Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಪ್ಲಾಸೆಂಟಾ ಗರ್ಭದಲ್ಲಿರುವ ಮಗುವನ್ನು 12 ರೀತಿಯಲ್ಲಿ ರಕ್ಷಣೆ ಮಾಡೋದು ಹೇಗೆ?
ತಾಯ್ತನವೆಂಬುವುದು ಮಹಿಳೆಯರಿಗೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ. ಗರ್ಭಿಣೆಯಾದಾಗ ಆ ತಾಯಿ ಎಷ್ಟು ಖುಷಿ ಪಡುತ್ತಾಳೆ ಎಂದರೆ ಆಕೆಯ ಖುಷಿಗೆ ಪಾರವೇ ಇರೋದಿಲ್ಲ. ಒಂಬತ್ತು ತಿಂಗಳು ಮಗುವನ್ನು ಹೊತ್ತು, ಹೆತ್ತು ಸಾಕಿ ಸಲಹುವವಳೇ ತಾಯಿ.

ಗರ್ಭದೊಳಗೆ ಬೆಳೆಯುತ್ತಿರುವ ಶಿಶುವಿನ ಕಲ್ಪನೆಯೇ ತಾಯಿಯಾಗುತ್ತಿರುವವಳಿಗೆ ಒಂದು ಸುಂದರ ಅನುಭವ. ಶಿಶು ಕೊಂಚ ಮಿಸುಕಾಡಿದರೂ ಆಗುವ ಅನುಭವ ಅನನ್ಯ. ಆದರೆ ಗರ್ಭದೊಳಗೆ ಈ ಶಿಶುವಿಗೆ ಆಹಾರ ನೀಡುವ ಅಂಗ ಯಾವುದು? ಅದುವೇ ಜರಾಯು(ಪ್ಲಾಸೆಂಟಾ) ಅಥವಾ ಮಾಸು. ಅಂಡಾಣು ಫಲಿತವಾದ ಕ್ಷಣದಿಂದಲೇ ಮೊತ್ತ ಮೊದಲಾಗಿ ಬೆಳೆಯುವ ಅಂಗವೆಂದರೆ ಮಾಸು.
ಶಿಶು ಪೂರ್ಣವಾಗಿ ಬೆಳೆಯುವವರೆಗೂ ಕರುಳುಬಳ್ಳಿಯ ಮೂಲಕ ತಾಯಿಯ ಶರೀರದಿಂದ ಪೋಷಕಾಂಶಗಳನ್ನು ಪಡೆದು ತ್ಯಾಜ್ಯಗಳನ್ನು ಹೊರಹಾಕುವ ಕಾರ್ಯ ಜರಾಯುದ್ದಾಗಿದೆ. ಬನ್ನಿ ಇದರ ಕುರಿತು ಮತ್ತಷ್ಟು ಮಾಹಿತಿಗಳನ್ನು ಅರಿಯೋಣ..

ಅಂಡಾಣು ಫಲಿತವಾದ ಬಳಿಕ ಜರಾಯು ಉತ್ಪತ್ತಿಯಾಗುತ್ತದೆ
ಅಂಡಾಣು ಮತ್ತು ವೀರ್ಯಾಣುಗಳು ಸಂಯೋಗಗೊಂಡ ಬಳಿಕ ಫಲಿತವಾಗುವ ಅಂಡ ಮೊತ್ತ ಮೊದಲಾಗಿ ಈ ಮೆತ್ತೆಯನ್ನು ತಯಾರಿಸುತ್ತದೆ. ಫಲಿತವಾದ ಅಂಡಾಣು ಗರ್ಭಕೋಶದ ಒಳಗೋಡೆಯಲ್ಲಿ ಅಂಟಿಕೊಳ್ಳುತ್ತದೆ. ಬಳಿಕ ನಡೆಯುವ ಬೆಳವಣಿಗೆಯಲ್ಲಿ ಗರ್ಭಕೋಶಕ್ಕೆ ಅಂಟಿಕೊಂಡ ಭಾಗ ಜರಾಯುವಾಗಿ ಮಾರ್ಪಾಡುತ್ತದೆ ಮತ್ತು ಅಂಟಿಕೊಳ್ಳದ ಭಾಗ ಶಿಶುವಾಗಿ ಬೆಳೆಯುತ್ತದೆ.

