Latest Updates
-
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ
ಗರ್ಭಿಣಿಯರು ವ್ಯಾಯಾಮದ ಮೂಲಕ ಪಡೆಯಬಹುದಾದ ಪ್ರಯೋಜನಗಳೇನು?
ಹಿಂದಿನ ಸಿನೆಮಾಗಳಲ್ಲಿ ನಾಯಕಿ ತಾನು ಗರ್ಭಿಣಿ ಎಂದು ತನ್ನ ಪತಿಗೆ ತಿಳಿಸುತ್ತಿದ್ದುದೇ ಮೂರು ತಿಂಗಳ ನಂತರ! ವಾಸ್ತವವಾಗಿ ಮೊದಲ ತಿಂಗಳಲ್ಲಿಯೇ ಗರ್ಭ ಧರಿಸಿರುವ ಬಗ್ಗೆ ಅನುಮಾನವಿರುತ್ತದೆ. ಇಂದು ಎರಡನೇ ತಿಂಗಳಲ್ಲಿಯೇ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದಾದ ಸಾಧನದ ಮೂಲಕ ಪರೀಕ್ಷಿಸಿ ಪ್ರಮಾಣಿಸಿಕೊಳ್ಳಬಹುದು. ಆದರೆ ಮೈತುಂಬಿಕೊಳ್ಳಲು ಪ್ರಾರಂಭವಾಗುವುದು ಮೂರನೆಯ ತಿಂಗಳ ಬಳಿಕವೇ.
ಇಂದಿನ ದಿನಗಳಲ್ಲಿ ಯುವತಿಯರು ತಮ್ಮ ಮೈಕಟ್ಟು ಮತ್ತು ಅಂಗಸೌಷ್ಠವವನ್ನು ಯಥಾವತ್ತಾಗಿ ಉಳಿಸಿಕೊಳ್ಳುವತ್ತ ಒಲವು ತೋರುತ್ತಿದ್ದಾರೆ. ಗರ್ಭಿಣಿಯಾದ ಬಳಿಕ ದೇಹ ಒಡಲೊಳಗೆ ಬೆಳೆಯುತ್ತಿರುವ ಕಂದನಿಗಾಗಿ ಹಲವು ಮಾರ್ಪಾಡುಗಳನ್ನು ಮಾಡುತ್ತದೆ. ಹಲವಾರು ಹಾರ್ಮೋನುಗಳು ಸ್ರವಿಸಿ ಈ ಕಾರ್ಯಕ್ಕೆ ನೆರವಾಗುತ್ತದೆ. ಪರಿಣಾಮವಾಗಿ ಹೊಟ್ಟೆಯೊಂದಿಗೇ ದೇಹದ ಇನ್ನಿತರ ಭಾಗಗಳೂ ಸ್ಥೂಲವಾಗುತ್ತಾ ಹೋಗುತ್ತವೆ.
ಮೂರನೆಯ ತಿಂಗಳ ಬಳಿಕ ಹುಳಿ ತಿನ್ನುವ ಬಯಕೆಯಿಂದಾಗಿ (ಅದನ್ನು ಪೂರೈಸಲು ಮನೆಯವರೆಲ್ಲರೂ ಟೊಂಕಕಟ್ಟಿ ನಿಲ್ಲುವ ಕಾರಣ) ಅಗತ್ಯವಾದುಕ್ಕಿಂತಲೂ ಹೆಚ್ಚು ಆಹಾರ, ಮತ್ತು ಕೊಬ್ಬು ದೇಹಕ್ಕೆ ಸೇರ್ಪಡೆಯಾಗಿ ಸ್ಥೂಲಕಾಯ ಮತ್ತು ತೂಕ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಇವೆಲ್ಲವನ್ನು ನಿಯಂತ್ರಿಸುವ ಜೊತೆಗೆ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದನ್ನು ಗರ್ಭಿಣಿಯರು ಮರೆಯಬಾರದು ಅಲ್ಲವೇ? ಹಾಗಾಗಿ ಬೋಲ್ಡ್ ಸ್ಕೈ ಇಂದು ಕೆಲವೊಂದು ವ್ಯಾಯಮವನ್ನು ಪರಿಚಯಿಸುತ್ತಿದ್ದು ಅದು ಯಾವುದು ಎಂಬುದನ್ನು ಮುಂದೆ ಓದಿ...

