Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಗರ್ಭಾವಸ್ಥೆಯಲ್ಲಿ ಮೈಗ್ರೇನ್ ತಲೆನೋವಿನ ಔಷಧಿ ಸೇವಿಸುವ ಮುನ್ನ....
ನಿಮಗೆ ಮೈಗ್ರೇನ್ ತಲೆನೋವಿನ ತೊಂದರೆ ಇದೆಯೇ? ಇದಕ್ಕಾಗಿ ಔಷಧಿಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ ಗರ್ಭ ಧರಿಸುವ ಮುನ್ನ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕವೇ ಮುಂದುವರೆಯುವುದು ಲೇಸು. ಏಕೆಂದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಮೈಗ್ರೇನ್ ತಲೆನೋವಿಗೆ ಉಪಯೋಗಿಸುವ ಔಷಧಿಗಳಲ್ಲಿ ಕೆಲವು ಗರ್ಭಾವಸ್ಥೆಯಲ್ಲಿ ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು ಎಂದು ತಿಳಿಸಿವೆ. ಇದುವರೆಗೆ ಈ ಔಷಧಿಗಳು ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೇ ತಿಳಿಯಲಾಗಿತ್ತು. ಆದರೆ ಈ ಸಂಶೋಧನೆ ಈ ನಂಬಿಕೆಯನ್ನು ಸುಳ್ಳಾಗಿಸಿದೆ.

ಈ ಸಂಶೋಧನೆಯಲ್ಲಿ ತಲೆನೋವಿಗೆ ಸಾಮಾನ್ಯವಾಗಿ ನೀಡಲಾಗುವ ಒಂದು ಔಷಧಿಯನ್ನು ಸೇವಿಸಿದ 65% ಕ್ಕೂ ಹೆಚ್ಚು ಮಹಿಳೆಯರಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಮಗುವಿನ ಮೇಲೆ ಪ್ರಭಾವ ಬೀರಬಲ್ಲುದು. ಇದರ ನೇರ ಪರಿಣಾಮ ಮಗು ಜನಿಸಿದ ಬಳಿಕ ಇತರರೆಡೆಗೆ ನೀಡುವ ಕಡಿಮೆ ಮಾಡುವ Attention deficit hyperactivity disorder (ADHD) ಎಂಬ ತೊಂದರೆ ಹೆಚ್ಚಾಗಬಹುದು ಎಂದು ತಿಳಿಸಲಾಗಿದೆ.
ಆದ್ದರಿಂದ ಮೈಗ್ರೇನ್ ನಿಂದ ಬಳಲುತ್ತಿರುವ ಮಹಿಳೆಯರು ಒಂದು ವೇಳೆ ಗರ್ಭಿಣಿಯಾಗಿದ್ದರೆ ಅಥವಾ ಗರ್ಭ ಧರಿಸುವ ಯೋಚನೆ ಹೊಂದಿದ್ದರೆ ತಕ್ಷಣ ತಮ್ಮ ಕುಟುಂಬ ವೈದ್ಯರನ್ನು ಕಂಡು ತಾವು ಸೇವಿಸುತ್ತಿರುವ ಔಷಧಿಗಳ ಬಗ್ಗೆ ತಿಳಿಸಿ ವೈದ್ಯರು ಸೂಚಿಸುವ ಬದಲಾವಣೆಗಳನ್ನು ಅನುಸರಿಸಬೇಕು. ಗರ್ಭಿಣಿಯರು ತಮ್ಮ ತೂಕವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುತ್ತಾ ಸೂಕ್ತ ಪರೀಕ್ಷೆಗಳನ್ನು ಎದುರಿಸಿ ಅವುಗಳನ್ನು ಪರಾಮರ್ಶೆಯ ಬಳಿಕ ವೈದ್ಯರು ನೀಡುವ ಔಷಧಿಗಳನ್ನೇ ಸೇವಿಸಬೇಕು.
ಅಲ್ಲದೇ ಗರ್ಭಾವಸ್ಥೆಯಲ್ಲಿ ದೇಹದ ಶಕ್ತಿ ಹೆಚ್ಚಲೆಂದು ಹಶಕಗಳಿಂದ ನೀಡುತ್ತಾ ಬಂದಿರುವ ಕೆಲವು ಮಾತ್ರೆಗಳು (supplements) ಸಹಾ ಗರ್ಭಾವಸ್ಥೆಯಲ್ಲಿ ಅಸುರಕ್ಷಿತ ಎಂದು ಈಗ ಕಂಡುಬಂದಿದೆ. ಮೈಗ್ರೇನ್ ನ ಕೆಲವು ಔಷಧಿಗಳು ಕೇವಲ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ, ಹೃದಯ ಸಂಬಂಧಿ ತೊಂದರೆಗಳನ್ನೂ ಹೆಚ್ಚಿಸಬಹುದು ಎಂದು ಈ ಸಂಶೋಧನೆ ತಿಳಿಸುತ್ತದೆ.
ಆದ್ದರಿಂದ ಗರ್ಭಾವಸ್ಥೆಯಲ್ಲಿದ್ದಾಗ ಮೈಗ್ರೇನ್ ಗೆ ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಕಡಿಮೆಗೊಳಿಸುವುದು, ಸಾಧ್ಯವಾದರೆ ಬಾಣಂತನ ಮುಗಿಯುವವರೆಗೂ ನಿಲ್ಲಿಸುವುದೇ ಕ್ಷೇಮ, ಈ ಔಷಧಿಗಳ ಬದಲಿಗೆ ಬೇರೆ ಔಷಧಿಗಳನ್ನು, ನೈಸರ್ಗಿಕ ವಿಧಾನಗಳನ್ನು, ದಿನಚರಿಯನ್ನು ಕೊಂಚ ಬದಲಿಸುವ ಮೂಲಕ, ಸ್ಥಳ ಬದಲಾವಣೆ ಮೊದಲಾದ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂದು ಸಂಶೋಧನೆಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸ್ತ್ರೀರೋಗ ತಜ್ಞರು ಗರ್ಭಿಣಿಗೆ ಸೂಕ್ತವಾದ ಔಷಧಿ, ಆಹಾರ ಮತ್ತು ಇತರ ಸುರಕ್ಷಿತ ಕ್ರಮಗಳನ್ನು ಸಲಹೆ ಮಾಡಬಲ್ಲರು.



Click it and Unblock the Notifications



