Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರ್ಭಪಾತ ತರಬಹುದೇ ಆರೋಗ್ಯಕ್ಕೆ ಅಪಾಯ?

ಗರ್ಭಪಾತವಾದಾಗ ಗಮನಿಸಬೇಕಾದ ಅಂಶಗಳು:
* ಗರ್ಭಪಾತ ಉಂಟಾದಾಗ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆಯಿಲ್ಲ. ಈ ಸಮಯದಲ್ಲಿ ತುಂಬಾ ವಿಶ್ರಾಂತಿ ತೆಗೆದುಕೊಳ್ಳಬೇಕು. ಆದರೆ ವಿಪರೀತ ರಕ್ತಸ್ರಾವ ಉಂಟಾದರೆ ಆಸ್ಪತ್ರೆಗೆ ಹೋಗಬೇಕು.
* ಆದರೆ ಕೆಲವರಿಗೆ ಗರ್ಭಿಣಿಯಾಗಿದ್ದಾಗ ಸ್ವಲ್ಪ ರಕ್ತಸ್ರಾವ ಉಂಟಾಗಬಹುದು. ಅದಕ್ಕಾಗಿ ಭಯ ಪಡಬೇಕಾಗಿಲ್ಲ. ತುಂಬಾ ರಕ್ತ ಸ್ರಾವ ಉಂಟಾದರೆ ಮಾತ್ರ ವೈದ್ಯರನ್ನು ಕೂಡಲೇ ಕಾಣಬೇಕು.
* ಅಬಾರ್ಷನ್ ಪಿಲ್ಸ್ ಸೇವಿಸಿ ಅಬಾರ್ಷನ್ ಆದರೆ ಅಥವಾ ಗರ್ಭಪಾತವಾದಾಗ ಕೆಲವೊಮ್ಮೆ ಭ್ರೂಣವು ಸಂಪೂರ್ಣವಾಗಿ ಹೋಗುವುದಿಲ್ಲ. ಈ ಭ್ರೂಣ ಗರ್ಭಕೋಶದಲ್ಲಿ ಹಾಗೇ ಉಳಿದುಕೊಂಡರೆ ಗರ್ಭಕೋಶದ ಆರೋಗ್ಯಕ್ಕೆ ಅಪಾಯ. ಆದ್ದರಿಂದ ಗರ್ಭಪಾತ ಆದರೆ ಸತ್ತ ಭ್ರೂಣದ ಅಂಶ ಹೊಟ್ಟೆಯಲ್ಲಿ ಉಳಿದಿಲ್ಲ ಅನ್ನುವುದನ್ನು ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಬೇಕು.
*ಗರ್ಭಪಾತವಾಗಿ ವಿಪರೀತ ರಕ್ತಸ್ರಾವವಾದರೆ ರಕ್ತಹೀನತೆ ಉಂಟಾಗಬಹುದು. ಆದ್ದರಿಂದ ಗರ್ಭಪಾತವಾದಾಗ ದೇಹದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು.
* ಗರ್ಭಪಾತವಾದ ನಂತರ ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ನೀಡಬೇಕು. ಗರ್ಭಪಾತವಾದ ಕೆಲವು ವಾರಗಳವರೆಗೆ ಸಂಗಾತಿ ಜೊತೆ ಸೇರಬಾರದು.
* ಗರ್ಭಪಾತವಾದ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳಾದ ಆಸ್ಪಿರಿನ್ (aspirin), ಐಬೂಫ್ರೊಫೆನ್(ibuprofen) ಮುಂತಾದ ಮಾತ್ರೆಗಳನ್ನು ಸೇವಿಸಬಾರದು. ಈ ಮಾತ್ರೆಗಳು ಮಿತಿಮಿರಿದ ರಕ್ತಸ್ರಾವಕ್ಕೆ ಕಾರಣವಾಗುವುದು ಅಲ್ಲದೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಉಂಟು ಮಾಡುತ್ತದೆ.
* ಗರ್ಭಪಾತ ಉಂಟಾದಾದೆ ದೈಹಿಕ ನೋವು ಕೆಲವೇ ವಾರಗಳಲ್ಲಿ ಕಡಿಮೆಯಾಗುತ್ತದೆ. ಅದರೆ ಮಾನಸಿಕ ನೋವು ತುಂಬಾ ಇರುವುದರಿಂದ ಈ ಸಮಯದಲ್ಲಿ ಮನೆಯವರು ಅವರಿಗೆ ಮಾನಸಿಕ ಅರೋಗ್ಯ ತುಂಬಬೇಕು.



Click it and Unblock the Notifications