ಪ್ರತಿದಿನದ ಸುಸ್ತನ್ನು ಹೋಗಲಾಡಿಸುತ್ತದೆ
ಸಾಮಾನ್ಯವಾಗಿ ಪ್ರಥಮ ಮತ್ತು ಕೊನೆಯ ಮೂರು ತಿಂಗಳುಗಳಲ್ಲಿ ಗರ್ಭಿಣಿಗೆ ಹೆಚ್ಚು ಸುಸ್ತು ಆವರಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಹೆಚ್ಚಿನ ರಕ್ತ ಮತ್ತು ಶಕ್ತಿಯ ಅವಶ್ಯಕತೆ ಇರುವುದರಿಂದ ಸಾಮಾನ್ಯ ಚಟುವಟಿಕೆಗಳಿಗೆ ಶಕ್ತಿ ಪೂರೈಕೆ ಕಡಿಮೆಯಾಗಿ ಸುಸ್ತು ಆವರಿಸುತ್ತದೆ. ಆದರೆ ಸುಸ್ತು ಇದೆ ಎಂದು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ತರವಲ್ಲ. ನಿಧಾನಗತಿಯ ನಡೆಗೆಯೇ ಸರಿ, ನಿಮಗೆ ಸೂಕ್ತವಾದ ವ್ಯಾಯಾಮಗಳನ್ನು ಸುಮಾರು ಅರ್ಧ ಗಂಟೆಯಾದರೂ ದಿನಕ್ಕೆರಡು ಬಾರಿ ಮಾಡಬೇಕು. ಈ ವ್ಯಾಯಾಮದ ಬಳಿಕ ಸುಸ್ತು ಮಾಯವಾಗುವುದನ್ನು ಕಂಡು ನೀವೇ ಬೆರಗಾಗುವಿರಿ.
ತಡೆಯಿಲ್ಲದ ನಿದ್ದೆಗೆ ಸಹಕಾರಿಯಾಗಿದೆ
ಗರ್ಭಾವಸ್ಥೆಯಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಇದೇ ಕಾರಣದಿಂದ ದಿನಕ್ಕೆ ಹಲವು ಬಾರಿ ಶೌಚಾಲಯಕ್ಕೆ ಹೋಗುವುದು ಅನಿವಾರ್ಯವಾಗುತ್ತದೆ. ರಾತ್ರಿ ನಿದ್ದೆಯ ಸಮಯದಲ್ಲಿಯೂ ಕೆಲವು ಬಾರಿ ಹೋಗಬೇಕಾಗಿ ಬರುತ್ತದೆ. ಒಂದು ವೇಳೆ ಪ್ರತಿದಿನ ನಿಗದಿತ ಸಮಯದಲ್ಲಿ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾ ಬಂದರೆ ಪದೇ ಪದೇ ಮೂತ್ರಕ್ಕೆ ಅವಸರವಾಗುವುದು ಕಡಿಮೆಯಾಗುತ್ತದೆ. ನಿದ್ದೆಯ ಮೊದಲು ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸುಮಾರು ನಾಲ್ಕರಿಂದ ಐದು ಗಂಟೆಗಳಾದರೂ ತಡೆಯಿಲ್ಲದ ನಿದ್ದೆ ನಿಮಗೆ ದಕ್ಕುತ್ತದೆ. ಈ ನಿದ್ದೆ ನಿಮ್ಮ ಮತ್ತು ಮಗುವಿನ ಆರೋಗ್ಯಕ್ಕೆ ಅತ್ಯಂತ ಅವಶ್ಯವಾಗಿದೆ. ಗರ್ಭಧಾರಣೆ ವೇಳೆ ಸೂಕ್ತ ನಿದ್ರೆಗಾಗಿ ಆರು ವಿಧಾನಗಳು
ಚಿಂತೆಯಿಂದ ಮುಕ್ತಿ ಪಡೆಯಬಹುದು
ವ್ಯಾಯಾಮದಿಂದ ದೇಹದ ಎಲ್ಲಾ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿದ್ದರೆ ಮೆದುಳಿನಿಂದ ಎಂಡಾರ್ಫಿನ್ ಎಂಬ ಹಾರ್ಮೋನು ಸೂಕ್ತಪ್ರಮಾಣದಲ್ಲಿ ಹಾಗೂ ಸೂಕ್ತ ಸಮಯದಲ್ಲಿ ಬಿಡುಗಡೆಯಾಗುತ್ತ್ತಾಇರುತ್ತದೆ. ಇದರಿಂದಾಗಿ ಗರ್ಭಾವಸ್ಥೆಯಲ್ಲಿ ಸಂತೋಷವಾಗಿ, ಚಿಂತೆಯಿಲ್ಲದೇ ಇರಲು ಸಾಧ್ಯವಾಗುತ್ತದೆ.
ಹೆರಿಗೆಯ ಸಮಯದಲ್ಲಿ ಕಡಿಮೆ ನೋವು ಮತ್ತು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ
ಸೂಕ್ತ ವ್ಯಾಯಾಮಗಳನ್ನು ಮಾಡಿ ನವಮಾಸಗಳನ್ನು ತುಂಬಿರುವ ತಾಯಂದಿರಿಗೆ ಸುಲಭವಾದ, ಶೀಘ್ರವಾದ ಮತ್ತು ಹೆಚ್ಚು ನೋವಿಲ್ಲದ ಹೆರಿಗೆಯಾಗಿರುವುದನ್ನು ಪ್ರಸೂತಿ ವೈದ್ಯರು ಗಮನಿಸಿದ್ದಾರೆ. ಅಲ್ಲದೇ ಸಾಮಾನ್ಯವಾದ ಹೆರಿಗೆಯಾಗಿ ಕ್ಲಿಷ್ಟಕರವಾದ ಸಿಸೇರಿಯನ್ ಹೆರಿಗೆಯಾಗುವುದನ್ನೂ ತಡೆಯಬಹುದು.



Click it and Unblock the Notifications