Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಮಧುಮೇಹಿ ಗರ್ಭಿಣಿಯರಿಗೆ ಬೇಕು ಸ್ಪೆಷಲ್ ಕೇರ್

ಆದ್ದರಿಂದ ಆಹಾರಕ್ರಮ ಮತ್ತು ಔಷಧಿಯನ್ನು ತೆಗೆದುಕೊಳ್ಳುವ ವಿಷಯದಲ್ಲಿ ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸಬೇಕು. ಗರ್ಭಿಣಿಯಾದ 28 ವಾರಗಳ ಬಳಿಕ ಅಂಡಧಾರಕದಲ್ಲಿ ಚಟುವಟಿಕೆ ಅಧಿಕವಾಗಿ ಅದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಆಗ ಅಂಡಧಾರಕದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಅದು ದೇಹದಲ್ಲಿರುವ ಇನ್ಸುಲಿನ್ ವಿರುದ್ಧ ಹೋರಾಡುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿರುವ ಇನ್ಸುಲಿನ್ ಪ್ರಮಾಣದಲ್ಲಿ ಏರು ಪೇರಾಗುತ್ತದೆ, ಇದನ್ನು ನಿಯಂತ್ರಣದಲ್ಲಿಡಲು ಇನ್ಸುಲಿನ್ ಡೋಸ್ ತೆಗೆದು ಕೊಳ್ಳಬೇಕಾಗುತ್ತದೆ.
ಇದಕ್ಕಾಗಿ ಮಧುಮೇಹಿ ಗರ್ಭಿಣಿಯರು ಈ ಕೆಳಗಿನ ಅಂಶಗಳನ್ನು ಪಾಲಿಸುವುದು ಸೂಕ್ತ.
ವ್ಯಾಯಾಮ:ಮಧುಮೇಹ ಇರುವ ಗರ್ಭಿಣಿಯರಿಗೆ ನಡೆಯುವ, ಮತ್ತು ಈಜುವ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಅಧಿಕ ಭಾರ ಎತ್ತುವುದು ಈ ಸಂದರ್ಭದಲ್ಲಿ ಒಳ್ಳೆಯದಲ್ಲ.
ಆರೈಕೆ: ಹೆರಿಗೆಯ ಸಂದರ್ಭದಲ್ಲಿ ರಕ್ಕತದಲ್ಲಿ ಸಾಮಾನ್ಯವಾಗಿರುವುದು ಅವಶ್ಯಕ. ಅಧಿಕ ಸಂದರ್ಭದಲ್ಲಿ ಹೆರಿಗೆಯಾಗುವ ದಿನ ಹತ್ತಿರ ಬಂದಂತೆ ಆಹಾರವನ್ನು ಸೇವಿಸಲು ಅನುಮತಿ ನೀಡುವುದಿಲ್ಲ. ಈ ಸಂದರ್ಭದಲ್ಲಿ ಇನ್ಸುಲಿನ್ ಅಂಶವಿರುವ ಗ್ಲೂಕೋಸ್ ಡ್ರಿಪ್ ಹಾಕಲಾಗುವುದು.
ಅಲ್ಲದೆ ಪ್ರತಿ ಗಂಟೆಗೊಮ್ಮೆ ದೇಹದಲ್ಲಿರುವ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಬೇಕು. ಹೆರಿಗೆಯ ನಂತರ ಎದೆ ಹಾಲು ಉಣಿಸುವ ಸಮಯದವರೆಗೂ ಇನ್ಸುಲಿನ್ ಅನ್ನು ತೆಗೆದು ಕೊಳ್ಳುತ್ತಿರಬೇಕಾಗುತ್ತದೆ.
ಮಗು:ಹೆರಿಗೆಯ ನಂತರ ಮಗುವಿನಲ್ಲಿ ರಕ್ತದ ಅಂಶ ಸಾಮಾನ್ಯವಾಗಿರುತ್ತದೆ. ಹೆರಿಗೆಯ ಸಮಯದಲ್ಲಿ ತಾಯಿಯಲ್ಲಿ ಸಕ್ಕರೆ ಅಂಶ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಮಗುವಿನಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದರೆ ಇದರಿಂದ ಮಗುವಿಗೆ ಏನೂ ತೊಂದರೆ ಉಂಟಾಗುವುದಿಲ್ಲ.
ಪಾಲಿಸಬೇಕಾದ ವಿಧಾನಗಳು:
ಹೆರಿಗೆಯ 6 ವಾರದ ನಂತರ ಗ್ಲೋಕೋಸ್ ಮಟ್ಟವನ್ನು ತಿಳಿದುಕೊಳ್ಳಲು ಪರೀಕ್ಷೆ ಮಾಡಬೇಕು. ಇದರಿಂದ ಮಧುಮೇಹ ಕಾಯಿಲೆ ಗುಣಮುಖವಾಗಿದೆಯೆ ಎಂದು ತಿಳಿದುಕೊಳ್ಳಬಹುದು.
ಈ ಕಾಯಿಲೆ ಗುಣವಾಗಿದ್ದರೂ ಮುಂದೆ ಯಾವುದೆ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದು ಆದ್ದರಿಂದ ಆಗಾಗ ಪರೀಕ್ಷೆ, ಆಹಾರ ಕ್ರಮ, ವ್ಯಾಯಾಮ ಇವುಗಳನ್ನು ತಪ್ಪದೆ ಪಾಲಿಸುವುದು ಒಳ್ಳೆಯದು.



Click it and Unblock the Notifications
