ಗರ್ಭಿಣಿಯರು ಇಷ್ಟಪಟ್ಟು ತಿನ್ನುವ ಆಹಾರಗಳು

ಗರ್ಭಿಣಿಯರು ಎಲ್ಲ ರೀತಿಯ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಅವರ ಬಯಕೆ ದೇಹದ ತೂಕ ಹೆಚ್ಚಾಗಲು ಕಾರಣವಾಗಿ ಹೆರಿಗೆಯ ಸಮಯದಲ್ಲಿ ತೊಂದರೆಯುಂಟಾಗಬಹುದು. ಗರ್ಭಾವಸ್ಥೆಯಲ್ಲಿ ಬಸುರಿಯರು ಹೆಚ್ಚು ಇಷ್ಟ ಪಟ್ಟು ತಿನ್ನುವ ಆಹಾರಗಳು ಕೆಲವಿವೆ. ಪರಿಣತರು ಹೇಳುವ ಪ್ರಕಾರ ಗರ್ಭಿಣಿಯರು ತಮ್ಮಿಷ್ಟದ ಆಹಾರವನ್ನು ತಿನ್ನುವ ಮೊದಲು ಎಷ್ಟು ತಿನ್ನಬೇಕು ಎಂದು ತಿಳಿದಿದ್ದರೆ ಒಳ್ಳೆಯದು. ಹೆಚ್ಚು ತಿನ್ನುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಉದಾಹರಣೆಗೆ ಗರ್ಭಾವಸ್ಥೆಯ ಸಮಯದಲ್ಲಿ ಪೇಸ್ಟರೀಸ್ ತಿನ್ನಬೇಕೆಂಬ ಬಯಕೆಯಿದ್ದರೆ ಅದನ್ನು ಹೆಚ್ಚು ತಿನ್ನದಿರುವುದು ಒಳ್ಳೆಯದು ಏಕೆಂದರೆ ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಈವತ್ತು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಗರ್ಭಿಣಿಯರು ಹೆಚ್ಚು ಇಷ್ಟಪಟ್ಟು ತಿನ್ನುವ ತಿಂಡಿಗಳನ್ನು ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಇವುಗಳನ್ನು ನೋಡಿದರೆ ನಿಮಗೆ ತಿಳಿಯುತ್ತದ ಗರ್ಭಿಣಿಯರು ಇವನ್ನು ಯಾಕೆ ಅಷ್ಟು ಇಷ್ಟ ಪಡುತ್ತಾರೆ ಎಂದು. ಇವು ಆರೋಗ್ಯಕಾರಿ ಆಹಾರಗಳಲ್ಲ ಆದರೆ ಬಹಳ ರುಚಿಕರವಾಗಿರುತ್ತದೆ. ಗರ್ಭಿಣಿಯರಿಗೆ ವಾಂತಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಆಹಾರಗಳು ಇದನ್ನು ಕಡಿಮೆಗೊಳಿಸುತ್ತದೆ.

ಗರ್ಭಿಣಿಯರ ಇಷ್ಟವಾದ ಆಹಾರಗಳು

ಐಸ್

ಐಸ್

ಹಲವು ಮಂದಿ ಗರ್ಭಿಣಿಯರಿಗೆ ಐಸ್ ಕ್ಯೂಬನ್ನು ತಿನ್ನುವ ಆಸೆಯಿರುತ್ತದೆ. ಎದೆಯುರಿಯಿಂದ ಬಳಲುತ್ತಿರುವವರಿಗೆ ಇದು ಉತ್ತಮವಾದ ಪರಿಹಾರವನ್ನು ಒದಗಿಸುತ್ತದೆ.

ಮಸಾಲೆ ಪದಾರ್ಥಗಳು

ಮಸಾಲೆ ಪದಾರ್ಥಗಳು

ಕೆಲವರ ಪ್ರಕಾರ ಬಸುರಿಯರು ಮಸಾಲೆ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಆದರೆ ಮೆಣಸಿನಕಾಯಿ ಮತ್ತು ಮೆಣಸುಗಳನ್ನು ಭಾರತೀಯ ಹೆಂಗಸರು ಹೆಚ್ಚು ಇಷ್ಟಪಡುತ್ತಾರೆ.

ಉಪ್ಪಿನ ಕಾಯಿ

ಉಪ್ಪಿನ ಕಾಯಿ

ಗರ್ಭಿಣಿಯರಲ್ಲಿ ರಕ್ತವು ಹೆಚ್ಚಾಗುತ್ತದೆ. ಇದರಿಂದ ಸೋಡಿಯಂನ ಅವಶ್ಯಕತೆ ಹೆಚ್ಚುತ್ತದೆ. ಇದು ಉಪ್ಪಿನಕಾಯಿಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ಹಲವು ಭಾರತೀಯ ಗರ್ಭಿಣಿಯರು ಉಪ್ಪಿನ ಕಾಯನ್ನು ಆಗಾಗ ನೆಕ್ಕುತ್ತಿರುವುದನ್ನು ನೋಡಿರಬಹುದು.

