Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಗರ್ಭಿಣಿಯರಿಗೆ ತಲೆನೋವು ಕಾಡುವುದು ಏಕೆ?

ಈ ತಲೆನೋವಿನ ಸಮಸ್ಯೆ ಈ ಕೆಳಗಿನ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
1. ಮುಟ್ಟು ತಪ್ಪಿ ಹೋದಾಗ ಕೆಲವೊಬ್ಬರಿಗೆ ಈ ರೀತಿಯ ತಲೆನೋವು ಕಾಣಿಸಿಕೊಳ್ಳುತ್ತದೆ.
2. ಮೊದಲ ತ್ರೈ ಮಾಸಿಕದಲ್ಲಿ ಈ ರೀತಿಯ ತಲೆನೋವು ತುಂಬಾ ಕಾಣಿಸಿಕೊಳ್ಳುತ್ತದೆ.
3. ಕೊನೆಯ ತ್ರೈ ಮಾಸಿಕದಲ್ಲು ಸಹ ತಲೆನೋವು ಕಾಣಿಸಿಕೊಂಡರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.
ಈ ರೀತಿ ತಲೆನೋವು ಈ ಕೆಳಗಿನ ಕಾರಣಗಳಿಂದ ಉಂಟಾಗುತ್ತದೆ.
1. ಹಾರ್ಮೋನ್ ಗಳ ಅಸಮತೋಲನ: ಗರ್ಭಿಣಿಯಾದಾಗ ಹಾರ್ಮೋನ್ ಗಳಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ತಲೆನೋವು ಉಂಟಾಗುತ್ತದೆ.
2. ಚಿಂತೆ: ಗರ್ಭಿಣಿಯಾದಾಗ ಅತಿ ಹೆಚ್ಚಾಗಿ ಚಿಂತೆ ಮಾಡದೆ ಆರಾಮವಾಗಿ ಇರಬೇಕು, ಇಲ್ಲದಿದ್ದರೆ ಈ ರೀತಿಯ ತಲೆನೋವು ಸಮಸ್ಯೆ ಹೆಚ್ಚಾಗುವುದು.
3.ಒತ್ತಡ: ಗರ್ಭಿಣಿಯಾಗಿದ್ದಾಗ ಪ್ರಯಾಣವನ್ನು ಮಾಡುವುದು, ಕೆಲಸದ ಒತ್ತಡ ಒವುಗಳಿಂದ ತಲೆನೋವಿನ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗದೆ ಮತ್ತು ಪ್ರಯಾಣ ಮಾಡುವಾಗ ನಿಮಗೆ ಆರಾಮವೆನಿಸುವ ಗಾಡಿಯಲ್ಲಿ ಪ್ರಯಾಣಿಸುವುದು ಸೂಕ್ತ.
4. ಅಧಿಕ ರಕ್ತದೊತ್ತಡ: ಅಧಿಕ ಒತ್ತಡದಿಂದ ತಲೆನೋವು ಉಂಟಾದರೆ ತಲೆ ಒಡೆದು ಹೋದಂತೆ ನೋವಾಗುವುದು,ಅಲ್ಲದೆ ಇತರ ತಲೆನೋವಿನ ಹಾಗೆ ಸಹಿಸಲು ಸಾಧ್ಯವಾಗುವುದಿಲ್ಲ, ಈ ರೀತಿ ಆದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸುವುದು ಸೂಕ್ತ.
5. ದೇಹದ ತೂಕ: ಗರ್ಭಿಣಿಯಾಗಿದ್ದಾಗ ಮೈ ಭಾರ ಹೆಚ್ಚುವುದರಿಂದ ತಲೆನೋವು ಉಂಟಾಗುತ್ತದೆ. ಆದ್ದರಿಂದ ಆ ಭಾರವನ್ನು ನಿಮ್ಮ ದೇಹ ತಡೆಯಲು ಹೆಚ್ಚು ಹೈಡ್ರೋಕಾರ್ಬೋರೇಟ್ ಇರುವ ಆಹಾರದ ಸೇಚನೆ ಒಳ್ಳೆಯದು.
6. ಭಂಗಿ : ವಿಶ್ರಾಂತಿ ತೆಗೆದುಕೊಳ್ಳುವಾಗ ಸರಿಯಾದ ಭಂಗಿಯಲ್ಲಿ ತೆಗೆದುಕೊಳ್ಳಬೇಕು, ಮಲುಗುವಾಗ ಕುತ್ತಿಗೆ ಮತ್ತು ತಲೆ ನೋವು ಬರದಂತೆ ತಲೆ ದಿಂಬನ್ನು ಸರಿಯಾದ ರೀತಿಯಲ್ಲಿ ಇಟ್ಟು ಮಲಗಬೆಕು.
ಪದೆ ಪದೆ ಕಾಡುವ ತಲೆನೋವಿಗೆ ಸ್ತ್ರೀ ರೋಗ ತಜ್ಞರನ್ನು ಕಂಡು ಸಲಹೆಗಳನ್ನು ಪಡೆದುಕೊಳ್ಳುವುದು ಸೂಕ್ತ.



Click it and Unblock the Notifications
