Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಗರ್ಭಿಣಿ ಸ್ತ್ರೀಯರ ಆಹಾರ ಸೇವನೆ ಹೇಗಿರಬೇಕು?
ತಙ್ಞರ ಪ್ರಕಾರ ಗಂಡಸರು ಮತ್ತು ಹೆಂಗಸರು ಸೇವಿಸುವ ಆಹಾರವು ಅವರ ಸಂತಾನೋತ್ಪತ್ತಿಯ ಜೊತೆಗೆ ನೇರ ಸಂಪರ್ಕ ಹೊಂದಿದೆಯಂತೆ. ಆದ್ದರಿಂದ ಅಪ್ಪ-ಅಮ್ಮ ಹಾಗಬೇಕು ಎಂದುಕೊಳ್ಳುವವರು ಆದಷ್ಟು ಮಟ್ಟಿಗೆ ಒಳ್ಳೆಯ ಆಹಾರವನ್ನು ಸೇವಿಸಬೇಕು. ಆದ್ದರಿಂದಲೇ ಕೆಲವೊಂದು ಆಹಾರಗಳನ್ನು ಗರ್ಭಿಣಿಯಾಗುವ ಮುನ್ನ ಸೇವಿಸಬಾರದು ಎಂದು ಹೇಳುವುದು! ಏಕೆಂದರೆ ಈ ಆಹಾರಗಳನ್ನು ನೀವು ಸೇವಿಸದಿದ್ದರೆ ನೀವು ಗರ್ಭಿಣಿಯಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಇದರ ಜೊತೆಗೆ ನಿಮಗೆ ಹುಟ್ಟುವ ಮಗುವು ಸಹ ಸಮಸ್ಯೆಗಳಿಲ್ಲದೆ ಹುಟ್ಟುತ್ತದೆ. ಇಂದು, ಬಹುತೇಕ ಎಲ್ಲವೂ ನಿಮ್ಮ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತವೆ. ಧೂಮಪಾನ, ಕುಡಿತ ಮುಂತಾದ ಅಭ್ಯಾಸಗಳು ಸಹ ನೀವು ಗರ್ಭಿಣಿಯಾಗುವ ಅವಕಾಶವನ್ನು ಕಡಿಮೆ ಮಾಡುತ್ತವೆ. ನೆನಪಿಡಿ: ಗರ್ಭಿಣಿಯಾಗುವ ಮೊದಲು ನೀವು ಇಲ್ಲಿ ಪಟ್ಟಿ ಮಾಡಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಜೊತೆಗೆ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಿ.
ಮೀನು
ಪಾದರಸವನ್ನು ಹೊಂದಿರುವ ಮೀನೆಂದರೆ ಇಷ್ಟವೇ? ಹಾಗಾದರೆ ಅದನ್ನು ತ್ಯಜಿಸುವ ಸಮಯ ಈಗ ಬಂದಿದೆ. ಅತಿಯಾದ ಪಾದರಸ ಇರುವ ಮೀನನ್ನು ಸೇವಿಸಬೇಡಿ. ಟುನಾ, ಹಲಿಬಟ್, ಸ್ವಾರ್ಡ್ ಫಿಶ್ ಮುಂತಾದವುಗಳನ್ನು ಗರ್ಭಿಣಿಯಾಗಲು ಬಯಸುವವರು ಸೇವಿಸಬಾರದು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಡೆಗಣಿಸಬೇಕಾದ ಆಹಾರ ಕ್ರಮಗಳು
ಸೋಡಾ
ಸೋಡಾ ನಿಮ್ಮ ಗಮನವನ್ನು ಸೆಳೆಯಬಹುದು. ಇದು ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ತಕ್ಷಣ ಹೆಚ್ಚು ಮಾಡುತ್ತದೆ. ಆದರೆ ಗರ್ಭಿಣಿಯಾಗುವ ಮುನ್ನ ಇದನ್ನು ಸೇವಿಸಲು ಹೋಗಬಾರದು. ಏಕೆಂದರೆ ಇದು ನಿಮ್ಮ ಸಂತಾನದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಆಲ್ಕೋಹಾಲ್
ಗರ್ಭದ ಮೇಲೆ ದುಷ್ಪರಿಣಾಮ ಬೀರುವ ಮತ್ತು ಗರ್ಭಪಾತ ಉಂಟುಮಾಡುವ ಆಲ್ಕೋಹಾಲ್ ಮುಂತಾದ ಪಾನೀಯಗಳನ್ನು ಸೇವಿಸಲು ಹೋಗಬೇಡಿ. ಅಧಿಕ ಮಧ್ಯಪಾನವು ನಿಮಗೆ ಗರ್ಭಪಾತವನ್ನುಂಟು ಮಾಡಬಹುದು. ಆದ್ದರಿಂದ ಅದನ್ನು ಮಿತಿಯಲ್ಲಿಡಿ.
ಕೆಫಿನ್
ನೀವು ಹೆಚ್ಚಾಗಿ ಕೆಫಿನ್ ಸೇವಿಸುತ್ತಿದ್ದಲ್ಲಿ, ನಿಮ್ಮ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಕಬ್ಬಿಣಾಂಶವು ಮಗುವಿಗೆ ಅತ್ಯಂತ ಅವಶ್ಯಕವಾಗಿದೆ. ಆದರೂ ದಿನಕ್ಕೆ ಒಂದು ಕಪ್ ಕಾಫಿ ಸೇವಿಸಬಹುದು.
ಸೋಯಾವನ್ನು ತ್ಯಜಿಸಿ
ನಿಮ್ಮ ಆಹಾರದಿಂದ ಸೋಯಾವನ್ನು ತ್ಯಜಿಸಿ. ಏಕೆಂದರೆ ಸೋಯಾವು ನಿಮ್ಮ ಗರ್ಭವನ್ನು ಅಪಾಯಕ್ಕೆ ದೂಡಿಬಿಡುತ್ತದೆ. ಅದರಲ್ಲೂ ನಿಮಗೆ ಸಂತಾನ ಹೀನತೆಯ ಸಮಸ್ಯೆಗಳು ಇದ್ದಲ್ಲಿ, ಸೋಯಾವನ್ನು ನಿಮ್ಮ ಆಹಾರ ಪಟ್ಟಿಯಿಂದ ಸಂಪೂರ್ಣವಾಗಿ ತ್ಯಜಿಸಿ. ಗರ್ಭಿಣಿಯರು ಮಾಡಬೇಕಾದ 4 ಉಸಿರಾಟದ ವ್ಯಾಯಾಮಗಳು
ಬೇಯಿಸದೆ ಇರುವ ಆಹಾರ
ಬೇಯಿಸದೆ ಇರುವ ಅಂದರೆ ಕಚ್ಛಾ ಆಗಿ ಸೇವಿಸಬಹುದಾದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿದರೆ ಒಳ್ಳೆಯದು. ಅದರಲ್ಲೂ ಬೆಂದಿರದ ಮಾಂಸ, ಮೀನು ಅಥವಾ ಪಾಶ್ಚರೀಕರಣಗೊಳ್ಳದ ಚೀಸ್‍ಗಳು ನಿಮಗೆ ಸಾಲ್ಮೊನೆಲ್ಲ ಎಂಬ ಹಾನಿಕಾರಕ ಬ್ಯಾಕ್ಟೀರಿಯಾದ ಅಪಾಯವನ್ನು ತಂದೊಡ್ಡುತ್ತದೆ. ಇದು ನಿಮ್ಮ ಗರ್ಭಕ್ಕೆ ಹಾನಿಕಾರಕ.



Click it and Unblock the Notifications






