Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾಲ್ಕನೇ ತಿಂಗಳಿನಲ್ಲಿ ಗರ್ಭಪಾತ : ಎಚ್ಚರಿಕೆಯ ಗಂಟೆ

ಗರ್ಭಪಾತ ಮಾಡಿ ಒಂದು ಜೀವವನ್ನು ಕೊಲ್ಲುವುದು ತಪ್ಪು. ಆದರೆ ಆ ಗರ್ಭದಿಂದ ತಾಯಿಯ ಆರೋಗ್ಯಕ್ಕೆ ಅಪಾಯ ಉಂಟಾಗುವುದಾದರೆ ಅಂತಹ ಸಂದರ್ಭದಲ್ಲಿ ಗರ್ಭಪಾತ ಮಾಡಬೇಕು.
ಗರ್ಭಿಣಿಯಾಗಿ 3 ತಿಂಗಳವರೆಗೆ ತುಂಬಾ ಎಚ್ಚರವಹಿಸಬೇಕೆಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ನಾಲ್ಕನೇ ತಿಂಗಳಿನಿಂದ ಗರ್ಭಪಾತವಗುವ ಸಾಧ್ಯತೆ ಕಡಿಮೆ. ಆದರೆ ಕೆಲವರಿಗೆ ಅನಾರೋಗ್ಯದ ಕಾರಣದಿಂದ ಅಥವಾ ಮತ್ಯಾವುದೋ ಕಾರಣದಿಂದ ಗರ್ಭಪಾತ ಉಂಟಾಗಬಹುದು.
ಈ ರೀತಿ ಗರ್ಭಪಾತ ಉಂಟಾದರೆ ಕೂಡಲೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಹೊಟ್ಟೆಯಲ್ಲಿ ಸತ್ತಂತಹ ಭ್ರೂಣವನ್ನು ಹೊರತೆಗೆಯಬೇಕು, ಇಲ್ಲದಿದ್ದರೆ ಗರ್ಭಿಣಿಯ ಪ್ರಾಣಕ್ಕೆ ಅಪಾಯ ಉಂಟಾಗುವುದು. ಸವಿತರವರ ವಿಷಯದಲ್ಲೂ ಆದದ್ದು ಹೀಗೆಯೇ. ಸರಿಯಾದ ಚಿಕಿತ್ಸೆ ನೀಡಿ ಅವರ ಹೊಟ್ಟೆಯಲ್ಲಿ ಉಳಿದ ಭ್ರೂಣವನ್ನು ತೆಗೆದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗುತ್ತಿರಲಿಲ್ಲ.
ನಾಲ್ಕನೇ ತಿಂಗಳಿನಲ್ಲಿ ಗರ್ಭಪಾತ ಯಾವಾಗ ಉಂಟಾಗುತ್ತದೆ?
* ಗರ್ಭಿಣಿಯಾದಾಗ ಗರ್ಭಕೋಶದ ಇಕ್ಕಟ್ಟು ಭಾಗದಲ್ಲಿ ಅನೇಕ ಬದಲಾವಣೆ ಉಂಟಾಗುತ್ತದೆ. ಗರ್ಭಿಣಿಯರು ರಕ್ತ ಸ್ರಾವವಾಗುತ್ತಿದೆ ಎಂದು ಅನುಭವಾದರೆ ಕೂಡಲೇ ವೈದ್ಯರನ್ನು ಕಾಣಬೇಕು. ಇಲ್ಲದಿದ್ದರೆ ವಿಪರೀತ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಸೋಂಕು, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅಥವಾ ಹೊಟ್ಟೆಗೆ ಏನಾದರೂ ಪೆಟ್ಟು ಬಿದ್ದರೆ ಗರ್ಭಪಾತ ಉಂಟಾಗಬಹುದು.
* ಗರ್ಭಿಣಿಯಾಗಿದ್ದಾಗ ಸ್ವಲ್ಪ ರಕ್ತ ಸ್ರಾವ ಕಂಡರು ಕೂಡಲೇ ವೈದ್ಯರನ್ನು ಕಾಣಬೇಕು.
* ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆ ನಡೆಸಬಹುದೆಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವರಿಗೆ ಲೈಂಗಿಕ ಕ್ರಿಯೆಯ ನಂತರ ರಕ್ತ ಕಂಡು ಬರುವುದು. ಈ ರೀತಿ ಕಂಡು ಬಂದರೆ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
ವೈದ್ಯರು ಸ್ಕ್ಯಾನ್ ಮಾಡಿ ಮಗುವಿನ ಆರೋಗ್ಯದ ಬಗ್ಗೆ ಹೇಳುತ್ತಾರೆ. ಒಂದು ವೇಳೆ ರಕ್ತಸ್ರಾವ ಕಂಡು ಕೂಡಲೇ ಚಿಕಿತ್ಸೆಯನ್ನು ಪಡೆದರೆ ಮಗುವಿಗೆ ಅಪಾಯ ಉಂಟಾಗುವ ಸಾಧ್ಯತೆ ಕಡಿಮೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ತಾಯಿ-ಮಗುವಿನ ಪ್ರಾಣಕ್ಕೂ ಅಪಾಯ ಉಂಟಾಗಬಹುದು. ಒಂದು ವೇಳೆ ಮಗುವಿನಿಂದಾಗಿ ಗರ್ಭಿಣಿಯ ಪ್ರಾಣಕ್ಕೆ ಅಪಾಯ ಉಂಟಾಗುವುದಾದರೆ ಆ ಸಂದರ್ಭದಲ್ಲಿ ಅಬಾರ್ಷನ್ ಮಾಡುವುದು ವೈದ್ಯರ ಕರ್ತವ್ಯ ಕೂಡ.



Click it and Unblock the Notifications
