Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ, ನೋವು ನಿವಾರಕ ಮಾತ್ರೆಯ ಸಹವಾಸ ಬಿಟ್ಟು ಬಿಡಿ!
ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ ಗರ್ಭಾವಸ್ಥೆಯಲ್ಲಿ ನೋವು ನಿವಾರಕವಾಗಿ ಸೇವಿಸುವ ಪ್ಯಾರಸಿಟಮಾಲ್ ಗುಳಿಗೆಗಳು ಹುಟ್ಟಲಿರುವ ಮಗುವಿನಲ್ಲಿ ಕೆಲವು ತೊಂದರೆಗಳನ್ನು ತರಲಿದ್ದು ಇದರಲ್ಲಿ ADHD ಮತ್ತು ಆಟಿಸಂ ಪ್ರಮುಖವಾಗಿವೆ. ADHD ಎಂದರೆ Attention deficit hyperactivity disorder ಎಂದಾಗಿದೆ.

ಈ ತೊಂದರೆ ಇರುವ ಮಕ್ಕಳು ಮಾನಸಿಕವಾಗಿ ಅಗತ್ಯಕ್ಕಿಂತಲೂ ಹೆಚ್ಚು ಕ್ರಿಯಾತ್ಮಕರಾಗಿರುತ್ತಾರೆ ಆದರೆ ಎಲ್ಲಿ ಗಮನ ನೀಡಬೇಕೋ ಅಲ್ಲಿ ನೀಡದೇ ಅನಗತ್ಯ ವಿಷಯಗಳಿಗೆ ಹೆಚ್ಚು ಒತ್ತು ನೀಡುವುದು, ವಯಸ್ಸಿಗನುಗುಣವಾಗಿ ಹಿರಿಯರ ಮಾತನ್ನು ಕೇಳದಿರುವುದು, ಗೌರವ ನೀಡದಿರುವುದು, ಇವರ ಚಟುವಟಿಕೆಗಳನ್ನು ನಿಯಂತ್ರಿಸಲೇ ಆಗದಿರುವುದು ಇತ್ಯಾದಿ ಇದರ ಲಕ್ಷಣಗಳಾಗಿವೆ.
ಆಟಿಸಂ ಅಂದರೆ ಇದಕ್ಕೆ ವಿರುದ್ಧವಾದ ಕ್ರಿಯೆ. ಇದರಲ್ಲಿ ಮಗು ಇತರರ ಮಾತುಗಳನ್ನು ಅರ್ಥೈಸಿಕೊಳ್ಳಲು ವಿಫಲವಾಗುವುದು, ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ಸಾಹ ತೋರದಿರುವುದು, ಮಾತನಾಡಲು ತೊಂದರೆ, ಉಗ್ಗುವಿಕೆ, ನಿರುತ್ಸಾಹ ಮೊದಲಾದವು ಪ್ರಮುಖ ಲಕ್ಷಣಗಳಾಗಿವೆ.
ಈ ಎರಡೂ ತೊಂದರೆಗಳನ್ನು ವಿಶೇಷವಾಗಿ ಗಂಡುಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. ಗಂಡುಮಗುವಿನ ಮೆದುಳಿನಲ್ಲಿ ಗರ್ಬಾವಸ್ಥೆಯಲ್ಲಿದ್ದಾಗ ಕೆಲವು ರಾಸಾಯನಿಕಗಳು ಈ ತೊಂದರೆಗೆ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಅಂದರೆ ಗರ್ಭಾವಸ್ಥೆಯಲ್ಲಿದ್ದಾಗ ಗರ್ಭಿಣಿ ಸೇವಿಸಿದ ನೋವು ನಿವಾರಕಗಳಲ್ಲಿರುವ ರಾಸಾಯನಿಕಗಳೇ ಇದಕ್ಕೆ ನೇರವಾಗಿ ಕಾರಣವಾಗಿದೆ. ಅಂದರೆ ಗರ್ಭಿಣಿ ಸೇವಿಸಿದ ಪ್ಯಾರಾಸೆಟಮಾಲ್ ಪ್ರಮಾಣ ಅಗತ್ಯಕ್ಕಿಂತಲೂ ಹೆಚ್ಚಾಗಿರುವುದೇ ಈ ತೊಂದರೆಗೆ ಕಾರಣ ಎಂದು ಈ ಸಂಶೋಧನೆ ತಿಳಿಸುತ್ತದೆ. ಈ ಮಕ್ಕಳಲ್ಲಿ ತೊಂದರೆ ಅತೀವವಾಗಿ ಕಂಡುಬರದೇ ಇದ್ದರೂ ಇವರು ಶಾಲೆಯಲ್ಲಿ ಉತ್ತಮ ಫಲ ತೋರಲು ವಿಫಲರಾಗುತ್ತಾರೆ. ಆಟೋಟದಲ್ಲಿಯೂ ಇವರು ಹಿಂದುಳಿಯುತ್ತಾರೆ.
ಈ ಲಕ್ಷಣಗಳನ್ನು ತೋರುವ ಮಕ್ಕಳು ಪ್ರೌಢರಾಗುತ್ತಾ ಹೋದಂತೆ ಆತ್ಮವಿಶ್ವಾಸವನ್ನು ಪ್ರಕಟಿಸಲು ಹಿಂದುಳಿಯುತ್ತಾರೆ. ಆದ್ದರಿಂದ ಗರ್ಭಿಣಿಯರು ನೋವು ನಿವಾರಕಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಅನಿವಾರ್ಯವಾಗಿದೆ. ಪ್ಯಾರಸಿಟಮಾಲ್‌ನಲ್ಲಿರುವ ರಾಸಾಯನಿಕಗಳು ವಾಸ್ತವವಾಗಿ ನೋವನ್ನು ನಿವಾರಿಸುವುದೇ ಇಲ್ಲ, ಬದಲಿಗೆ ನೋವಿನ ಸಂವೇದನೆಯನ್ನು ಮೆದುಳಿಗೆ ತಲುಪದಂತೆ ಅಡ್ಡಗಾಲು ಹಾಕುತ್ತವೆ.
ಇದೇ ಮಗುವಿನ ಮೆದುಳಿಗೆ ತಲುಪಬೇಕಾದ ಅಗತ್ಯ ಸೂಚನೆಗಳನ್ನು ತಲುಪದಂತೆ ಮಾಡಿ ಮಗುವಿನ ಮೆದುಳಿನ ಬೆಳವಣಿಗೆಗೂ ಅಡ್ಡಗಾಲು ಹಾಕುತ್ತದೆ. ಈ ರಾಸಾಯನಿಕ ಹಾಗೂ ಪುರುಷ ಹಾರ್ಮೋನುಗಳಿಗೂ ನಿಕಟ ಸಂಬಂಧವಿರುವುದೇ ಗಂಡುಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲು ಕಾರಣ ಎಂದು ಸಂಶೋಧನೆ ತಿಳಿಸುತ್ತದೆ.



Click it and Unblock the Notifications



