Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೆನಪಿಡಿ: ಗರ್ಭಾವಸ್ಥೆಯಲ್ಲಿ ಧೂಮಪಾನ- ಅಪಾಯವೇ ಅಪಾಯ!
ಧೂಮಪಾನ ಆರೋಗ್ಯಕ್ಕೆ ಕೆಟ್ಟದ್ದು ಎಂದು ಸೇದುವವರಿಗೂ ಚೆನ್ನಾಗಿ ಗೊತ್ತು. ಆದರೆ ಗರ್ಭಾವಸ್ಥೆಯಲ್ಲಿನ ಧೂಮಪಾನ ಮಗುವಿನ ಅಂಗಾಂಗ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ವಿಶೇಷವಾಗಿ ಯಕೃತ್‌ನ ಬೆಳವಣಿಗೆ ಪೂರ್ಣವಾಗದೇ ಜೀವನಪರ್ಯಂತ ಕಾಡುವ ಊನಕ್ಕೂ ಕಾರಣವಾಗಬಹುದು ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.
ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಸಿಗರೇಟಿನ ಧೂಮದಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಬಗೆಯ ವಿಷಕಾರಿ ಕಣಗಳಿದ್ದು ಇವು ವಿಶೇಷವಾಗಿ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಯಕೃತ್‌ನ ಜೀವಕೋಶಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತವೆ.

ನಮ್ಮ ದೇಹದ ಜೀವರಾಸಾಯನಿಕ ಕ್ರಿಯೆಯಲ್ಲಿ ಆಹಾರದ ಮೂಲಕ ಪ್ರವೇಶಿಸಿದ ಕಲ್ಮಶ, ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾದ ವಿಷಕಾರಿ ವಸ್ತುಗಳನ್ನು ಸೋಸಿ ಹೊರಹಾಕುವುದು ಪ್ರಮುಖ ಘಟ್ಟವಾಗಿದ್ದು ಈ ಕೆಲಸವನ್ನು ಯಕೃತ್ ಮತ್ತು ಮೂತ್ರಪಿಂಡಗಳು ನಿರ್ವಹಿಸುತ್ತವೆ. ಆದರೆ ಗರ್ಭಾವಸ್ಥೆಯಲ್ಲಿನ ಧೂಮಪಾನದ ಪರಿಣಾಮ ಗರ್ಭದಲ್ಲಿರುವ ಹೆಣ್ಣು ಮತ್ತು ಗಂಡು ಶಿಶುಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಆಗುತ್ತವೆ.
ಗಂಡುಮಗುವಿನ ಯಕೃತ್‌ನಲ್ಲಿ ಗೀರುಗಳು ಕಂಡುಬಂದಿದ್ದರೆ ಹೆಣ್ಣುಮಗುವಿನ ಯಕೃತ್‌ನಲ್ಲಿ ಜೀವಕೋಶಗಳ ರಚನೆಯೇ ಘಾಸಿಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ ಎಂದು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ತಿಳಿಸಿದ್ದಾರೆ.
journal Archives of Toxicology ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ ಈ ತಂಡ ಗರ್ಭದಲ್ಲಿರುವ ಶಿಶುವಿನ ಯಕೃತ್ ನ ಅಂಗಾಂಶದ ಮೇಲೆ ಧೂಮಪಾನದ ಪರಿಣಾಮಗಳನ್ನು ಅಥವಾ ಕಾಂಡಕೋಶಗಳನ್ನು (embryonic stem cells) ಪರೀಕ್ಷಿಸುವ ಮೂಲಕ ಕಂಡುಕೊಂಡಿದ್ದಾರೆ.
"ಸಿಗರೇಟು ಸೇವನೆಯಿಂದ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಖಂಡಿತಾ ದುಷ್ಪರಿಣಾಮವುಂಟಾಗುತ್ತದೆ ಆದರೆ ಎಷ್ಟು ಮಟ್ಟಿಗೆ ಮತ್ತು ಯಾವ ವ್ಯಾಪ್ತಿಯಲ್ಲಿ ಈ ದುಷ್ಪರಿಣಾಮಗಳು ಆಗುತ್ತವೆ ಎಂಬುದನ್ನು ಕಂಡುಕೊಳ್ಳಲು ನಾವು ವಿಫಲರಾಗಿದ್ದೇವೆ. ಆದರೆ ಈ ಹೊಸ ತಂತ್ರಜ್ಞಾನದ ಮೂಲಕ ನಮಗೆ ನವೀಕರಿಸಬಹುದಾದ ಅಂಗಾಂಶಗಳ ಆಕರ ಲಭ್ಯವಿದ್ದು ಈ ಮೂಲಕ ಧೂಮಪಾನದ ದುಷ್ಪರಿಣಾಮಗಳು ಗರ್ಭದಲ್ಲಿರುವ ಮಗುವಿನ ಮೇಲೆ ಹೇಗೆ ಆಗುತ್ತದೆ ಎಂಬುದನ್ನು ಅರಿಯಲು ಸಾಧ್ಯವಾಗುತ್ತಿದೆ" ಎಂದು ಎಡಿನ್ಬರ್ಗ್ ವಿಶ್ವವಿದ್ಯಾಲಯದ ಡೇವಿಡ್ ಹೇ ರವರು ತಿಳಿಸುತ್ತಾರೆ.
ಈ ಕಾರ್ಯಕ್ಕಾಗಿ ವಿಜ್ಞಾನಿಗಳು ಸಮೃದ್ದ ಕಾಂಡಕೋಶ (pluripotent stem cells) ಗಳನ್ನು ಬಳಸಿದ್ದು ಇವು ವಿಶಿಷ್ಟವಲ್ಲದ ಜೀವಕೋಶಗಳಾಗಿದ್ದು ಇವುಗಳು ಬೆಳೆದು ಅಂಗಾಂಶವಾದ ಬಳಿಕ ಬೇರೊಂದು ಅಂಗವಾಗಿ ರೂಪುಗೊಳ್ಳಲು ಸಾಧ್ಯವಿದೆ. ಅಂದರೆ ಘಾಸಿಗೊಂಡ ಯಕೃತ್‌ನ ಅಂಗಾಂಶವಾಗಲು ಸಾಧ್ಯವಿದೆ.
ಒಟ್ಟಾರೆ ಹೇಳಬೇಕೆಂದರೆ ಗರ್ಭಿಣಿಯ ಧೂಮಪಾನದ ಹೊಗೆಯಲ್ಲಿರುವ ಕೆಲವು ವಿಷಕಾರಿ ಕಣಗಳು ನೇರವಾಗಿ ಮಗುವಿನ ಯಕೃತ್‌ನ ಜೀವಕೋಶಗಳಿಗೆ ಮಾರಕವಾಗುತ್ತದೆ. ಅಷ್ಟೇ ಅಲ್ಲ, ಈ ಧೂಮಪಾನ ಮಗುವಿನ ಒಟ್ಟಾರೆ ಆರೋಗ್ಯ ಹಾಗೂ ಬೆಳವಣಿಗೆಯ ಮೇಲೂ ಪ್ರಭಾವ ಬೀರುತ್ತದೆ. ಈ ಕಾರಣದಿಂದಾದರೂ ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡದೇ ಇರುವುದೇ ಗರ್ಭಿಣಿಗೂ ಮಗುವಿಗೂ ಕ್ಷೇಮಕರವಾಗಿದೆ.



Click it and Unblock the Notifications

