Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರಿಗೆ ಕಂಡುಬರುವ ಸುಸ್ತು ಹಾಗೂ ಜಡತ್ವಕ್ಕೆ ಕಾರಣವೇನು?
ಮಗುವನ್ನು ಪಡೆಯುವುದು ಪ್ರತಿಯೊಬ್ಬ ತಾಯಿಗೂ ಒಂದು ಮುಖ್ಯವಾದ ಹಂತ. ತಾಯಿ ಜೀವನದಲ್ಲಿ ಮಗುವಿಗಾಗಿ ಒಂಬತ್ತು ತಿಂಗಳು ಕಾಯುವುದು ಒಂದು ರೀತಿಯ ಸಂತೋಷದ ಕಾಲ. ಆದರೆ ಎಲ್ಲಾ ಮಹಿಳೆಯರಿಗೂ ಈ ಒಂಬತ್ತು ತಿಂಗಳುಗಳು ಆರಾಮದಾಯಕವಾಗಿರುವುದಿಲ್ಲ ಅದರಲ್ಲೂ ಮೊದಲ ಮೂರು ತಿಂಗಳುಗಳು ಕೆಲವೊಮ್ಮೆ ಕಷ್ಟವಾಗುತ್ತದೆ. ಈ ಮೊದಲ ಮೂರು ತಿಂಗಳುಗಳು ಭ್ರೂಣದ ಪ್ರಮುಖ ಅಂಗಗಳ ಬೆಳವಣಿಗೆಯ ಕಾಲವಾಗಿರುತ್ತದೆ.
ವಾಂತಿ ಮತ್ತು ತಲೆ ಸುತ್ತುವುದು ಸಾಮಾನ್ಯವಾಗಿ ಸುಸ್ತಿನ ಜೊತೆ ಕಾಣಿಸಿಕೊಳ್ಳುವ ಮೊದಲ ಸಮಸ್ಯೆಗಳು. ಇದು ನಿಮ್ಮ ದೇಹ ಮಗುವಿನ ಬೆಳವಣಿಗೆಗೆ ಹೊಂದಿಕೊಳ್ಳಲು ತೆಗೆದುಕೊಳ್ಳುವ ಕಾಲವಾದ್ದರಿಂದ ಈ ರೀತಿ ಸುಸ್ತು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಬೆಳಗ್ಗೆ ಮುಂಜಾನೆ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇಡೀ ದಿನ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ಬೆಳಗ್ಗೆ ಎದ್ದಾಗಿ ಕಾಣಿಸಿಕೊಳ್ಳುವ ಜಡತ್ವಗೆ ಸಾಕಷ್ಟು ಕಾರಣಗಳಿವೆ.ಈ ಸಮಯದಲ್ಲಿ ಹೆಚ್ ಸಿ ಜಿ ಮಟ್ಟ ತಕ್ಷಣ ಏರುತ್ತದೆ ಇದು ಹಾರ್ಮೋನಿನ ಬದಲಾವಣೆಗೆ ಕಾರಣವಾಗುತ್ತದೆ ಇದರಿಂದಾಗಿ ವಾಂತಿ ಮತ್ತು ತಲೆ ಸುತ್ತುವಿಕೆ ಸಂಭವಿಸಬಹುದು. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳು ಒಂದು ಅವಿಭಾಜ್ಯ ಶಂಕಿತ ಕಾರಣ ಆಗಿರಬಹುದು.

ಈ ಸಮಯದಲ್ಲಿ ವಾಸನೆ ಸಂವೇದನೆ ಸೂಕ್ಷ್ಮವಾಗಿರುತ್ತದೆ. ಸೂಕ್ಷ್ಮ ಮತ್ತು ಒತ್ತಡ ದೇಹ/ಮನಸ್ಥಿತಿ ಬೆಳಗಿನ ಬೇನೆಗೆ ಕಾರಣವಾಗುತ್ತದೆ. ಈ ಕೆಳಗೆ ಬೆಳಗಿನ ಜಡತ್ವದಿಂದ ಹೊರಬರುವುದು ಹೇಗೆ ಎಂಬುದನ್ನು ನೀಡಲಾಗಿದೆ.
ಗರ್ಭಾವಸ್ಥೆಯಲ್ಲಿ ಮಹಿಳೆ ಮಾಡುವ 5 ಸಾಮಾನ್ಯ ತಪ್ಪುಗಳು
ಒತ್ತಡಕ್ಕೆ ಒಳಗಾಗಬೇಡಿ
ನೀವು ಸಾಕಷ್ಟು ಒತ್ತಡಗಳಿಗೆ ಒಳಗಾದರೆ ಬೆಳಗಿನ ಜಡತ್ವದಿಂದ ಹೊರಬರುವುದು ಕಷ್ಟ. ಆದ್ದರಿಂದ ರಜಾ ತೆಗೆದುಕೊಂಡು ಮನೆಯಲ್ಲಿರಿ ಇದು ನಿಮಗೆ ಸಮಾಧಾನ ನೀಡುತ್ತದೆ. ಕೆಲಸದಲ್ಲಿರುವ ಒತ್ತಡ ಇನ್ನಷ್ಟು ನಿಮ್ಮನ್ನು ಸುಸ್ತು ಆಗುವಂತೆ ಮಾಡಿ ಬಿಡಬಹುದು ಆದ್ದರಿಂದ ಕೆಲಸ ನಿರ್ಲಕ್ಷಿಸಿ ಆರಾಮವಾಗಿರಿ.
