್ಭಾವಸ್ಥೆಯಲ್ಲಿ ಅತ್ಯಂತ ಉತ್ತಮವಾಗಿದೆ. ಇಂದಿನ ಲೇಖನದಲ್ಲಿ ಸೀಬೆ ಹಣ್ಣು ಸೇವನೆಯ ಪ್ರಯೋಜನಗಳನ್ನು ಅರಿತುಕೊಳ್ಳೋಣ....

ಅತ್ಯ೦ತ ಪೌಷ್ಟಿಕವಾದುದಾಗಿದೆ
ಗರ್ಭಿಣಿ ಸ್ತ್ರೀಯು ತನ್ನ ಹೊಟ್ಟೆಯಲ್ಲಿರುವ ಮಗುವಿಗೂ ಆಹಾರವನ್ನು ಉಣಿಸಬೇಕಾಗಿರುತ್ತದೆಯಾದ್ದರಿ೦ದ, ಆಕೆಗೆ ಸಾಮಾನ್ಯಕ್ಕಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾ೦ಶಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ಗರ್ಭಿಣಿ ಸ್ತ್ರೀಯು ಪೋಷಕಾ೦ಶಭರಿತ ಆಹಾರಕ್ರಮವನ್ನು ಅನುಸರಿಸಬೇಕಾಗುತ್ತದೆ. ಗರ್ಭಿಣಿ ಸ್ತ್ರೀಯ ಎಲ್ಲಾ ಪೋಷಕಾ೦ಶಗಳ ಅವಶ್ಯಕತೆಯನ್ನು ಸೀಬೆ ಹಣ್ಣು ಪೂರೈಸಬಲ್ಲದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಹಲವಾರು ರೋಗಗಳ ವಿರುದ್ಧ ಹೋರಾಡಲು ಸೀಬೆ ಹಣ್ಣು ಸಹಕಾರಿಯಾಗಿದೆ. ವಿಟಮಿನ್ ಸಿ ಅಂಶವು ಈ ಹಣ್ಣಿನಲ್ಲಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನರವ್ಯೂಹದ ಆರೋಗ್ಯಕ್ಕಾಗಿ
ಮಕ್ಕಳ ಮೆದುಳಿನ ವಿಕಸನಕ್ಕಾಗಿ ಹಾಗೂ ನರವ್ಯೂಹದ ಸಮರ್ಪಕ ಬೆಳವಣಿಗೆಗಾಗಿ ಫೋಲಿಕ್ ಆಮ್ಲವು ಅತ್ಯ೦ತ ಮುಖ್ಯವಾದುದಾಗಿರುತ್ತದೆ. ಸೀಬೆ ಹಣ್ಣಿನಲ್ಲಿ ಫೋಲಿಕ್ ಆಮ್ಲದ ಅ೦ಶವು ಸಮೃದ್ಧವಾಗಿರುತ್ತದೆಯಾದ್ದರಿ೦ದ, ಮಗುವಿಗೆ ಅದರ ಲಾಭವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಗರ್ಭಿಣಿ ಸ್ತ್ರೀಯು ಸೀಬೆ ಹಣ್ಣನ್ನು ತಿನ್ನಲೇ ಬೇಕು.

ರಕ್ತದೊತ್ತಡದ ನಿರ್ವಹಣೆ
ಹೆಚ್ಚಿನ ರಕ್ತದೊತ್ತಡ ಸಮಸ್ಯೆಗೆ ಗರ್ಭಿಣಿಯರು ಒಳಗಾಗುತ್ತಾರೆ. ಇದರಿಂದ ಹೆರಿಗೆಯಲ್ಲಿ ಕಷ್ಟವುಂಟಾಗುವ ಸಾಧ್ಯತೆ ಇರುತ್ತದೆ. ಒಂದು ಸೀಬೆ ಹಣ್ಣನ್ನು ಸೇವಿಸುವುದು ಉತ್ತಮವಾಗಿದೆ ಮತ್ತು ಇದು ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ನಿಯಂತ್ರಣಕ್ಕೆ ತರುತ್ತದೆ.

