Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಮುಟ್ಟು ನಿಂತ ಮೇಲೂ ಮಗುವಿನ ಜನನ ಸಾಧ್ಯವೇ?
ತುಂಬಾ ತಡವಾಗಿ ಮದುವೆಯಾಗುವವರು ತಮಗೆ ಮಕ್ಕಳು ಆಗುತ್ತವೆಯೋ, ಇಲ್ಲವೋ ಎಂಬ ಚಿಂತೆ ಮಾಡುತ್ತಿರುತ್ತಾರೆ. ಏಕೆಂದರೆ ಇವರ ಪ್ರಕಾರ ತಮ್ಮ ಮುಟ್ಟು ನಿಂತ ಮೇಲೆ ಇವರು ಗರ್ಭಿಣಿಯಾಗುವ ಸಾಧ್ಯತೆ ತುಂಬಾ ಕಡಿಮೆ ಎಂಬ ಭಾವನೆ ಇರುತ್ತದೆ. ಮುಟ್ಟು ನಿಂತ ಮೇಲೆ ಗರ್ಭಿಣಿಯಾಗುವ ಸಾಧ್ಯತೆ ಇಲ್ಲ.
ಮುಟ್ಟು ನಿಲ್ಲುವುದು ಎಂದರೆ ಅವರ ಸಂತಾನೋತ್ಪತ್ತಿಯ ಅಂತ್ಯ ಎಂಬ ಭಾವನೆ ಅವರಲ್ಲಿ ಮನೆ ಮಾಡಿರುತ್ತದೆ. ಈ ನಂಬಿಕೆಗೂ ಕಾರಣವಿದೆ ಏಕೆಂದರೆ ಈ ಅವಧಿಯಲ್ಲಿ ಗರ್ಭಾಶಯದಲ್ಲಿ ಯಾವುದೇ ಅಂಡಾಣುಗಳು ಬಿಡುಗಡೆಯಾಗುವುದಿಲ್ಲ. ಅಂಡಾಣುಗಳು ಬಿಡುಗಡೆಯಾಗಲಿಲ್ಲವೆಂದಾದಲ್ಲಿ ಮಗುವಾಗುವುದು ಹೇಗೆ?, ಆದರೂ ಮುಟ್ಟು ನಿಂತ ಮೇಲೆ ಗರ್ಭಿಣಿಯಾಗುವುದು ಅಥವಾ ಮಗುವನನ್ನು ಪಡೆಯುವುದು ಆಧುನಿಕ ತಂತಜ್ಞಾನದ ಸಹಾಯದಿಂದ ಸಾಧ್ಯ.
ಆದರೂ ಮುಟ್ಟು ನಿಂತ ಮೇಲೆ ಆಗುವ ಗರ್ಭಧಾರಣೆಯು ತೀರ ವಿರಳ ಮತ್ತು ತೀರಾ ಜಟಿಲ. ಈ ಗರ್ಭಧಾರಣೆಯು ಮಗು ಮತ್ತು ತಾಯಿ ಇಬ್ಬರ ಆರೋಗ್ಯವನ್ನು ಅಪಾಯಕ್ಕೆ ದೂಡುತ್ತದೆ. ಮುಟ್ಟು ನಿಲ್ಲುವ ವರ್ಷಗಳಿಗೆ ಬಂದ ಹೆಂಗಸರು ಸಹ ಗರ್ಭಧರಿಸಬಹುದು. ಈ ಸಂದರ್ಭದಲ್ಲಿ ಮಕ್ಕಳನ್ನು ಹಡೆಯುವ ಭಾಗ್ಯ ಹೆಣ್ಣಿಗೆ ಸ್ವಲ್ಪ ಮಾತ್ರ ಇದ್ದರೂ, ಅಸಾಧ್ಯವೇನಲ್ಲ. ಬನ್ನಿ ಹಾಗಾದರೆ ಮುಟ್ಟು ನಿಂತ ಮೇಲೆ ಹೆಂಗಸರು ಏಕೆ ಗರ್ಭಧರಿಸಲು ಸಾಧ್ಯವಿಲ್ಲ ಎಂಬ ಕಾರಣಗಳತ್ತ ಒಂದು ಇಣುಕು ನೋಟ ಬೀರೋಣ. 8ನೇ ತಿಂಗಳ ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಮುನ್ನೆಚ್ಚರಿಕೆಗಳು
