Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಗರ್ಭಿಣಿಯರು ಆಹಾರವನ್ನು ಹೇಗೆ ತಿನ್ನಬೇಕು?

ಗರ್ಭಾವಸ್ಥೆಯಲ್ಲಿ ಆಹಾರದ ವಿಷಯದಲ್ಲಿ ಶುದ್ಧತೆ ಕಾಯ್ದುಕೊಳ್ಳುವುದು ಹೇಗೆ?
1. ಅಡುಗೆ ಮಾಡುವ ಮುನ್ನ ಕೈಗಳನ್ನು ಮತ್ತು ಪಾತ್ರೆಗಳನ್ನು ಬಿಸಿ ನೀರಿನಿಂದ ಶುದ್ಧಗೊಳಿಸಿ. ಅದರಲ್ಲೂ ಕೈಗಳ ಉಗುರುಗಳಲ್ಲಿ ಕೊಳೆ ತುಂಬದಂತೆ ನೋಡಿಕೊಳ್ಳಿ. ಅದರಲ್ಲಿ ಬ್ಯಾಕ್ಟೀರಿಯಾ ಇರುವುದರಿಂದ ಬೇಗನೆ ಸೋಂಕು ತಗುಲುತ್ತದೆ. ಊಟಕ್ಕೆ ಮುನ್ನವೂ ಕೈ ತೊಳೆಯುವುದನ್ನು ಮರೆಯಬೇಡಿ.
2. ಶೀಥಲೀಕರಣಗೊಳಿಸಿದ ಆಹಾರಗಳನ್ನು ಅಂಗಡಿಯಿಂದ ತಂದ ನಂತರ 10 ನಿಮಿಷಕ್ಕಿಂತ ಹೆಚ್ಚಿಗೆ ಹೊರಗೆ ಇಡಬೇಡಿ. ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಫ್ರಿಡ್ಜ್ ನಲ್ಲಿಟ್ಟು ಇವುಗಳನ್ನು ರಕ್ಷಿಸಬಹುದು.
3. ಯಾವ ಆಹಾರಗಳನ್ನು ಬಿಸಿಯಾಗಿ ಅಥವಾ ತಣ್ಣಗೆ ತಿನ್ನಬೇಕು ಎಂದು ಮೊದಲು ತಿಳಿದುಕೊಳ್ಳಿ. ಆಹಾರವನ್ನು ಹೆಚ್ಚು ತಯಾರಿಸಿ ಉಳಿಸದಂತೆ ಆವೇಳೆಗೆ ಮಾತ್ರ ಮಾಡಿ ತಿನ್ನಿ. ಉಳಿದ ಆಹಾರಗಳನ್ನು ತಿನ್ನುವುದು ಈ ಸಮಯದಲ್ಲಿ ಒಳ್ಳೆಯದಲ್ಲ.
4. ಉಳಿಸಿ ಶೇಖರಿಸಿಟ್ಟ ಆಹಾರವಾದ ಪಕ್ಷದಲ್ಲಿ ಅದನ್ನು ಮತ್ತೆ ಬಿಸಿ ಮಾಡಿಯೇ ತಿನ್ನಿ. ಬಿಸಿಯ ಹಬೆ ಕಾಣಿಸುವವರೆಗೂ ಬಿಸಿ ಮಾಡಬೇಕು.
5. ತರಕಾರಿಗಳನ್ನು ಬೇಯಿಸಿ ತಿನ್ನಬೇಕು. ಇಲ್ಲವೆಂದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕ್ರಿಮಿಗಳು ಇರುತ್ತವೆ. ಆದರೆ ಬಿಸಿ ಮಾಡಿದ ತರಕಾರಿ ಸುಲಭವಾಗಿ ಜೀರ್ಣಗೊಳ್ಳದಿರುವುದರಿಂದ ತರಕಾರಿಗಳನ್ನು ತಕ್ಕ ಮಟ್ಟಿಗೆ ಬಿಸಿ ಮಾಡಿ ತಿಂದರೆ ಸಾಕು.
6. ಮಾಂಸ ಮತ್ತು ಮೀನನ್ನು ತಿನ್ನುವವರಾದರೆ ಅದನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಇಲ್ಲವೆಂದರೆ ಆಹಾರ ವಿಷಕಾರಿಯಾಗಿ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
7. ಈ ಸಮಯದಲ್ಲಿ ವಾಂತಿ ಸಹಜ. ಆದ್ದರಿಂದ ಲಘು ಆಹಾರವನ್ನು ಸೇವಿಸಿರಿ. ಸಲಾಡ್, ಸೂಪುಗಳು ಸೂಕ್ತ. ಹಣ್ಣು ಅಥವಾ ತರಕಾರಿಗಳನ್ನು ಚೆನ್ನಾಗಿ ತೊಳೆದು ಬೇಯಿಸಿದ ನಂತರವಷ್ಟೇ ತಿನ್ನಿ.



Click it and Unblock the Notifications
