Latest Updates
-
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ!
'ವಿಟಮಿನ್ ಎ' ಇದುವೇ ಅಪಾಯದ ಮೊದಲ ಹೆಜ್ಜೆ!
ನಮ್ಮ ದೇಹವು ಆರೋಗ್ಯಕರವಾಗಿರಬೇಕು ಎಂದರೆ ನಮಗೆ ಹಲವಾರು ವಿಟಮಿನ್‌ಗಳ ಅಗತ್ಯವಿರುತ್ತದೆ. ವಿಟಮಿನ್ ಎ ಕೊರತೆ ಇದ್ದರೆ ಕಣ್ಣಿನ ದೃಷ್ಟಿ ಮಂದಗೊಳ್ಳುತ್ತದೆ. ವಿಟಮಿನ್ ಬಿ ಕೊರತೆ ಇದ್ದರೆ ಬೆರಿ ಬೆರಿ ರೋಗ ಬರುತ್ತದೆ. ವಿಟಮಿನ್ ಬಿ6 ಕೊರತೆ ಇದ್ದರೆ ತುಟಿಗಳು ಒಡೆಯುತ್ತವೆ. ವಿಟಮಿನ್ ಬಿ12 ಕೊರತೆಯು ಅನಿಮಿಯಾ ಬರಲು ಕಾರಣವಾಗುತ್ತದೆ.ವಿಟಮಿನ್ ಸಿ ಕೊರತೆಯು ಕೊಲ್ಲಾಜೆನ್ ಕೊರತೆಗೆ ಕಾರಣವಾಗುತ್ತದೆ ಮತ್ತು ಸುಸ್ತು ಉಂಟು ಮಾಡುತ್ತದೆ. ವಿಟಮಿನ್ ಡಿ ಕೊರತೆ ಇರುಳಾಂಧತೆ ಮತ್ತು ಟೈಪ್ 2 ಮಧುಮೇಹಕ್ಕೆ ಕಾರಣವಾದರೆ, ವಿಟಮಿನ್ ಇ ಇಲ್ಲದಿದ್ದರೆ ರೋಗ ನಿರೋಧಕ ಶಕ್ತಿ ನಾಶವಾಗುತ್ತದೆ ಎಂದು ನಾವು ಓದಿರುತ್ತೆಯಲ್ಲವೇ.
ಎಲ್ಲಾ ವಿಟಮಿನ್‌ಗಳು ಆರೋಗ್ಯಕ್ಕೆ ಒಳೆಯದು ಹಾಗೆಂದು ವಿಟಮಿನ್‌ಗಳನ್ನು ಅಧಿಕವಾಗಿ ಸೇವಿಸಿದರೆ, ಅದರಿಂದ ಹಾನಿ ಕಟ್ಟಿಟ್ಟ ಬುತ್ತಿ. ಅದರಲ್ಲಿಯು ಗರ್ಭಿಣಿಯರು ವಿಟಮಿನ್ ಎ ಯನ್ನು ಅತ್ಯಂತ ಜಾಗರೂಕತೆಯಿಂದ ಸೇವಿಸಬೇಕು. ವಿಟಮಿನ್ ಎ ಎಂಬುದು ಒಂದು ಬಗೆಯ ಕರಗುವ ಗುಣಗಳನ್ನು ಹೊಂದಿರುವ ವಿಟಮಿನ್ ಆಗಿದೆ. ಇದು ದೇಹದ ಹಲವಾರು ಅಂಗಗಳಿಗೆ ತುಂಬಾ ಅಗತ್ಯವಾಗಿರುವುದರಿಂದ, ಗರ್ಭಿಣಿಯರಲ್ಲಿ ಪ್ರಸವದ ನಂತರ ಕೋಶಗಳ ರಿಪೇರಿಗೆ ತೀರಾ ಸಹಕರಿಸುತ್ತದೆ. ಜೊತೆಗೆ ಮಗುವು ಹಲವಾರು ಬಗೆಯ ಇನ್‌ಫೆಕ್ಷನ್‌ಗಳಿಗೆ ತುತ್ತಾಗದಂತೆ ಕಾಪಾಡಲು ಸಹ ವಿಟಮಿನ್ ಎ ಬೇಕು.
