Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಗರ್ಭಧಾರಣೆಯ ಸಮಯದಲ್ಲಿ ವೈಯಕ್ತಿಕ ಕಾಳಜಿ ಹೇಗಿರಬೇಕು?
ತಾಯಿಯಾಗಲು ಹೊರಟಿರುವ ಸ್ತ್ರೀಯು ತನಗೆ ಸೂಕ್ತವಾದ ಆರೋಗ್ಯಕಾರಿ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಆಕೆಯು ತನ್ನ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಸೇವಿಸಬೇಕಾದುದು ಅತ್ಯಂತ ಮುಖ್ಯವಾದ ಅಂಶ. ಇದರ ಅರ್ಥ ತಾಯಿ ಏನು ಸೇವಿಸುತ್ತಾಳೊ ಅದನ್ನೆ ಮಗು ಸಹ ಪಡೆಯುತ್ತದೆ. ಗರ್ಭಿಣಿ ಸ್ತ್ರೀಗೆ ಇನ್‍ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದು ಆಕೆಯನ್ನು ಮತ್ತಷ್ಟು ಸೊರಗಿದಂತೆ ಕಾಣುವಂತೆ ಮಾಡುತ್ತದೆ. ಆಗಾಗ ಗರ್ಭಿಣಿ ಇರುವ ಸ್ಥಳವನ್ನು ಆದಷ್ಟು ಸ್ವಚ್ಛವಾಗಿಡಬೇಕು. ಆಕೆಯ ಸುತ್ತ ಒಂದು ನಿರ್ಮಲ ಮತ್ತು ನಿಶ್ಕಲ್ಮಷವಾದ ವಾತಾವರಣವನ್ನು ನಿರ್ಮಿಸಬೇಕಾದುದು ಅತ್ಯಾವಶ್ಯಕ. ನಿಮ್ಮ ಗರ್ಭಾವಧಿಯನ್ನು ಖುಷಿಯಿಂದ ಅನುಭವಿಸಿ. ನಿಮ್ಮ ಕುರಿತು ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಬನ್ನಿ ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ಕೆಲವೊಂದು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ ಮುಂದೆ ಓದಿ..
ಸೌಂದರ್ಯವರ್ಧಕಗಳಿಂದ ದೂರವಿರಿ
ನಿಮಗೆ ಯಾವಾಗಲು ಮೊಡವೆಯ ಸಮಸ್ಯೆಯಾಗುತ್ತಿದ್ದರೆ ಗರ್ಭಿಣಿಯಾದಾಗ ಅದಕ್ಕೆ ಸಿದ್ಧರಾಗಿ ಕುಳಿತುಕೊಳ್ಳಿ. ನಿಮ್ಮೊಂದಿಗೆ ಒಳ್ಳೆಯ ಸ್ಕಿನ್ ಕೇರ್ ಮತ್ತು ಕಲೆ ನಿವಾರಕಗಳನ್ನು ಇಟ್ಟುಕೊಳ್ಳಿ. ರೆಟಿನಾಲ್ ಮತ್ತು ಅದರಂತಹ ಕೆಲವೊಂದು ರಾಸಾಯನಿಕಗಳನ್ನು ಗರ್ಭಿಣಿಯಾಗಿರುವ ದೂರವಿರಿಸಬೇಕು. ಯಾವುದೇ ಹೊಸ ಉತ್ಪನ್ನವನ್ನು ಬಳಸುವ ಮೊದಲು ನೀವು ವೈದ್ಯರ ಸಲಹೆ ಪಡೆಯುವುದು ಒಳಿತು.
ಒಣ ತ್ವಚೆಯ ಸಮಸ್ಯೆ ಕಾಡುತ್ತಿದ್ದರೆ
ಕೆಲವು ಮಹಿಳೆಯರು ಸಾಮಾನ್ಯ ಸಮಯದಲ್ಲಿ ಒಳ್ಳೆಯ ತ್ವಚೆಯನ್ನು ಹೊಂದಿದ್ದರೂ ಗರ್ಭಿಣಿಯಾದಾಗ ಒಣತ್ವಚೆ ಹೊಂದುತ್ತಾರೆ. ದಪ್ಪಗಿನ ಮೊಯಿಶ್ಚರೈಸರ್ ಅನ್ನು ಬಳಸಿ ಮತ್ತು ಹೆಚ್ಚು ನೀರಿನಾಂಶವನ್ನು ಸೇವಿಸಿ. ಮೊಯಿಶ್ಚರೈಸರ್‌ನ್ನು ದಿನವಿಡಿ ಹಚ್ಚುತ್ತಿರಿ. ಎಣ್ಣೆಯನ್ನು ಕೂಡ ಹಚ್ಚಿಕೊಳ್ಳಬಹುದು. ಇದರಿಂದ ದೇಹಕ್ಕೆ ಮಸಾಜ್ ಕೂಡ ಆಗುತ್ತದೆ.

