ಗರ್ಭಾವಸ್ಥೆಯ ಅವಧಿಯಲ್ಲಿ ಕೆಲವೊಂದು ಔಷಧಿಗಳಿಂದ ದೂರವಿರಿ

By Manjula Balaraj

ಹೆಣ್ಣಿನ ಜೀವನಕ್ಕೆ ಸಾರ್ಥಕತೆ ಬರುವುದು ತಾಯಿಯಾದಾಗ, ಪ್ರತೀ ಹೆಣ್ಣು ಬಯಸುವುದೂ ಇದನ್ನೇ. ಮಹಿಳೆಯರು ಗರ್ಭಿಣಿಯಾಗಿರುವ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜಾಗರೂಕತೆಯಿಂದ ಮತ್ತು ವೈದ್ಯರು ಹೇಳಿದಂತೆ ನಡೆದುಕೊಂಡರೆ ಉತ್ತಮ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಮಹಿಳೆಯರು ಗರ್ಭಿಣಿಯಾಗಿರುವ ಅವಧಿಯಲ್ಲಿ ಕೆಲವೊಂದು ಔಷಧಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬಾರದು ಎನ್ನುವುದರ ಬಗ್ಗೆ ತಿಳಿಸುತ್ತಿದೆ.

Drugs To Be Avoided During Pregnancy

ಗರ್ಭಿಣಿ ಮಹಿಳೆಯರಿಗೆ ಮೊದಲ ಮೂರು ತಿಂಗಳುಗಳಲ್ಲಿ ಹೆಚ್ಚಾಗಿ ಔಷಧಿ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ವೈದ್ಯರು ಹೇಳುತ್ತಾರೆ. ಯಾಕೆಂದರೆ ಔಷಧಿಯಿಂದ ಆ ಕ್ಷಣಕ್ಕೆ ಪರಿಹಾರ ಸಿಗುವುದಾದರೂ, ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಆದರೆ ಅಸ್ತಮಾ ಅಥವಾ ರಕ್ತದೊತ್ತಡದಂತಹ ಕೆಲವು ಕಾಯಿಲೆಗಳಿಗೆ ಔಷಧ ಸೇವನೆ ಮಾಡದೇ ಬೇರೆ ದಾರಿಯಿರುವುದಿಲ್ಲ.

ವೈದ್ಯರು ಇಂತಹ ಸಂದರ್ಭಗಳಲ್ಲಿ ಔಷಧಿಗಳನ್ನು ಕೊಡುವ ಮೊದಲು ಇದರ ತುರ್ತು ಅವಶ್ಯಕತೆ ಇದೆಯೇ ಎಂದು ಪರಿಶೀಲಿಸಿಯೇ ನಂತರ ಬರೆದುಕೊಡುತ್ತಾರೆ. ತುಂಬಾ ಅವಶ್ಯಕ ಎಂದೆನಿಸಿದ ಪಕ್ಷದಲ್ಲಿ ಮಾತ್ರ ಔಷಧಿಯನ್ನು ಕೊಡುತ್ತಾರೆ. ಕೆಲವು ಸಲ ತಾಯಿ ಮತ್ತು ಶಿಶು ಚಿಕಿತ್ಸೆ ಇಲ್ಲದೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದ ಸಂದರ್ಭಗಳಲ್ಲಿ ವೈದ್ಯರು ಔಷಧಗಳನ್ನು ಶಿಫಾರಸು ಮಾಡುತ್ತಾರೆ.

ಕೆಲವು ಸುರಕ್ಷಿತವಾದ ಮತ್ತು ಉತ್ತಮ ಔಷಧಿಗಳನ್ನು ವೈದ್ಯರು ಕೆಲವು ಮಹಿಳೆಯರಿಗೆ ಬಹಳಷ್ಟು ದೀರ್ಘಕಾಲ ತೆಗೆದುಕೊಳ್ಳಲು ಸೂಚಿಸುವ ಉದಾಹರಣೆಗಳೂ ಇವೆ. ಕೆಲವು ಪ್ರತಿಜೀವಕ (ಆಂಟಿ ಬಯೋಟಿಕ್) ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದಲ್ಲ. ಆದರೆ ತಾಯಿ ತೆಗೆದುಕೊಳ್ಳುವ ಔಷಧಿಗಳು ಶಿಶುವಿಗೆ ಉತ್ತಮ ಹೌದೋ ಅಲ್ಲವೇ ಎಂದು ತಿಳಿಯುವುದು ಸ್ವಲ್ಪ ಕಷ್ಟಕರ.

ಗರ್ಭಿಣಿ ಮಹಿಳೆಯರಿಗೆ ಸಂಬಂಧಿಸಿದ ಹೆಚ್ಚಿನ ಔಷಧಗಳ ಬಗ್ಗೆ ಅಧ್ಯಯನ ಇಲ್ಲ, ಯಾಕೆಂದರೆ ಔಷಧಗಳ ಸೇವನೆಯು ಮಗುವಿನ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು ಎಂಬ ಕಾಳಜಿಯಿಂದಷ್ಟೇ.