ತಾಜಾ ಪರಿಮಳ ಅನುಭವಿಸಿ
ಹೊರಗಿನ ಕೆಟ್ಟ ವಾಸನೆ ನಿಮ್ಮನ್ನು ಹೊಟ್ಟೆ ತೊಳೆಸುವಂತೆ ಮಾಡಿದರೆ ತಾಜಾ ಪರಿಮಳ ಅನುಭವಿಸಿ ಇದರಿಂದ ವಾಂತಿ ಬರುವುದು ಕಡಿಮೆಯಾಗುತ್ತದೆ.
ಮಾತನಾಡಿ
ನಿಮ್ಮ ಹಾರ್ಮೋನು ಬದಲಾವಣೆ ನಿಮಗೆ ಯಾವುದರಿಂದ ಒತ್ತಡ ಬರುತ್ತದೆ ಎಂಬುದು ನಿಮಗೆ ಮಾತ್ರ ತಿಳಿಯುತ್ತದೆ. ನಿಮ್ಮ ಸಂಗಾತಿಗೆ ಇದರ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ. ಆದ್ದರಿಂದ ನಿಮಗೆ ಏನನ್ನಿಸುತ್ತಿದೆ ಎಂಬುದನ್ನು ಆತನೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ.
ಟ್ರ್ಯಾಕ್ ಮಾಡಿ
ನಿಮಗೆ ಯಾವುದು ಆಗಿಬರುತ್ತಿಲ್ಲ ಎಂಬುದು ತಿಳಿದಿದ್ದರೆ ಬೆಳಗಿನ ವ್ಯಾಧಿಯೊಂದಿಗೆ ಹೋರಾಡುವುದು ಸುಲಭವಾಗಿಬಿಡುತ್ತದೆ. ಯಾವುದಾದರೂ ವಾಸನೆ ನಿಮಗೆ ಆಗಿಬರುತ್ತಿಲ್ಲ ಎಂಬುದು ತಿಳಿದರೆ ಅದನ್ನು ಆದಷ್ಟು ನಿರ್ಲಕ್ಷಿಸಿ. ನೀವು ಉಪಯೋಗಿಸುವ ಸೋಪ್ ನಿಮಗೆ ಇಷ್ಟವಾಗದಿದ್ದಲ್ಲಿ ಬೇರೆ ಪರಿಮಳವಿರುವ ಸೋಪ್ ಬಳಸಿ.
ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣುವ ಕೀಲು ನೋವಿಗೆ 7 ಕಾರಣಗಳು.
ಸಾಕಷ್ಟು ನೀರು ಕುಡಿಯಿರಿ
ನಿಮ್ಮ ದೇಹ ಆದಷ್ಟು ನೀರಿನಂಶ ಸೇವಿಸಬೇಕು,ಇದು ಯಾವುದೇ ರೀತಿಯಲ್ಲಾದರೂ ಸರಿ. ನೀವು ಸಾಕಷ್ಟು ನೀರಿನಂಶ ದೇಹಕ್ಕೆ ಸೇರುವಂತೆ ನೋಡಿಕೊಳ್ಳಿ ಇದರಿಂದ ನಿಮ್ಮ ದೇಹ ನಿರ್ಜಲೀಕರಣಗೊಳ್ಳುವುದು ತಪ್ಪುವುದು ಮಾತ್ರವಲ್ಲ, ವಾಂತಿಯನ್ನು ಕೂಡ ತಡೆಯಬಹುದು.
ಸಣ್ಣ ಊಟ
ಬೆಳಗಿನ ಜಡತ್ವದಿಂದ ತಪ್ಪಿಸಿಕೊಳ್ಳಲು ಇರುವ ಉತ್ತಮ ವಿಧಾನವೆಂದರೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸುವುದು.ನಿಮ್ಮ ದೇಹ ಹೇಗೆ ಸೂಚಿಸುತ್ತದೆಯೋ ಹಾಗೆ ಮಾಡಿ.ಊಟ ಮಾಡಲು ಇಷ್ಟವಾಗದಿದ್ದಲ್ಲಿ ಊಟ ಮಾಡಬೇಡಿ. ದಿನಕ್ಕೆ ಮೂರು ಭಾರೀ ಊಟ ಮಾಡುವ ಬದಲು ಆಗಾಗ ಸ್ವಲ್ಪ ಸ್ವಲ್ಪ ಆಹಾರ ತೆಗೆದುಕೊಳ್ಳಿ.
ಬೆಳಗಿನ ಜಡತ್ವ ಅಥವಾ ಸುಸ್ತು ಅಷ್ಟೊಂದು ಕಷ್ಟಕರವಾದುದಲ್ಲ, ನೀವಿದಕ್ಕೆ ಮಾಡಬೇಕಾದುದು ಹೇಗೆ ಇರಬೇಕು ಎಂಬುದನ್ನು ಗಮನಿಸಬೇಕು. ಇದೇ ರೀತಿ ಬೆಳಗಿನ ಜಡತ್ವ ಅಥವಾ ಸುಸ್ತು ಸಮಸ್ಯೆ ಅನುಭವಿಸುತ್ತಿರುವವರಲ್ಲಿ ಅದರ ಬಗ್ಗೆ ಮಾತನಾಡಿ ಮತ್ತು ನಿಮ್ಮ ಸಮಸ್ಯೆಗೆ ಬೇರೆಬೇರೆ ರೀತಿಯ ಪರಿಹಾರ ಕಂಡುಕೊಳ್ಳಿ.



Click it and Unblock the Notifications