ಪೀನಟ್ ಬಟರ್

ಪೀನಟ್ ಬಟರ್

ಗರ್ಭಿಣಿಯರು ಪೀನಟ್ ಬಟರ್ ತಿನ್ನಲು ಇಷ್ಟ ಪಡುತ್ತಿದ್ದಾರೆ ಎಂದರೆ ಅವರಿಗೆ ವಿಟಮಿನ್ ಬಿ ಅಥವ ಪ್ರೊಟಿನ್ ನ ಅವಶ್ಯಕತೆಯಿದೆ ಎನ್ನುವುದರ ಸೂಚನೆ. ಆದ್ದರಿಂದ ಹೆಚ್ಚು ವಿಟಮಿನ್ ಬಿ ಇರುವ ಆಹಾರ ಸೇವಿಸುವುದು ಒಳ್ಳೆಯದು.

ಚೀಸ್

ಚೀಸ್

ಪರಿಣಿತರ ಪ್ರಕಾರ ಗರ್ಭಿಣಿಯರಿಗೆ ಇದು ಹೆಚ್ಚು ಇಷ್ಟವಾಗಲು ಕಾರಣ ಇದರಲ್ಲಿರುವ ಕ್ಯಾಲ್ಸಿಯಂ. ಕ್ಯಾಲ್ಸಿಯಂ ಬೆಳೆಯುತ್ತಿರುವ ಭ್ರೂಣಕ್ಕೆ ಅತ್ಯಗತ್ಯ.

ಐಸ್ ಕ್ರೀಂ

ಐಸ್ ಕ್ರೀಂ

ಗರ್ಭಿಣಿಯರು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ತೂಕ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಕಡಿಮೆ ಕ್ಯಾಲೊರಿಯ ಐಸ್ ಕ್ರೀಂ ತಿನ್ನುವುದು ಒಳ್ಳೆಯದು.

ಬಾಳೆಹಣ್ಣು

ಬಾಳೆಹಣ್ಣು

ಇದರಲ್ಲಿ ಪೊಟ್ಯಾಶಿಯಂ ಹೆಚ್ಚಿರುತ್ತದೆ. ಗರ್ಭಾವಸ್ಥೆಯಲ್ಲಿ ಇದನ್ನು ತಿನ್ನುವುದು ಒಳ್ಳೆಯದು. ಕೇರಳದ ಬಾಳೆಹಣ್ಣುಗಳನ್ನು ಗರ್ಭಿಣಿಯರು ಮೂರನೆಯ ತಿಂಗಳಲ್ಲಿ ತಿನ್ನುವುದು ಹೆಚ್ಚು ಒಳ್ಳೆಯದು.

ನಿಂಬೆಹಣ್ಣು

ನಿಂಬೆಹಣ್ಣು

ಎರಡನೆಯ ತಿಂಗಳಲ್ಲಿ ಸಾಮಾನ್ಯವಾಗಿ ಗರ್ಭಿಣಿಯರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಇದರ ಹುಳಿರುಚಿಯು ವಾಂತಿಯನ್ನು ತಡೆಗಟ್ಟುತ್ತದೆ.

ನೂಡಲ್ಸ

ನೂಡಲ್ಸ

ಚೈನೀಸ್ ನೂಡಲ್ಸ್ ಕೂಡ ಗರ್ಭಿಣಿಯರು ಹೆಚ್ಚು ಇಷ್ಟಪಟ್ಟು ತಿನ್ನುವ ಆಹಾರ. ಇದರ ಫ್ಲೇವರ್ ಮತ್ತು ಸಾಸ್ ತಿನ್ನಲು ರುಚಿಕರವಾಗಿರುತ್ತದೆ.

ದಾಲ್

ದಾಲ್

ದಾಲ್ ಮಕನಿಯನ್ನು ಗರ್ಭಿಣಿಯರು ಹೆಚ್ಚು ಇಷ್ಟಪಡುತ್ತಾರೆ. ಇದರಲ್ಲಿನ ಮಸಾಲೆ ಇದಕ್ಕೆ ಕಾರಣ.

ಮೊಸರು

ಮೊಸರು

ಕೆನೆಮೊಸರು ಭ್ರೂಣದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗರ್ಭಿಣಿಯರು ಇದನ್ನು ಕೂಡ ಇಷ್ಟಪಟ್ಟು ತಿನ್ನುತ್ತಾರೆ.

