Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಗರ್ಭಧಾರಣೆಯ ವೇಳೆ ಆರೋಗ್ಯ ಕಾಪಾಡುವ ವಿಧಾನ ಹೇಗೆ?
ಸಾಕಷ್ಟು ಮಹಿಳೆಯರು ಗರ್ಭಿಣಿಯಾದಾಗ ಆತಂಕಕ್ಕೆ ಒಳಗಾಗುತ್ತಾರೆ, ಇದು ಕೇವಲ ಹಾರ್ಮೋನ್ ಬದಲಾವಣೆಯಿಂದ ಮಾತ್ರವಲ್ಲ, ಹೆರಿಗೆ ನೋವು, ಪ್ರಸವ ಇವುಗಳ ಬಗ್ಗೆಯೂ ಕೂಡ ಆತಂಕ ಇರುತ್ತದೆ.ಮಹಿಳೆ ತಾಯಿಯಾಗುತ್ತಿರುವಾಗ ಸಾಕಷ್ಟು ಬದಲಾವಣೆಗಳಾಗುತ್ತವೆ.
ಚರ್ಮದಲ್ಲಿ, ತೂಕ ಹೆಚ್ಚಳದಲ್ಲಿ, ತಿಂಗಳು ಹೆಚ್ಚುತ್ತಿದ್ದಂತೆ ಮಗುವಿನ ಆಕಾರ ಹೊಟ್ಟೆಬರುವಿಕೆ, ಇವುಗಳೆಲ್ಲ ಮಹಿಳೆಗೆ ತಾನು ಹೇಗೆ ಕಾಣಬಹುದು ಎಂಬ ಆತಂಕ ಹುಟ್ಟಿಸುತ್ತದೆ. ಗರ್ಭಿಣಿಯಾದಾಗ ಧನಾತ್ಮಕ ಚಿಂತನೆ ಹೊಂದಬೇಕು, ಆತ್ಮ ಗೌರವ ಮತ್ತು ಸ್ವಯಂ ಕಾಳಜಿ ಹೊಂದಿರುವುದು ಸಂತೋಷಕರ ಮತ್ತು ಆರೋಗ್ಯಕರ ಗರ್ಭಧಾರಣೆ ನಿರ್ವಹಿಸಲು ಕಾರಣವಾಗುತ್ತದೆ.
ಗರ್ಭವತಿಯಾಗುವುದೆಂದರೆ ಹೆಚ್ಚು ನೋವು ತುಂಬಿರುತ್ತದೆ ಎಂದೇನು ಇಲ್ಲ ಬದಲಿಗೆ ಗರ್ಭಿಣಿಯಾಗುವುದು ನಿಮ್ಮಲ್ಲಿರುವ ಸ್ತ್ರೀ ಮತ್ತು ತಾಯಿತನ ಹೊರಸೂಸುವ ಸಂತೋಷಕರವಾದ ವಿಷಯ.ಕೆಲವು ಮಹಿಳೆಯರು ಗರ್ಭಿಣಿ ಇರುವಾಗ ಕೂಡ ಸೆಕ್ಸಿಯಾಗಿ, ಫಿಟ್ ಆಗಿ ಇರುತ್ತಾರೆ. ಅದು ಹೇಗೆ ಎಂಬುದರ ಬಗ್ಗೆ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಿದ್ದೇವೆ. ಓದಿನೋಡಿ.