ಈ ವಿಟಮಿನ್ ನಮ್ಮ ಕಣ್ಣಿನ ದೃಷ್ಟಿಗೆ ಸರಿಯಾಗಿ ಇರಲು ಅತ್ಯಗತ್ಯ. ಹಾಗಾಗಿ ನಾವು ವಿಜ್ಞಾನವನ್ನು ಕಲಿಯಲು ಆರಂಭಿಸಿದ ದಿನಗಳಿಂದ ಸಹ ನಾವು ವಿಟಮಿನ್ ಎ ಕುರಿತು ತಿಳಿದುಕೊಳ್ಳುತ್ತಲೆ ಇರುತ್ತವೆ. ವಿಟಮಿನ್ ಎ ಅಷ್ಟೇ ಅಲ್ಲದೆ ಗರ್ಭಿಣಿಯರು ಹಲವಾರು ಆಹಾರ ಪದಾರ್ಥಗಳು ಮತ್ತು ವಿಟಮಿನ್‌ಗಳ ಕುರಿತು ತಿಳಿದುಕೊಂಡಿರುವುದು ಒಳ್ಳೆಯದು. ಅದರಲ್ಲಿಯೂ ಯಾವುದನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬ ಲೆಕ್ಕಾಚಾರ ಇವರಿಗೆ ಇದ್ದಷ್ಟು ಒಳ್ಳೆಯದು. ಆರೋಗ್ಯಕರವಾದ ಆಹಾರಗಳು ಮತ್ತು ವಿಟಮಿನ್‌ಗಳು ಸಿಕ್ಕಿದವು ಎಂದು ಅತಿಯಾಗಿ ಸೇವಿಸುವುದು ಸಹ ಒಳ್ಳೆಯದಲ್ಲ.
ಅವುಗಳು ನಿಮ್ಮ ದೇಹಕ್ಕೆ ಹಾನಿಯುಂಟು ಮಾಡಬಹುದು ಮತ್ತು ಗರ್ಭಪಾತಕ್ಕು ಸಹ ಕಾರಣಬಹುದು. ಆದ್ದರಿಂದ ನೀವು ಸೇವಿಸುವ ಯಾವುದೇ ಆಹಾರದ ಕುರಿತಾಗಿ ಸರಿಯಾಗಿ ತಿಳಿದುಕೊಂಡು ಸೇವಿಸಿ, ಅಲ್ಲದೆ ವೈದ್ಯರ ಸಲಹೆಯನ್ನು ಪಾಲಿಸಿ. ಬನ್ನಿ, ವಿಟಮಿನ್ ಎ ಏಕೆ ಗರ್ಭಿಣಿಯರಿಗೆ ಅಪಾಯಕಾರಿ? ಎಷ್ಟು ಪ್ರಮಾಣದ ವಿಟಮಿನ್ ಎ ಯನ್ನು ಇವರು ಸೇವಿಸಬಹುದು? ಹಾಗು ಯಾವ ಯಾವ ಬಗೆಯ ವಿಟಮಿನ್ ಎ ಇರುವ ಆಹಾರವನ್ನು ಸೇವಿಸಬಹುದು ಎಂದು ತಿಳಿದುಕೊಳ್ಳೋಣ...

