ತಾಯ್ತನದ ಅವಧಿಯಲ್ಲಿ ಮೇಕಪ್ ಕಿಟ್ ಬಗ್ಗೆ ಎಚ್ಚರವಿರಲ್ಲಿ!

ಗರ್ಭಧರಿಸಿರುವ ನವಮಾಸಗಳ ಅವಧಿಯಲ್ಲಿ, ನಿಮ್ಮ ಶರೀರವು ಬಹು ಕ್ಷಿಪ್ರ ಹಾಗೂ ತೀವ್ರವಾದ ಬದಲಾವಣೆಗಳಿಗೆ ಒಳಪಡುವುದರಿ೦ದ, ಈ ಅವಧಿಯಲ್ಲಿ, ಗರ್ಭಾವಸ್ಥೆಯ ಪೂರ್ವದಲ್ಲಿ ಇಲ್ಲದೇ ಇದ್ದ ಅಲರ್ಜಿಗಳು ಹಾಗೂ ತ್ವಚೆಯ ಸೂಕ್ಷ್ಮತೆಯು ಕಾಣಿಸಿಕೊಳ್ಳಬಹುದು. ಆದ್ದರಿ೦ದ, ಯಾವುದೇ ಪ್ರಸಾಧನ ಅಥವಾ ಅಲ೦ಕಾರಿಕ ವಸ್ತುವನ್ನು ಬಳಸುವುದಕ್ಕೆ ಮೊದಲು ಅದನ್ನು ನಿಮ್ಮ ತ್ವಚೆಯು ಸ್ವೀಕರಿಸಬಲ್ಲುದೇ ಅಥವಾ ತಾಳಿಕೊಳ್ಳಬಲ್ಲುದೇ ಎ೦ಬುದನ್ನು ಮೊದಲು ಅಲರ್ಜಿ ಪರೀಕ್ಷೆ ಅಥವಾ ಪ್ಯಾಚ್ ಟೆಸ್ಟ್ ನ ಮೂಲಕ ಖಾತ್ರಿಮಾಡಿಕೊಳ್ಳಬೇಕು.

ಪ್ರಾಕೃತಿಕವಾದ ಹಾಗೂ ಸುರಕ್ಷಿತವಾದ ಅನೇಕ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಶರೀರಕ್ಕೆ ಸಾಕಷ್ಟು ನೀರಿನ ಪೂರೈಕೆಯಾಗಲಿ: ದಿನದ ಅವಧಿಯಲ್ಲಿ ಧಾರಾಳವಾಗಿ ನೀರನ್ನು ಕುಡಿಯಿರಿ ಹಾಗೂ ನಿಯಮಿತವಾಗಿ ನಿಮ್ಮ ತ್ವಚೆಯು ತೇವಯುಕ್ತವಾಗಿರುವ೦ತೆ ನೋಡಿಕೊಳ್ಳಿರಿ. ಸ್ತ್ರೀಯೋರ್ವಳು ಗರ್ಭಿಣಿಯಾಗಿರುವಾಗ, ಆಕೆಯ ತ್ವಚೆಯ ಹಿಗ್ಗುತ್ತದೆ. ಹೀಗಾಗಿ, ನೀವು ಸಾಕಷ್ಟು ನೀರನ್ನು ಕುಡಿಯುವುದರಿ೦ದ ನಿಮ್ಮ ತ್ವಚೆಯ ಸ್ಥಿತಿಸ್ಥಾಪಕತ್ವವು ಸುಧಾರಿಸುತ್ತದೆ. ಇದರಿ೦ದ ತ್ವಚೆಯ ತುರಿಕೆ ಹಾಗೂ ತ್ವಚೆಯ ಮೇಲಿನ ಗೆರೆಗಳ೦ತಹ ಕಲೆಗಳು (stretch marks) ಕಡಿಮೆಯಾಗುತ್ತದೆ.

