Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಗರ್ಭಿಣಿಯರು ತಿನ್ನಲೇಬೇಕಾದ ಟಾಪ್ 9 ಹಣ್ಣುಗಳು
ಗರ್ಭಿಣಿಯರು ತಮ್ಮ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಆಹಾರಗಳನ್ನು ತಿನ್ನಬಾರದು, ಕೆಲವೊಂದು ಆಹಾರಗಳನ್ನು ಪೋಷಕಾಂಶದ ಕೊರತೆ ಉಂಟಾಗದಿರಲು ಅವಶ್ಯಕವಾಗಿ ತಿನ್ನಬೇಕು.
ಗರ್ಭಿಣಿಯರಿಗೆ ಅವಶ್ಯಕವಾದ ಪೋಷಕಾಂಶಗಳು ಕೆಲವೊಂದು ಹಣ್ಣುಗಳಲ್ಲಿವೆ. ಅದರಲ್ಲೂ ಗರ್ಭಿಣಿಯರು ಈ ಕೆಳಗಿನ ಹಣ್ಣುಗಳನ್ನು ತಪ್ಪದೇ ತಮ್ಮ ಡಯಟ್ ನಲ್ಲಿ ಸೇರಿಸಿದರೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ ಹಾಗೂ ತಾಯಿ ಹಾಗೂ ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣಿನಲ್ಲಿ ಫಾಲಿಕ್ ಆಸಿಡ್ ಅಧಿಕವಿದೆ. ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಫಾಲಿಕ್ ಆಸಿಡ್ ಕಡಿಮೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ.

ಮಾವಿನ ಹಣ್ಣು
ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಹಣ್ಣು ಇದಾಗಿದೆ.

ನಿಂಬೆ ಹಣ್ಣು
ನಿಂಬೆ ಹಣ್ಣಿನ ವಾಸನೆ ವಾಂತಿಯನ್ನು ತಡೆಗಟ್ಟಿದರೆ, ಇದರಿಂದ ಪಾನೀಯಾ ಮಾಡಿ ಕುಡಿದರೆ ದೇಹಕ್ಕೆ ವಿಟಮಿನ್ ಸಿ ದೊರೆಯುತ್ತದೆ.

ಬಾಳೆ ಹಣ್ಣು
ಬಾಳೆ ಹಣ್ಣು ದೇಹಕ್ಕೆ ಶಕ್ತಿಯನ್ನು ತುಂಬುವುದರ ಜೊತೆಗೆ ಮಲಬದ್ಧತೆ ಸಮಸ್ಯೆ ಬರದಂತೆ ಆರೋಗ್ಯ ರಕ್ಷಣೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ, ಬಿ6, ಮ್ಯಾಗ್ನೆಸೆ, ಪೊಟಾಷ್ಯಿಯಂ, ಪ್ರೊಟೀನ್, ಮ್ಯಾಗ್ನಿಷ್ಯಿಯಂ, ಫೋಲೆಟ್ ಹೀಗೆ ಅನೇಕ ಪೋಷಕಾಂಶಗಳಿವೆ.

ಬೆರ್ರಿ ಹಣ್ಣುಗಳು
ಎಲ್ಲಾ ರೀತಿಯ ಬೆರ್ರಿ ಹಣ್ಣುಗಳನ್ನು ಗರ್ಭಿಣಿಯರು ತಿನ್ನಬಹುದು. ಈ ಬೆರ್ರಿ ಹಣ್ಣುಗಳಲ್ಲಿ antioxidants ಅಧಿಕವಿರುತ್ತದೆ.

ಕಿತ್ತಳೆ
ಗರ್ಭಿಣಿಯರು ಸ್ವಲ್ಪ ಹುಳಿ ಇರುವ ಹಣ್ಣುಗಳನ್ನು ತುಂಬಾ ಇಷ್ಟಪಡುತ್ತಾರೆ. ಈ ಕಿತ್ತಳೆಯಲ್ಲಿ ವಿಟಮಿನ್ಸ್ ಮತ್ತು ಪೋಷಕಾಂಶಗಳು ಅಧಿಕವಾಗಿರುತ್ತದೆ.

ಸೇಬು
ಗರ್ಭಿಣಿಯರು ಪ್ರತೀದಿನ ಒಂದು ಸೇಬು ತಿನ್ನುವುದು ಒಳ್ಳೆಯದು. ಸೇಬು ರಕ್ತಹೀನತೆ ಬರದಂತೆ ತಡೆಯುತ್ತದೆ.

ದ್ರಾಕ್ಷಿ
ಗರ್ಭಿಣಿಯರು ದ್ರಾಕ್ಷಿ ತಿನ್ನುವುದು ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದ್ದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಲಬದ್ಧತೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಲಿಚಿ
ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣನ್ನು ಗರ್ಭಿಣಿಯರು ತಿಂದರೆ ಒಳ್ಳೆಯದು.



Click it and Unblock the Notifications
