ಸಂತಾನ ಭಾಗ್ಯ ಕರುಣಿಸುವ ಅಮೃತದಂತಹ ಆಹಾರ

By Super

ತಾಯಿಯಾಗುವುದು ಪ್ರತಿಯೊಂದು ಹೆಣ್ಣಿನ ಕನಸಾಗಿದೆ. ವಿವಾಹವಾದ ಬಳಿಕ ಆದಷ್ಟು ಶೀಘ್ರ ಮಗುವೊಂದನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಆದರೆ ಕಾರಣಾಂತರಗಳಿಂದ ಎಲ್ಲರಲ್ಲೂ ಈ ಬಯಕೆ ಈಡೇರುವುದಿಲ್ಲ. ಸಾಮಾನ್ಯವಾಗಿ ದೇಹದಲ್ಲಿ ಹಾರ್ಮೋನುಗಳ ಸ್ರವಿಕೆಯಲ್ಲಿ ಏರುಪೇರು, ಸಾಕಷ್ಟು ಪೌಷ್ಟಿಕ ಆಹಾರವಿಲ್ಲದಿರುವುದು, ಋತುಚಕ್ರದಲ್ಲಿ ಏರುಪೇರು, ಗರ್ಭನಾಳದಲ್ಲಿ ಸೋಂಕು ಮೊದಲಾದ ಹಲವು ತೊಂದರೆಗಳು ಕೂಡ ಇದಕ್ಕೆ ಕಾರಣವಾಗಬಹುದು.

ಹಾಗಾಗಿ ಇಂತಹ ಸಮಸ್ಯೆಯಿಂದ ಹೊರಬರಲು ಸಾಕಷ್ಟು ಆಹಾರಗಳಿವೆ, ಇವು ಖಂಡಡಿತವಾಗಿಯೂ ಹೆಣ್ಣಿಗೆ ಸಂತಾನಭಾಗ್ಯ ಕರುಣಿಸುತ್ತದೆ ಎಂದು ವೈಜ್ಞಾನಿಕವಾಗಿ ರುಜುವಾತುಗೊಂಡಿದೆ. ಗರ್ಭಧಾರಣೆ ಹಾಗೂ ಆಹಾರ ಕ್ರಮ ಇವುಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಸಮತೋಲಿತ ಆಹಾರ ತೆಗೆದುಕೊಳ್ಳುವುದರಿಂದ ಗರ್ಭಧಾರಣೆಯ ಅವಕಾಶ ಅಧಿಕವಾಗುತ್ತದೆ ಎನ್ನಲಾಗಿದೆ. ಹಣ್ಣು, ತರಕಾರಿ, ಬೇಳೆಕಾಳುಗಳು ಮತ್ತು ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳನ್ನು ಪ್ರತಿದಿನ ಸೇವಿಸುವುದು ಗರ್ಭಧಾರಣೆಗೆ ಸುಲಭವಾಗುತ್ತದೆ.

ಆರೋಗ್ಯಕರ ವೀರ್ಯವನ್ನು ಹೊಂದಲು ವಿಟಮಿನ್ ಮತ್ತು ಖನಿಜಾಂಶಗಳಾದ ಇ, ಮತ್ತು ಸಿ, ಸತು ಮತ್ತು ಫೋಲಿಕ್ ಆಸಿಡ್‌ನ ಅವಶ್ಯಕತೆ ಇರುತ್ತದೆ. ಹಾಗೆಯೇ ಮಹಿಳೆಯು ನಿರಂತರವಾದ ಋತುಸ್ರಾವ ಹೊಂದುವುದು ಕೂಡ ಅಷ್ಟೇ ಮುಖ್ಯ. ಸರಿಯಾದ ಪೋಷಕಾಂಶಗಳು ದೊರೆಯದಿದ್ದಲ್ಲಿ ಋತುಸ್ರಾವದಲ್ಲಿ ಏರುಪೇರು ಕಂಡು ಬರುತ್ತದೆ. ಹಾಗೆಯೇ ಅಧಿಕ ತೂಕ ಅಥವಾ ಕಡಿಮೆ ತೂಕ ಕೂಡ ಅಂಡಾಣುವಿನ ಉತ್ಪತ್ತಿಯಲ್ಲಿ ಏರುಪೇರಾಗಲು ಕಾರಣವಾಗುತ್ತದೆ. ಇವೆಲ್ಲವುಗಳನ್ನು ಪರಿಗಣಿಸಿ ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವುದರಿಂದ ಆದಷ್ಟು ಬೇಗ ಗರ್ಭಧಾರಣೆಯಾಗಲು ಸಹಾಯವಾಗಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಬೀನ್ಸ್

