Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹುಟ್ಟುವ ಮಗು 'ಬುದ್ಧಿವಂತ' ಆಗಬೇಕೇ? ಇಂತಹ ಆಹಾರಗಳನ್ನು ಸೇವಿಸಿ
ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಗಳು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಮುಖವಾದ ಪ್ರಭಾವ ಬೀರುತ್ತವೆ. ನಿಸರ್ಗ ಈ ಅಗತ್ಯತೆಯನ್ನು ತಾಯಿಗೆ ಹುಳಿ ಮೊದಲಾದವುಗಳನ್ನು ತಿನ್ನಲು ಪ್ರೇರೇಪಿಸುವ ಮೂಲಕ ಹೆಚ್ಚುವರಿ ಆಹಾರದ ಅಗತ್ಯದ ಬಗ್ಗೆ ತಿಳಿಸುತ್ತದೆ. ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ, ಯಾವಾಗ ಮಗುವನ್ನು ಪಡೆಯುವ ಹಂಬಲ ಪ್ರಾರಂಭವಾಯಿತೋ ಆಗಲೇ ಕೆಲವು ಆಹಾರಗಳನ್ನು ಸೇವಿಸಲು ಪ್ರಾರಂಭಿಸುವುದು ಇನ್ನಷ್ಟು ಉತ್ತಮ. ಈ ಹೆಚ್ಚುವರಿ ಆಹಾರಗಳು ಹಾಗೂ ಔಷಧಿಗಳು ಮಗುವಿನ ಬುದ್ದಿಕೌಶಲ ಅಥವಾ IQ (intelligence quotient) ವನ್ನು ಉತ್ತಮಗೊಳಿಸುತ್ತದೆ.
ಅಲ್ಲದೇ ಮಗುವಿನ ಹುಟ್ಟಿನ ನಂತರವೂ ಮೆದುಳನ್ನು ಚುರುಕುಗೊಳಿಸುವ ಆಹಾರಗಳನ್ನು ಮಕ್ಕಳಿಗೆ ತಿನಿಸುವುದು ಅಗತ್ಯ. ಮಗು ಹುಟ್ಟಿದಾಗ ಮಗುವಿನ ಮೆದುಳಿನ ಗಾತ್ರ ಹತ್ತು ವರ್ಷದ ಮಕ್ಕಳ ಮೆದುಳಿನ ಗಾತ್ರದ ಕಾಲು ಭಾಗದಷ್ಟೇ ಇರುತ್ತದೆ. ಆದರೆ ಕೇವಲ ಎರಡು ವರ್ಷವಾಗುವವರೆಗೆ ಮೆದುಳು ಸುಮಾರು ಮುಕ್ಕಾಲುಭಾಗ ಬೆಳವಣಿಗೆ ಪಡೆದಿರುತ್ತದೆ. ಆದ್ದರಿಂದ ಮಗುವಿನ ಮೊದಲ ಎರಡು ವರ್ಷಗಳು ಮೆದುಳಿನ ಬೆಳವಣಿಗೆಯ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿದ್ದು ಈ ಸಮಯದಲ್ಲಿ ಮೆದುಳನ್ನು ಚುರುಕುಗೊಳಿಸುವ ಆಹಾರಗಳನ್ನೇ ನೀಡುವ ಮೂಲಕ ಮಗು ಬುದ್ದಿವಂತನಾಗಿ ಬೆಳೆಯಲು ನೆರವಾಗುತ್ತದೆ. ಬನ್ನಿ, ಬುದ್ದಿವಂತ ಮಗುವನ್ನು ಪಡೆಯಲು ಗರ್ಭಾವಸ್ಥೆಯಲ್ಲಿ ಅಗತ್ಯವಾಗಿ ಸೇವಿಸಬೇಕಾದ ಕೆಲವು ಆಹಾರಗಳು ಯಾವುವು ಎಂಬುದನ್ನು ಅರಿಯೋಣ....