ಜರಾಯುವಿಗೂ ಶಿಶುವಿನಷ್ಟೇ ಆರೈಕೆ ಅಗತ್ಯ
ಮಗುವಿನೊಂದಿಗೆ ಈ ಜರಾಯುವೂ ಬೆಳೆಯುವುದರಿಂದ ಶಿಶುವಿಗೆ ಅಗತ್ಯವಿರುವಷ್ಟೇ ಪೌಷ್ಠಿಕಾಂಶಗಳು ಮತ್ತು ಆರೈಕೆ ಅಗತ್ಯವಿದೆ. ಇದಕ್ಕಾಗಿ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಮದ್ಯಪಾನ ಮೊದಲಾದ ಕೆಟ್ಟ ಅಭ್ಯಾಸಗಳಿಂದ ದೂರವಿರುವುದು, ಧೂಮಪಾನ ಮಾಡುವುದು ಅಥವಾ ಇತರರೂ ಧೂಮಪಾನ ಮಾಡದಂತೆ ನೋಡಿಕೊಳ್ಳುವುದು, ಕೊಬ್ಬು ಹೆಚ್ಚಿಸುವ ಆಹಾರಗಳನ್ನು ಸೇವಿಸದೇ ಇರುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

ಜರಾಯುವಿನಲ್ಲೂ ಶಿಶುವಿನದ್ದೇ ವಂಶವಾಹಿ ಕಣಗಳಿವೆ
ಜರಾಯು ಮತ್ತು ಶಿಶು ಜೊತೆಜೊತೆಯಾಗಿ ಬೆಳೆಯುವುದರಿಂದ ಜರಾಯುವಿನ ಜೀವಕೋಶಗಳೂ ಶಿಶುವಿನ ವಂಶವಾಹಿನಿಯನ್ನೇ ಯಥಾವತ್ತಾಗಿ ಹೋಲುತ್ತದೆ. ಇದು ವೈದ್ಯವಿಜ್ಞಾನಕ್ಕೊಂದು ಶುಭಸುದ್ದಿ. ಏಕೆಂದರೆ ಮಗುವಿನ ವಂಶವಾಹಿಯಲ್ಲಿ ಯಾವ ತೊಂದರೆ ಇದೆ, ಇದಕ್ಕಾಗಿ ಯಾವ ಚಿಕಿತ್ಸೆ ನೀಡಬೇಕು ಎಂಬುದನ್ನು ನಿರ್ಧರಿಸಲು ಶಿಶುವಿನ ಜೀವಕೋಶಗಳ ಅಗತ್ಯವಿಲ್ಲ, ಈ ಜರಾಯುವಿನ ಜೀವಕೋಶಗಳನ್ನೇ ಅಧ್ಯಯನ ಮಾಡಿ ಸೂಕ್ತ ನಿರ್ಣಯಕ್ಕೆ ಬರಬಹುದು.

ಶಿಶು ಗರ್ಭದೊಳಕ್ಕೆ ಜೀವಂತವಾಗಿರಲು ಈ ಜರಾಯು ಅಗತ್ಯ
ಸಾಮಾನ್ಯವಾಗಿ ಮಾನವ ದೇಹ ಪರಕೀಯ ವಸ್ತುಗಳನ್ನಾಗಲೀ ಅಂಗಗಳನ್ನಾಗಲೀ ಅಷ್ಟು ಸುಲಭವಾಗಿ ಸ್ವೀಕರಿಸುವುದಿಲ್ಲ. ಇದೇ ಕಾರಣಕ್ಕೆ ಮೂತ್ರಪಿಂಡ ದಾನಿಗಳನ್ನು ಹುಡುಕುವಾಗ ರಕ್ತಸಂಬಂಧಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಗರ್ಭದೊಳಕ್ಕೆ ಬೆಳೆಯುತ್ತಿರುವ ಶಿಶುವನ್ನು ದೇಹ ಪರಕೀಯವೆಂದು ಪರಿಗಣಿಸುವುದಿಲ್ಲ. ಏಕೆಂದರೆ ಈ ಜರಾಯು ಮಗು ಮತ್ತು ಗರ್ಭಾಶಯದ ಒಳಗೋಡೆಯ ನಡುವಣ ಮೆತ್ತೆಯಂತಿದ್ದು ಮಗುವಿಗೆ ಪ್ರತಿಜೀವಕಗಳನ್ನು(antibody) ನೀಡುತ್ತಾ ಸೋಂಕಿನಿಂದ ರಕ್ಷಿಸುತ್ತಾ ಇರುತ್ತದೆ. ಇದೇ ಕಾರಣದಿಂದ ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ.

