Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಗರ್ಭಧಾರಣೆ ವೇಳೆ ರಕ್ತಸ್ರಾವವಾದರೆ ಏನರ್ಥ?
ಗರ್ಭಾವಸ್ಥೆಯಲ್ಲಿ ಯೋನಿ ಸ್ರಾವ ಮೊದಲ ತ್ರೈಮಾಸಿಕದಲ್ಲಿ ಸತತವಾಗಿ ಸಂಭವಿಸಬಹುದು. ಈ ರಕ್ತಸ್ರಾವ ಸಾಮಾನ್ಯ ಮತ್ತು ಇದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಗರ್ಭಾವಸ್ಥೆಯ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ರಸ್ತಸ್ರಾವವಾದರೆ ಆಗ ಏನಾದರೂ ಗಂಭೀರ ಸಮಸ್ಯೆಯಿದೆ ಎಂದರ್ಥ. ಹಲವಾರು ಕಾರಣಗಳಿಂದ ರಕ್ತಸ್ರಾವವಾಗಬಹುದು. ಸೋಂಕು, ಒತ್ತಡದಿಂದ ಆಗುವ ಹಾರ್ಮೋನು ಬದಲಾವಣೆ ಮತ್ತು ತಪ್ಪಾದ ಲೈಂಗಿಕ ಕ್ರಿಯೆ ರಕ್ತಸ್ರಾವಕ್ಕೆ ಕೆಲವು ಕಾರಣಗಳು.

ಗರ್ಭಾವಸ್ಥೆಯ ಮೊದಲ ಅವಧಿಯಲ್ಲಿ ರಕ್ತಸ್ರಾವ ಕಾಣಿಸಿಕೊಂಡರೆ ಈ ಕೆಳಗಿನ ಸಮಸ್ಯೆಗಳು ಬರಬಹುದು.
1. ಗರ್ಭಪಾತ
ರಕ್ತಸ್ರಾವವು ಗರ್ಭಪಾತದ ಸುಳಿವಾಗಿರಬಹುದು. ಆದರೆ ಗರ್ಭಪಾತವಾಗಿರಲೇಬೇಕೆಂದೇನಿಲ್ಲ. ಗರ್ಭಾವಸ್ಥೆಯ ಮೊದಲ ಅವಧಿಯಲ್ಲಿ ಶೇ. 20ರಿಂದ 30ರಷ್ಟು ಮಂದಿ ಮಹಿಳೆಯರಿಗೆ ರಕ್ತಸ್ರಾವದ ಅನುಭವವಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ರಕ್ತಸ್ರಾವವಾಗುವ ಅರ್ಧದಷ್ಟು ಮಹಿಳೆಯರಿಗೆ ಗರ್ಭಪಾತವಾಗುವುದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಕಾಳಜಿ ವಹಿಸುವುದು ಮುಖ್ಯ.
2.ಅಪಸ್ಥಾನೀಯ ಗರ್ಭಧಾರಣೆ
ಅಪಸ್ಥಾನೀಯ ಗರ್ಭಧಾರಣೆ ಎಂದು ಗರ್ಭವು ಗರ್ಭಕೋಶದ ಹೊರಗಡೆ ಇರುವುದು. ಬಹುಪಾಲು ಅಪಸ್ಥಾನೀಯ ಗರ್ಭಧಾರಣೆಗೆ ಡಿಂಬನಾಳಗಳೆ ಕಾರಣ. ಅಪಸ್ಥಾನೀಯ ಗರ್ಭಧಾರಣೆಯು ಗರ್ಭಪಾತಕ್ಕಿಂತಲೂ ಕಡಿಮೆಯಿರುತ್ತದೆ. ಗರ್ಭಧರಿಸಿದ 60 ಮಂದಿ ಮಹಿಳೆಯರಲ್ಲಿ ಒಬ್ಬರಲ್ಲಿ ಹೀಗೆ ಆಗುತ್ತದೆ.
3. ಮೋಲಾರ್ ಗರ್ಭಧಾರಣೆ
ಗರ್ಭಧಾರಣೆಯ ಮೊದಲಾವಧಿಯಲ್ಲಿ ರಕ್ತಸ್ರಾವವಾಗುವುದಕ್ಕೆ ಮೋಲಾರ್ ಗರ್ಭಧಾರಣೆಯು ಕಾರಣವಾಗುವುದು ತುಂಬಾ ಅಪರೂಪ. ಮೋಲ್ ಎಂದು ಕರೆಯಲ್ಪಡುವ ಮೋಲಾರ್ ಗರ್ಭಧಾರಣಿಯು ಭ್ರೂಣದ ಒಳಗೆ ಅಸಹಜ ಅಂಗಾಂಶಗಳ ಬೆಳವಣಿಗೆಯಾಗುವುದು. ಇದನ್ನು ಗೆಸ್ಟೇಶನಲ್ ಟ್ರೋಫೋಬ್ಲಾಸ್ಟಿಕ್ (ಜಿಟಿಡಿ) ರೋಗವೆಂದು ಕರೆಯುತ್ತಾರೆ.