ಮನಸ್ಸನ್ನು ಶಾಂತಗೊಳಿಸುತ್ತದೆ
ಗರ್ಭಿಣಿ ಸ್ತ್ರೀಯರು ಒತ್ತಡಕ್ಕೊಳಗಾಗದಲ್ಲಿ, ಅವರ ಶರೀರದಲ್ಲಿ ಕಾರ್ಟಿಸೋಲ್ ಉತ್ಪನ್ನವಾಗುತ್ತದೆ ಹಾಗೂ ಈ ಕಾರ್ಟಿಸೋಲ್, ಗರ್ಭಿಣಿಯರ ಗರ್ಭವನ್ನು ಏರುಪೇರಾಗಿಸಬಲ್ಲದು. ದಿನಕ್ಕೊ೦ದರ೦ತೆ ಸೀಬೆ ಹಣ್ಣನ್ನು ಗರ್ಭಿಣಿಯರು ಸೇವಿಸುವುದಲ್ಲಿ, ಅದು ಗರ್ಭಿಣಿಯರ ನರಮ೦ಡಲವನ್ನು ಸಾ೦ತ್ವನಗೊಳಿಸುತ್ತದೆ ಹಾಗೂ ಅವರ ಒತ್ತಡವನ್ನು ಹೋಗಲಾಡಿಸುತ್ತದೆ.

ಮಲಬದ್ಧತೆ ನಿವಾರಣೆ
ಸೀಬೆ ಹಣ್ಣು ನಾರಿನ೦ಶದಿ೦ದ ಸಮೃದ್ಧವಾಗಿದ್ದು, ಇದು ಕರುಳುಗಳಲ್ಲಿ ಸ್ನಿಗ್ಧವಾದ ದ್ರವ್ಯವೊ೦ದನ್ನು ರೂಪಿಸಿ ತನ್ಮೂಲಕ ಮಲವು ಹೊರಹೋಗುವುದಕ್ಕೆ ಅನುವಾಗುವ೦ತೆ ಕರುಳುಗಳಲ್ಲಿ ಒತ್ತಡವನ್ನು೦ಟು ಮಾಡುತ್ತದೆ. ದಿನಕ್ಕೊ೦ದು ಸೀಬೆ ಹಣ್ಣಿನ ಸೇವನೆಯು ಮಲಬದ್ಧತೆಯನ್ನು ತೊಡೆದುಹಾಕುತ್ತದೆ.

ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ
ಗರ್ಭಾವಸ್ಥೆಯಲ್ಲಿ ಮಧುಮೇಹವು ಸರ್ವೇಸಾಮಾನ್ಯವಾಗಿದ್ದು ಸೀಬೆಯಲ್ಲಿರುವ ರಕ್ತದ ಸಕ್ಕರೆ ಮಟ್ಟವನ್ನು ಇದು ನಿಯಂತ್ರಿಸುತ್ತದೆ. ಇದು ಮಧುಮೇಹವನ್ನು ಕೂಡ ತಹಬಂದಿಗೆ ತರುತ್ತದೆ.

ದೃಷ್ಟಿಯನ್ನು ಸುಧಾರಿಸುತ್ತದೆ
ಸೀಬೆಯಲ್ಲಿ ವಿಟಮಿನ್ ಎ ಇದ್ದು ದೃಷ್ಟಿದೋಷವನ್ನು ನಿವಾರಿಸುತ್ತದೆ ಮತ್ತು ಮಗುವಿನ ಹಾಗೂ ತಾಯಿಯ ಕಣ್ಣಿನ ದೃಷ್ಟಿಗೆ ಒಳ್ಳೆಯದು.

ಕ್ಯಾನ್ಸರ್ ಬರುವುದಿಲ್ಲ
ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ನಂತಹ ಸಮಸ್ಯೆಗಳು ಬರುತ್ತಿದ್ದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ. ಲೆಕೊಪಿನ್ ಮತ್ತು ವಿಟಮಿನ್ ಸಿ ಸೀಬೆಯಲ್ಲಿದ್ದು ಕ್ಯಾನ್ಸರ್ ಉಂಟುಮಾಡುವ ವಿಷಕಾರಿ ಅಂಶಗಳನ್ನು ದೇಹದಿಂದ ಇದು ಹೊರಹಾಕುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಹೊಟ್ಟೆ ನೋವು ಮತ್ತು ಆ್ಯಸಿಡಿಟಿ ಸಮಸ್ಯೆಗಳಿಂದ ಗರ್ಭಿಣಿಯರು ಬಳಲುತ್ತಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.



Click it and Unblock the Notifications