ಗರ್ಭನಿಂತ ಬಳಿಕ ಇನ್ನಷ್ಟು ಅಂಡಾಣುಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೆ
ಮಹಿಳೆಯರಲ್ಲಿ ಪ್ರತಿ ತಿಂಗಳೂ ಒಂದೊಂದು ಅಂಡಾಣು ಬಿಡುಗಡೆಯಾಗುತ್ತದೆ. ಒಮ್ಮೆ ಈ ಅಂಡ ಫಲಿತಗೊಂಡಿತೋ ಮುಂದಿನ ಒಂಭತ್ತು ತಿಂಗಳವರೆಗೆ (ಅಥವಾ ಹತ್ತು ತಿಂಗಳವರೆಗೆ) ಅಂಡಾಣು ಬಿಡುಗಡೆಯಾಗಬಾರದು, ಈ ಕಾರ್ಯವನ್ನು ಸಹಾ ಈ ಜರಾಯುವೇ ನಿರ್ವಹಿಸುತ್ತದೆ. ಗರ್ಭ ಕಟ್ಟಿದ ಬಳಿಕ hCG ಎಂಬ ರಸದೂತವನ್ನು ಸ್ರವಿಸಿ ಮಹಿಳೆಯರ ದೇಹಕ್ಕೆ ವಿಶಿಷ್ಟವಾದ ಹಾರ್ಮೋನುಗಳಾದ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜನ್ ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮುಂದಿನ ಅಂಡಾಣುಗಳ ಬಿಡುಗಡೆ ಹೆರಿಗೆಯ ಬಳಿಕ ಎಂಬ ಸಂದೇಶ ರವಾನೆಯಾಗುತ್ತದೆ. ಇತ್ತ ಗರ್ಭದೊಳಗಿನ ಶಿಶು ಯಾವುದೇ ತೊಂದರೆ ಇಲ್ಲದೇ ತನ್ನ ಸಹಜ ಬೆಳವಣಿಗೆ ಪಡೆಯುತ್ತಾ ಹೋಗುತ್ತದೆ.

ತಾಯಿ ಹಾಲು ಉತ್ಪತ್ತಿಯಾಗಲು ನೆರವಾಗುತ್ತದೆ
ತಿಂಗಳು ತುಂಬುತ್ತಾ ಹೋದಂತೆ ತಾಯಿಯ ಸ್ತನಗಳಲ್ಲಿ ಮಗುವಿಗಾಗಿ ಹಾಲು ತುಂಬಿಕೊಳ್ಳುತ್ತಾ ಹೋಗಬೇಕು. ಇದಕ್ಕಾಗಿ HPL-human placental lactogen ಎಂಬ ರಸದೂತವನ್ನು ಈ ಜರಾಯು ಸ್ರವಿಸುತ್ತದೆ. ಪರಿಣಾಮವಾಗಿ ಸ್ತನಗಳಲ್ಲಿ ತಾಯಿಹಾಲು ಉತ್ಪಾದನೆ ಪ್ರಾರಂಭವಾಗುತ್ತದೆ. ಹೆರಿಗೆಯ ದಿನ ಹತ್ತಿರಾದಂತೆ ಈ ಪ್ರಮಾಣ ಗರಿಷ್ಟ ಮಟ್ಟ ಮುಟ್ಟುತ್ತದೆ. ಹೆರಿಗೆಯ ಬಳಿಕ ತಾಯಿಹಾಲನ್ನೇ ಮೊತ್ತ ಮೊದಲ ಆಹಾರವನ್ನಾಗಿ ಕುಡಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗಿದೆ.

