Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಗರ್ಭಿಣಿಯರು ದ್ರಾಕ್ಷಿ ತಿನ್ನದಿದ್ದರೆ ಒಳ್ಳೆಯದು!
ಗರ್ಭಿಣಿಯಾದ ಮೇಲೆ ಆಹಾರದ ಬಗ್ಗೆ ತುಂಬಾ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ. ಮೊದಲಿನಂತೆ ಇಷ್ಟಪಟ್ಟ ಆಹಾರಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಕೆಲವೊಂದು ಆರೋಗ್ಯಕರ ಆಹಾರಗಳನ್ನು ಗರ್ಭಿಣಿಯರು ತಿಂದರೆ ಭ್ರೂಣಕ್ಕೆ ಅಪಾಯ ಉಂಟಾಗುವುದು. ಅಂತಹ ಆಹಾರಗಳಲ್ಲಿ ಪ್ರಮುಖವಾದದು ಪಪ್ಪಾಯಿ ಮತ್ತು ಪೈನಾಪಲ್. ಇನ್ನು ರೆಡಿ ಟು ಕುಕ್ ಫುಡ್ಸ್, ಫಾಸ್ಟ್ ಫುಡ್ಸ್ ಇವೆಲ್ಲಾ ಮಗುವಿನ ಆರೋಗ್ಯದ ದೃಷ್ಟಿಯಿಂದ ತಿನ್ನುವುದು ಒಳ್ಳೆಯದಲ್ಲ ಎನ್ನುವುದು ಸಾಮಾನ್ಯವಾಗಿ ಪ್ರತಿಯೊಂದು ಗರ್ಭಿಣಿಯರಿಗೆ ಗೊತ್ತಿರುತ್ತದೆ.
ಇಲ್ಲಿ ನಾವು ಚರ್ಚೆ ಮಾಡುತ್ತಿರುವುದು ಗರ್ಭಿಣಿಯರು ದ್ರಾಕ್ಷಿಯನ್ನು ತಿನ್ನಬಹುದೇ? ಎಂಬುದರ ಕುರಿತು. ಗರ್ಭಿಣಿಯರು ಇದನ್ನು ತಿಂದರೆ ಒಳ್ಳೆಯದೇ, ಇಲ್ಲವೇ ಎಂದು ತಿಳಿಯಲು ಮುಂದೆ ಓದಿ...

ದ್ರಾಕ್ಷಿಯಲ್ಲಿ ಅನೇಕ ಪೋಷಕಾಂಶಗಳಿದ್ದರೂ ಗರ್ಭಿಣಿಯರು ತಿಂದರೆ ಈ ಕೆಳಗಿನ ಅಡ್ಡ ಪರಿಣಾಮ ಉಂಟಾಗುವುದು:
* ಅಜೀರ್ಣ: ಕಪ್ಪು ದ್ರಾಕ್ಷಿಯ ಸಿಪ್ಪೆ ಗರ್ಭಿಣಿಯರು ಹೊಟ್ಟೆ ಸೇರಿದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು. ಆದ್ದರಿಂದ ಕಪ್ಪು ದ್ರಾಕ್ಷಿಯನ್ನು ತಿನ್ನದಿರುವುದು ಒಳ್ಳೆಯದು.
* ಅಸಿಡಿಟಿ: ತುಂಬಾ ಹುಳಿ ಇರುವ ದ್ರಾಕ್ಷಿ ತಿಂದರೆ ಕೆಲವರಿಗೆ ಅಸಿಡಿಟಿ ಸಮಸ್ಯೆ ಉಂಟಾಗುವುದು. ವಾಂತಿ ಬರುವಂತೆ ಆಗುವುದು. ಗರ್ಭಿಣಿಯಾದ ಮೊದಲ 3 ತಿಂಗಳಿನಲ್ಲಿ ವಾಂತಿ ಸಮಸ್ಯೆ ಹೆಚ್ಚಾಗಿ ಕಂಡು ಬರುವುದರಿಂದ ಈ ಸಮಯದಲ್ಲಿ ಹುಳಿ ದ್ರಾಕ್ಷಿಯನ್ನು ತಿನ್ನದಿರುವುದು ಒಳ್ಳೆಯದು.
* ಬೇಧಿ: ತುಂಬಾ ಅಧಿಕ ದ್ರಾಕ್ಷಿ ತಿಂದರೆ ಗರ್ಭಿಣಿಯರಲ್ಲಿ ಬೇಧಿ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ದ್ರಾಕ್ಷಿ ತಿನ್ನುವುದಾದರೆ 3-4 ದ್ರಾಕ್ಷಿಯಷ್ಟೇ ತಿನ್ನುವುದು ಒಳ್ಳೆಯದು.
* ಕಲ್ಮಶ: ಗರ್ಭಿಣಿಯರು ದ್ರಾಕ್ಷಿ ತಿಂದರೆ ದೇಹದಲ್ಲಿ ಕಲ್ಮಶ ಹೆಚ್ಚು ಸಂಗ್ರಹವಾಗಿ ತೊಂದರೆ ಉಂಟಾಗಬಹುದು. ಆದ್ದರಿಂದ ದ್ರಾಕ್ಷಿ ತಿನ್ನುವುದಾದರೆ ಮಿತಿಯಲ್ಲಿ ತಿನ್ನಿ. ಒಣ ದ್ರಾಕ್ಷಿಯನ್ನು ಕೂಡ ತಿನ್ನದಿರುವುದು ಒಳ್ಳೆಯದು.



Click it and Unblock the Notifications