ಯಾವುದೇ ಮಹಿಳೆಯು ಗರ್ಭವತಿಯಾದ ಸಂದರ್ಭದಲ್ಲಿ ತಮ್ಮ ವೈದ್ಯರಲ್ಲಿ ತಾನು ಸೇವಿಸುವ ಔಷಧಿಗಳ ಬಗ್ಗೆ ಮುಚ್ಚುಮರೆಯಿಲ್ಲದೇ ಹೇಳಬೇಕು ಕೆಲವು ಔಷಧಿಗಳನ್ನು ಸೇವಿಸುವುದರಿಂದ ಜನನ ದೋಷಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಸಂಧರ್ಭಗಳಲ್ಲಿ ವೈದ್ಯರು ಔಷಧಿಯನ್ನು ಬದಲಿಸಿ ಕೊಡಬಹುದು ಅಥವಾ ಔಷಧಿಗಳನ್ನು ನಿಲ್ಲಿಸುವಂತೆ ಸೂಚಿಸಬಹುದು.

ಕೆಲವು ಔಷಧಿಗಳು ಗರ್ಭಾವಸ್ಥೆಯ ಮೊದಲ ಮೂರು ತಿಂಗಳುಗಳಲ್ಲಿ ಉಪಯೋಗಿಸುವುದು ಸುರಕ್ಷಿತವಲ್ಲ. ಮೂರು ತಿಂಗಳಾದ ನಂತರ ಉಪಯೋಗಿಸಬಹುದು. ಕೆಲವು ಔಷಧಿಗಳು ಜನನ ದೋಷಗಳು ಅಥವಾ ಇತರ ಸಮಸ್ಯೆಗಳ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ಕೆಲವೊಂದು ಔಷಧಿಗಳನ್ನು ತೊರೆಯುವುದರಿಂದ ತಾಯಿಗೆ ಮತ್ತು ಶಿಶುವಿಗೆ ಹೆಚ್ಚಿನ ಅಪಾಯ ಉಂಟಾಗಬಹುದು. ಆದುದರಿಂದ ಕೆಲವು ಔಷಧಿಗಳನ್ನು ಮುಂದುವರಿಸಬೇಕಾಗುತ್ತದೆ. ಕೆಲವು ಔಷಧಿಗಳನ್ನು ಗರ್ಭವತಿ ಮಹಿಳೆಯರು ಅಥವಾ ಗರ್ಭಾವಸ್ಥೆ ಹೊಂದಬಹುದಾದಂತಹ ಮಹಿಳೆಯರು ತೆಗೆದುಕೊಳ್ಳಲೇಬಾರದು.

ಕೆಲವನ್ನು ರೋಗಗ್ರಸ್ತವಾಗುವಿಕೆಗಳನ್ನು ನಿಯಂತ್ರಿಸಲು ಚಿಕಿತ್ಸೆಯ ಸಲುವಾಗಿ ಬಳಸಬೇಕಾಗುತ್ತದೆ. ಅದರಲ್ಲಿ ಒಂದು ವಾಲ್ಪೊರಿಕ್ ಆಮ್ಲ. ಇದಲ್ಲದೆ ಆಲ್ಪ್ರಜೊಲಮ್, ಡೈಯಾಜೆಪಮ್ ಇವೆ ಮತ್ತು ಕೆಲವು ಲಸಿಕೆಗಳನ್ನು ಒತ್ತಡಕ್ಕೊಳಗಾಗುವ ಮಹಿಳೆಯರಿಗೆ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದಲ್ಲದೇ, ಕೆಲವು ಔಷಧಿಗಳನ್ನು ನೋವು ನಿವಾರಕಗಳಾಗಿ ತೆಗೆದುಕೊಳ್ಳಲಾಗುವುದು. ಅದರಲ್ಲಿ ಆಸ್ಪರಿನ್, ಬ್ರುಫ಼್ಹೆನ್, ಮತ್ತು ನೆಪ್ರೊಕ್ಸೆನ್ ನಂತಹ ಕೆಲವು ಲಸಿಕೆಗಳನ್ನು ಆದಷ್ಟು ಬಳಸದೇ ಇರುವುದು ಸೂಕ್ತ.

English summary

Drugs To Be Avoided During Pregnancy

Doctors typically tell women to avoid medications during pregnancy, if possible, particularly throughout the first three months. This is because the medication can provide relief to the mother but can harm the growing foetus. Sometimes you have to take medication to treat a health condition, like high blood pressure or asthma.
Story first published: Monday, July 11, 2016, 22:02 [IST]
X
Desktop Bottom Promotion