Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದೈಹಿಕ ವ್ಯಾಯಾಮ ಮಕ್ಕಳಾಗದಂತೆ ತಡೆಯುವುದೇ?

1. ವ್ಯಾಯಾಮ ಮತ್ತು ಮಕ್ಕಳಾಗದಿರುವಿಕೆಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ವ್ಯಾಯಾಮ ಮಾಡಿದರೆ ಗರ್ಭಧಾರಣೆಯಾಗುವುದಿಲ್ಲ ಎಂದು ಭಾವಿಸುವುದು ತಪ್ಪು. ಗರ್ಭಧಾರಣೆಯ ನಂತರ ಕಷ್ಟಕರವಾದ ವ್ಯಾಯಾಮ ಮಾಡಬಾರದು. ಮೆದುವಾಗಿ ನಡೆಯುವ ವ್ಯಾಯಾಮ, ಈಜುವುದು ಆರೋಗ್ಯಕ್ಕೆ ಒಳ್ಳೆಯದು.
2. ನಡೆಯುವ ಮತ್ತು ಈಜುವ ವ್ಯಾಯಾಮವನ್ನು ಗರ್ಭಧಾರಣೆಯ ಮೊದಲು ಮತ್ತು ನಂತರ ಕೂಡ ಮಾಡಬಹುದು. ಈ ವ್ಯಾಯಾಮ ಆರೋಗ್ಯವನ್ನು ಹೆಚ್ಚು ಮಾಡುತ್ತದೆಯೆ ವಿನಾ ಯಾವುದೇ ತೊಂದರೆ ಉಂಟಾಗುವುದಿಲ್ಲ.
3.ಭಾರ ಎತ್ತುವುದು, ಪುಶ್ ಅಪ್, ಡಂಬಲ್ಸ್ ತರಹದ ವ್ಯಾಯಾಮಗಳನ್ನು ಮಾಡುವುದರಿಂದ ಮುಂದೆಕ್ಕೆ ಗರ್ಭವತಿಯಾಗಲು ಯಾವುದೇ ತೊಂದರೆ ಉಂಟಾಗುವುದಿಲ್ಲ. ಗರ್ಭವತಿಯಾಗಲು ಬಯಸುವಾಗ ಈ ಮಾಡದಿರುವುದು ಒಳ್ಳೆಯದು. ಗರ್ಭವತಿಯಾಗದಿದ್ದರೆ ಬೇರೆ ಯಾವುದಾದರೂ ಸಮಸ್ಯೆಯಿರಬಹುದೇ ಹೊರತು ವ್ಯಾಯಾಮದಿಂದ ಅಲ್ಲ.
4. ಪುರುಷರಲ್ಲಿ ವೀರ್ಯಾಣುಗಳ ಕೊರತೆ ಉಂಟಾದರೆ ಅದು ವ್ಯಾಯಾಮದಿಂದ ಆ ರೀತಿ ಉಂಟಾದದು ಎಂದು ಭಾವಿಸುವುದು ತಪ್ಪು. ಧೂಮಪಾನ, ಮದ್ಯ ಇವುಗಳು ವೀರ್ಯಾಣುಗಳ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆಯೇ ಹೊರತು ವ್ಯಾಯಾಮವಲ್ಲ.
ಮಗು ಬೇಕೆಂದು ಬಯಸಿ, ಆದರೆ ಸೂಕ್ತ ಫಲ ಕಾಣದಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಗಂಡ -ಹೆಂಡತಿ ಪರೀಕ್ಷೆ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆದರೆ ಮಕ್ಕಳನ್ನು ಪಡೆಯಬಹುದಾಗಿದೆ.



Click it and Unblock the Notifications