ಸ್ತನ್ಯಪಾನ ನೀಡಿದರೆ ತಾಯಿಂದಿರಿಗೆ 10 ಲಾಭ
ಸರಿಯಾದ ವ್ಯಾಯಾಮ
ಗರ್ಭಾವಸ್ಥೆಯ ಸಂಪೂರ್ಣ ಕಾಲದಲ್ಲಿ ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡುವುದು ಸೂಕ್ತ. ಇಲ್ಲಿ ವ್ಯಾಯಾಮ ಎಂದರೆ ವಾಕಿಂಗ್, ಸ್ವಿಮ್ಮಿಂಗ್, ವಾಟರ್ ಏರೋಬಿಕ್ಸ್ ಮತ್ತು ಯೋಗ.ವ್ಯಾಯಾಮ ನೀವು ಗರ್ಭಿಣಿ ಆಗುವ ಮೊದಲು ಎಷ್ಟು ಚಟುವಟಿಕೆಯಿಂದ ಇದ್ದಿರಿ ಎಂಬುದರ ಮೇಲೆ ಅವಲಂಬಿತವಾಗುತ್ತದೆ. ಶ್ರಮದಾಯಕ ಜೀವನಕ್ರಮವಿದ್ದರೆ ಅಥವಾ ಗರ್ಭಧಾರಣೆಯಲ್ಲಿ ತೊಂದರೆ ಇದ್ದರೆ ಅಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡುವುದು ಸೂಕ್ತವಲ್ಲ.ಇಂತಹ ಚಟುವಟಿಕೆಗಳನ್ನು ಮಾಡುವಾಗ ಸಾಕಷ್ಟು ನೀರು ಸೇವಿಸಿ.ಹೆಚ್ಚು ನೀರು ಸೇವಿಸುವುದು ನಿಮ್ಮನ್ನು ತಾಜಾವಾಗಿ ಇಡುವುದು ಮಾತ್ರವಲ್ಲ ನಿಮ್ಮ ದೇಹಕ್ಕೆ ಬೇಕಾಗುವ ನೀರನ್ನು ಒದಗಿಸುತ್ತದೆ ಮತ್ತು ನಿಮ್ಮ ತ್ವಚೆಯ ಕಾಂತಿಯನ್ನು ಕಾಪಾಡುತ್ತದೆ.ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೊದಲು ನೀವು ವೈದ್ಯರ ಸಂಪೂರ್ಣ ಸಲಹೆಯನ್ನು ಪಡೆದುಕೊಳ್ಳಲು ಮರೆಯದಿರಿ.
ಮಾತೃತ್ವಕ್ಕೆಂದೇ ಸಿಗುವ ಬಟ್ಟೆಯನ್ನು ಉಪಯೋಗಿಸಿ
ನೀವು ನೋಡಿರಬಹುದು ಗರ್ಭಿಣಿ ಮಹಿಳೆಯರು ಸಾಮಾನ್ಯವಾಗಿ ಹಳೆಯ ದೊಡ್ಡ ಅಳತೆಯ ಟೀ ಶರ್ಟ್ ಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ನೀವು ಫಿಟ್ ಆಗಿ ಕಾಣಿಸಬೇಕೆಂದರೆ ಹೊಸ ರೀತಿಯ ಮಾತೃತ್ವಕ್ಕೆಂದೇ ಇರುವ ಬಟ್ಟೆಗಳನ್ನು ಧರಿಸಿ. ಇದು ನಿಮಗೆ ಆರಾಮದಾಯಕವಾಗಿ ಕೂಡ ಇರುತ್ತದೆ.
ಸಮತೋಲಿತ ಆಹಾರ ಬಳಸಿ
ನಿಮ್ಮ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಬಳಸಿ. ನಿಮಗೆ ಬೇಕಾದ ವಿಟಮಿನ್ ಮತ್ತು ಖನಿಜಾಂಶಗಳು ಇದರಿಂದ ದೊರೆಯುತ್ತವೆ. ನೀವು ಕಾಫಿ ಹೆಚ್ಚು ಬಳಸುವವರಾದರೆ ಅದರಿಂದ ದೂರವಿರಿ. ಕೆಫಿನ್ ಹೆಚ್ಚು ಬಳಸುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿರುವ ನಿಮ್ಮ ಮಗುವಿನ ಬೆಳವಣಿಗೆಗೆ ಕೂಡ ಪರಿಣಾಮ ಬೀರುತ್ತದೆ.