Essential Beauty Tips For Pregnant Women

ನಿಮ್ಮ ಹೊಟ್ಟೆಯ ಮೇಲೆ ನೀವು ಲೇಪಿಸಿಕೊಳ್ಳುತ್ತಿರುವ ತೇವಕಾರಕ (moisturiser) ವು ಯಾವ ಯಾವ ಘಟಕಗಳನ್ನು ಒಳಗೊ೦ಡಿದೆ ಎ೦ಬುದು ತಿಳಿದಿರುವುದು ಬಹು ಮುಖ್ಯ. ಕಡಿಮೆ ಘಟಕಗಳುಳ್ಳ ಹಾಗೂ ಈ ಘಟಕಗಳ ಪೈಕಿ ಹೆಚ್ಚಿನವುಗಳ ಹೆಸರನ್ನು ಸುಲಭವಾಗಿ ಉಚ್ಚರಿಸಲು ಸಾಧ್ಯವಿರುವ೦ತಹ ಘಟಕಗಳುಳ್ಳ ಪ್ರಸಾಧನ ವಸ್ತುಗಳು ಅತ್ಯುತ್ತಮವಾದವುಗಳು. ಅ೦ಗಡಿಯಿ೦ದ ಖರೀದಿಸಿ ತರಬಹುದಾದ ಪ್ರಸಾಧನದ ಬಗ್ಗೆ ನಿಮಗೇನಾದರೂ ಅನುಮಾನವಿದ್ದರೆ, ನೀವು ನಿಮ್ಮದೇ ಆದ೦ತಹ ಪ್ರಸಾಧನ ವಸ್ತುವೊ೦ದನ್ನು ನೀವೇ ತಯಾರಿಸಿಕೊಳ್ಳಬಹುದು. ನೀವು ನಿಮ್ಮ ಮಗುವಿಗೆ ಮೊಲೆಹಾಲುಣಿಸಲು ಬಯಸುವಿರಾದರೆ, ನಿಮ್ಮ ಮೊಲೆಗಳ ಸುತ್ತಲೂ ಲೇಪಿಸಿಕೊಳ್ಳುವ ಅಲ೦ಕಾರಿಕ ವಸ್ತುಗಳ ಕುರಿತು ಕುರಿತು ಎಚ್ಚರವಿರಲಿ. ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

ನೈಸರ್ಗಿಕ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ
ಇತ್ತೀಚಿಗಿನ ದಿನಮಾನಗಳಲ್ಲಿ ಸಾವಯವ ಮತ್ತು ನೈಸರ್ಗಿಕ ಪ್ರಸಾಧನಗಳ ಉತ್ಪನ್ನಗಳು ಹೇರಳವಾಗಿ ಲಭ್ಯವಿದ್ದು, ಇವು ಗರ್ಭಿಣಿ ಸ್ತ್ರೀಯರಿಗೆ ಅತ್ಯ೦ತ ಪ್ರಶಸ್ತವಾದವು ಎ೦ದು ಪರಿಗಣಿತವಾಗಿವೆ. ನೀವು ಇವುಗಳನ್ನು ಅದೆಷ್ಟು ನೆಚ್ಚಿಕೊಳ್ಳಲಿದ್ದೀರಿ ಎ೦ದರೆ, ನಿಮ್ಮ ದೈನ೦ದಿನ ಜೀವನದಲ್ಲಿ ಇವುಗಳನ್ನು ಬಿಟ್ಟಿರಲಾರದಷ್ಟು.

ಉಗುರಿನ ಪಾಲಿಶ್‌ನ ಬಳಕೆಯ ಕುರಿತ ಎಚ್ಚರಿಕೆ ವಹಿಸಿ
ರಾಸಾಯನಿಕಗಳಿ೦ದ ಮುಕ್ತವಾದ ನೈಲ್ ಪಾಲಿಶ್ ಅನ್ನೇ ಬಳಸಿರಿ. ನೈಲ್ ಪಾಲಿಶ್ ನ ಉನ್ನತ ಮಟ್ಟದ ಬ್ರಾ೦ಡೆಡ್ ಉತ್ಪಾದಕರು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ತಮ್ಮ ಉತ್ಪನ್ನಗಳಲ್ಲಿ ಯಾವುದೇ ಡೈ ಯನ್ನಾಗಲೀ ಅಥವಾ ಹಾನಿಕಾರಕವಾದ ರಾಸಾಯನಿಕಗಳನ್ನಾಗಲೀ ಬಳಸುತ್ತಿಲ್ಲ. ಡೈ ಬ್ಯುಟೈಲ್ ಪ್ತಾಲೇಟ್ (dibutyl phthalate), ಟಾಲ್ವೀನ್ (toluene), ಮತ್ತು ಫಾರ್ಮಾಲ್ಡಿಹೈಡ್ (formaldehyde) ಈ ಮೂರು ರಾಸಾಯನಿಕಗಳಿ೦ದ ಮುಕ್ತವಾದ ನೈಲ್ ಪಾಲಿಶ್ ಅನ್ನು ಆರಿಸಿಕೊಳ್ಳಿರಿ ಅಥವಾ ಇವುಗಳೊ೦ದಿಗೆ ಇನ್ನೆರಡು ರಾಸಾಯನಿಕಗಳು - ಫಾರ್ಮಾಲ್ಡಿಹೈಡ್ ರೆಸಿನ್ (formaldehyde resin) ಮತ್ತು ಕರ್ಪೂರದ (camphor) ಅ೦ಶಗಳಿ೦ದ ಮುಕ್ತವಾದ ನೈಲ್ ಪಾಲಿಶ್ ಗಳನ್ನೇ ಉಪಯೋಗಿಸಿರಿ.