ಕೊಬ್ಬುಯುಕ್ತ ಮೀನು
ಸಾಲ್ಮನ್, ಟ್ಯೂನಾ, ಬಂಗಡೆ ಮೊದಲಾ ಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-೩ ಕೊಬ್ಬಿನ ಆಮ್ಲವಿರುತ್ತದೆ. ಈ ಪೋಷಕಾಂಶ ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಅವಶ್ಯವಾದ ಪೋಷಕಾಂಶವಾಗಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಗರ್ಭಾವಸ್ಥೆಯಲ್ಲಿದ್ದಾಗ ವಾರಕ್ಕೆ ಎರಡು ಪ್ರಮಾಣಕ್ಕೂ ಕಡಿಮೆ ಮೀನನ್ನು ಸೇವಿಸಿದ ತಾಯಂದಿರಿಗೆ ಹುಟ್ಟಿದ ಮಕ್ಕಳು ಎರಡು ಪ್ರಮಾಣಕ್ಕಿಂತಲೂ ಹೆಚ್ಚು ಮೀನನ್ನು ಸೇವಿಸಿದ ತಾಯಂದಿರಿಗೆ ಹುಟ್ಟಿದ ಮಕ್ಕಳಿಗಿಂತ ಕಡಿಮೆ ಐಕ್ಯೂ ಮಟ್ಟವನ್ನು ಪಡೆದಿದ್ದಾರೆ.

ಮೊಟ್ಟೆಗಳು
ಮೊಟ್ಟೆಗಳಲ್ಲಿ ಕೋಲೈನ್ ಎಂಬ ಅಮೈನೋ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಮಕ್ಕಳ ಮೆದುಳಿನ ಬೆಳವಣಿಗೆ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಗರ್ಭಿಣಿಯರು ಪ್ರತಿದಿನ ಎರಡು ಮೊಟ್ಟೆಗಳನ್ನಾದರೂ ಸೇವಿಸಬೇಕು, ಇದರಿಂದ ಗರ್ಭಾವಸ್ಥೆಯಲ್ಲಿ ಅಗತ್ಯವಿರುವ ದೈನಂದಿನ ಅಗತ್ಯದ ಕೋಲೈನ್ ಅಮೈನೋ ಆಮ್ಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಕಬ್ಬಿಣದ ಅಂಶವೂ ಹೆಚ್ಚಾಗಿದ್ದು ಮಗು ಅಗತ್ಯ ತೂಕ ಪಡೆಯಲು ನೆರವಾಗುತ್ತದೆ. ಅಗತ್ಯಕ್ಕೂ ಕಡಿಮೆ ತೂಕದೊಂದಿಗೆ ಹುಟ್ಟಿದ ಮಕ್ಕಳ ಐಕ್ಯೂ ಮಟ್ಟ ಇತರ ಮಕ್ಕಳಿಗಿಂತ ಕಡಿಮೆ ಇರುವುದನ್ನು ಗಮನಿಸಲಾಗಿದೆ.

ಮೊಸರು
ಗರ್ಭಾವಸ್ಥೆಯಲ್ಲಿ ಮಗುವಿನ ದೇಹದಲ್ಲಿ ನರಗಳ ಜೀವಕೋಶಗಳನ್ನು ಸೃಷ್ಟಿಸಲು ತಾಯಿಯ ದೇಹ ಅತಿ ಹೆಚ್ಚಾಗಿ ಶ್ರಮಿಸುತ್ತದೆ. ಈ ಕೆಲಸಕ್ಕಾಗಿ ಹೆಚ್ಚಿನ ಪ್ರೋಟೀನ್ ನ ಅಗತ್ಯವಿದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪ್ರೋಟೀನ್ ಯುಕ್ತ ಅಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಇದರಲ್ಲಿ ಇತರ ಪ್ರೋಟೀನ್ ಭರಿತ ಅಹಾರದ ಹೊರತಾಗಿ ಮೊಸರನ್ನೂ ಸೇವಿಸಬೇಕು. ಮೊಸರಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ.