ಋತುಚಕ್ರ

ಮುಟ್ಟು ನಿಲ್ಲುವ ಅವಧಿಯಲ್ಲಿ ಹೆಂಗಸರು ಗರ್ಭಧರಿಸಲು ಸಾಧ್ಯವಿರುವುದು ಕೇವಲ ಒಂದು ಸಾಧ್ಯತೆಯ ಮೇಲೆ, ಅದು ಅವರಿಗೆ ಋತುಚಕ್ರವು ಇನ್ನೂ ಸಕ್ರಿಯವಾಗಿದ್ದಾಗ ಮಾತ್ರ. ಯಾವಾಗ ಋತುಚಕ್ರವು ಇನ್ನೂ ಸಕ್ರಿಯವಾಗಿರುತ್ತದೋ, ಅದರರ್ಥ ಅವರಲ್ಲಿ ಅಂಡಾಣುಗಳು ಇನ್ನೂ ಉತ್ಪತ್ತಿಗೊಳ್ಳುತ್ತಿವೆ ಎಂದರ್ಥ. ಗರ್ಭಾಶಯದಲ್ಲಿ ಅಂಡಾಣುಗಳು ಉತ್ಪತ್ತಿಯಾದಾಗ ಮಾತ್ರ ಗರ್ಭಧಾರಣೆಯು ಸಾಧ್ಯವಾಗುತ್ತದೆ. ಆದರೂ ಮುಟ್ಟು ನಿಂತ ಮೇಲೆ ಗರ್ಭಧಾರಣೆಯು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನೆನಪಿಡಿ, ಋತುಚಕ್ರ ನಿಂತು ಹೋದ ಮೇಲೆ ಗರ್ಭಧಾರಣೆ ಸಾಧ್ಯವಾಗುವುದಿಲ್ಲ.
ಹಾರ್ಮೋನ್‍ಗಳ ಮಟ್ಟ ಕುಸಿಯುತ್ತದೆ
ಗರ್ಭಧರಿಸಲು ಹೆಂಗಸಿನ ದೇಹದಲ್ಲಿ ಸೆಕ್ಸ್ ಹಾರ್ಮೋನ್‍ಗಳು ಮತ್ತು ಈಸ್ಟ್ರೋಜೆನ್‍ಗಳ ಉತ್ಪತ್ತಿ ಅತ್ಯಗತ್ಯವಾಗಿ ಆಗುತ್ತಿರಬೇಕು. ಆದರೂ ಮುಟ್ಟು ನಿಂತ ಮೇಲೆ ಈ ಹಾರ್ಮೋನುಗಳ ಉತ್ಪಾದನೆ ಗಣನೀಯವಾಗಿ ಕುಸಿಯುತ್ತದೆ. ಹಾಗಾಗಿ ಮುಟ್ಟು ನಿಂತ ಮೇಲೆ ನಿಮಗೆ ಗರ್ಭಧರಿಸಲು ಆಸೆ ಇದ್ದರೂ, ನಿಮ್ಮ ದೇಹ ಅದಕ್ಕೆ ಸಹಕರಿಸುವುದಿಲ್ಲ. ಅದು ಆ ಅವಕಾಶವನ್ನು ಮುಚ್ಚಿಬಿಡುತ್ತದೆ. ಇದೇ ವೇಳೆಯಲ್ಲಿ ಮಹಿಳೆಯರ ದೇಹದಲ್ಲಿ ಮುಟ್ಟು ನಿಂತ ಮೇಲೆ ಕಾಣಿಸಿಕೊಳ್ಳುವ ಹಲವಾರು ಅಡ್ಡ ಪರಿಣಾಮಗಳು ಮಕ್ಕಳನ್ನು ಪಡೆಯುವ ಅವಕಾಶಕ್ಕೆ ತಡೆಯೊಡ್ಡುತ್ತವೆ.