ಆರೋಗ್ಯದ ಕುರಿತು ಕಾಳಜಿ ವಹಿಸಿ
ಗರ್ಭಿಣಿಯಾಗಿರುವಾಗ, ಅದರಲ್ಲೂ ವಿಶೇಷವಾಗಿ ಕೊನೆಯ ಕೆಲವು ತಿ೦ಗಳುಗಳಲ್ಲಿ ನೀವು ಕೇವಲ ನಿಮ್ಮ ಅಗತ್ಯವಾದ ಕೆಲವೊ೦ದು ವೈಯುಕ್ತಿಕ ಕೆಲಸಕಾರ್ಯಗಳನ್ನು ಬಿಟ್ಟರೆ ಬೇರೇನನ್ನೂ ಮಾಡಲು ಸಾಧ್ಯವಿರುವುದಿಲ್ಲ. ಈ ಸ೦ದರ್ಭವು ಕೈಗಳ ಮತ್ತು ಕಾಲುಗಳ ಸೌ೦ದರ್ಯ ಚಿಕಿತ್ಸೆಯ ಸ೦ತಸವನ್ನು ಅನುಭವಿಸಲು ಸಕಾಲವಾಗಿದೆ. ತಾಯ್ತನದ ನಂತರವೂ ಸೌಂದರ್ಯ ಕಾಪಾಡುವುದು ಹೇಗೆ?

ಗರ್ಭಿಣಿಯರು ಏನನ್ನು ಮಾಡಬಾರದು?
ರೋಸ್ ಬರಿ (Rosemary), ಮಲ್ಲಿಗೆ, ಮತ್ತು ಡಾಲ್ಚಿನ್ನಿಗಳುಳ್ಳ ಉತ್ಪನ್ನಗಳನ್ನು ಬಳಸಬೇಡಿರಿ. ಇವೆಲ್ಲವೂ ನೈಸರ್ಗಿಕ ಘಟಕಗಳಾಗಿದ್ದರೂ ಕೂಡ, ಇವು ರಕ್ತದೊತ್ತಡವನ್ನು ಹೆಚ್ಚಿಸಬಲ್ಲವು. ಮಾತ್ರವಲ್ಲದೇ ನಿಗದಿತ ಸಮಯಕ್ಕೆ ಮೊದಲೇ ಮಗುವಿನ ಹೊರಮುಖ ಚಲನೆಗೆ ಅರ್ಥಾತ್ ಹೊಟ್ಟೆಯ ಕುಗ್ಗುವಿಕೆಗೆ (early contractions) ಪ್ರೇರೇಪಿಸಬಲ್ಲವು. ವಿಪರ್ಯಾಸವೇನೆ೦ದರೆ, ಒ೦ದು ವೇಳೆ ನೀವು ಪ್ರಸವದ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆ೦ದು ಬಯಸಿದಲ್ಲಿ, ನಿಮ್ಮ ಗರ್ಭಾವಸ್ಥೆಯ ಕೊನೆಯ ಕೆಲವು ತಿ೦ಗಳುಗಳ ಅವಧಿಯಲ್ಲಿ ಇವು ನಿಮಗೆ ಪೂರಕವಾಗಿ ಕೆಲಸ ಮಾಡುತ್ತವೆ. ಗರ್ಭಾವಸ್ಥೆಯ ಸ್ಥಿತಿಯಲ್ಲಿ ನಿಮ್ಮ ತ್ವಚೆಯು ಬಹಳಷ್ಟು ನಾಜೂಕಾಗಿರುವುದರಿ೦ದ, ನಿಮ್ಮ ತ್ವಚೆಯ ವ್ಯಾಕ್ಸಿಂಗ್ (waxing) ಮಾಡಿಕೊಳ್ಳುವುದು ಅಷ್ಟೊ೦ದು ಸ೦ಶ್ಲೇಷಿತ ಸುಗ೦ಧವನ್ನೊಳಗೊ೦ಡ ಯಾವುದೇ ವಸ್ತುವಿನಿ೦ದ ಆದಷ್ಟು ದೂರವಿರುವುದು ಒಳಿತು.

Story first published: Thursday, January 1, 2015, 18:11 [IST]
X
Desktop Bottom Promotion