ಪಾಲಕ್, ಬಸಲೆ ಸೊಪ್ಪು, ಕಡಿಮೆ ಕೊಬ್ಬಿನ ಕೋಳಿಮಾಂಸ ಹಾಗೂ ಬೀನ್ಸ್
ಇವೆಲ್ಲದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಹುಟ್ಟಲಿರುವ ಮಗುವಿನ ಬುದ್ಧಿವಂತಿಕೆ ಹೆಚ್ಚಿಸಲು ಅಗತ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕಾಗಿದ್ದು ಮಗುವಿನ ಮೆದುಳಿನ ಜೀವಕೋಶಗಳ ಬೆಳವಣಿಗೆಗೆ ಅಗತ್ಯವಾದ ಆಮ್ಲಜನಕವನ್ನು ಕೊಂಡೊಯ್ಯಲು ಕಬ್ಬಿಣ ಅತಿ ಅಗತ್ಯವಾಗಿದೆ. ಒಂದು ವೇಳೆ ಗರ್ಭವತಿಯ ದೇಹದಲ್ಲಿ ಅಗತ್ಯಪ್ರಮಾಣದ ಕಬ್ಬಿಣ ಇಲ್ಲದೇ ಹೋದರೆ ಇದನ್ನು ಗುಳಿಗೆಗಳ ರೂಪದಲ್ಲಿ ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಯಾವುದೇ ಕಾರಣಕ್ಕೂ ದೇಹದಲ್ಲಿ ಕಬ್ಬಿಣದ ಕೊರತೆಯಾಗಲು ಬಿಡಬಾರದು.

ಬ್ಲೂಬೆರಿ ಹಣ್ಣುಗಳು
ಹುಳಿಮಿಶ್ರಿತ ಸಿಹಿಹಣ್ಣುಗಳಾದ ಬ್ಲೂಬೆರಿ, ಪಲ್ಲೆಹೂವು (artichoke), ಟೊಮ್ಯಾಟೋ ಹಾಗೂ ಕೆಂಪು ಬೀನ್ಸ್ ಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿವೆ ಹಾಗೂ ಗರ್ಭಾವಸ್ಥೆಯಲ್ಲಿ ಸೇವಿಸಲು ಸೂಕ್ತವಾಗಿವೆ. ಈ ಹಣ್ಣುಗಳಲ್ಲಿರುವ ಪೋಷಕಾಂಶಗಳು ಮಗುವಿನ ಮೆದುಳಿನ ಅಂಗಾಂಶಗಳ ಬೆಳವಣಿಗೆಗೆ ನೆರವಾಗುವ ಮೂಲಕ ಉತ್ತಮ ಬೆಳವಣಿಗೆ ಪಡೆಯಲು ನೆರವಾಗುತ್ತವೆ.

ವಿಟಮಿನ್ ಡಿ
ಮಗುವಿನ ಬೆಳವಣಿಗೆಗೆ ಈ ವಿಟಮಿನ್ ಸಹಾ ತುಂಬಾ ಅಗತ್ಯವಾಗಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಗರ್ಭಾವಸ್ಥೆಯಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ವಿಟಮಿನ್ ಡಿ ಪ್ರಮಾಣ ಹೊಂದಿದ್ದ ತಾಯಂದಿರಿಗೆ ಕಡಿಮೆ ಬುದ್ದಿಮತ್ತೆ ಹೊಂದಿರುವ ಮಕ್ಕಳು ಜನಿಸಿರುತ್ತಾರೆ. ಆದ್ದರಿಂದ ವಿಟಮಿನ್ ಡಿ ಕೊರತೆ ಇದ್ದರೆ ವೈದ್ಯರ ಸಲಹೆ ಮೇರೆಗೆ ಸೂಕ್ತ ಔಷಧಿಗಳನ್ನೂ, ಸಾಕಷ್ಟು ಬಿಸಿಲಿಗೂ ಒಡ್ಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಜೊತೆಗೇ ಆಹಾರದಲ್ಲಿ ಸಾಕಷ್ಟು ಮೊಟ್ಟೆಗಳು, ಚೀಸ್, ಹಸುವಿನ ಮಾಂಸ, ಯಕೃತ್ ಮೊದಲಾದವುಗಳನ್ನು ಸೇವಿಸುವುದು ಸೂಕ್ತ.