ಹುಳಿ ಪದಾರ್ಥಗಳು

ಹುಳಿ ಪದಾರ್ಥಗಳು

ಭಾರತೀಯ ಹೆಂಗಸರು ಗರ್ಭಾವಸ್ಥೆಯಲ್ಲಿ ಎಲ್ಲ ರೀತಿಯ ಹುಳಿ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ. ಉಪ್ಪಿನಕಾಯಿ, ಕಿತ್ತಳೆಹಣ್ಣು, ಹುಣಸೆಕಾಯಿ ಇವುಗಳಲ್ಲಿ ಕೆಲವು.

ಡೌನಟ್ಸ್

ಡೌನಟ್ಸ್

ಚಾಕೊಲೆಟ್ ಡೌನಟ್ಸ್ ಮತ್ತು ಸಕ್ಕರೆಯ ಡೌನಟ್ಸ್ ಮಹಿಳೆಯರಿಗೆ ಬಹಳ ಇಷ್ಟ. ಇದರಲ್ಲಿ ಹೆಚ್ಚು ಕ್ಯಾಲೊರಿಗಳಿರುವುದರಿಂದ ಇದನ್ನು ನಿಯಂತ್ರಿಸುವುದು ಒಳ್ಳೆಯದು.

ಕುಕ್ಕಿಸ್

ಕುಕ್ಕಿಸ್

ಇದನ್ನು ಕೂಡ ಹೆಚ್ಚಾಗಿ ತಿನ್ನುವುದು ಒಳ್ಳೆಯದಲ್ಲ ಆದ್ದರಿಂದ ಕಡಿಮೆ ತಿನ್ನುವುದು ಒಳ್ಳೆಯದು.

ಪಾಪ್ ಕಾರ್ನ್

ಪಾಪ್ ಕಾರ್ನ್

ಟಿವಿ ಸೀರಿಯಲ್ ಅಥವ ಸಿನೆಮಾ ನೋಡುತ್ತಾ ಗರ್ಭಿಣಿಯರು ತಿನ್ನಲು ಇಷ್ಟಪಡುವ ತಿಂಡಿಗಳಲ್ಲಿ ಪಾಪ್ ಕಾರ್ನ್ ಕೂಡ ಒಂದು.

ಬಿರಿಯಾನಿ

ಬಿರಿಯಾನಿ

ನಿಮಗೆ ಭಾರತೀಯ ಆಹಾರ ಇಷ್ಟ ಎನ್ನುವುದಾದರೆ ಖಂಡಿತವಾಗಿ ಬಿರಿಯಾನಿ ಇಷ್ಟವಾಗುತ್ತದೆ. ಇದರಲ್ಲಿ ಮಸಾಲೆಗಳು ಹೆಚ್ಚಿದ್ದು ವಾಂತಿಯಾಗುವುದನ್ನು ತಪ್ಪಿಸುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಸಾಲಮೊನೆಲ್ಲಾದ ತೊಂದರೆ ತಪ್ಪುತ್ತದೆ ಎಂದು ಹೇಳಲಾಗುತ್ತದೆ.

ಓಟ್ಸ್

ಓಟ್ಸ್

ಪರಿಣಿತರ ಪ್ರಕಾರ ಓಟ್ಸ್ ನಲ್ಲಿ ಫೈಬರ್ ಹೆಚ್ಚಿರುತ್ತದೆ. ಇದು ಗರ್ಭಿಣಿಯರಲ್ಲಿ ಸಾಮಾನ್ಯವಾದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಚಾಕೊಲೆಟ್

ಚಾಕೊಲೆಟ್

ಇದನ್ನು ಕೂಡ ಗರ್ಭಿಣಿಯರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಡಾರ್ಕ್ ಚಾಕೊಲೆಟ್ ತಿನ್ನುವುದು ಒಳ್ಳೆಯದು. ಮಿಲ್ಕ ಚಾಕೊಲೆಟ್ ಗಳಿಂದ ದೂರವಿರುವುದು ಒಳ್ಳೆಯದು.

ಚಿಕನ್

ಚಿಕನ್

ಭಾರತದಲ್ಲಿ ಗರ್ಭಿಣಿಯರು ಹೆಚ್ಚು ಇಷ್ಟ ಪಡುವ ಆಹಾರಗಳಲ್ಲಿ ಚಿಕನ್ ಕೂಡ ಒಂದು. ಈ ಖಾರದ ಪದಾರ್ಥವನ್ನು ಬೇಡ ಎಂದು ಹೇಳುವುದು ಸಾಧ್ಯವಿಲ್ಲ.

Story first published: Monday, December 16, 2013, 4:07 [IST]
X
Desktop Bottom Promotion