ಎರಡನೇ ಅವಧಿಯಲ್ಲಿ ರಕ್ತಸ್ರಾವಾದರೆ ಈ ಕೆಳಗಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
1.ಜರಾಯು ಬೇರ್ಪಡುವುದು
ಹೆರಿಗೆಯ ಮೊದಲ ಅಥವಾ ಬಳಿಕ ಗರ್ಭಾಶಯ ಗೋಡೆಯಿಂದ ಜರಾಯು ಬೇರ್ಪಡುವಿಕೆಯಿಂದ ಯೋನಿಸ್ರಾವವಾಗಬಹುದು. ಶೇ.1ರಷ್ಟು ಗರ್ಭಧರಿಸಿದ ಮಹಿಳೆಯಲ್ಲಿ ಈ ಸಮಸ್ಯೆ ಕಾಣಿಸುತ್ತದೆ. ಇದು ಗರ್ಭಧಾರಣೆಯ ಕೊನೆಯ 12 ವಾರಗಳಲ್ಲಿ ಕಾಣಿಸುತ್ತದೆ.
2. ಪ್ಲಸೆಂಟ್ ಪ್ರೆವಿವಾ
ಜರಾಯುವು ಭಾಗಶಃ ಗರ್ಭಕೋಶದ ಕೆಳಭಾಗದಲ್ಲಿ ಅಥವಾ ಅಥವಾ ಸಂಪೂರ್ಣವಾಗಿ ಗರ್ಭಕಂಠವನ್ನು ಆವರಿಸಿಕೊಂಡರೆ ಆಗ ಪ್ಲಸೆಂಟ್ ಪ್ರೆವಿವಾ ಉಂಟಾಗುತ್ತದೆ. ಇದು ತುಂಬಾ ಗಂಭೀರ ಸಮಸ್ಯೆ ಮತ್ತು ತಕ್ಷಣ ಇದರ ಬಗ್ಗೆ ಕಾಳಜಿ ವಹಿಸಬೇಕು. ಇದು 200 ಮಂದಿಯಲ್ಲಿ ಒಬ್ಬರಲ್ಲಿ ಕಾಣಸಿಗುತ್ತದೆ. ರಕ್ತಸ್ರಾವದ ವೇಳೆ ಸ್ವಲ್ಪವೂ ನೋವಿರುವುದಿಲ್ಲ.
3.ಅವಧಿಗೆ ಮೊದಲೇ ಹೆರಿಗೆ
ಯೋನಿಯ ರಕ್ತಸ್ರಾವವು ಹೆರಿಗೆ ಸೂಚನೆಯಾಗಿರಬಹುದು. ಹೆರಿಗೆಗೆ ಕೆಲವು ವಾರಗಳ ಮೊದಲು ಲೋಳೆ ಕೂಡ ಹೋಗಬಹುದು. ಇದು ಲೋಳೆ ಮತ್ತು ರಕ್ತದ ಸ್ವಲ್ಪ ಪ್ರಮಾಣವಾಗಿರಬಹುದು. ಆರಂಭದಲ್ಲೇ ಇದು ನಡೆದರೆ ನಿಮಗೆ ಅವಧಿಗೆ ಮೊದಲೇ ಹೆರಿಗೆಯಾಗುತ್ತದೆ ಎಂದರ್ಥ ಮತ್ತು ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ರಕ್ತಸ್ರಾವ ಅಪಾಯಕಾರಿಯಾಗಿರಬಹುದು ಅಥವಾ ಅಲ್ಲದಿರಬಹುದು. ರಕ್ತಸ್ರಾವವಾಗುತ್ತಿದ್ದರೆ ಈ ಕೆಳಗಿನ ಕೆಲವೊಂದು ಕ್ರಮಗಳನ್ನು ಪಾಲಿಸಬೇಕಾಗುತ್ತದೆ.
1. ರಕ್ತಸ್ರಾವವಾಗುತ್ತಿದ್ದರೆ ಪ್ಯಾಡ್ ಅಥವಾ ಪ್ಯಾಂಟಿ ಲೈನರ್ ನ್ನು ಧರಿಸಿ. ಇದರಿಂದ ಎಷ್ಟು ರಕ್ತಸ್ರಾವವಾಗುತ್ತದೆ ಮತ್ತು ಯಾವ ರೀತಿಯ ರಕ್ತಸ್ರಾವವಾಗುತ್ತದೆ ಎಂದು ತಿಳಿದುಕೊಳ್ಳಬಹುದು.
2. ಟ್ಯಾಂಪೊನ್ ನ್ನು ಧರಿಸಬೇಡಿ ಅಥವಾ ಯೋನಿಯ ಭಾಗಕ್ಕೆ ನೀರುವ ಚುಮ್ಮಿಸುವಂತಹ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ.
3. ಸಂಭವನೀಯ ತೊಡಕಿನೊಂದಿಗೆ ಇತರ ಯಾವುದೇ ಲಕ್ಷಣಗಳನ್ನು ನೀವು ಎದುರಿಸುತ್ತಿದ್ದರೆ ನಿಮ್ಮ ವೈದ್ಯರನ್ನು ತಕ್ಷಣ ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.



Click it and Unblock the Notifications