ಅಯೋಡಿನ್
ಗರ್ಭಾವಸ್ಥೆಯಲ್ಲಿ, ವಿಶೇಷವಾಗಿ ಪ್ರಥಮ ಹನ್ನೆರಡು ವಾರಗಳಲ್ಲಿ ಗರ್ಭವತಿಯ ದೇಹದಲ್ಲಿ ಅಯೋಡಿನ್ ಕೊರತೆ ಇದ್ದರೆ ಜನಿಸಲಿರುವ ಮಗುವಿನ ಐಕ್ಯೂ ಮಟ್ಟ ಕಡಿಮೆ ಇರುವುದು ಕಂಡುಬಂದಿದೆ. ಆದ್ದರಿಂದ ಗರ್ಭಾವಸ್ಥೆಯ ಅಷ್ಟೂ ಕಾಲ ಅಯೋಡಿನ್ ಮಿಶ್ರಿತ ಉಪ್ಪನ್ನೇ ಬಳಸಬೇಕು. ಜೊತೆಗೇ ಸಮುದ್ರದ ಮೀನು, ಸಿಂಪಿ, ಮೊಟ್ಟೆಗಳು ಮೊಸರು ಮೊದಲಾದ ಅಯೋಡಿನ್ ಯುಕ್ತ ಆಹಾರಗಳನ್ನೂ ಹೆಚ್ಚು ಹೆಚ್ಚಾಗಿ ಸೇವಿಸಬೇಕು.

ಪೋಲಿಕ್ ಆಮ್ಲಯುಕ್ತ ಪ್ರಸವಪೂರ್ವ ಹೆಚ್ಚುವರಿ ಆಹಾರಗಳು
ಮಗುವಿನ ಮೆದುಳಿನ ಜೀವಕೋಶಗಳ ಬೆಳವಣಿಗೆಗೆ ಫೋಲಿಕ್ ಆಮ್ಲ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಗರ್ಭಾವಸ್ಥೆಯ ನಾಲ್ಕು ವಾರಗಳ ಹಾಗೂ ಗರ್ಭಾವಸ್ಥೆ ಪ್ರಾರಂಭವಾದ ಬಳಿಕ ಎಂಟು ವಾರಗಳ ಕಾಲ ಫೋಲಿಕ್ ಆಮ್ಲಯುಕ್ತ ಔಷಧಿಗಳನ್ನು ಸೇವಿಸಿದ ತಾಯಂದಿರಿಗೆ ಜನಿಸಿದ ಮಕ್ಕಳು ಸಂವಹನ ಮತ್ತು ಸಂಬಂಧ ಗುರುತಿಸಿಕೊಳ್ಳುವ ಕೊರತೆ ಇರುವ ತೊಂದರೆ (autism)ಯೊಂದಿಗೆ ಹುಟ್ಟುವ ಸಾಧ್ಯತೆ ಇತರರಿಗಿಂತ 40% ಕಡಿಮೆ ಇರುತ್ತದೆ. ಗರ್ಭಿಣಿಯ ರಕ್ತಪರೀಕ್ಷೆ ನಡೆಸಿದ ಬಳಿಕ ವೈದ್ಯರೇ ಅಗತ್ಯ ಪ್ರಮಾಣದ ಫೋಲಿಕ್ ಆಮ್ಲ ಹಾಗೂ ವಿಟಮಿನ್ B12 ಇರುವ ಗುಳಿಗೆಗಳನ್ನು ಸೇವಿಸಲು ಸಲಹೆ ಮಾಡುತ್ತಾರೆ. ಈ ಗುಳಿಗೆಗಳನ್ನು ತಪ್ಪದೇ ಸೂಚಿಸಿದ ಪ್ರಮಾಣವಷ್ಟನ್ನೂ ಸೇವಿಸಬೇಕು.



Click it and Unblock the Notifications