ತಾಯಿ ಮತ್ತು ಮಗುವಿನ ಆರೋಗ್ಯದ ಸಮಸ್ಯೆ
ಮುಟ್ಟು ನಿಲ್ಲುವ ಕಾಲದಲ್ಲಿ ಮಕ್ಕಳನ್ನು ಪಡೆಯಲು ಬಯಸಿದರೆ ಅದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಅಪಾಯದ ತೂಗುಗತ್ತಿ ಇಡುತ್ತದೆ. ಈ ಅವಧಿಯಲ್ಲಿ ಗಂಭೀರವಾದ ಕಾಯಿಲೆಗಳು ಇಬ್ಬರಿಗು ಅಪಾಯವನ್ನುಂಟು ಮಾಡಬಹುದು. ನೆನಪಿಡಿ, ತಡವಾಗಿ ಹುಟ್ಟುವ ಮಕ್ಕಳು ಜನ್ಮಜಾತವಾಗಿ ಕೆಲವೊಂದು ಕಾಯಿಲೆಗಳಿಗೆ ತುತ್ತಾಗಿರುತ್ತವೆ. ಈ ಅವಧಿಯಲ್ಲಿ ಗರ್ಭಧಾರಣೆ ಯಾವಾಗ ಆಗುತ್ತದೆ ಎಂದು ಯೋಜನೆ ಮಾಡಲು ಸಹ ಸಾಧ್ಯವಾಗುವುದಿಲ್ಲ. ಏಕೆಂದರೆ ಋತುಚಕ್ರವು ಅಸಮರ್ಪಕವಾಗಿರುವ ಈ ಅವಧಿಯಲ್ಲಿ ಅಂಡಾಣುಗಳ ಉತ್ಪಾದನೆ ಯಾವಾಗ ಆಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.
ಗಿಡಮೂಲಿಕೆಗಳನ್ನು ನಂಬಬೇಡಿ
ಸಾಮಾನ್ಯ ಜ್ಞಾನದ ಪ್ರಕಾರ ಗರ್ಭಾಶಯವು ಕೇವಲ ವಯಸ್ಸಿನ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಈ ಗರ್ಭಾಶಯವು ಗರ್ಭಧರಿಸುವ ಸಾಧ್ಯತೆಯಿದ್ದರೆ ಮಾತ್ರ ಅಂಡಾಣುಗಳನ್ನು ಉತ್ಪಾದನೆ ಮಾಡುತ್ತದೆ. ಋತುಚಕ್ರದ ಅವಧಿಯಲ್ಲಿ ನಿಮ್ಮ ದೇಹವು ಋತು ಸ್ರಾವವಾಗುವ ಮೊದಲು ಎರಡು ಅಂಡಾಣುಗಳನ್ನು ಬಿಡುಗಡೆ ಮಾಡುವಷ್ಟರ ಮಟ್ಟಿಗೆ ಹುಮ್ಮಸ್ಸನ್ನು ತೋರುತ್ತದೆ. ಆದರೂ ನಿಮ್ಮ ದೇಹದಲ್ಲಿ ಅಂಡಾಣುಗಳ ಉತ್ಪಾದನೆ ನಿಂತಾಗ, ಅದು ಸಂತಾನೋತ್ಪತಿಗೆ ಬೇಕಾಗುವ ಅಂಡಾಣುಗಳನ್ನು ಪೂರೈಸುವುದು ನಿಲ್ಲಿಸುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹೆರಿಗೆ ನೋವಿನ ಲಕ್ಷಣಗಳು
ಇದು ನೀವು ಗರ್ಭಧರಿಸುವ ಸಾಧ್ಯತೆಯನ್ನು ನಿರರ್ಥಕಗೊಳಿಸುತ್ತದೆ. ನೆನಪಿಡಿ, ಅಸಾಧ್ಯವಾದುದನ್ನು ಸಾಧಿಸುವ ಭರದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಗಿಡಮೂಲಿಕೆಗಾನ್ನು ಸೇವಿಸಲು ಹೋಗಬೇಡಿ. ಮಕ್ಕಳನ್ನು ಪಡೆಯುವ ಸಲುವಾಗಿ ನಿಮ್ಮ ಋತು ಚಕ್ರವನ್ನು ಪುನರ್ ಆರಂಭಿಸುವಂತಹ ಗಿಡಮೂಲಿಕೆಗಳನ್ನು ಸೇವಿಸಬೇಡಿ. ಇದು ನಿಮ್ಮ ಮಕ್ಕಳನ್ನು ಪಡೆಯುವ ಕನಸಿಗೆ ಯಾವುದೇ ಸಹಕಾರ ನೀಡುವುದಿಲ್ಲ.



Click it and Unblock the Notifications