ಪ್ರತಿ ಗರ್ಭದ ಜರಾಯು ಬೇರೆ ಬೇರೆ ತರಹದ್ದಾಗಿವೆ
ಹುಟ್ಟಿದ ಪ್ರತಿ ಮಗುವೂ ಕೊಂಚ ಬೇರೆಬೇರೆಯಾಗಿರುವಂತೆಯೇ ಈ ಜರಾಯು ಸಹಾ ಭಿನ್ನ ರೂಪದಲ್ಲಿರುತ್ತದೆ. ಆದರೆ ಗರ್ಭಾಶಯದ ಒಳಭಾಗದಲ್ಲಿ ಎಲ್ಲಿ ಈ ಜರಾಯು ಅಂಟಿಕೊಂಡಿದೆ ಮತ್ತು ಯಾವ ಗಾತ್ರದಲ್ಲಿದೆ ಎಂಬ ಮಾಹಿತಿಯ ಮೇರೆಗೆ ಹೆರಿಗೆ ಸ್ವಾಭಾವಿಕವೇ ಅಥವಾ ಸಿಸೇರಿನ್ ಅಥವಾ ಸಿ ಸೆಕ್ಷನ್ ಮಾಡಬೇಕಾಗಿ ಬರಬಹುದೇ ಎಂಬುದನ್ನು ನಿರ್ಧರಿಸುತ್ತದೆ. ಒಂದು ವೇಳೆ ಈ ಸ್ಥಾನ ಹಿಂಭಾಗದಲ್ಲಿದ್ದು ಶಿಶುವನ್ನು ಹೊರದೂಡಲು ಅನುಕೂಲವಾಗುವಂತಿದ್ದರೆ (posterior placenta) ಹೆರಿಗೆ ಸುಲಭವಾಗುತ್ತದೆ. ಒಂದು ವೇಳೆ ಇದಕ್ಕೆ ವಿರುದ್ಧ ದಿಕ್ಕಿನಲ್ಲಿದ್ದರೆ (anterior placenta) ಹೆರಿಗೆ ಸವಾಲಾಗುತ್ತದೆ. ಪ್ರಸೂತಿ ತಜ್ಞರು ಈ ಬಗ್ಗೆ ಸೂಕ್ತ ಪರೀಕ್ಷೆಗಳನ್ನು ನಡೆಸಿ ಯಾವ ಕ್ರಮ ಉತ್ತಮ ಎಂದು ನಿರ್ಧರಿಸುತ್ತಾರೆ.

ನಿಮ್ಮ ಮತ್ತು ಮಗುವಿನ ನಡುವಣ ಸೇತುವೆಯಾಗಿದೆ
ಹೆರಿಗೆಯಾಗುವವರೆಗೂ ಗರ್ಭದೊಳಗಣ ಶಿಶುವಿಗೆ ಆಹಾರ ಮತ್ತು ಪೋಷಕಾಂಶಗಳನ್ನು ಉಣಿಸುವ ಮತ್ತು ತ್ಯಾಜ್ಯಗಳನ್ನು ಹೊರಹಾಕುವ ಕೆಲಸವನ್ನು ಸತತವಾಗಿ ನಿರ್ವಹಿಸುವ ಮೂಲಕ ಈ ಜರಾಯು ನಿಮ್ಮ ಮತ್ತು ನಿಮ್ಮ ಮಗುವಿನ ನಡುವಣ ಸೇತುವೆಯಾಗಿದೆ. ಕರುಳುಬಳ್ಳಿಯ ಮೂಲಕ ನಿಮ್ಮದೇ ರಕ್ತವನ್ನೂ ಮಗುವಿನ ಶರೀರದೊಳಕ್ಕೆ ಕಳುಹಿಸುತ್ತಾ ಜೀವಾಂಕುರಕ್ಕೆ ನೆರವಾಗುತ್ತದೆ.

ಹೆರಿಗೆಯ ಬಳಿಕ ಈ ಅಂಗ ನಿಷ್ಪಲವಾಗುತ್ತದೆ
ಮಗುವಿನೊಂದಿಗೇ ಬೆಳೆದು ಹೆರಿಗೆಯಾಗುವವರೆಗೂ ಜೊತೆಯಲ್ಲಿಯೇ ಇದ್ದ ಈ ಅಂಗ ಹೆರಿಗೆಯ ಬಳಿಕ ದೇಹದಿಂದ ಹೊರಬಂದು ನಿಷ್ಫಲವಾಗುತ್ತದೆ. ಎಲ್ಲಾ ಸಸ್ತನಿಗಳಲ್ಲಿ ಈ ಪ್ರಕ್ರಿಯೆ ಸಾಮಾನ್ಯ. ಮುಂದಿನ ಹೆರಿಗೆಗೆ ಇನ್ನೊಂದು ಹೊಸದಾದ ಜರಾಯು ತಯಾರಾಗುತ್ತದೆ.