ನೈಸರ್ಗಿಕ ಸ್ಕಿನ್ ಕೇರ್
ಗರ್ಭಿಣಿಯಾಗಿರುವಾಗ ಮುಖದ ಮೊಯಿಶ್ಚರೈಸರ್‌ನ್ನು ಯಾವತ್ತೂ ಮರೆಯಬೇಡಿ. ಎಚ್ ಜಿ ಮೊಯಿಶ್ಚರೈಸರ್‌ನ್ನು ಬಳಸಿಕೊಂಡು ನಿಮ್ಮ ತ್ವಚೆ ಹೊಳೆಯುವಂತೆ ನೋಡಿಕೊಳ್ಳಿ. ಗರ್ಭಿಣಿಯಾಗಿರುವಾಗ ಈ ಸ್ಕಿನ್ ಕೇರ್ ಅನ್ನು ಪಾಲಿಸಿಕೊಂಡು ಹೋಗಿ.
ಒತ್ತಡಕ್ಕೆ ಆಸ್ಪದ ನೀಡಬೇಡಿ
ಗರ್ಭಿಣಿಯಾಗಿರುವ ಮಹಿಳೆಯರು ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಇದು ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಧಾನ್ಯ ಮಾಡಿ. ದಿನದಲ್ಲಿ ಸ್ವಲ್ಪ ಸಮಯ ಸುಮ್ಮನೆ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಸರಿಯಾಗಿ ನಿದ್ದೆ ಮಾಡಿ
ರಾತ್ರಿ ಚೆನ್ನಾಗಿ ನಿದ್ರೆ ಮಾಡಿ. ನಿದ್ದೆ ಮಾಡುತ್ತಿರುವಾಗ ದೇಹದಲ್ಲಿ ಬದಲಾವಣೆ ಮತ್ತು ಪುನಶ್ಚೇತನವಾಗುತ್ತದೆ. ದೇಹ ಪುನಶ್ಚೇತನಗೊಳ್ಳಲು ಅದಕ್ಕೆ ಸರಿಯಾದ ಸಮಯ ನೀಡಿ.
ತ್ವಚೆಯ ಕಾಲಿನ ಫೇಸ್ ಪ್ಯಾಕ್
ಗರ್ಭಿಣಿ ಮಹಿಳೆಯರ ತ್ವಚೆಯ ಆರೈಕೆಗೆ ಸಲಹೆ ಮಾಡಲಾಗುವ ಅತ್ಯಂತ ಪ್ರಾಮುಖ್ಯ ವಿಷಯವೆಂದರೆ ಹಸಿ ಹಾಲನ್ನು ಬಳಸುವುದು. ಹಸಿ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ಮುಖಕ್ಕೆ ನಿಧಾನವಾಗಿ ಹಚ್ಚಬೇಕು. ನಿಮ್ಮ ತ್ವಚೆಯು ತೇವಾಂಶವನ್ನು ಪಡೆದು ಕಲೆಗಳು ಕಡಿಮೆಯಾಗಿ ತ್ವಚೆ ಹೊಳೆಯುವಂತಾಗುತ್ತದೆ. ಬಹುಪಯೋಗಿ ಕೇಸರಿ, ಗರ್ಭಿಣಿಯರ ಪಾಲಿನ ಸಂಜೀವಿನಿ
ಸನ್ ಸ್ಕ್ರೀನ್ ಅನ್ನು ಬಳಸಿ
ಗರ್ಭಿಣಿಯಾದಾಗ ನಿಮಗೆ ಕೂದಲು ಉದುರುವ ಸಮಸ್ಯೆ ಎದುರಾಗುತ್ತಿದ್ದರೆ ಆಗ ಕೂದಲನ್ನು ಕಟ್ ಮಾಡಿಸಿ ಸಣ್ಣದು ಮಾಡಿ. ಎಲ್ಲಾ ಹೊಸತನ್ನು ಪ್ರಯೋಗಿಸಲು ಇದು ಸರಿಯಾದ ಸಮಯ. ಗರ್ಭಿಣಿಯಾಗಿರುವಾಗ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ತುಂಬಾ ಮುಖ್ಯ. ಇದಕ್ಕಾಗಿ ನೀವು ಯಾವಾಗಲೂ ಸನ್ ಸ್ಕ್ರೀನ್ ಅನ್ನು ಬಳಸಿ.
ಆದಷ್ಟು ಸೋಪ್‌ಗಳಿಂದ ದೂರವಿರಿ
ಗರ್ಭಿಣಿ ಮಹಿಳೆಯರು ಸೋಪ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಬೇಕು, ಸೋಪ್ ನಿಂದ ನಿಮ್ಮ ಚರ್ಮ ಮತ್ತಷ್ಟು ಒಣಗುವುದು ಮತ್ತು ಗುಳ್ಳೆಯಂತಹ. ಕಲೆ ಉಂಟು ಮಾಡಬಹುದು.ಹಾಗಾಗಿ ಸಾಧ್ಯವಾದಷ್ಟು ನೈಸರ್ಗಿಕವಾಗದ ಫೇಸ್ ಪ್ಯಾಕ್ ಗೆ ಪ್ರಾಮುಖ್ಯತೆ ನೀಡಿ.



Click it and Unblock the Notifications
