Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
30 ದಾಟಿದ ಹೆಣ್ಣು ಮಕ್ಕಳಿಗೆ ಐಶ್ವರ್ಯ ರೈ ಮಾದರಿ

ಈಗಿನ ದುಡಿಯುವ ಹೆಣ್ಣುಮಕ್ಕಳು ಮದುವೆಯಾದ ಕೂಡಲೆ ತಾಯಿ ಆಗುವುದನ್ನು ಇಷ್ಟಪಡುವುದಿಲ್ಲ. ಇಷ್ಟೆಲ್ಲಾ ಆಗಿ ದಂಪತಿಗಳು ಮಗು ಬೇಕೆಂದು ಹಂಬಲಿಸುವಾಗ ವಯಸ್ಸು 30ರ ಆಸುಪಾಸಿನಲ್ಲಿ ಇರುತ್ತದೆ. ಆದರೆ ವೈದ್ಯರು 30ರ ನಂತರ ಮಕ್ಕಳಾಗುವುದು ಕಷ್ಟ ಎಂದು ಹೇಳುತ್ತಾರೆ. ಇದನ್ನು ಕೇಳುತ್ತಿದ್ದರೆ ಯುವ ಜನತೆಗೆ ಗೊಂದಲ ಪ್ರಾರಂಭವಾಗುತ್ತದೆ. ಅವರ ಪ್ರಕಾರ ಲೈಫ್ ಸೆಟಲ್ ಆಗದೆ ಮಗುವಾದರೆ ಕಷ್ಟವೆಂಬುದು.
ಆದ್ದರಿಂದ ಇಂತಹವರು ಕೆಲವು ಸಿನಿಮಾ ನಟಿಯರನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬಹುದು. ಏಕೆಂದರೆ 30ರ ನಂತರ ಕೂಡ ಗರ್ಭಿಣಿಯಾಗಿ ಯಾವುದೆ ಸಮಸ್ಯೆ ಇಲ್ಲದೆ ಮಕ್ಕಳನ್ನು ಹಡೆಯಬಹುದು ಎನ್ನುವುದಕ್ಕೆ ಉದಾಹರಣೆ ಈ ನಟಿಮಣಿಯರು.
1. ಐಶ್ವರ್ಯ ರೈ: ಐಶರ್ಯ ರೈ ತನ್ನ 38ನೇ ವಯಸ್ಸಿನಲ್ಲಿ ತಾಯಿಯಾದರು. 1973ರಲ್ಲಿ ಹುಟ್ಟಿದ ರೈ 2007ರಲ್ಲಿ ಅಭಿಷೇಕ್ ಬಚ್ಚನ್ ಜೊತೆ ವಿವಾಹವಾದರು. ನಂತರ ಕೂಡ ತುಂಬಾ ಕಾಲ ತನ್ನ ಕೆಲಸದಲ್ಲಿ ನಿರಂತರವಾಗಿದ್ದು ಇದೀಗ ತನ್ನ 38ನೇ ವಯಸ್ಸಿಗೆ ತಾಯಿಯಾದರು. ಅದೂ ಸಾಧಾರಣ ಹೆರಿಗೆ( ನಾರ್ಮಲ್ ಡೆಲಿವರಿ).
2. ಶಿಲ್ಪಾ ಶೆಟ್ಟಿ: ಶಿಲ್ಪ ಶೆಟ್ಟಿ ತನ್ನ 30ನೇ ವರ್ಷದ ನಂತರ ಮಗುವಿಗಾಗಿ ಕಾದರು ಇದೀಗ ತನ್ನ 36ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ.
3. ಲಾರಾ ದತ್ತಾ: ಒಂದು ಕಾಲದಲ್ಲಿ ಭುವನ ಸುಂದರಿಯಾಗಿದ್ದ ಲಾರಾ ದತ್ತಾ ಇತ್ತೀಚಿಕೆಗೆ ಟೆನ್ನೀಸ್ ತಾರೆ ಮಹೇಶ್ ಭೂಪತಿಯನ್ನು ವರಿಸಿ ಇದೀಗ ತಾಯಿ ಆಗುತ್ತಿದ್ದಾಳೆ . ಇವರೂ ಕೂಡ 30 ವರ್ಷ ದಾಟಿದ ಬಳಕೆವೆ ಗರ್ಭಿಣಿಯಾಗಿದ್ದಾರೆ.
4. ಮಾಧುರಿ ದೀಕ್ಷಿತ್ : ಅನೇಕ ಜನರ ಕನಸಿನ ಕನ್ಯೆಯಾಗಿ ಮೆರೆದ ಮಾಧುರಿ ದೀಕ್ಷಿತ್ 1999ರಲ್ಲಿ ಮದುವೆಯಾಗಿ 2003ರಲ್ಲಿ ಮಗುವಿಗೆ ತಾಯಿಯಾದರು. ಆಗ ಅವರಿಗೆ 44ವರ್ಷ ವಯಸ್ಸು ಆಗಿತ್ತು.
30 ವರ್ಷ ದಾಟಿತು ಇನ್ನೂ ಮಕ್ಕಳಾಗಲಿಲ್ಲ ಎನ್ನುವ ದಂಪತಿಗಳು ಈ ನಟಿಯರನ್ನು ನೋಡಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬಹುದು.



Click it and Unblock the Notifications