5 Best Foods To Conceive

ಫಲವತ್ತತೆಯನ್ನು ಹೆಚ್ಚಿಸುವ ತರಕಾರಿಗಳಲ್ಲಿ ಬೀನ್ಸ್ ಮುಖ್ಯವಾದುದು. ಪ್ರಾಣಿಗಳ ಪೋಷಕಾಂಶ ಹೆಚ್ಚು ಬಳಸುವುದರಿಂದ ಗರ್ಭಿಣಿಯಾಗುವ ಸಂಭವ ಕಡಿಮೆಯಾಗುತ್ತದೆ, ಹಾಗೆಯೇ ಸೊಪ್ಪು ತರಕಾರಿಗಳ ಅಧಿಕ ಬಳಕೆಯಿಂದ ಗರ್ಭಧಾರಣೆಯ ಸಂಭವ ಹೆಚ್ಚಾಗುತ್ತದೆ. ಕಾಳುಗಳು ಮತ್ತು ಟೋಫು ಬಳಕೆಯಿಂದ ಕೂಡ ಗರ್ಭಧಾರಣೆ ಸಂಭವ ಹೆಚ್ಚಬಹುದು.

ಬೆಳ್ಳುಳ್ಳಿ


ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಂ ಎಂಬ ಖನಿಜ ಫಲಿತವಾಗಿದ್ದ ಅಂಡಾಣು ಸುಲಭವಾಗಿ ದೇಹದಿಂದ ಹೊರಹೋಗದಂತೆ ತಡೆಯುತ್ತದೆ. ಇದರಿಂದಾಗಿ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಫಲವತ್ತತೆಯ ನಿಟ್ಟಿನಲ್ಲಿ ಬೆಳ್ಳುಳ್ಳಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ತರಕಾರಿಗಳು


ಗಾಢ ಹಸಿರು ಬಣ್ಣದ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣ ಇರುವುದರಿಂದ ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಈ ಪೋಷಕಾಂಶಗಳು ಗರ್ಭಾಶಯದ ಒಳಭಾಗದ ಪದರವನ್ನು ಬಲಪಡಿಸುತ್ತದೆ. ವಿಶೇಷವಾಗಿ ಕಬ್ಬಿಣ ಅಂಡವನ್ನು ಗರ್ಭಾಶಯದಲ್ಲಿ ಅಂಟಿಕೊಂಡಿರಲು ಸಹಕರಿಸುತ್ತದೆ. ಬಸಲೆ, ಪಾಲಕ್ ಮೊದಲಾದ ಸೊಪ್ಪುಗಳು ಉತ್ತಮವಾಗಿವೆ.

ಕುಂಬಳ ಬೀಜಗಳು


ಕುಂಬಳಕಾಯಿಯ ಬೀಜಗಳನ್ನು ಚೆನ್ನಾಗಿ ಒಣಗಿಸಿ ಸೇವಿಸುವ ಮೂಲಕ ಮಹಿಳೆಯರ ಸಂತಾನೋತ್ಪತ್ತಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತವೆ. ಹೆಚ್ಚಿನ ಪ್ರಮಾಣದ ಸತು ಜೀವಕೋಶಗಳ ಉತ್ಪತ್ತಿಯಲ್ಲಿ ಸಹಕರಿಸಿ ಜೀವಾಂಕುರಕ್ಕೆ ನೆರವಾಗುತ್ತವೆ.

ಸಿಟ್ರಸ್ ಆಮ್ಲ ಹೆಚ್ಚಿರುವ ಹಣ್ಣುಗಳು


ಗರ್ಭವತಿಯಾಗಬಯಸುವ ಮಹಿಳೆಯರಿಗೆ ಹೆಚ್ಚಿನ ವಿಟಮಿನ್ ಸಿ. ಅಗತ್ಯವಿದೆ. ಗರ್ಭಾಶಯದಿಂದ ಅಂಡಾಣು ಬಿಡುಗಡೆಗೊಳ್ಳಲು ವಿಟಮಿನ್ ಸಿ ಅಗತ್ಯವಾಗಿದೆ. ವಿಟಮಿನ್ ಸಿ. ಹೆಚ್ಚಿರುವ ಮೂಸಂಬಿ, ಲಿಂಬೆ, ಕಿತ್ತಳೆ, ಕಿವಿ ಮೊದಲಾದ ಹಣ್ಣುಗಳು ಫಲಕಾರಿಯಾಗಿವೆ.

X
Desktop Bottom Promotion