ಕೇಶ ವಿನ್ಯಾಸ ಮಾಡಿಸಿಕೊಳ್ಳಿ
ಗರ್ಭಾವಸ್ಥೆಯಲ್ಲಾಗುವ ಹಾರ್ಮೊನಿನ ಬದಲಾವಣೆಯಿಂದ ಕೂದಲು ದಟ್ಟವಾಗಿ,ಹೊಳೆಯುವಂತೆ ಬೆಳಯುತ್ತದೆ. ಈ ಸಮಯದಲ್ಲಿ ಕೂದಲು ಕತ್ತರಿಸಬೇಡಿ ಅಥವಾ ಕೂದಲನ್ನು ಹಿಂದೆ ಕಟ್ಟಿಬಿಡಬೇಡಿ. ಬದಲಿಗೆ ಹೇರ್ ಸ್ಟೈಲರ್ ಅನ್ನು ಭೇಟಿಯಾಗಿ ನಿಮಗೆ ಹೊಂದಾಣಿಕೆಯಾಗುವಂತಹ ಕೇಶ ವಿನ್ಯಾಸವನ್ನು ಮಾಡಲು ಹೇಳಿ.
ಸ್ತನಕ್ಕೆ ಹೊಂದುವಂತಹ ಬ್ರಾ ಗಾತ್ರವನ್ನು ತಿಳಿದುಕೊಳ್ಳುವುದು ಹೇಗೆ?
ಮೇಕಪ್ ಮತ್ತು ಸೌಂದರ್ಯ ಸಾಧನಗಳನ್ನು ಬಿಟ್ಟುಬಿಡಬೇಡಿ
ಗರ್ಭಿಣಿಯಾದಾಗ ಕೆಲವೊಮ್ಮೆ ಸೌಂದರ್ಯ ಸಾಧನದಲ್ಲಿರುವ ರಾಸಾಯನಿಕ ಅಂಶಗಳು ಅಲರ್ಜಿಯನ್ನು ಉಂಟು ಮಾಡಬಹುದು. ಇದರಿಂದ ನೀವು ಸೌಂದರ್ಯ ಸಾಧನದಿಂದ ದೂರ ಉಳಿಯುವಂತಾಗಬಹುದು. ನಿಮ್ಮ ವೈದ್ಯರ ಸಲಹೆಯನ್ನು ಪಡೆದು ನಿಮಗೆ ಸೂಕ್ತ ಎನಿಸುವ ಸೌಂದರ್ಯ ಸಾಧನಗಳನ್ನು ಬಳಸಿ.
ಚರ್ಮಕ್ಕೆ ಸೂಕ್ತ ಎನಿಸುವ ಮಿನರಲ್ ಪೌಡರ್ ಅನ್ನು ಬಳಸಿ
ಜೊತೆಗೆ ನಿಮಗೆ ಸೂಕ್ತವಾಗುವ ಐ ಶಾಡೋ ಬಳಸಿ. ಬ್ರೌನ್ ಕಣ್ಣುಗಳಿಗೆ ನೇರಳೆ ಬಣ್ಣ ಸೂಕ್ತವಾಗುತ್ತದೆ, ನೀಲಿ ಕಣ್ಣುಗಳಿಗೆ ಬ್ರೌನ್ ಐ ಶ್ಯಾಡೋ, ಹಸಿರು ಬಣ್ಣವಿದ್ದಲ್ಲಿ ಗುಲಾಬಿ ಐ ಶ್ಯಾಡೋ ಸುಂದರವಾಗಿ ಕಾಣಿಸುತ್ತದೆ. ತಟಸ್ಥ ಬಣ್ಣಗಳು ಎಂತವರಿಗೂ ಸುಂದರವಾಗಿ ಒಪ್ಪುತ್ತವೆ ಅಲ್ಲದೆ ಗುಲಾಬಿ ಬಣ್ಣ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ನಿಮ್ಮ ವರ್ತನೆ ಹೆಚ್ಚು ಮಾದಕತೆ ತಂದು ಕೊಡುತ್ತದೆ
ನೀವು ಸೆಕ್ಸಿಯಾಗಿ ಕಾಣುತ್ತಿದ್ದೀರಿ ಮತ್ತು ಸುಂದರವಾಗಿದ್ದೀರಿ ಎಂದು ನಂಬಿ ಮತ್ತು ನೀವು ಸುಂದರವಾಗಿ ಕಾಣಿಸುತ್ತೀರಿ.ಸಕಾರಾತ್ಮಕ ಭಾವನೆಗಳ ಮೂಲಕ ಋಣಾತ್ಮಕ ಭಾವನೆಗಳನ್ನು ಹೋಗಲಾಡಿಸಿ.



Click it and Unblock the Notifications