Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ವಯಸ್ಸು ಮೂವತ್ತು ದಾಟಿದ ನಂತರ ಗರ್ಭಧಾರಣೆ...
ಓದು, ಕೆಲಸದ ಹುಡುಕಾಟ ಹೀಗೆ ಜೀವನದ ಜಂಜಾಟದಲ್ಲಿ ದೇಹಕ್ಕೆ ವಯಸ್ಸಾಗುವುದೇ ಗೊತ್ತಾಗುವುದಿಲ್ಲ. ಇತರೊಂದಿಗಿನ ಸ್ಪರ್ಧೆಯ ಮಧ್ಯೆ ನಾವು ಜೀವನದ ಆಯಾಯ ಘಟ್ಟದಲ್ಲಿ ಆಗಬೇಕಾದ ಕೆಲಸಗಳನ್ನೇ ಮರೆಯುತ್ತೇವೆ. ಅದರಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾಗಿ ದುಡಿಯಲು ಪ್ರಾರಂಭಿಸಿದ ಬಳಿಕ ತುಂಬಾ ವಿಳಂಬವಾಗಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಕೆಲಸ ಸಿಗುವಾಗಲೇ 25ರ ಹರೆಯ ದಾಟಿರುವ ಕಾರಣ ಮದುವೆ ಮತ್ತು ಮಕ್ಕಳಾಗುವಾಗ ವಯಸ್ಸು 30 ದಾಟಿರುತ್ತದೆ. ಆದರೆ ಇಂತಹ ಮಹಿಳೆಯರಿಗೆ ಒಂದು ಒಳ್ಳೆಯ ಸುದ್ದಿಯಿದೆ.

ಒಂದು ಅಧ್ಯಯನದ ಪ್ರಕಾರ 30ರ ಬಳಿಕ ಗರ್ಭಧರಿಸುವ ಮಹಿಳೆಯರು ಹೆಚ್ಚು ಕಾಲ ಜೀವಿಸುತ್ತಾರಂತೆ. ಇದರ ಮೊದಲು 30ರ ಬಳಿಕ ಹೆರಿಗೆಯಾದರೆ ಆರೋಗ್ಯ ಸಮಸ್ಯೆಯಾಗಬಹುದೆಂದು ಹೇಳಿದ್ದ ವರದಿಗಳನ್ನೆಲ್ಲಾ ಬದಿಗಿಡುವ. 35ರ ಬಳಿಕ ಮಹಿಳೆ ಜನ್ಮ ನೀಡುವ ಮಕ್ಕಳು ಎತ್ತರ, ಆರೋಗ್ಯ ಹಾಗೂ ಉತ್ತಮ ಶಿಕ್ಷಣವನ್ನು ಪಡೆಯುತ್ತಾರಂತೆ. ಸಣ್ಣ ವಯಸ್ಸಿನ ತಾಯಂದಿರಿಗೆ ಜನಿಸಿದ ಮಕ್ಕಳಿಗಿಂತ ಈ ಮಕ್ಕಳ ವಿದ್ಯಾಭ್ಯಾಸ ಉನ್ನತ ಮಟ್ಟದಲ್ಲಿರುತ್ತದೆ.
ಹಾಗಾಗಿ ಬೋಲ್ಡ್ ಸ್ಕೈ 30ರ ಬಳಿಕ ಹೆರಿಗೆಯಾದರೆ ಯಾವ ರೀತಿಯ ಲಾಭಗಳಿವೆ ಎನ್ನುವುದನ್ನು ತಿಳಿಸಿಕೊಡಲಿದೆ. ನೀವು ಕೂಡ ಮಗುವನ್ನು ಪಡೆಯಲು ಬಯಸಿದ್ದರೆ ಖಂಡಿತವಾಗಿಯೂ ಈ ಲೇಖನವನ್ನು ಓದಿ ಬಳಿಕ ನಿರ್ಧರಿಸಿ. 30ರ ಬಳಿಕ ಹೆರಿಗೆಯಾದರೆ ನಿಮ್ಮ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ. ತಾಯಂದಿರಾದ ನಿಮ್ಮ ಸ್ನೇಹಿತೆಯರಿಂದ ಹೆಚ್ಚಿನ ಸಲಹೆಗಳನ್ನು ಪಡೆಯಬಹುದು ಮತ್ತು ಸಣ್ಣ ವಯಸ್ಸಿನಲ್ಲಿ ತಾಯಿಯಾಗುದಕ್ಕಿಂತ ಹೆಚ್ಚಿನ ಪ್ರೌಢತೆಯನ್ನು ಪಡೆಯಬಹುದು.
ತಾಯಿಗೆ ದೀರ್ಘಾಯುಷ್ಯ
30ರ ಬಳಿಕ ಹೆರಿಗೆಯಾಗುವ ತಾಯಂದಿರುವ ಪ್ರೌಢರಾಗಿರುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಅವರು ಕಿರಿಯ ವಯಸ್ಸಿನ ತಾಯಂದಿರಿಗಿಂತಲೂ ಹೆಚ್ಚು ತಮ್ಮ ಆರೋಗ್ಯದ ಬಗ್ಗೆ ಯೋಚಿಸುತ್ತಾರೆ. 30ಕ್ಕಿಂತ ಹೆಚ್ಚಿನ ವಯಸ್ಸಿನ ತಾಯಂದಿರುವ ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುತ್ತಾರೆ. ಇದರಿಂದ ಅವರು ಹೆಚ್ಚಿಗೆ ಕಾಲ ಬಾಳುತ್ತಾರೆ.
ಕ್ಯಾನ್ಸರ್ ತಡೆಯುವುದು
20ರ ಹರೆಯದಲ್ಲಿ ತಾಯಿಯಾಗುವ ಮಹಿಳೆಯರಿಗೆ ಹೋಲಿಸಿದರೆ 30ರ ಹರೆಯದ ಬಳಿಕ ಹೆರಿಯಾಗುವ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ.
ಜನ್ಮ ವಿಕಲಾಂಗತೆ
ಹೆಚ್ಚು ವಯಸ್ಸಿನ ಮಹಿಳೆಯರು ವಿಕಲಾಂಗ ಮಗುವಿಗೆ ಜನ್ಮ ನೀಡುತ್ತಾರೆಂದು ನಂಬಲಾಗಿತ್ತು. ಆದರೆ ಅಧ್ಯಯನಗಳ ಪ್ರಕಾರ ಮಹಿಳೆಯು ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಯಿಂದ ಮುಕ್ತವಾಗಿದ್ದರೆ ಆರೋಗ್ಯಕರ ಮಗುವಿಗೆ ಜನ್ಮ ನೀಡುತ್ತಾಳೆ.
ಹೆರಿಗೆ ವೇಳೆ ಸಾವು



Click it and Unblock the Notifications