ವಿಟಮಿನ್ ಎ ಗರ್ಭಿಣಿಯರಿಗೆ ಒಳ್ಳೆಯದಲ್ಲವೇ?
ಒಂದು ಅಧ್ಯಯನದ ಪ್ರಕಾರ ಗರ್ಭಿಣಿಯರು, ಅದರಲ್ಲಿಯು ಗರ್ಭ ಧರಿಸಿದ ಮೊದಲ ತಿಂಗಳುಗಳಲ್ಲಿ ಅಧಿಕವಾಗಿ ವಿಟಮಿನ್ ಎ ಯನ್ನು ಸೇವಿಸಿದರೆ, ಮುಂದೆ ಹುಟ್ಟುವ ಮಗುವಿನ ಹೃದಯ, ಮೆದುಳು ಮತ್ತು ಬೆನ್ನುಹುರಿಯ ಮೇಲೆ ಪ್ರತಿಕೂಲ ಪರಿಣಾಮಗಳು ಬೀರುತ್ತವೆಯಂತೆ.

ಗರ್ಭಿಣಿಯರು ಎಷ್ಟು ಪ್ರಮಾಣದ ವಿಟಮಿನ್ ಎ ಯನ್ನು ಸೇವಿಸಬಹುದು?
ಗರ್ಭಿಣಿಯರು ಒಂದು ದಿನದಲ್ಲಿ 8,000 ಐಯುನಷ್ಟು ವಿಟಮಿನ್ ಅನ್ನು ಸೇವಿಸಬಹುದು. ಅದಕ್ಕಿಂತ ಒಳಗೆ ಇದ್ದಷ್ಟು ಒಳ್ಳೆಯದು. ಯಾವುದೇ ಕಾರಣಕ್ಕು 10,000 ಐಯು ಗಿಂತ ಅಧಿಕ ವಿಟಮಿನ್ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ.

ಯಾವ ಬಗೆಯ ವಿಟಮಿನ್ ಗರ್ಭಿಣಿಯರಿಗೆ ಹಾನಿಕಾರಕ?
ವಿಟಮಿನ್ ಎ ನಲ್ಲಿ ಎರಡು ವಿಧಗಳಿವೆ. ಇವುಗಳಲ್ಲಿ ಒಂದು ಬೀಟಾ ಕೆರೋಟಿನ್ ಆದರೆ, ಮತ್ತೊಂದು ರೆಟಿನಾಯ್ಡ್. ಬೀಟಾ-ಕೆರೋಟಿನ್ ನೀರಿನಲ್ಲಿ ಕರಗುವಂತಹ ವಿಟಮಿನ್ ಎ ಆಗಿದೆ, ಇದನ್ನು ಸಸ್ಯಗಳಿಂದ ಪಡೆಯಲಾಗುತ್ತದೆ. ಈ ವಿಟಮಿನ್ ಎ ಯು ಗರ್ಭಿಣಿಯರಿಗೆ ಅಪಾಯಕಾರಿಯಲ್ಲ.

ಮತ್ತೊಂದು ಬಗೆಯ ವಿಟಮಿನ್ ಎ ಮಾರಕವೇ?
ರೆಟಿನಾಯ್ಡ್ ಮತ್ತೊಂದು ಬಗೆಯ ವಿಟಮಿನ್ ಎ ಆಗಿದೆ. ಇದನ್ನು ಪ್ರಾಣಿಗಳ ಕರುಳು, ಮೊಟ್ಟೆಯ ಹಳದಿ ಭಾಗ ಮತ್ತು ಹೈನು ಉತ್ಪನ್ನಗಳಿಂದ ಪಡೆಯಲಾಗುತ್ತದೆ. ಈ ವಿಟಮಿನ್ ಎ ಅನ್ನು ಅಧಿಕವಾಗಿ ಸೇವಿಸಿದಲ್ಲಿ, ಅದು ಹುಟ್ಟುವ ಮಗುವಿಗೆ ಹಾನಿಯನ್ನುಂಟು ಮಾಡಬಹುದು. ವಿಟಮಿನ್ ಎ ಅನ್ನು ಟ್ಯಾಬ್ಲೆಟ್‍ಗಳು, ಕ್ಯಾಪ್ಯೂಲ್‌ಗಳು ಅಥವಾ ದ್ರಾವಣಗಳ ರೂಪದಲ್ಲಿ ಸೇವಿಸುವುದು ಸಹ ಗರ್ಭಿಣಿಯರಿಗೆ ಹಾನಿಕಾರಕ.



Click it and Unblock the Notifications