ಹಲವು ಸಸ್ತನಿಗಳು ಈ ಮಾಸನ್ನು ಸೇವಿಸುತ್ತವೆ
ಹಲವು ವನ್ಯ ಸಸ್ತನಿಗಳು ಹೆರಿಗೆಯ ಬಳಿಕ ಈ ಮಾಸನ್ನು ಸೇವಿಸುವುದನ್ನು ಗಮನಿಸಿದ ತಜ್ಞರು ಇದೊಂದು ಸೇವಿಸಬಹುದಾದ ಅಂಗ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ವಿಶ್ವದ ಕೆಲವು ಜನಾಂಗಗಳಲ್ಲಿ ಈ ಭಾಗವನ್ನು ಬಳಿಕ ಬಾಣಂತಿಯರಿಗೆ ತಿನ್ನಿಸುವ ಪದ್ದತಿ ಇದೆ. ಇದರಿಂದ ಹೆರಿಗೆಯ ಬಳಿಕ ತಾಯಿ ಅನುಭವಿಸುವ ಮಾನಸಿಕ ದುಗುಡ ಮತ್ತು ನಿಃಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಆದರೆ ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಇದರ ಸೇವನೆ ಸಲ್ಲದು ಎಂದು ಹೆಚ್ಚಿನ ಪ್ರಸೂತಿತಜ್ಞರು ಮತ್ತು ವೈದ್ಯರು ಅಭಿಪ್ರಾಯಪಡುತ್ತಾರೆ.

ಜರಾಯು ಮಗುವಿನ ಜನನದ ಬಳಿಕವೇ ಹೊರಬರುತ್ತದೆ
ಮಗುವಿನ ಜನನದ ಬಳಿಕ ಪ್ರಸೂತಿ ತಜ್ಞರು ಜರಾಯು ಹೊರಬರುವುದನ್ನೇ ನಿರೀಕ್ಷಿಸುತ್ತಾರೆ. ಮಗುವಿನ ಜನನದ ಬಳಿಕವೂ ಇನ್ನೊಂದು ಮಗುವೇ ಹೊರಬರುತ್ತಿರುವ ಅನುಭವ ತಾಯಿಗಾಗುತ್ತದೆ. ಒಂದು ವೇಳೆ ಜರಾಯು ಹೊರಬರದೇ ಇದ್ದರೆ ತಾಯಿಯ ಆರೋಗ್ಯ ಕೆಡಬಹುದು. ಆದ್ದರಿಂದ ಮಗುವಿನ ಜನನದ ಬಳಿಕ ಜರಾಯುವೂ ಹೊರಬರುವುದು ಅಗತ್ಯ. ಸ್ಥಳೀಯರು ಇದನ್ನು ಕಸ ಹಾಕುವುದು ಎಂದು ಕರೆಯುತ್ತಾರೆ.

ಜರಾಯು ಹೊರಬಂದ ಕೆಲ ನಿಮಿಷಗಳವರೆಗೂ ಜೀವಂತವಾಗಿರುತ್ತದೆ
ಮಗುವಿನ ಜನನದ ಬಳಿಕ ಹೊರಬರುವ ಮಾಸು ಕೆಲವು ನಿಮಿಷಗಳವರೆಗೆ ಜೀವಂತವಾಗಿರುತ್ತದೆ. ಕರುಳುಬಳ್ಳಿಯ ಮೂಲಕ ತನ್ನಲ್ಲಿರುವ ಪೋಷಕಾಂಶಗಳನ್ನು ಅಂತಿಮವಾಗಿ ಮಗುವಿಗೆ ವರ್ಗಾಯಿಸಿ ಕೊನೆಯುಸೆರೆಳೆಯುತ್ತದೆ. ಕರುಳುಬಳ್ಳಿ ಕತ್ತರಿಸಿದ ಬಳಿಕ ಜರಾಯುವಿನ ಕೆಲಸ ಸಂಪನ್ನಗೊಳ್ಳುತ್ತದೆ. ಬಳಿಕ ಇದು ಕಸ ಅಥವಾ ವೈದ್ಯಕೀಯ ಕಸ ಎಂದು ಕರೆಯಲ್ಪಡುತ್ತದೆ.



Click it and Unblock the Notifications











